• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಬದುಕು ಬದಲಿಸಿದ ಯೂಟ್ಯೂಬ್ ಚಾನಲ್..! ಪಾಠ ಮಾಡುವ ಶಿಕ್ಷಕ ಮಾದರಿ ಕೃಷಿಕನಾದ ಕತೆ..

ಬದುಕು ಬದಲಿಸಿದ ಯೂಟ್ಯೂಬ್ ಚಾನಲ್..! ಪಾಠ ಮಾಡುವ ಶಿಕ್ಷಕ ಮಾದರಿ ಕೃಷಿಕನಾದ ಕತೆ..

ಗುಲಾಬಿ ಕೃಷಿಯಲ್ಲಿ ನಿರತ ಶಿಕ್ಷಕ ಈರಪ್ಪ ಕಟಗಿ

ಗುಲಾಬಿ ಕೃಷಿಯಲ್ಲಿ ನಿರತ ಶಿಕ್ಷಕ ಈರಪ್ಪ ಕಟಗಿ

ಅಂದು ಶಿಕ್ಷಕ ವೃತ್ತಿಯಿಂದ ಬದುಕು ಸಾಗಿಸಲು ಪರದಾಟ ನಡೆಸಿದ್ದ ಶಿಕ್ಷಕ. ಈಗ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಯೂಟ್ಯೂಬ್ ನೋಡಿ ಕಾಲ ಹರಣ ಮಾಡುವವರ ಸಂಖ್ಯೆಯೇ ಹೆಚ್ಚಳ, ಆದರೆ ಈ ಶಿಕ್ಷಕನ ಬದುಕನ್ನೇ ಬಂಗಾರವನ್ನಾಗಿಸಿದೆ ಯೂಟ್ಯೂಬ್. ಮನಸ್ಸು ಮಾಡಿದರೆ ಏನಾದರೂ ಮಾಡಿ ಬದುಕು ಕಟ್ಟಿಕೊಳ್ಳಬೇಕು ಎನ್ನುವದಕ್ಕೆ ಈ ಶಿಕ್ಷಕನೇ ಉತ್ತಮ ಉದಾಹರಣೆ ಎನ್ನಬಹುದು.

ಮುಂದೆ ಓದಿ ...
  • Share this:

ಗದಗ: ಬಯಲುಸೀಮೆ ನಾಡು ಗದಗ ಜಿಲ್ಲೆಯಲ್ಲಿ ಬಣ್ಣ ಬಣ್ಣದ ಗುಲಾಬಿ ಹೂಗಳು ಕಲರವ ಜೋರಾಗಿದೆ. ಈ ಬಿಸಿಲು ಸೀಮೆಯಲ್ಲಿ ಅಪರೂಪ ಎನ್ನುವಂತೆ ಗುಲಾಬಿ ಕೃಷಿ ಮಾಡಿದ್ದಾರೆ ಪಾಠ ಹೇಳುವ ಶಿಕ್ಷಕರೊಬ್ಬರು‌. ಇವರ ಈ ಸಾಹಸವನ್ನು ಕಂಡ ಜನ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.


ಹೌದು, ಪಾಠ ಹೋಳೋದನ್ನು ಬಿಟ್ಟು ಕೃಷಿ ಕೆಲಸದಲ್ಲಿ ಮಗ್ನನಾದ ಶಿಕ್ಷಕ ಈರಪ್ಪ ಕಟಗಿ  ಗದಗ ತಾಲೂಕಿನ ಶಿರುಂಜ ಗ್ರಾಮದ ನಿವಾಸಿ. ಎಂಎ ಮುಗಿಸಿಕೊಂಡು ಗದಗ, ಮುಳಗುಂದ ಸೇರಿದಂತೆ ವಿವಿಧ  ಕಾಲೇಜಿಗಳಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಾ ಇದ್ದರು. ಆದರೆ ಈ ಖಾಸಗಿ ಕಾಲೇಜಿನವರು ಕೊಡುವ ಮೂರ್ನಾಲ್ಕು ಸಾವಿರ ರೂಪಾಯಿ  ಬದುಕು ಸಾಗಿಸಲು ಎಲ್ಲಿ ಸಾಲುತ್ತದೆ.


ಹಾಗಾಗಿಯೇ ಏನಾದರೂ ಮಾಡಬೇಕು ಅಂತಾ ವಿಚಾರ ಮಾಡುತ್ತಾ ಇದ್ದ ಈರಪ್ಪ ಕಟಗಿ ಅವರು.  ಒಮ್ಮೆ ತಮ್ಮ ಮೊಬೈಲ್ ನಲ್ಲಿ ಯೂಟ್ಯೂಬ್ ಚಾನಲ್ ನೋಡುವಾಗ ಗುಲಾಬಿ ಕೃಷಿ ಮಾಡಿ ಸಾಕಷ್ಟು ಸಕ್ಸನ್​ ಆದ ಒಂದಷ್ಟು ರೈತರ ಕತೆಗಳನ್ನು ನೋಡೊದ್ದಾರೆ, ಇನ್ನೂ ಮುಂದುವರೆದು, ಅದೇ ಯೂಟ್ಯೂಬ್​ ಮೂಲಕ ಒಂದಷ್ಟು ಗುಲಾಬಿ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.


ಇನ್ನು ತಡಮಾಡುವುದು ಬೇಡ, ಸಹಾಸಕ್ಕೆ ಕೈಹಾಕೆ ಬಿಡೋಣ ಎಂದುಕೊಂಡು  ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ, ತಮ್ಮ ಪಿತ್ರಾರ್ಜಿತವಾಗಿ ಬಂದ ಎರಡುವರೆ ಎಕರೆ ಜಮೀನಿನಲ್ಲಿ ಗುಲಾಬಿ ಕೃಷಿ ಮಾಡಲು ಆರಂಭ ಮಾಡಿದ್ದಾರೆ. ತಿಂಗಳಿಗೆ ಮೂರ್ನಾಲ್ಕು ಸಾವಿರ ರೂಪಾಯಿ ಪಡೆಯುತ್ತಿದ್ದ,ಶಿಕ್ಷಕ ತನ್ನ ಜಮೀನಿನ ಗುಲಾಬಿ ಬೆಳೆದು ತಿಂಗಳಿಗೆ 30 ಸಾವಿರ ರೂಪಾಯಿ ಲಾಭ ಪಡೆಯುತ್ತಿದ್ದು, ಈಗ ವರ್ಷಕ್ಕೆ ಹೂವಿನಿಂದ 3 ರಿಂದ ನಾಲ್ಕು 4 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾ ಇದ್ದಾರೆ.


ಇನ್ನೂ ಗದಗ ಜಿಲ್ಲೆಯಲ್ಲಿ ಗುಲಾಬಿ ಕೃಷಿ ಮಾಡುವವ ಸಂಖ್ಯೆ ಬಹಳ ಕಡಿಮೆ, ಆದರೂ ಹೊಸಾ ಸಾಹಸಕ್ಕೆ ಕೈ ಹಾಕಿ, ಹೊಸ ಬೆಳೆಯನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಸಾಲಿನಿಂದ ಸಾಲಿಗೆ ಗಿಡದಿಂದ ಗಿಡಕ್ಕೆ 4 ಅಡಿ ಅಂತರದಲ್ಲಿ 6 ಸಾವಿರ ಗಿಡಗಳನ್ನು ನಾಟಿ ಮಾಡಿದ್ದಾರೆ. ಬೆಂಗಳೂರು ಬಳಿಯ ಸರ್ಜಾಪುರ ನರ್ಸರಿಯಿಂದ ಗ್ಲ್ಯಾಡಿಯೇಟರ್, ಬ್ಲ್ಯಾಕ್ ಮ್ಯಾಜಿಕ್, ಮೋದಿ ರೆಡ್, ಮ್ಯಾಂಗೋ ಯಲ್ಲೋ ಎನ್ನುವ ತಳಿಗಳ ಗುಲಾಬಿ ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ.


ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಗುಲಾಬಿ ಕೃಷಿ ಮಾಡಲು ಫೀಲ್ಡಿಗೆ ಇಳಿದ ಇವರು ಈಗ ಸುತ್ತ-ಮುತ್ತಲಿನ ಜನರಿಗೆ ಮಾದರಿ ರೈತ. ಸ್ಥಳೀಯವಾಗಿಯೇ ಉತ್ತಮವಾದ ಮಾರುಕಟ್ಟೆ ಇರುವ ಕಾರಣ ಗದಗ- ಹುಬ್ಬಳ್ಳಿಯಲ್ಲಿ ಗುಲಾಬಿ ಹೂಗಳನ್ನು ಮಾರಾಟ ಮಾಡುತ್ತಾ ಇದ್ದಾರೆ.


ಇನ್ನೂ ಸಾವಯವ ಕೃಷಿ ಪದ್ದತಿ ಹಾಗೂ ರಾಸಾಯನಿಕ ಪದ್ದತಿ ಎರಡನ್ನೂ ಅಳವಡಿಸಿಕೊಂಡು ಕೃಷಿ ಮಾಡುತ್ತಾಇದ್ದು, ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಈ ಶಿಕ್ಷಕನ ಪುಷ್ಪ ಕೃಷಿ ನೋಡಿ ಇತ್ತರೆ ರೈತರು ಕೂಡಾ ಗುಲಾಬಿ ಕೃಷಿ ಕಡೆ ಮುಖ ಮಾಡಿದ್ದಾರೆ.


ಇದನ್ನೂ ಓದಿ: ಬೇಸಿಗೆಯಲ್ಲಿ ಕಪ್ಪು ಕೋಟು ಧರಿಸುವುದಕ್ಕೆ ವಿನಾಯಿತಿ ನೀಡಿ ಎಂದು ಮನವಿ ಸಲ್ಲಿಸಿದ ವಕೀಲ


ಅಂದು ಶಿಕ್ಷಕ ವೃತ್ತಿಯಿಂದ ಬದುಕು ಸಾಗಿಸಲು ಪರದಾಟ ನಡೆಸಿದ್ದ ಶಿಕ್ಷಕ. ಈಗ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಯೂಟ್ಯೂಬ್ ನೋಡಿ ಕಾಲ ಹರಣ ಮಾಡುವವರ ಸಂಖ್ಯೆಯೇ ಹೆಚ್ಚಳ, ಆದರೆ ಈ ಶಿಕ್ಷಕನ ಬದುಕನ್ನೇ ಬಂಗಾರವನ್ನಾಗಿಸಿದೆ ಯೂಟ್ಯೂಬ್. ಮನಸ್ಸು ಮಾಡಿದರೆ ಏನಾದರೂ ಮಾಡಿ ಬದುಕು ಕಟ್ಟಿಕೊಳ್ಳಬೇಕು ಎನ್ನುವದಕ್ಕೆ ಈ ಶಿಕ್ಷಕನೇ ಉತ್ತಮ ಉದಾಹರಣೆ ಎನ್ನಬಹುದು.


ವರದಿ: ಸಂತೋಷ ಕೊಣ್ಣೂರ,ಗದಗ


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

First published: