ವಿವಾಹಿತೆಯ ಅಕ್ರಮ ಸಂಬಂಧದ ಕಾಟ ತಾಳಲಾರದೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಿಯಕರ!

ರವಿಚಂದ್ರ ಆಕೆಯನ್ನು ಬೈಕ್‌ನಿಂದ ಕೆಳಗೆ ಇಳಿಸಿ. ರಸ್ತೆಯಲ್ಲೆ ಜಗಳ ಆರಂಭಿಸಿದ್ದಾನೆ. ಮಾತು ಕೇಳದೆ ಎದುರುತ್ತರ ಕೊಡುತ್ತಿದ್ದ ಪಲ್ಲವಿ ಮೇಲೆ ಪಕ್ಕದಲ್ಲೇ ಬಿದ್ದಿದ್ದ ಕಲ್ಲಿನಿಂದ ತಲೆಯ ಮೇಲೆ ಹೊಡಿದ್ದಾನೆ. ಕೆಳಗೆ ಬಿದ್ದ ಪಲ್ಲವಿ ಮೇಲೆ ಮತ್ತೆ ಅದೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ತಕ್ಷಣ ಭಯದಿಂದ ಅಲ್ಲಿಂದ ಜಾಗ ಖಾಲಿ‌ ಮಾಡಿ ತಪ್ಪಿಸಿಕೊಂಡುಬಿಟ್ಟಿದ್ದನು.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಮೈಸೂರು: ಆಕೆಗೆ ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬನ ಹಿಂದೆ ಹೋಗಿದ್ದಳು. ಆತನ ಜೊತೆಯೂ ನೆಟ್ಟಗಿರದೇ ಮತ್ತೊಬ್ಬನ ಸ್ನೇಹ ಬೆಳೆಸಿದ್ದಳು. ಪಾತರಗಿತ್ತಿಯಂತಾಗಿದ್ದ ಆಕೆಯ ಬಾಳಿಗೆ ಆಕೆಯ ಚೆಲ್ಲಾಟವೇ ಅಂತ್ಯವಾಡಿದೆ. ವಿವಾಹಿತೆಯ ಹಿಂದೆ ಬಿದ್ದ ಆ ಅವಿವಾಹಿತ, ಕೊನೆಗು ಆಕೆಯ ಕಾಟ ತಾಳಲಾರದೆ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದಾನೆ. ಮೈಸೂರಿನಲ್ಲಿ ನಡೆದ ಆ ನಿಗೂಢ ಕೊಲೆಯ ರಸಹ್ಯ ಕೊನೆಗೂ ಬಯಲಾಗಿದೆ.

ಅವತ್ತು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ಜನರು ಬೆಚ್ಚಿ ಬಿದ್ದಿದ್ದರು. ಅದಕ್ಕೆ‌ ಕಾರಣ ಮಹಿಳೆಯೊಬ್ಬಳ ಬರ್ಬರ ಕೊಲೆ. ನಿರ್ಜನ ಪ್ರದೇಶ, ಖಾಲಿ ಬಿಯರ್ ಬಾಟಲ್‌ಗಳು, ಪಕ್ಕದಲ್ಲೇ ಬಿದ್ದ ಮಹಿಳೆಯ ಶವ ಕಂಡು ಎಲ್ಲರೂ ಹೌಹಾರಿದ್ದರು. ಅಂದ್ಹಾಗೆ ಅವತ್ತು ಅಲ್ಲಿ ಹೆಣವಾಗಿ ಸಿಕ್ಕ ಮಹಿಳೆ ಪಲ್ಲವಿ. ಹದಿನಾರು ಮೋಳೆ ಗ್ರಾಮದ ಪಲ್ಲವಿಗೆ ಮದುವೆಯಾಗಿ ಮೂರು ಜನ ಮಕ್ಕಳಿದ್ದರು. ಖಾಸಗಿ ಕಂಪನಿ ಐಟಿಸಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸಕ್ಕೆ ಅಂತಾ ಹೋದವಳು ಮನೆಗೆ ವಾಪಸ್ಸಾಗಿರಲಿಲ್ಲ.‌ ಬದಲಾಗಿ ಆಕೆಯ ಹೆಣ ಸಿಕ್ಕಿತ್ತು. ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ‌ ಮಾಡಲಾಗಿತ್ತು. ಅಕ್ಕ ಪಕ್ಕ ಸಿಕ್ಕಿದ ಬಿಯರ್ ಬಾಟಲ್ ಕೆಳ ವಸ್ತ್ರ ಇಲ್ಲದೆ ಇರುವುದನ್ನು ನೋಡಿ ಯಾರೋ ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿತ್ತು. ಆದ್ರೆ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿರುವ ಅಂಶ ಎಲ್ಲರಿಗೂ ಶಾಕ್ ನೀಡಿದೆ.

ಹೌದು ಫೆ.23ರಂದು ಪಲ್ಲವಿಯನ್ನು ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಆಕೆಯ ಗೆಳೆಯ, ಇನಿಯ ರವಿಚಂದ್ರ. ಪಲ್ಲವಿ ಹಾಗೂ ರವಿಚಂದ್ರ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಐಟಿಸಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ಪಲ್ಲವಿಗೆ ಅದೇ ಕಂಪನಿಯಲ್ಲಿ ಡ್ರೈವರ್ ಆಗಿದ್ದ ರವಿಚಂದ್ರಗೆ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಇಬ್ಬರ ನಡುವೆ ಅಕ್ರಮ ಸಂಬಂಧ ಏರ್ಪಟ್ಟಿತ್ತು. ಪಲ್ಲವಿ ರವಿಚಂದ್ರ ಬಳಿ ಸಾಕಷ್ಟು ಹಣ ಸಹಾಯ ಪಡೆದಿದ್ದಳು. ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದಳು. ರವಿಚಂದ್ರ ಸಾಕಷ್ಟು ಬಾರಿ ಹಣ ನೀಡಿದ್ದ. ಆಮೇಲೆ ಆತನಿಗೆ ಹಣ ಕೊಡಲು ಸಾಧ್ಯವಾಗಲಿಲ್ಲ. ಇವೆಲ್ಲದರ ಜೊತೆ ಇನ್ನು ಮದುವೆಯಾಗದ ರವಿಚಂದ್ರನ ಎಲ್ಲ ಸಂಬಳ ನನಗೆ ಬೇಕು ಅಂತ ಪಲ್ಲವಿ ಪೀಡಿಸುತ್ತಿದ್ದಳು. ಇವೆಲ್ಲದರಿಂದ ಪಲ್ಲವಿ ಮೇಲೆ ರವಿಚಂದ್ರ ಬೇಸರಗೊಂಡಿದ್ದನು.

ಇದನ್ನು ಓದಿ: Session | ಸದನದಲ್ಲಿ ಗದ್ದಲ; ಬಾವಿಗಿಳಿದು ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ, ಸ್ಪೀಕರ್ ವಿರುದ್ಧ ಘೋಷಣೆ

ಪಲ್ಲವಿಯ ಪಜೀತಿಗಳು ಇಷ್ಟಕ್ಕೆ ನಿಲ್ಲೊಲ್ಲ. ಆಕೆಗೆ ಈಗಾಗಲೇ ಮದುವೆ ಆಗಿದೆ. ಅಲ್ಲದೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಈ ಮಧ್ಯೆ ರವಿಚಂದ್ರನನ್ನು ಬಿಟ್ಟು ಬೇರೊಬ್ಬನ‌ ಜೊತೆ ಸ್ನೇಹ ಬೆಳೆಸಿದ್ದಳು. ತಾನು ನೆಟ್ಟಗೆ ಇರದೆ, ರವಿಚಂದ್ರನಿಗೆ ನೀನು ಯಾವ ಹುಡುಗಿಯನ್ನು ನೋಡುವಂತಿಲ್ಲ ಅಂತ ಬೆದರಿಕೆ ಸಹ ಹಾಕುತ್ತಿದ್ದಳು. ಈ ಎಲ್ಲ ಘಟನೆಯಿಂದ ಬೆಸತ್ತಿದ್ದ ರವಿಚಂದ್ರ ಪಲ್ಲವಿಯನ್ನು ಕೊಲೆ ಮಾಡಲು ನಿರ್ಧರಿಸಿಬಿಟ್ಟಿದ್ದ. ಅವತ್ತು ಎಂದಿನಂತೆ ಪಲ್ಲವಿಯನ್ನು ರವಿಚಂದ್ರ ತನ್ನ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಮಾರ್ಗ ಮಧ್ಯೆ ಅಡಕನಹಳ್ಳಿ ಕೈಗಾರಿಕಾ‌ ಪ್ರದೇಶದ ಬಳಿ ಇಬ್ಬರಿಗೂ ಜಗಳ‌ ಶುರುವಾಗಿದೆ. ಜಗಳ ತಾರಕಕ್ಕೇರಿದೆ. ರವಿಚಂದ್ರ ಆಕೆಯನ್ನು ಬೈಕ್‌ನಿಂದ ಕೆಳಗೆ ಇಳಿಸಿ. ರಸ್ತೆಯಲ್ಲೆ ಜಗಳ ಆರಂಭಿಸಿದ್ದಾನೆ. ಮಾತು ಕೇಳದೆ ಎದುರುತ್ತರ ಕೊಡುತ್ತಿದ್ದ ಪಲ್ಲವಿ ಮೇಲೆ ಪಕ್ಕದಲ್ಲೇ ಬಿದ್ದಿದ್ದ ಕಲ್ಲಿನಿಂದ ತಲೆಯ ಮೇಲೆ ಹೊಡಿದ್ದಾನೆ. ಕೆಳಗೆ ಬಿದ್ದ ಪಲ್ಲವಿ ಮೇಲೆ ಮತ್ತೆ ಅದೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ತಕ್ಷಣ ಭಯದಿಂದ ಅಲ್ಲಿಂದ ಜಾಗ ಖಾಲಿ‌ ಮಾಡಿ ತಪ್ಪಿಸಿಕೊಂಡುಬಿಟ್ಟಿದ್ದನು.

ನಂತರ ದಾರಿಹೋಕರು ಶವ ಬಿದ್ದಿರುವುದನ್ನ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ನಂಜನಗೂಡು ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆಯ ಹಂತದಲ್ಲಿ ಹಲವು ಆಯಾಮದಲ್ಲಿ ಯೋಚಿಸಿದ ಪೊಲೀಸರು, ಪಲ್ಲವಿ ಕಾಲ್ ‌ರೆಕಾರ್ಡ್‌ ಆಧಾರದ ಮೇಲೆ ರವಿಚಂದ್ರನನ್ನು ಪತ್ತೆ ಹಚ್ಚಿ ವಿಚಾರಣೆ ಮಾಡಿದ್ದಾರೆ. ಪೊಲೀಸರು ಪ್ರಶ್ನೆ ಕೇಳುತ್ತಿದ್ದಂತೆ ಸತ್ಯ ಒಪ್ಪಿಕೊಂಡಿದ್ದಾನೆ. ಮತ್ತು ಆಕೆಯನ್ನು ಕೊಲೆ ಮಾಡಲು ಕಾರಣ ಏನು ಎಂಬುದನ್ನು ಬಾಯ್ಬಿಟ್ಟಿದ್ದಾನೆ.
Published by:HR Ramesh
First published: