• Home
  • »
  • News
  • »
  • district
  • »
  • ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತಿರುವ ಮಠಾಧೀಶರ ವಿರುದ್ಧ ಹರಿಹಾಯ್ದ ಯೋಗೇಶ್‌ಗೌಡ ಕುಟುಂಬಸ್ಥರು

ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತಿರುವ ಮಠಾಧೀಶರ ವಿರುದ್ಧ ಹರಿಹಾಯ್ದ ಯೋಗೇಶ್‌ಗೌಡ ಕುಟುಂಬಸ್ಥರು

ಮೃತ ಯೋಗೇಶ್ ಗೌಡ

ಮೃತ ಯೋಗೇಶ್ ಗೌಡ

ವಿನಯ್ ಕುಲಕರ್ಣಿ ಬಂಧನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರಣ ಎಂದು ಆರೋಪಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಜೋಶಿಯವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಜೋಶಿಯವರ ನಿವಾಸಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ‌ ಒದಗಿಸಲಾಗಿದೆ

  • Share this:

ಹುಬ್ಬಳ್ಳಿ(ನವೆಂಬರ್​. 06): ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ ಎಂದು ಹೇಳಿಕೆ ಕೊಡುತ್ತಿರುವ ಮಠಾಧೀಶರ ವಿರುದ್ಧ ಯೋಗೇಶ್‌ಗೌಡ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಯೋಗೇಶ್ ‌ಗೌಡ ಅಣ್ಣ ಗುರುನಾಥಗೌಡ ಮತ್ತು ಅಕ್ಕ ಮಹಾದೇವಿ, ಸ್ವಾಮೀಜಿಗಳಾದವರು ಮಠದ ಕೆಲಸವನ್ನು ಧರ್ಮಯುತವಾಗಿ ಮಾಡಲಿ ಎಂದಿದ್ದಾರೆ. ಸ್ವಾಮೀಜಿಗಳು ರಾಜಕೀಯ ಮಾಡಬಾರದು. ರಾಜಕೀಯ ಪ್ರೇರಿತ ಹೇಳಿಕೆ ನೀಡಬಾರದು. ಶ್ರೀಮಂತ ಭಕ್ತರ ಬೆಂಬಲಕ್ಕೆ ನಿಲ್ಲಬಾರದು. ಕೊಲೆ ಮಾಡಿದವರಿಗೆ ಕಾನೂನಿನ ಮೂಲಕ ಶಿಕ್ಷೆ ಆಗುತ್ತೆ. ಸಂತ್ರಸ್ಥ ಕುಟುಂಬದವರಿಗೆ ನೈತಿಕ ಧೈರ್ಯ ತುಂಬಲಿ. ಅದನ್ನು ಬಿಟ್ಟು ಕೊಲೆ ಆರೋಪಿಗಳ ಬೆಂಬಲಕ್ಕೆ ನಿಲ್ಲುವುದು ಸರಿಯಲ್ಲಾ ಎಂದು ಕೂಡಲಸಂಗಮ ಮತ್ತು ಹರಿಹರ ಪೀಠದ ಸ್ವಾಮೀಜಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಯೋಗೇಶ್‌ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ವಿನಯ ಕುಲಕರ್ಣಿಯನ್ನು ಬಂಧಿಸಿರುವುದು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.


2016 ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿ ಯೋಗೇಶ್‌ ಗೌಡರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಹತ್ಯೆ ನಡೆದಿದ್ದ ಉದಯ ಜಿಮ್ ಈಗ ಬಂದ್ ಆಗಿದೆ. ಉದಯ ಜಿಮ್ ಜಾಗದಲ್ಲಿ ಪತಂಜಲಿ ಸ್ಟೋರ್ಸ್ ಓಪನ್ ಮಾಡಲಾಗಿದೆ. ಕೊಲೆ ನಡೆದಿದ್ದ ಜಾಗ ಈಗ ವ್ಯಾಪಾರ ಕೇಂದ್ರವಾಗಿ ಬದಲಾಗಿದೆ. ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಎಂದಿನಂತೆ ಕಾರ್ಯ ಕಾರ್ಯ ನಿರ್ವಹಿಸುತ್ತಿವೆ. ಕೊಲೆಗಡುಕರ ಚಲನವಲನದ ಸೆರೆಹಿಡಿದಿದ್ದ ಸಿಸಿಟಿವಿ ಕ್ಯಾಮೆರಾಗಳು ಹಾಗೇ ಇವೆ.


ಮಾಜಿ‌ ಸಚಿವ ವಿನಯ್ ಕುಲಕರ್ಣಿ ಮೇಲೆ ಕೊಲೆಗೆ ಸಂಚು ರೂಪಿಸಿದ ಪ್ರಕರಣ‌ ದಾಖಲಿಸಲಾಗಿದೆ. ನಿನ್ನೆ ವಿನಯ್ ಕುಲಕರ್ಣಿ ಬಂಧಿಸಿರುವ ಸಿಬಿಐ ಪೊಲೀಸರು ಐಪಿಸಿ ಸೆಕ್ಷನ್ 302, 143, 147, 148, 120B ಅಡಿ ಕೇಸ್ ದಾಖಲಿಸಿದ್ದಾರೆ. ಕೊಲೆ, ಆಸ್ತಿ ವಿವಾದದಲ್ಲಿ ಒಳಸಂಚು, ಸಮಾಜದಲ್ಲಿ ಶಾಂತಿ ಕದಡುವ ಯತ್ನ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.


ಇದನ್ನೂ ಓದಿ : ಹತಾಶರಾಗಿ ಸಿದ್ದರಾಮಯ್ಯ ಏನೇನೋ ಮಾತನಾಡುತ್ತಿದ್ದಾರೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ


ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿವಾಸದ ಎದುರು ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.‌ ಹುಬ್ಬಳ್ಳಿಯ ಮಯೂರ ಎಸ್ಟೇಟ್‌ನಲ್ಲಿರುವ ಪ್ರಲ್ಹಾದ್ ಜೋಶಿ ನಿವಾಸ‌ದ ‌ಮುಂದೆ ಬ್ಯಾರಿಕೇಡ್ ಹಾಕಿ, ಹೆಚ್ಚಿನ ಪೊಲೀಸ್ ಸಿಬ್ಬಂಧಿಯನ್ನು ನಿಯೋಜಿಸಲಾಗಿದೆ.


ವಿನಯ್ ಕುಲಕರ್ಣಿ ಬಂಧನಕ್ಕೆ ಪ್ರಲ್ಹಾದ್ ಜೋಶಿ ಕಾರಣ ಎಂದು ಆರೋಪಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಜೋಶಿಯವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ‌ ಮುಂಜಾಗ್ರತಾ ಕ್ರಮವಾಗಿ ಜೋಶಿ ನಿವಾಸಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ‌ ಒದಗಿಸಲಾಗಿದೆ.

Published by:G Hareeshkumar
First published: