news18-kannada Updated:June 2, 2020, 4:13 PM IST
ದೇವಲಹಳ್ಳಿಯಲ್ಲಿ ಬಡವರಿಗೆ ನೆರವಾಗುತ್ತಿರುವ ಯುವಕರು.
ದೇವನಹಳ್ಳಿ: ಕೊರೋನಾ ಲಾಕ್ಡೌನ್ ನಿಂದಾಗಿ ಸಾರ್ವಜನಿಕರು ಮನೆಗಳಿಂದ ಹೊರ ಬರದಂತಾಗಿದೆ. ಕೊರೋನಾ ಅಟ್ಟಹಾಸ ಎಷ್ಟಿದೆ ಎಂದರೆ ದೈಹಿಕ ನ್ಯೂನ್ಯತೆಗಳಿಂದ ಬಳಲುತ್ತಿರುವವರು, ವಯೋವೃದ್ದರನ್ನ ಹಿಂಡಿ ಹಿಪ್ಪೆ ಮಾಡುತ್ತಿದ್ದು ಮೃತ್ಯುಕಾರಕವಾಗಿದೆ. ಅಂಗಾಗ ವೈಫಲ್ಯ, ವೃದ್ದರು, ಮಕ್ಕಳನ್ನ ಇನ್ನಿಲ್ಲದಂತೆ ಕಾಡುತ್ತಿದ್ದು ಹೆಮ್ಮಾರಿ ಬಲಿಗಾಗಿ ಕಾಯುತ್ತಿದೆ.
ಬಹುತೇಕ ಇಡೀ ಪ್ರಪಂಚವನ್ನೆ ಹಿಂಡೆ ಹಿಪ್ಪೆ ಮಾಡುತ್ತಿರುವ ಮಹಾಮಾರಿ ಕೊರೋನಾಗೆ ಬಲಿಯಾದವರು ವಯೋವೃದ್ದರು ಮತ್ತು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದವರೆ. ಇದನ್ನ ಮನಗಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಮನಗೊಂಡನಹಳ್ಳಿ ಗ್ರಾಮದ ಶಿವಾಜಿ, ಹನುಮೇಗೌಡ ಎಂಬ ಯುವಕರ ತಂಡದ ಕಾರ್ಯಕ್ಕೆ ಎಲ್ಲೆಲ್ಲೂ ಮೆಚ್ಚುಗೆ ವ್ಯಕ್ತವಾಗಿದ್ದು ಸಾರ್ವಜನಿಕ ಪಾಳಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ದೇವನಹಳ್ಳಿ ತಾಲ್ಲೂಕು ಕೊಯಿರ ಗ್ರಾಮ ಕಲ್ಲು ಗಣಿಗಾರಿಕೆಗೆ ಹೆಸರುವಾಸಿ. ಧರ್ಮಸ್ಥಳ ಗೊಮ್ಮಟೇಶ್ವರ ವಿಗ್ರಹ, ವಿಧಾನಸೌಧ, ವಿಕಾಸ ಸೌಧ, ಬೆಳಗಾವಿ ವಿಕಾಸ ಸೌಧ ಸೇರಿ ನಾಡಿನ ಎಲ್ಲಾ ವಿಗ್ರಹಗಳು, ಮೂರ್ತಿಗಳ ಕೆತ್ತನೆಯಾದದ್ದು ಇಲ್ಲಿನ ಕಲ್ಲುಗಳಿಂದಲೇ. ಆದರೆ, ಇದೀಗ ಇಲ್ಲಿ ಗಣಿಗಾರಿಕೆ ನಿಂತುಹೋಗಿದೆ. ಪರಿಣಾಮ ಇಲ್ಲಿನ ಜನ ಸಾಕಷ್ಟು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇನ್ನು ಕೊರೋನ ಲಾಕ್ಡೌನ್ನಿಂದ ಸಂಕಷ್ಟದಲ್ಲೇ ದಿನಗಳನ್ನು ದೂಡುವಂತಾಗಿದೆ.
ಈ ಪರಿಸ್ಥಿತಿಯನ್ನು ಮನಗಂಡಿರುವ ಯುವಕರ ಬಳಗ ಅನಾರೋಗ್ಯಕ್ಕೆ ತುತ್ತಾಗಿರುವ ಬಡ ಜನರಿಗೆ ಸ್ವಂತ ಖರ್ಚಿನಲ್ಲಿ ವೈದ್ಯಕೀಯ ಸೌಲಭ್ಯ ಸೇರಿದಂತೆ ಔಷದ ಮತ್ತು ಆಹಾರ ಪೂರೈಕೆ ಮಾಡಿದೆ. ಅವಶ್ಯಕ ದಿನಸಿ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸಿದೆ. ಅರುವನಹಳ್ಳಿ, ರಾಮನಾಥಪುರ, ಕೊಯಿರ, ಹೊಸೂರು, ಜ್ಯೋತಿಪುರ, ರಾಜೀವ್ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಬಡ ಜನರಿಗೆ ಸಹಾಯ ಮಾಡಿರುವ ಈ ಯುವಕರ ಗುಂಪಿನ ಕೆಲಸಕ್ಕೆ ಇದೀಗ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಇದನ್ನೂ ಓದಿ : ವಲಸೆ ಕಾರ್ಮಿಕರ ಹಸಿವನ್ನು ನೀಗಿಸಿದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ
First published:
June 2, 2020, 4:13 PM IST