HOME » NEWS » District » YOUTH IN GADAG TURNED CORONA WARRIORS AND DISTRIBUTE FOOD TO NEEDY ONES DAILY SKG SKTV

Corona Warriors: ಗದಗದ ಈ ಯುವಕರು ನಿರ್ಗತಿಕರಿಗೆ ನಿತ್ಯ ಅನ್ನದಾತರು !

ಇಷ್ಟು ದಿನ ಹೇಗೋ ಬದುಕು ಸಾಗಿಸುತ್ತಿದ್ದವರು ಈಗ ತುತ್ತು ಅನ್ನಕ್ಕಾಗಿ ಪರದಾಟ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹಸಿದವರಿಗೆ ಅನ್ನವನ್ನು ನೀಡುವ ಕಾಯಕ ಮಾಡ್ತಾಯಿದ್ದಾರೆ ಗದಗನ ಯುವ ಪಡೆ. ಅಂದಹಾಗೇ ಆಹಾರ ಕಿಟ್ ತಯಾರಿಸುತ್ತಿರುವ ಈ ಯುವಕರು ಕಾಲೇಜು ವಿದ್ಯಾರ್ಥಿಗಳು.

news18-kannada
Updated:May 14, 2021, 7:06 AM IST
Corona Warriors: ಗದಗದ ಈ ಯುವಕರು ನಿರ್ಗತಿಕರಿಗೆ ನಿತ್ಯ ಅನ್ನದಾತರು !
ಆಹಾರದ ಪೊಟ್ಟಣ ತಯಾರಿಸುತ್ತಿರುವ ಯುವಕರು
  • Share this:
ಗದಗ: ಕ್ರೂರಿ ಕೊರೊನಾ ಇಡೀ ಮಾನವ ಕುಲಕ್ಕೆ ಕಂಟಕವಾಗಿ ಪರಿಣಮಿಸಿದೆ. ನಿತ್ಯ ನೂರಾರು ಜನ್ರು, ಸಾವಿನ ಮನೆ ಸೇರುತ್ತಿದ್ದಾರೆ. ಅದೆಷ್ಟು ಜನ್ರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ‌. ಈ ಹೆಮ್ಮಾರಿ ಕರೊನಾದಿಂದ ತುತ್ತು ಅನ್ನಕ್ಕಾಗಿ ಅದೆಷ್ಟು ಜನ್ರು ಪರದಾಟ ನಡೆಸಿದ್ದಾರೆ. ಹೀಗಾಗಿ ಹಸಿದವರಿಗೆ ತುತ್ತು ಅನ್ನವನ್ನು ನೀಡುವ ಕೆಲಸವನ್ನು ಯುವಪಡೆ ಮಾಡ್ತಾಯಿದೆ. ಹೌದು ಈ ಕಠಿಣ ಪರಿಸ್ಥಿತಿಯಲ್ಲಿ ಯಾವುದೇ ಸ್ವಾರ್ಥ ಇಲ್ಲದೆ ಹಸಿದ ಹೊಟ್ಟೆಗೆ ಅನ್ನ ನೀಡುವ ಕಾಯಕ ಮಾಡ್ತಾಯಿದೆ ಈ ಯುವಪಡೆ. 

ಡೆಡ್ಲಿ ಕರೊನಾ ನಿತ್ಯ ರಣಕೇಕೆ ಹಾಕ್ತಾಯಿದೆ. ಹೆಮ್ಮಾರಿಯನ್ನು ಕಂಟ್ರೋಲ್ ಮಾಡಲು ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ‌. ಇದರ ನೇರ ಪರಿಣಾಮ ಬಡವರು, ಭಿಕ್ಷಕರು, ನಿರ್ಗತಿಕರ ಮೇಲೆಯೇ ತಟ್ಟಿದೆ. ಹೌದು ಇಷ್ಟು ದಿನ ಹೇಗೋ ಬದುಕು ಸಾಗಿಸುತ್ತಿದ್ದವರು ಈಗ ತುತ್ತು ಅನ್ನಕ್ಕಾಗಿ ಪರದಾಟ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹಸಿದವರಿಗೆ ಅನ್ನವನ್ನು ನೀಡುವ ಕಾಯಕ ಮಾಡ್ತಾಯಿದ್ದಾರೆ ಗದಗನ ಯುವ ಪಡೆ. ಅಂದಹಾಗೇ ಆಹಾರ ಕಿಟ್ ತಯಾರಿಸುತ್ತಿರುವ ಈ ಯುವಕರು ಕಾಲೇಜು ವಿದ್ಯಾರ್ಥಿಗಳು. ಕಾಲೇಜು ದೆಸೆಯಲ್ಲಿ ಎಬಿವಿಪಿ ಸಂಘಟನೆ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಈವಾಗ ನಿತ್ಯ ಹಸಿದವರಿಗೆ ಅನ್ನವನ್ನು ನೀಡುವ ಕಾಯಕ ಮಾಡ್ತಾಯಿದ್ದಾರೆ.

ಮುಂಜಾನೆ 8 ಗಂಟೆಗೆ ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಂಡು ಬಂದು, ಓರ್ವ ಅಡುಗೆ ಭಟ್ಟರ ಬಳಿ ಆಹಾರ ತಯಾರಿಸಿಕೊಂಡು, ಅದನ್ನು ಪಾಕೆಟ್ ಮಾಡಿ, ತಮ್ಮ ತಮ್ಮ ಬೈಕ್ ಮೇಲೆ ಇಟ್ಟುಕೊಂಡು ಕರೊನಾ ವಾರಿಯರ್ಸ್‌, ನಿರ್ಗತಿಕರಿಗೆ ಉಚಿತವಾಗಿ ಆಹಾರ ನೀಡುತ್ತಿದ್ದಾರೆ.

ಈ ಯುವಕರು ಕಳೆದ ಲಾಕ್ ಡೌನ್ ಸಮಯದಲ್ಲಿ ಉಚಿತವಾಗಿ ಔಷಧಿ ನೀಡಿದ್ರು. ಆದ್ರೆ ಈ ಬಾರಿ ಹಸಿದವರಿಗೆ ಅನ್ನವನ್ನು ಹಾಕಬೇಕು ಅಂತಾ ಪ್ಲಾನ್ ಮಾಡಿಕೊಳ್ಳುತ್ತಾರೆ. ಮೊದ ಮೊದಲು ಈ ಯುವಪಡೆ ತಾವೇ ಹಣವನ್ನು ಹಾಕಿ ಆಹಾರ ಕಿಟ್ ತಯಾರಿಸಿ ವಿತರಣೆ ಮಾಡ್ತಾಯಿದ್ರು. ಈವರ ನಿಸ್ವಾರ್ಥ ಸೇವೆಯನ್ನು ನೋಡಿದ ಹೃದಯವಂತರು ತಮ್ಮ ತಮ್ಮ ಕೈಲಾದಷ್ಟು ಹಣ, ಹಾಗೂ ದವಸ ಧಾನ್ಯಗಳನ್ನು ನೀಡ್ತಾಯಿದ್ದಾರೆ‌. ಅದರಿಂದ ನಿತ್ಯ ಪಲಾವ್, ಪುಳಿಯೋಗರೆ, ರೈಸ್ ಬಾತ್ ಸೇರಿದಂತೆ ನಿತ್ಯ ಬೇರೆ ಬೇರೆ ರೈಸ್ ಐಟಮ್ ಮಾಡಿ, ವಿತರಣೆ ‌ಮಾಡ್ತಾಯಿದ್ದಾರೆ. 10 ಜನ ವಿದ್ಯಾರ್ಥಿಗಳು ಸೇರಿಕೊಂಡು ಜನತಾ ಕರ್ಫ್ಯೂ ಜಾರಿಯಾದಾಗಿನಿಂದ ನಿತ್ಯ ಅನ್ನವನ್ನು ನೀಡ್ತಾಯಿದ್ದು, ಪ್ರತಿನಿತ್ಯ 300 ರಿಂದ 500 ಆಹಾರ ಕಿಟ್ ವಿತರಣೆ ಮಾಡ್ತಾಯಿದ್ದಾರೆ.
Youtube Video

ಈ ಕಾಲೇಜು ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆಗೆ ಅವರ ಪಾಲಕರು ಸಹ ಒಪ್ಪಿಗೆ ಸೂಚಿಸಿದ್ದಾರೆ. ಅದೆಷ್ಟು ಜನ್ರ ಕರೊನಾದಿಂದ ಮನೆಬಿಟ್ಟು ಹೊರಗಡೆ ಬರಲು ಭಯ ಪಡ್ತಾರೆ. ಆದ್ರೆ ಈ ಯುವಪಡೆ, ವಿದ್ಯಾಭ್ಯಾಸದ ಜೊತೆಗೆ ಸಮಾಜಮುಖಿ ಕೆಲಸವನ್ನು ಕೂಡಾ ಮಾಡ್ತಾಯಿದೆ. ಈ ಯುವಕರಿಗೆ ನಮ್ಮದೊಂದು ಸಲಾಂ ಹೇಳಲೇಬೇಕು.
Published by: Soumya KN
First published: May 14, 2021, 7:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories