• ಹೋಂ
 • »
 • ನ್ಯೂಸ್
 • »
 • ಶಿಕ್ಷಣ
 • »
 • Exam Warriors: ಎಲ್ಲಾ ಶಾಲೆಗಳ ಲೈಬ್ರರಿಯಲ್ಲಿ 'ಎಕ್ಸಾಮ್ ವಾರಿಯರ್ಸ್' ಪುಸ್ತಕ ಲಭ್ಯವಿರಬೇಕು; ಶಿಕ್ಷಣ ಸಚಿವಾಲಯ

Exam Warriors: ಎಲ್ಲಾ ಶಾಲೆಗಳ ಲೈಬ್ರರಿಯಲ್ಲಿ 'ಎಕ್ಸಾಮ್ ವಾರಿಯರ್ಸ್' ಪುಸ್ತಕ ಲಭ್ಯವಿರಬೇಕು; ಶಿಕ್ಷಣ ಸಚಿವಾಲಯ

ಎಕ್ಸಾಂ ವಾರಿಯರ್ಸ್​ ಪುಸ್ತಕ

ಎಕ್ಸಾಂ ವಾರಿಯರ್ಸ್​ ಪುಸ್ತಕ

ನರೇಂದ್ರ ಮೋದಿ ಅವರು ಬರೆದ ಪುಸ್ತಕ ‘ಎಕ್ಸಾಮ್ ವಾರಿಯರ್ಸ್’ ಎಲ್ಲಾ ಶಾಲಾ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಶಿಕ್ಷಣ ಸಚಿವಾಲಯ ಬುಧವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಿದೆ.

 • Trending Desk
 • 3-MIN READ
 • Last Updated :
 • Share this:

  ಇನ್ನೇನು ಫೆಬ್ರವರಿ ತಿಂಗಳು ಮುಗಿತಾ ಬಂತು, ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಗಳ (Annual Examnination) ಬಗ್ಗೆ ಒಂದು ರೀತಿಯ ಭಯ ಮತ್ತು ಆತಂಕ ಇದ್ದೇ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮನೆಯಲ್ಲಿ ತಂದೆ ತಾಯಂದಿರು (Parents) ಮಕ್ಕಳಿಗೆ ಇಂತಹ ಪರೀಕ್ಷೆಯ ಸಮಯದಲ್ಲಿ ತುಂಬಾನೇ ಒಂದು ರೀತಿಯ ಮನಸ್ಸಿಗೆ ಸಮಾಧಾನ ನೀಡುವಂತಹ ಮಾತುಗಳನ್ನು ಆಡುತ್ತಿರುತ್ತಾರೆ ಮತ್ತು ಪರೀಕ್ಷೆಗೆ (Exam) ಅವರ ಸಿದ್ದತೆ ಹೇಗಿರಬೇಕು ಅಂತ ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುತ್ತಾರೆ. ಆದರೆ ಇನ್ನೂ ಕೆಲವು ಪೋಷಕರು ಮಕ್ಕಳಿಗೆ (Students0 ಇಷ್ಟು ಅಂಕಗಳು ಬರಲೇಬೇಕು ಅಂತ ಪದೇ ಪದೇ ಹೇಳುತ್ತಾ ಅವರಲ್ಲಿರುವ ಭಯ ಮತ್ತು ಆತಂಕವನ್ನು ಹೆಚ್ಚು ಮಾಡುತ್ತಿರುತ್ತಾರೆ.


  ನಮ್ಮಲ್ಲಿ ಪರೀಕ್ಷೆಯ ಸಮಯದಲ್ಲಿ ಪರೀಕ್ಷೆ ಬರೆಯಲಿರುವ ಮಕ್ಕಳಿಗೂ ಮತ್ತು ಅವರ ಪೋಷಕರಿಗೂ ಇಬ್ಬರಿಗೂ ಸಲಹೆಗಳನ್ನು ನೀಡುವಂತಹ ಅನಿವಾರ್ಯತೆ ಇದೆ.


  ಮಕ್ಕಳ ಮೇಲೆ ಹೇರುವ ಅತಿಯಾದ ಒತ್ತಡ ಒಳ್ಳೆಯ ಅಂಕಗಳನ್ನು ಗಳಿಸಲು ಯಾವ ರೀತಿಯಲ್ಲೂ ಸಹಾಯ ಮಾಡುವುದಿಲ್ಲ ಎಂಬುದನ್ನು ಪೋಷಕರು ಅರಿಯಬೇಕು ಮತ್ತು ಮಕ್ಕಳು ಸಹ ಶಾಲೆಯ ಆರಂಭದ ದಿನದಿಂದ ತರಗತಿಯಲ್ಲಿ ಮಾಡುವ ಪಾಠವನ್ನು ಅಂದೇ ಅಭ್ಯಾಸ ಮಾಡಿದರೆ ಪರೀಕ್ಷೆಯ ಬಗ್ಗೆ ಆತಂಕ ಇರುವುದಿಲ್ಲ ಅನ್ನೋದನ್ನು ಅರಿತುಕೊಳ್ಳಬೇಕಿದೆ.


  ಇದನ್ನೂ ಓದಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ ಇನ್ನೂ ಜೀವಂತ; ಶಿಕ್ಷಣದ ಸ್ಥಿತಿಯ ಬಗ್ಗೆ ಹೆಚ್ಚಿದ ಕಳವಳ


  ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಮತ್ತು ಪೋಷಕರಿಗೆ ಸಲಹೆ ನೀಡುತ್ತಾರೆ ಪ್ರಧಾನಿ ಮೋದಿ


  ಈ ನಿಟ್ಟಿನಲ್ಲಿ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಪರೀಕ್ಷೆಯ ಸಮಯದಲ್ಲಿ ತಮ್ಮ ಭಾಷಣದ ಮೂಲಕ ಕೆಲವು ಉಪಯುಕ್ತ ಮಾಹಿತಿಯನ್ನು ಮತ್ತು ಸಲಹೆಗಳನ್ನು ನೀಡುತ್ತಾರೆ.


  ಎಕ್ಸಾಂ ವಾರಿಯರ್ಸ್​ ಪುಸ್ತಕ


  ಇವರ ಕಾರ್ಯಕ್ರಮವು ಪರೀಕ್ಷಾ ಒತ್ತಡವನ್ನು ನಿವಾರಿಸಲು ವಿದ್ಯಾರ್ಥಿಗಳಿಗೆ ಬೆಂಬಲವನ್ನು ನೀಡುವತ್ತ ಗಮನ ಹರಿಸುತ್ತದೆ ಮತ್ತು ಪರೀಕ್ಷೆಯ ಸಮಯದಲ್ಲಿ ಒತ್ತಡದ ವಾತಾವರಣವನ್ನು ಉತ್ತಮವಾಗಿ ನಿರ್ವಹಿಸಲು ಶಿಕ್ಷಕರು ಮತ್ತು ಪೋಷಕರನ್ನು ಸಜ್ಜುಗೊಳಿಸುತ್ತದೆ.


  ‘ಎಕ್ಸಾಮ್ ವಾರಿಯರ್ಸ್’ ಇನ್ಮುಂದೆ ಎಲ್ಲಾ ಶಾಲೆಗಳ ಲೈಬ್ರರಿಯಲ್ಲಿ ಲಭ್ಯವಿರಲಿದೆಯಂತೆ..


  ಈಗ ನರೇಂದ್ರ ಮೋದಿ ಅವರು ಬರೆದ ಪುಸ್ತಕ ‘ಎಕ್ಸಾಮ್ ವಾರಿಯರ್ಸ್’ ಎಲ್ಲಾ ಶಾಲಾ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಶಿಕ್ಷಣ ಸಚಿವಾಲಯ ಬುಧವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಿದೆ. 'ಸಮಗ್ರ ಶಿಕ್ಷಾ' ಅಡಿಯಲ್ಲಿ ಶಿಕ್ಷಣ ಸಚಿವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಾರರಿಗೆ ಪಿಎಂ ಮೋದಿ ಬರೆದ ಪುಸ್ತಕವನ್ನು ಎಲ್ಲಾ ಶಾಲಾ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ವಿನಂತಿಸಿದರು.


  ಇದರಿಂದ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಪ್ರಧಾನಿ ಮೋದಿ ಅವರ ಬುದ್ಧಿವಂತಿಕೆ ಮತ್ತು ದೂರದೃಷ್ಟಿಯ ಮಾತುಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


  ಕ್ರಿಯಾತ್ಮಕ ಸಲಹೆಗಳನ್ನು ಒಳಗೊಂಡಿದೆಯಂತೆ ಈ ಪುಸ್ತಕ


  ಈ ಪುಸ್ತಕವು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಪರೀಕ್ಷಾ ಒತ್ತಡವನ್ನು ನಿವಾರಿಸುವ ಮಾರ್ಗಗಳು ಮತ್ತು ವಿಧಾನಗಳ ಬಗ್ಗೆ ಅನನ್ಯ ಕ್ರಿಯಾತ್ಮಕ ಸಲಹೆಗಳನ್ನು ಒಳಗೊಂಡಿದೆ ಎನ್ನಲಾಗಿದೆ. ನ್ಯಾಷನಲ್ ಬುಕ್ ಟ್ರಸ್ಟ್, 11 ಭಾರತೀಯ ಬೇರೆ ಬೇರೆ ಭಾಷೆಗಳಾದ ಅಸಾಮಿಯಾ, ಬಾಂಗ್ಲಾ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಈ 'ಎಕ್ಸಾಮ್ ವಾರಿಯರ್ಸ್' ಪುಸ್ತಕದ ಅನುವಾದ ಆವೃತ್ತಿಯನ್ನು ಪ್ರಕಟಿಸಿದೆ.
  ಬೋರ್ಡ್ ಪರೀಕ್ಷೆಗಳಿಗೆ ಮುಂಚಿತವಾಗಿ ಮೋದಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ "ಪರೀಕ್ಷಾ ಪೆ ಚರ್ಚಾ" ಎಂದು ಕರೆಯಲ್ಪಡುವ ವಾರ್ಷಿಕ ಸಂವಾದಗಳನ್ನು ಸಹ ನಡೆಸುತ್ತಾರೆ.

  Published by:Prajwal B
  First published: