ಬ್ಯಾಂಕ್​ ಕೆಲಸ ಬಿಟ್ಟು ಸ್ವಾವಲಂಬಿ ಬದುಕು ಕಟ್ಟಿಕೊಳ್ಳೋಕೆ ಎಣ್ಣೆ ಗಾಣ ಆರಂಭಿಸಿದ ಯುವಕ

ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಪ್ರಜ್ವಲ್ ಇದೀಗ ಸ್ವಂತ ಉದ್ಯೋಗದಿಂದ ದುಡುಮೆ ಮಾಡುವ ಛಲ ತೊಟ್ಟಿದ್ದ. ಅದರಂತೆ ಬ್ಯಾಂಕ್ ಉದ್ಯೋಗ  ಬಿಟ್ಟು ಊರಿಗೆ ಬಂದು ತಂದೆ ತಾಯಿಯ ಸಹಕಾರದಿಂದ ತನ್ನದೇ ಸ್ವಂತ ಗಾಣ ಆರಂಭಿಸಿ, ಅದರಲ್ಲಿ ಎಣ್ಣೆ ತಯಾರಿಸುತ್ತಿದ್ದಾರೆ.

ಸ್ವಂತ ಉದ್ಯಮ ಆರಂಭಿಸಿದ ಯುವಕ

ಸ್ವಂತ ಉದ್ಯಮ ಆರಂಭಿಸಿದ ಯುವಕ

  • Share this:
ಆಗದು ಎಂದು ಕೈಕಟ್ಟಿ ಕುಳಿತರೆ ಕೆಲಸ ಆಗೋದು ಎಂದೂ" ಅನ್ನೋ ಹಾಡು ಅಣ್ಣವ್ರ ಬಂಗಾರ ಮನುಷ್ಯ ಸಿನಿಮಾದ್ದು. ಈ ಹಾಡಿನ ಮೂಲಕ ನಾಡಿನ ರೈತರ ಪಾಲಿಗೆ ಬಂಗಾರದ ಮನುಷ್ಯ ಡಾ.ರಾಜ್ ಕುಮಾರ್ ಜೀವನದ ಚೈತನ್ಯ ತುಂಬಿದ್ದರು. ಬಂಗಾರದ ಮನುಷ್ಯ ಸಿನಿಮಾದ ಮೂಲಕ ಅನ್ನದಾತರ ಬದುಕಿಗೆ ವರನಟ ಡಾ.ರಾಜ್‌ಕುಮಾರ್ ಸ್ಪೂರ್ತಿಯಾಗಿದ್ರು. ನಂತರದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಸ್ವಂತ ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿದ ಕತೆಗಳನ್ನು ನೋಡಬಹುದಾಗಿದೆ. ಈಗ  ಯುವಕನೊಬ್ಬ ತನ್ನದೇ ಸ್ವಂತ ಆಯುಶ್​ ವರ್ಧನ್​ ನ್ಯಾಚುರಲ್ ಅಡಿಗೆ ಎಣ್ಣೆಯ ಬ್ರ್ಯಾಂಡ್​ ಮೂಲಕ ಜನಪ್ರಿಯತೆ ಗಳಿಸಿದ್ದಾನೆ. 

ಕೋಟೆ ನಾಡು ಚಿತ್ರದುರ್ಗದ ಪ್ರಜ್ವಲ್ ಎಂಬ ಯುವಕ ಆಯುಶ್ ವರ್ಧನ್​ ನ್ಯಾಚುರಲ್ ಎಂಬ ನೈಸರ್ಗಿಕ ಗಾಣದ ಅಡುಗೆ ಎಣ್ಣೆ ತಯಾರಿಸುತ್ತಿದ್ದಾರೆ. ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಪ್ರಜ್ವಲ್ ಇದೀಗ ಸ್ವಂತ ಉದ್ಯೋಗದಿಂದ ದುಡುಮೆ ಮಾಡುವ ಛಲ ತೊಟ್ಟಿದ್ದ. ಅದರಂತೆ ಬ್ಯಾಂಕ್ ಉದ್ಯೋಗ  ಬಿಟ್ಟು ಊರಿಗೆ ಬಂದು ತಂದೆ ತಾಯಿಯ ಸಹಕಾರದಿಂದ ತನ್ನದೇ ಸ್ವಂತ ಗಾಣ ಆರಂಭಿಸಿ, ಅದರಲ್ಲಿ ಎಣ್ಣೆ ತಯಾರಿಸುತ್ತಿದ್ದಾರೆ.

Chitradurga, Natural Cooking Oil, Prajwal, Bank Job, ಬ್ಯಾಂಕ್ ಕೆಲಸ ಬಿಟ್ಟ ಯುವಕ, ಎಣ್ಣೆ ಗಾಣ ಆರಂಭಿಸಿದ ಪ್ರಜ್ವಲ್​, ಚಿತ್ರದುರ್ಗದ ಯುವಕ, Youth from Chitradurga left bank job and started his own cooking oil business ae
ಚಿತ್ರದುರ್ಗದ ಪ್ರಜ್ವಲ್


ಕಳೆದ ಒಂದುವರೆ ವರ್ಷದಿಂದ ಎಣ್ಣೆ ಗಾಣ ಪ್ರಾರಂಭಿಸಿದ್ದು, ರಾಸಾಯನಿಕ ಮುಕ್ತ ಶೇಂಗಾ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ  ತಯಾರು ಮಾಡುತ್ತಿದ್ದಾರೆ.   ಪ್ರಾರಂಭದಲ್ಲಿ ಬ್ಯಾಂಕ್ ಉದ್ಯೋಗ ಬಿಟ್ಟು ಸ್ವಂತ ಉದ್ಯೋಗ ಮಾಡುವ ಮಗನ  ಆಸಕ್ತಿಗೆ ಒಪ್ಪದ ತಂದೆ ರಾಜ ಶೇಖರ್, ತಾಯಿ ವಿಜಯಲಕ್ಷ್ಮಿ ಇದೀಗ ಬೇಶ್ ಎಂದಿದ್ದಾರೆ.

ಇದನ್ನೂ ಓದಿ: Shershaah: ಹೊಸ ದಾಖಲೆ ಬರೆದ ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ಶೇರ್​ಷಾ ಸಿನಿಮಾ

ಅಷ್ಟೆ ಅಲ್ಲದೆ ಮಗನ ಎಣ್ಣೆಗಾಣದ ಕೆಲಸಕ್ಕೆ ಪ್ರೋತ್ಸಾಹಿಸಿ ಸಾಥ್ ನೀಡಿದ್ದಾರೆ. ಸದ್ಯ  3 ಗಾಣಗಳನ್ನ ಬಳಸಿರುವ ಪ್ರಜ್ವಲ್, ದಿನಕ್ಕೆ 100 ಲೀಟರ್ ವರೆಗೆ ಎಣ್ಣೆ ಉತ್ಪಾದನೆ ಮಾಡುತ್ತಿದ್ದಾರೆ. ಎಣ್ಣೆ ಉತ್ಪಾದಿಸಲು ತಿಪಟೂರಿನಿಂದ ಕೊಬ್ಬರಿ, ಚಳ್ಳಕೆರೆಯಿಂದ ಶೇಂಗಾ ಖರೀದಿಸುತ್ತಿದ್ದಾರೆ. ಎಣ್ಣೆ ಗಾಣ ಪ್ರಾರಂಭಿಸಲು 5 ಲಕ್ಷಕ್ಕೂ ಹೆಚ್ಚು ಹಣ ವ್ಯಯ ಮಾಡಿದ್ದು, ಒಂದು ಲೀಟರ್ ಶೇಂಗಾ ಎಣ್ಣೆಗೆ 240, ಕೊಬ್ಬರಿ ಎಣ್ಣೆಗೆ 300 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಂಗೆ ಲಗ್ಗೆ ಇಟ್ಟ ನಟಿ Jyotika: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ಗೂ ಹೆಚ್ಚು ಹಿಂಬಾಲಕರು..!

ಸದ್ಯ ಆಯುಶ್ ವರ್ಧನ್​ ನ್ಯಾಚುರಲ್ ಗಾಣದ ಎಣ್ಣೆ, ಆಸ್ಟ್ರೇಲಿಯಾ ಸೇರಿದಂತೆ, ಬೆಂಗಳೂರು, ದಾವಣಗೆರೆ,ಹಾವೇರಿ, ಚಿತ್ರದುರ್ಗ, ಜಿಲ್ಲೆ ಗಳಲ್ಲಿ  ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: Neha Dhupia Baby Shower: ಗರ್ಭಿಣಿ ನಟಿ ನೇಹಾ ಧೂಪಿಯಾಗೆ ಸಿಕ್ತು ಸ್ನೇಹಿತೆಯರ ಕಡೆಯಿಂದ ಭರ್ಜರಿ ಸರ್ಪ್ರೈಸ್​..!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: