• ಹೋಂ
  • »
  • ನ್ಯೂಸ್
  • »
  • ಶಿಕ್ಷಣ
  • »
  • The Magic of Number 9 : ಸಂಖ್ಯೆ ಒಂಬತ್ತರ ಮ್ಯಾಜಿಕ್: ಗಣಿತದ ಈ ಟ್ರಿಕ್‌ ಬಳಸಿ ನಿಮ್ಮ ಬುದ್ಧಿವಂತಿಕೆ ಪ್ರದರ್ಶಿಸಿ!

The Magic of Number 9 : ಸಂಖ್ಯೆ ಒಂಬತ್ತರ ಮ್ಯಾಜಿಕ್: ಗಣಿತದ ಈ ಟ್ರಿಕ್‌ ಬಳಸಿ ನಿಮ್ಮ ಬುದ್ಧಿವಂತಿಕೆ ಪ್ರದರ್ಶಿಸಿ!

ನಂಬರ್‌ 9ರ ವಿಶೇಷ ಸ್ಥಾನ

ನಂಬರ್‌ 9ರ ವಿಶೇಷ ಸ್ಥಾನ

9 ನೇ ತಾರೀಖಿನಂದು ಜನಿಸಿದ ವ್ಯಕ್ತಿಯನ್ನು ಸಹ ಬುದ್ಧಿವಂತ ಮತ್ತು ಅಸಾಧಾರಣ ಎಂದು ಪರಿಗಣಿಸಲಾಗಿದೆ. 9 ಒಂದು ಚಕ್ರದ ಪೂರ್ಣಗೊಳಿಸುವಿಕೆ ಮತ್ತು ಇನ್ನೊಂದರ ಆರಂಭವನ್ನು ಪ್ರತಿನಿಧಿಸುತ್ತದೆ. ಬನ್ನಿ ಸಂಖ್ಯೆ ಒಂಬತ್ತರ ಮ್ಯಾಜಿಕ್ ಗಣಿತದ ಈ ಟ್ರಿಕ್‌ ಬಗ್ಗೆ ತಿಳಿದುಕೊಂಡು ಬರೋಣ.

  • Share this:

    ಸಂಖ್ಯಾಶಾಸ್ತ್ರದಲ್ಲಿ (Numerology) ಪ್ರತಿಯೊಂದು ಸಂಖ್ಯೆಯು ವಿಭಿನ್ನ ಅರ್ಥವನ್ನು ಹೊಂದಿದೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ʼ9ʼ ಹಲವು ವಿಶೇಷತೆಗಳನ್ನು (Special) ಹೊಂದಿದೆ. 1 ರಿಂದ 8 ಸಂಖ್ಯೆಗಳ (1to8) ಪೈಕಿ 9 ಅನ್ನು ಬುದ್ಧಿವಂತ ಸಂಖ್ಯೆ ಎನ್ನಲಾಗಿದೆ. ಸಂಖ್ಯಾಶಾಸ್ತ್ರದಲ್ಲಿ, ಗಣಿತದಲ್ಲಿ ಸಂಖ್ಯೆ 9 ಅತ್ಯಂತ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಇದನ್ನು ಮ್ಯಾಜಿಕ್‌ ನಂಬರ್‌ (Magic Number) ಅಂತಾನೂ ಕರೆಯಲಾಗುತ್ತದೆ. ಗಣಿತದಲ್ಲಂತೂ ಈ ನಂಬರ್‌ನಿಂದ ಮಾಡಬಹುದಾದ ಅಸಂಖ್ಯಾತ ಲಾಜಿಕ್‌ಗಳಿವೆ (Logic) ಎನ್ನಬಹುದು. ಹಾಗೇ ಸಂಖ್ಯಾಶಾಸ್ತ್ರದ ಅನ್ವಯ ಈ ಸಂಖ್ಯೆಯನ್ನು ಹೊಂದಿರುವ ವ್ಯಕ್ತಿಯನ್ನು ಅಸಾಧಾರಣ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ.


    ನಂಬರ್‌ 9ಕ್ಕೆ ವಿಶೇಷ ಸ್ಥಾನ


    9 ನೇ ತಾರೀಖಿನಂದು ಜನಿಸಿದ ವ್ಯಕ್ತಿಯನ್ನು ಸಹ ಬುದ್ಧಿವಂತ ಮತ್ತು ಅಸಾಧಾರಣ ಎಂದು ಪರಿಗಣಿಸಲಾಗಿದೆ. 9 ಒಂದು ಚಕ್ರದ ಪೂರ್ಣಗೊಳಿಸುವಿಕೆ ಮತ್ತು ಇನ್ನೊಂದರ ಆರಂಭವನ್ನು ಪ್ರತಿನಿಧಿಸುತ್ತದೆ.


    ಗಣಿತದಲ್ಲಿ “9” ಮ್ಯಾಜಿಕ್


    ಒಂದು ಉದಾಹರಣೆ ನೋಡುವುದಾದರೆ, ಈಗ ನಮ್ಮ ಒಂದರಿಂದ ಒಂಬತ್ತರವರೆಗೆ ಎಲ್ಲಾ ಸಂಖ್ಯೆಗಳನ್ನು 9 ರಿಂದ ಗುಣಿಸೋಣ. ಆ ಗುಣಿಸಿದ ಉತ್ತರವನ್ನು ಕೂಡೋಣ. ಈ ಕೂಡಿದ ಉತ್ತರದಿಂದ ಬಂದ ಸಂಖ್ಯೆ ನಿಮಗೆ ಒಂದು ಕ್ಷಣ ಶಾಕ್‌ ನೀಡಬಹುದು ಏಕೆಂದರೆ ಆ ಉತ್ತರ ಕೂಡ 9 ಆಗಿರುತ್ತದೆ.
    ಮೇಲಿನ ವಿವರಣೆಯನ್ನು ಪ್ರಾಯೋಗಿಕವಾಗಿ ಇಲ್ಲಿ ನೋಡಿ,
    123456789×9=1111111101 ಒಟ್ಟಾಗಿ ಕೂಡಿಸಿದರೆ “9” ಆಗುತ್ತದೆ.


    ಮಗ್ಗಿಯಲ್ಲಿ ಒಂಬತ್ತರ ಮ್ಯಾಜಿಕ್‌
    ನೀವು ಒಂಬತ್ತರ ಮಗ್ಗಿಯನ್ನು ತೆಗೆದುಕೊಂಡು ಗುಣಿಸಿ, ಗುಣಿಸಿದ ಉತ್ತರವನ್ನು ಕೂಡಿದರೆ ಒಂಬತ್ತು ಬರುತ್ತದೆ. ಗಣಿತದ ಈ ಲಾಜಿಕ್‌ ಅಂತೂ ಹೆಚ್ಚು ಅಚ್ಚರಿ ಉಂಟು ಮಾಡುವ ವಿಷಯವಾಗಿದೆ.
    9 × 1 = 9
    9 × 2 = 18 , 1 + 8 = 9
    9 × 3 = 27 , 2 + 7 = 9
    9 × 4 = 36 , 3 + 6 = 9 ಹೀಗೆ ನೀವು 9 × 10= 90 — 9 + 0 = 9 ರವರೆಗೆ ಮಾಡಿದರೂ ನಿಮಗೆ ಇಲ್ಲಿ ಉತ್ತರ ಬರೋದು ಮಾತ್ರ ಒಂಬತ್ತು.


    ಇದನ್ನೂ ಓದಿ:Vedic Mathematics: ವೇದ ಗಣಿತದ ಸಂಪೂರ್ಣ ಸೂತ್ರಗಳ ಪಟ್ಟಿ ಇಲ್ಲಿದೆ ನೋಡಿ


    ಗಣಿತಶಾಸ್ತ್ರದ ಟ್ರಿಕ್
    ಇದೇ ಗಣಿತದ ಟ್ರಿಕ್‌ ಅನ್ನು ಇಟ್ಟುಕೊಂಡು ನೀವು ಬೇಕಾದರೆ ನಿಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಬಹುದು ಹೇಗೆ ಅಂತೀರಾ, ಇಲ್ಲಿದೆ ನೋಡಿ ಒಂದು ಆಟ.
    ನೀವು ಗಣಿತಶಾಸ್ತ್ರದ ಈ ಮೇಲಿನ ಟ್ರಿಕ್‌ ಗೊತ್ತಿಲ್ಲದವರ ಆಟ ಆಡಿ ನಿಮ್ಮ ಬುದ್ಧವಂತಿಕೆ ಪ್ರದರ್ಶಿಸಬಹುದು. ಹೇಗೆ ಅಂದರೆ,
    * ಮೊದಲಿಗೆ ಅವರಿಗೆ 9 ಅನ್ನು ಕೊಟ್ಟು, ಇದನ್ನು ಒಂದರಿಂದ ಎಂಟರವರೆಗೆ ಯಾವುದಾದರೂ ಒಂದು ಅಂಕೆಯ ಜೊತೆಗೆ ಗುಣಿಸಲು ಹೇಳಿ.
    * ಗುಣಿಸಿದ ಉತ್ತರ ಎರಡು ಅಂಕೆಯದ್ದಾಗಿದ್ದರೆ ಅದನ್ನು ಬಂದ ಉತ್ತರದಲ್ಲಿ ಕೂಡಲು ಹೇಳಿ ( ಉದಾಹರಣೆಗೆ ಒಂಬತ್ತನ್ನು ಎರಡರಿಂದ ಗುಣಿಸಿದಾಗ 9 × 2 = 18 ಬರುತ್ತದೆ ಅದನ್ನು ಬಿಡಿಸಿ ಕೂಡಿದಾಗ, 1 + 8 = 9 ಬರುತ್ತದೆ)
    * ಹೀಗೆ ಒಂದಕ್ಕಿ ಬರುವವರೆಗೂ ಈ ರೀತಿಯಾಗಿ ಮಅಡಲು ಹೇಳಿ ( ಒಂದರಿಂದ ಮಾತ್ರ ಗುಣಿಸಿದಾಗ ಒಂದಕ್ಕಿ ಬರುತ್ತದೆ)
    * ಒಂದಕ್ಕಿ ಬಂದ ನಂತರ ಅದರಲ್ಲಿ 5 ಅನ್ನು ಕಳೆಯಲು ಹೇಳಿ. ಈಗ ಆ ನಂಬರ್‌ಗಳಿಗೆ ಎ, ಬಿ, ಸಿ, ಡಿ, ಇ ಅಂತಾ ಕೊಡಲು ಹೇಳಿ.
    * ಒಂದಕ್ಕಿ ಅಂದರೆ ಅಲ್ಲಿ 9 ಬಂದಿರುತ್ತದೆ ಅದರಲ್ಲಿ 5 ಅನ್ನು ಕಳೆದರೆ 4 ಬರುತ್ತದೆ ಈ 4 ಸಂಖ್ಯೆ ಎ,ಬಿ,ಸಿ,ಡಿ ಕೊಟ್ಟರೆ 4 ಕ್ಕೆ ಡಿ ಬರುತ್ತದೆ.



    * ಇದನ್ನೇಲ್ಲಾ ಅವರು ಮನಸ್ಸಿನಲ್ಲಿಯೇ ಮಾಡಿಕೊಳ್ಳಬೇಕು. ಹೀಗೆ ಬಂದ ಅಕ್ಷರದಲ್ಲಿ ಒಂದು ಯುರೋಪಿಯನ್‌ ದೇಶವನ್ನು ಇಟ್ಟುಕೊಳ್ಳಲು ಹೇಳಿ. ಇಲ್ಲಿ ನಿಮಗೆ ಡಿ ಎಂದರೆ ಡೆನ್ಮಾರ್ಕ್‌ ಬರುತ್ತದೆ.
    * ಕೊನೆಗೆ ಆ ದೇಶದ ಕೊನೆಯ ಅಕ್ಷರದಲ್ಲಿ ಆ ದೇಶದ ಒಂದು ಪ್ರಾಣಿಯನ್ನು ಗುರುತಿಸಿಕೊಳ್ಳಲು ಹೇಳಿ. ಇಲ್ಲಿ ಡೆನ್ಮಾರ್ಕ್‌ ಕೊನೆಯ ಅಕ್ಷರ K. ಇದರಿಂದ ಪ್ರಾರಂಭವಾಗುವ ಪ್ರಾಣಿ ಕಾಂಗೂರ್‌ (kangaroo)
    * ಅಂತಿಮವಾಗಿ ಆ ಪ್ರಾಣಿಯ ಕೊನೆಯ ಅಕ್ಷರದ ಬಣ್ಣವನ್ನು ಗುರುತಿಸಲು ಹೇಳಿ. ಈಗ ಅವರ ಮನಸ್ಸಿನಲ್ಲಿ ಓರೆಂಜ್‌ ಬಂದಿರುತ್ತದೆ.




    ಇದೆಲ್ಲಾ ಮುಗಿದ ಬಳಿಕ ನೀವು ಅವರು ಗುರುತಿಸಿಕೊಂಡ ದೇಶ, ಪ್ರಾಣಿ, ಬಣ್ಣ ಎಲ್ಲವನ್ನೂ ಹೇಳಬಹುದು.


    ಇದೊಂದು ಮೊದಲೇ ಯೋಜಿಸಿದ ಆಟ. ಅಂದರೆ ಸಂಖ್ಯೆ 9 ಅನ್ನು ಬಳಸಿಕೊಂಡು ನೀವು ಬುದ್ಧಿವಂತರು ಎಂದು ತೋರಿಸಿಕೊಳ್ಳಬಹುದು. ನೀವು ಉತ್ತರ ಹೇಳಿದ ಕೂಡಲೇ ಖಂಡಿತ ನಿಮ್ಮ ಗೆಳೆಯರಿಗೆ ಗಣಿತದ ಈ ಟ್ರಿಕ್‌ ಗೊತ್ತಿಲ್ಲದಿದ್ದರೆ ಅರೇ ನನ್ನ ಮನಸ್ಸಿನಲ್ಲಿದದ್ದು ನಿಂಗೆ ಹೇಗೆ ಗೊತ್ತಾಯಿತು ಅಂತಾ ಖಂಡಿತ ಕೇಳ್ತಾರೆ ನೋಡಿ.

    Published by:Gowtham K
    First published: