• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಡಿ. 23 ರಂದು ಲಿಂಗಾಯಿತ ಪಂಚಮಸಾಲಿ ಸಮಾಜದ 5 ಸಾವಿರ ಜನರಿಂದ ರಕ್ತದಾಸೋಹ ಕಾರ್ಯಕ್ರಮ: ಸಂಗಮೇಶ ಬಬಲೇಶ್ವರ

ಡಿ. 23 ರಂದು ಲಿಂಗಾಯಿತ ಪಂಚಮಸಾಲಿ ಸಮಾಜದ 5 ಸಾವಿರ ಜನರಿಂದ ರಕ್ತದಾಸೋಹ ಕಾರ್ಯಕ್ರಮ: ಸಂಗಮೇಶ ಬಬಲೇಶ್ವರ

ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ

ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ

ವಿಜಯಪುರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಯುವಕ ಯುವತಿಯರು ರಕ್ತದಾನ ಮಾಡುವ ಮೂಲಕ ರಕ್ತ ದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ

  • Share this:

ವಿಜಯಪುರ (ಡಿಸೆಂಬರ್​. 20) : ಇದೇ 23 ರಂದು ರಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ 41ನೇ ಜನ್ಮದಿನ ಕಾರ್ಯಕ್ರಮವಿದೆ. ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡುವ ಬದಲು ಸಮಾಜ ಮುಖಿ ಕಾರ್ಯದ ಮೂಲಕ ಜನರನ್ನು ತಲುಪಲು ಅಖಿಲ ಭಾರತ ಪಂಚಮಸಾಲಿ ಸಮಾಜದ ಮುಖಂಡರು ನಿರ್ಧರಿಸಿದ್ದಾರೆ. ಈ ಕುರಿತು ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ, ಡಿಸೆಂಬರ್​ 23 ರಂದು ವಿಜಯಪುರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಯುವಕ ಯುವತಿಯರು ರಕ್ತದಾನ ಮಾಡುವ ಮೂಲಕ ರಕ್ತ ದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.  ಈ ಮೂಲಕ ಪಂಚಮಸಾಲಿ ಸಮಾಜ ಆಗ್ರಹಿಸುತ್ತಿರುವ 2 ಎ ಮೀಸಲಾತಿ ಬೇಡಿಕೆಯ ಸಾತ್ವಿಕ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.


ಲಿಂಗಾಯಿತ ಪಂಚಮಸಾಲಿ ಸಮಾಜವನ್ನು 2 ಎ ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಡಿ. 23 ರಂದು ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನ ಸೌಧದ ವರೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಪಂಚಶೀಲ ಹೆಜ್ಜೆ ಹೆಸರಿನಲ್ಲಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಸರಕಾರದಲ್ಲಿರುವ ಲಿಂಗಾಯಿತ ಪಂಚಮಸಾಲಿ ಸಮಾಜದ ಮುಖಂಡರಾದ ಸಚಿವ ಸಿ. ಸಿ. ಪಾಟೀಲ್, ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯ ಸಭೆ ಸದಸ್ಯ ಈರಣ್ಣ ಕಡಾಡಿ ಮತ್ತು ಇತರರು ಪಾದಯಾತ್ರೆ ಬೇಡ. ಸಿಎಂ ಬಿ. ಎಸ್. ಯಡಿಯೂರಪ್ಪನವರು ಸಮಾಜದ ಬೇಡಿಕೆಗೆ ಪೂರಕವಾಗಿ ಸ್ಪಂದಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಬೇಡ ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಪಾದಾಯಾತ್ರೆಯನ್ನು ಕೈ ಬಿಡಲಾಗಿದೆ.  ಪಾದಯಾತ್ರೆಯ ಬದಲಾಗಿ ಈಗ ರಕ್ತದಾನ ಶಿಬಿರಗಳು ನಡೆಯಲಿವೆ ಎಂದು ತಿಳಿಸಿದರು.


ಲಿಂಗಾಯಿತ ಪಂಚಮಸಾಲಿ ಸಮಾಜ ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದೆ. ಈ ಸಮಾಜದ ಬಹುತೇಕರು ಕೃಷಿಕರು. ಲಿಂಗಾಯಿತ ಮತ್ತು ಇತರ ಸಮುದಾಯಗಳ ಜನರು 2 ಎ ಮೀಸಲಾತಿಯಡಿ ನಾನಾ ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯುವುದನ್ನು ನೋಡಿದಾಗ ಪಂಚಮಸಾಲಿ ಸಮುದಾಯದ ಬಡ ಮಕ್ಕಳು ಅದರಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಈ ಸಮಾಜವೂ ಆರ್ಥಿಕವಾಗಿ ಮುಂದೆ ಬರಲು ಮೀಸಲಾತಿ ಅಗತ್ಯವಾಗಿದೆ.


ಈ ಹಿನ್ನೆಲೆಯಲ್ಲಿ ಸಮಾಜದ ಬೇಡಿಕೆಯನ್ನು ಕೊಡುತ್ತೇವೆ ರಕ್ತವನ್ನು… ಪಡೆಯುತ್ತೇವೆ ಮೀಸಲಾತಿಯನ್ನು ಎಂಬ ಘೋಷಣೆಯಡಿ ರಕ್ತದಾನ ಮಾಡಿ ಸಮಾಜಕ್ಕೆ ರಕ್ತದಾಸೋಹ ಮಾಡುವ ಮೂಲಕ ಸಮುಾಜ ಮುಖಿ ಕಾರ್ಯ ಆಯೋಜಿಸಲಾಗಿದೆ ಎಂದು ಸಂಗಮೇಶ ಬಬಲೇಶ್ವರ ತಿಳಿಸಿದರು.


ಇದನ್ನೂ ಓದಿಗ್ರಾ.ಪಂ.ಚುನಾವಣೆ: ಕೊರೋನಾ ಸೋಂಕಿತರ ಮತದಾನಕ್ಕೆ ಕೊನೆಯ ಒಂದು ಗಂಟೆ ಮೀಸಲು


ಸಿಎಂ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸರಕಾರದಲ್ಲಿರುವ ಸಮಾಜದ ಜನಪ್ರತಿಧಿಗಳು ಹೇಳಿದ್ದರಿಂದ ಮೀಸಲಾತಿ ಬೇಡಿಕೆ ಹೋರಾಟವನ್ನು ಸದ್ಯಕ್ಕೆ ಕೈ ಬಿಡಲಾಗಿದೆ. ಜ. 14 ರೊಳಗೆ ಸಿಎಂ ಈ ನಿಟ್ಟಿನಲ್ಲಿ ತಮ್ಮ ಸಂವೇದನಶೀಲರಾಗಿ ಮೀಸಲಾತಿ ನೀಡುವ ಮೂಲಕ ಪಂಚಮಸಾಲಿ ಸಮಾಜದ ಬಗ್ಗೆ ಇರುವ ತಾಯಿ ಹೃದಯವನ್ನು ಪ್ರದರ್ಶಿಸಬೇಕು. ಇಲ್ಲದಿದ್ದರೆ ಜ. 14ರ ನಂತರ ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ಪಂಚಶೀಲ ಹೆಜ್ಜೆ ಪಾದಯಾತ್ರೆ ಆರಂಭವಾಗಲಿದೆ.


ಬೆಂಗಳೂರಿನಲ್ಲಿ ವಿಧಾನಸೌಧದ ಎದುರು 10 ಲಕ್ಷ ಜನ ಪಂಚಮಸಾಲಿ ಸಮುದಾಯದ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಸಂಗಮೇಶ ಬಬಲೇಶ್ವರ ತಿಳಿಸಿದರು.

top videos
    First published: