ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾ: ಸೋದರ ಮಾವನಿಗೂ 14 ದಿನ ನ್ಯಾಯಾಂಗ ಬಂಧನ

ವಿನಯ್ ಕುಲಕರ್ಣಿ ಪರ ವಕೀಲರು ಜಾಮೀನಿಗೆ ಹೈಕೋರ್ಟ್ ಮೊರೆಹೋಗಲಿದ್ದಾರೆ. ಹೈಕೋರ್ಟ್​ನಲ್ಲಿ ವಿನಯ ಕುಲಕರ್ಣಿ ಅವರಿಗೆ ಜಾಮೀನು ಸಿಗುತ್ತಾ ಎನ್ನುವ ನೀರಿಕ್ಷೆಯಲ್ಲಿ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಾಯುವಂತೆ ಆಗಿದೆ.

ಮಾಜಿ ಸಚಿವ ವಿನಯ್ ಕುಲಕರ್ಣಿ

ಮಾಜಿ ಸಚಿವ ವಿನಯ್ ಕುಲಕರ್ಣಿ

  • Share this:
ಧಾರವಾಡ : ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಯೋಗೇಶಗೌಡ ಹತ್ಯೆಯ ಆರೋಪದಲ್ಲಿ ಸಿಬಿಐನಿಂದ ಬಂಧಿತನಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ಇಂದು ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಇನ್ನೂ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಸಿಬಿಐ ಬಂಧಿಸಿದ್ದು,  14 ದಿನಗಳ ಕಾಲ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಕೊಟ್ಟಿದೆ.

ಧಾರವಾಡದ 3 ನೇ ಹೆಚ್ಚುವರಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಕುಲಕರ್ಣಿ ಜಾಮೀನು ಅರ್ಜಿ ಕುರಿತು ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿ ತಿರಸ್ಕಾರ ಮಾಡಿದರು. ವಿನಯ ಕುಲಕರ್ಣಿ ತುಂಬಾ ಪ್ರಭಾವ ಇರುವ ವ್ಯಕ್ತಿಯಾಗಿದ್ದು, ಅವರಿಗೆ ಜಾಮೀನು ಕೊಡಬಾರದು ಎಂದು ಕೇಂದ್ರ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ‌.ಎಸ್.ವಿ.ರಾಜು ವಿಡಿಯೋ ಕಾನ್ಪರೆನ್ಸ ಮೂಲಕ ದೆಹಲಿಯಿಂದ ವಾದ ಮಂಡನೆ ಮಾಡಿದರು. ವಿನಯ ಕುಲಕರ್ಣಿ ಪರ ವಕೀಲರ ಹಾಗೂ ಸಿಬಿಐ ಪರ ವಕೀಲ‌ ವಾದ ಆಲಿಸಿದ ನ್ಯಾಯಾಧೀಶರು ಬೆಲ್ ಅರ್ಜಿ ವಜಾ ಮಾಡಿದರು.

ಇನ್ನೂ ಮಾಜಿ ಸಚಿವ ವಿನಯ ಕುಲಕರ್ಣಿ ಸೋದರಮಾವ ಚಂದ್ರಶೇಖರ ಇಂಡಿ ಯೋಗೇಶಗೌಡ ಕೊಲೆ ಕೇಸ್ ನಲ್ಲಿ ಸಿಬಿಐನಿಂದ ಬಂಧಿತನಾಗಿ ಜೈಲು ಪಾಲಾಗುವಂತೆ ಆಗಿದೆ. 2 ದಿನಗಳ ಹಿಂದೆ ವಿಜಯಪೂರದಲ್ಲಿ ಸಿಬಿಐ ಅಧಿಕಾರಿಗಳು ಚಂದ್ರಶೇಖರ ಇಂಡಿಯನ್ನು ವಶ ಪಡಿಸಿಕೊಂಡು, ಧಾರವಾಡದ‌ ಉಪನಗರ ಪೊಲೀಸ್ ಠಾಣೆಗೆ ಕರೆತಂದು, ತೀವ್ರ ವಿಚಾರಣೆ ನಡೆಸಿದರು.

ಇದನ್ನು ಓದಿ: ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್; ಕೋಲಾರ ಪೊಲೀಸರಿಂದ ಪ್ರಮುಖ ಆರೋಪಿ ಬಂಧನ

ಧಾರವಾಡ 3ನೇ ಹೆಚ್ಚುವರಿ ಸಿಬಿಐ ಕೋರ್ಟ್​ಗೆ ಸಿಬಿಐ ಅಧಿಕಾರಿಗಳು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿ ಕೊಡುವಂತೆ ಸಿಬಿಐ ಕೇಳಿದರು. ಆದರೆ ನ್ಯಾಯಾಧೀಶರು, ಕಸ್ಟಡಿ ಕೇಳಿರುವ ಕುರಿತು, ನಾಳೆಗೆ ತೀರ್ಪು ಕಾಯ್ದಿರಿಸಿ ಡಿಸೆಂಬರ್ 28 ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದರು. ಚಂದ್ರಶೇಖರ ಇಂಡಿಯನ್ನು ಸಧ್ಯ ಧಾರವಾಡ ಕೇಂದ್ರ ಕಾರಾಗ್ರಹದಲ್ಲಿ ಇರಿಸಲಾಗಿದೆ. ಸುಮಾರು ಒಂದೂವರೆ ತಿಂಗಳಿಂದ ಜೈಲಿನಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಸಿಗದೇ ಇದ್ದ ಹಿನ್ನೆಲೆಯಲ್ಲಿ, ಮತ್ತಷ್ಟು ದಿನಗಳ ಕಾಲ ಜೈಲಿನಲ್ಲಿ ಕಾಲ ಕಳೆಯುವಂತೆ ಆಗಿದೆ.

ವಿನಯ್ ಕುಲಕರ್ಣಿ ಪರ ವಕೀಲರು ಜಾಮೀನಿಗೆ ಹೈಕೋರ್ಟ್ ಮೊರೆಹೋಗಲಿದ್ದಾರೆ. ಹೈಕೋರ್ಟ್​ನಲ್ಲಿ ವಿನಯ ಕುಲಕರ್ಣಿ ಅವರಿಗೆ ಜಾಮೀನು ಸಿಗುತ್ತಾ ಎನ್ನುವ ನೀರಿಕ್ಷೆಯಲ್ಲಿ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಾಯುವಂತೆ ಆಗಿದೆ.
Published by:HR Ramesh
First published: