ಭಾರತೀಯ ಯೋಧರ ಹತ್ಯೆಗೆ ಖಂಡನೆ ; ಚೀನಾ ವಿರುದ್ಧ ಯುವ ಕಾಗ್ರೆಸ್ ನಿಂದ ಪ್ರತಿಭಟನೆ

ಚೀನಾ ಸೈನಿಕರು ನುಸುಳಿ ಭಾರತೀಯ ಯೋಧರನ್ನು ಹತ್ಯೆ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಸದಸ್ಯರು

ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಸದಸ್ಯರು

  • Share this:
ಶಿವಮೊಗ್ಗ(ಜೂ.24): ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಇಂದು ಶಿವಮೊಗ್ಗ ನಗರದ  ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಚೀನಾ ದೇಶ ಕುತಂತ್ರದಿಂದ ಗಲ್ವಾನ್ ಗಡಿ ಭಾಗದಲ್ಲಿ ಭಾರತೀಯ ವೀರ ಯೋಧರನ್ನು ಹತ್ಯೆ ಮಾಡಿದ್ದಾರೆ ಎಂದು ಚೀನಾ ಅಧ್ಯಕ್ಷ  ಜಿನ್ ಪಿಂಗ್  ವಿರುದ್ಧ ಕಿಡಿಕಾರಿದ್ದಾರೆ. 

ಚೀನಾ ಅಧ್ಯಕ್ಷರ ಪ್ರತಿಕೃತಿಯನ್ನು ನೇಣುಗಂಬಕ್ಕೇರಿಸುವ ಅಣುಕು ಪ್ರದರ್ಶನದ ನಡೆಸಿದ  ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಚೀನಾ ಅಧ್ಯಕ್ಷ ವಿರುದ್ಧ ಘೋಷಣೆ ಕೂಗಿದರು. ಪ್ರಪಂಚದಾದ್ಯಂತ  ಕೊರೋನಾ ಮಹಾಮಾರಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಮಹಾಮಾರಿಯಿಂದ ಜೀವ ಬದುಕಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ವಿಶ್ವ ಇರುವಾಗ ಚೀನಾ ತನ್ನ ಉದ್ಧಟತನವನ್ನು ತೋರಿಸುತ್ತಿದೆ ಎಂದು ಆರೋಪಿಸಿದರು.

ಭಾರತದ ಗಡಿ ಭಾಗಕ್ಕೆ ನುಸುಳುಕೋರರಂತೆ ಚೀನಾ ಸೈನಿಕರು ನುಸುಳಿ ಭಾರತೀಯ ಯೋಧರನ್ನು ಹತ್ಯೆ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಘಟನೆ ನಡೆದರು, ಈ ವಿಚಾರವಾಗಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎರಡು ದಿನಗಳ ಕಾಲ ಮೌನ ವಹಿಸಿದ್ದು ಯಾಕೆ ಎಂಬ ಪ್ರಶ್ನೆ ಮಾಡಿದರು. ಇಂತಹ ದುಸ್ಸಾಹಸ ಮಾಡಿದ ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.

ಈ ಕೂಡಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು  ಚೀನಾ ದೇಶದ ವಿರುದ್ಧ ಯುದ್ಧವನ್ನು ಸಾರಬೇಕು ಭಾರತೀಯರೆಲ್ಲರೂ ಹಾಗೂ ಕಾಂಗ್ರೆಸ್ ಪಕ್ಷ ನಿಮ್ಮೊಂದಿಗೆ ಇದೆ ಎಂದು ಆಗ್ರಹ ಪಡಿಸಿದರು.

ಇದನ್ನೂ ಓದಿ : ಚಿಕ್ಕೋಡಿಯಲ್ಲಿ ಎಸ್​ಎಸ್​ಎಲ್​​ಸಿ ಪರೀಕ್ಷೆ ಬರೆಯಲು ಸಿದ್ದರಾದ ವಿದ್ಯಾರ್ಥಿಗಳು ; ನಾಳೆಯ ಪರೀಕ್ಷೆಗೆ ಇಂದೇ ಮಾಕ್ ಟೆಸ್ಟ್

ಇದೇ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಕಾರ್ಯಕರ್ತರು ವಿಶ್ವ ಸಂಸ್ಥೆಯೂ ಚೀನಾ ದೇಶವನ್ನು ಬಹಿಷ್ಕರಿಸಬೇಕು. ಎಲ್ಲ ದೇಶದ ನಾಗರಿಕರು ಇಂತಹ ಕೊರೋನಾ ದಂತಹ  ವಿಪತ್ತು ಸಂದರ್ಭದಲ್ಲಿ ಇರುವಂತ ವೇಳೆಯಲ್ಲಿ ಉದ್ದಟತನದಿಂದ ಮೆರೆಯುತ್ತಿರುವ ಚೀನಾ ಉತ್ಪಾದಿಸುವ  ವಸ್ತುಗಳನ್ನು ಬಹಿಷ್ಕರಿಸುವ  ಮೂಲಕ ಚೀನಾಕ್ಕೆ ತಕ್ಕ ಉತ್ತರವನ್ನು ನೀಡಬೇಕು ಎಂದರು.

ಭಾರತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡಲೇ ಚೀನಾ ವಿರುದ್ಧ ಎಲ್ಲ ಒಪ್ಪಂದಗಳನ್ನು ಮುರಿದು ಕೊಳ್ಳುವಂತೆ  ಮನವಿ ಮಾಡಿದರು. ಚೀನಾ ಅಧ್ಯಕ್ಷರಿಗೆ ತಕ್ಕ ಉತ್ತರ ಕೊಡುವ ಮೂಲಕ ವಿಶ್ವದಲ್ಲಿ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಪ್ರತಿಭಟನಾಕಾರರು ಪ್ರಧಾನಿಗೆ ವಿನಂತಿಸಿಕೊಂಡಿರು.
First published: