ಮುರಿದ Melukote ಬೆಟ್ಟದ ಯೋಗನರಸಿಂಹ ಸ್ವಾಮಿ ದೇಗುಲದ ಕಳಸ! ಭಕ್ತರಲ್ಲಿ ಆತಂಕ

2015ರಲ್ಲಿ ದುಬೈ ಉದ್ಯಮಿ ರವೀಂದ್ರ 1 ಕೋಟಿ ವೆಚ್ಚದಲ್ಲಿ ಗೋಪುರ ನಿರ್ಮಿಸಿಕೊಟ್ಟಿದ್ರು. ಆ ವೇಳೆಯೇ ಚಿನ್ನಲೇಪಿದ ಕಳಶ ಪ್ರತಿಷ್ಟಾಪನೆಗೆ ನಿರ್ಧರಿಸಲಾಗಿತ್ತು. ಆದ್ರೆ ಅರ್ಕ್ಯಾಲಜಿ ಇಲಾಖೆಯಿಂದ ಅನುಮತಿ ಸಿಗದೆ ತಡವಾಗಿತ್ತು. ಮಂಗಗಳ ಕಾಟದಿಂದ ಈಗಿನ ಕಳಶ ಬಾಗಿದೆ. ಇನ್ನೆರಡು ದಿನಗಳಲ್ಲಿ ಕಳಶ ಸರಿಪಡಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

ಬಾಗಿರುವ ಕಳಸ

ಬಾಗಿರುವ ಕಳಸ

 • Share this:
  ಮಂಡ್ಯ: ಅದು ನಾಡಿನ ಪ್ರತಿಷ್ಠಿತ ಮತ್ತು ಹೆಸರಾಂತ ಪುಣ್ಯ ಕ್ಷೇತ್ರ (Mandya Melukote Yoga Narasimha Swamy Temple). ಆ ಕ್ಷೇತ್ರದ ದೇಗುಲದ ರಾಜಗೋಪುರದ ಕಳಶ ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ. ಕಳಶ ಮುರಿದು ಬಿದ್ದಿದ್ದು ಅಪಾಯದ ಮುನ್ಸೂಚನೆ ಎನ್ನಲಾಗ್ತಿದ್ದು, ಆ ದೇಗುಲದ ಅಸಂಖ್ಯಾತ ಭಕ್ತಗಣವನ್ನ ಆತಂಕಕ್ಕೆ ದೂಡಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ.

  ಹೌದು, ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ನಾಡಿನ ಪ್ರತಿಷ್ಠಿತ ಪುಣ್ಯ ಕ್ಷೇತ್ರಗಳಲ್ಲಿ ಒಂದು. ಮೇಲುಕೋಟೆಯ ಮೂಲ ಆಕರ್ಷಣೆ ಅಂದ್ರೆ ಅದು ಬೆಟ್ಟದ ಯೋಗ ನರಸಿಂಹ ಸ್ವಾಮಿ ದೇಗುಲ. ಸಮುದ್ರ ಮಟ್ಟದಿಂದ 1,777 ಮೀಟರ್ ಎತ್ತರದಲ್ಲಿರುವ ಈ ದೇಗುಲ ಹೊಯ್ಸಳ ಶೈಲಿಯಲ್ಲಿದೆ. ಈ ಪುರಾಣ ಪ್ರಸಿದ್ಧ ದೇಗುಲದ ರಾಜಗೋಪುರದ ಕಳಸವೊಂದು ಇದ್ದಕ್ಕಿದ್ದಂತೆ ಮುರಿದು ಬೆಂಡಾಗಿದೆ. ಇದು ಅಪಾಯದ ಮುನ್ಸೂಚನೆ ಎಂದು ಹೇಳಲಾಗುತಿದ್ದು, ಈ ದೇಗುಲಕ್ಕೆ ಸೇರಿದ ಅಸಂಖ್ಯಾತ ಭಕ್ತ ಗಣವನ್ನ ಆತಂಕಕ್ಕೆ ದೂಡಿದೆ. ಅಲ್ಲದೆ ಸ್ಥಳೀಯರು ಕೂಡ ಕಳಶ ಭಾಗಿರೋದ್ರಿಂದ ಆತಂಕ ವ್ಯಕ್ತಪಡಿಸ್ತಿದ್ದಾರೆ.

  ಇನ್ನು ಮೇಲುಕೋಟೆ ದೇಗುಲದ ಕಳಶ ಮುರಿದಿರುವ ವಿಷಯ ತಿಳಿಯುತ್ತಿದ್ದಂತೆ ಶಾಸಕ ಸಿ.ಎಸ್.ಪುಟ್ಟರಾಜು ಸ್ಥಳಕ್ಕೆ ದೌಡಾಯಿಸಿದರು. ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳ ಜೊತೆ ಬೆಟ್ಟದ ಯೋಗ ನರಸಿಂಹ ಸ್ವಾಮಿ ದೇಗುಲಕ್ಕೆ ತೆರಳಿ ಪರಿಶೀಲನೆ ಮಾಡಿದ್ರು. ಅಧಿಕಾರಿಗಳು, ಸ್ಥಳೀಯರಿಂದ ಮಾಹಿತಿ ಪಡೆದ್ರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ಇನ್ನೆರಡು ದಿನಗಳಲ್ಲಿ ಬಾಗಿದ ಕಳಶ ಸರಿಪಡಿಸುತ್ತೇವೆ. ತಮಿಳುನಾಡಿನಿಂದ ಕಾರ್ಮಿಕರನ್ನು ಕರೆತಂದು ಕಳಶ ದುರಸ್ತಿ ಮಾಡಿಸಲಾಗುವುದು. ವೈರಮುಡಿ ಜಾತ್ರೆ ವೇಳೆಗೆ ಚಿನ್ನಲೇಪಿತ ಕಳಶ ಮರು ಪ್ರತಿಷ್ಠಾಪನೆಗೆ ಚಿಂತನೆ ಮಾಡಿದ್ದೇವೆ. 2015ರಲ್ಲಿ ದುಬೈ ಉದ್ಯಮಿ ರವೀಂದ್ರ 1 ಕೋಟಿ ವೆಚ್ಚದಲ್ಲಿ ಗೋಪುರ ನಿರ್ಮಿಸಿಕೊಟ್ಟಿದ್ರು. ಆ ವೇಳೆಯೇ ಚಿನ್ನಲೇಪಿದ ಕಳಶ ಪ್ರತಿಷ್ಟಾಪನೆಗೆ ನಿರ್ಧರಿಸಲಾಗಿತ್ತು. ಆದ್ರೆ ಅರ್ಕ್ಯಾಲಜಿ ಇಲಾಖೆಯಿಂದ ಅನುಮತಿ ಸಿಗದೆ ತಡವಾಗಿತ್ತು. ಮಂಗಗಳ ಕಾಟದಿಂದ ಈಗಿನ ಕಳಶ ಬಾಗಿದೆ. ಇನ್ನೆರಡು ದಿನಗಳಲ್ಲಿ ಕಳಶ ಸರಿಪಡಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

  ಇನ್ನು ಭಾಗಿದ ಕಳಶ ಸರಿಪಡಿಸುವಂತೆ ಜನವರಿಯಲ್ಲೆ ಮಂಡ್ಯ ಜಿಲ್ಲಾಧಿಕಾರಿ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ಆದ್ರೆ ಕೊರೋನಾ ಹಿನ್ನೆಲೆ ಸರಿಪಡಿಸಲು ಸಾಧ್ಯವಾಗಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಮಳೆ ಕೂಡ ಇರೋದ್ರಿಂದ ಕಳಶ ಸರಿಪಡಿಸಲು ವಿಳಂಬವಾಗಿದೆ ಅಂತಿದ್ದಾರೆ. ದೇಗುಲದ ಕಳಸ ಮುರಿದಿರೋದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ವಿಷಯ ತಿಳಿದ ತಕ್ಷಣ ಶಾಸಕರು ಶೀಘ್ರ ದುರಸ್ತಿಗೆ ಕ್ರಮ ವಹಿಸಿದ್ದಾರೆ.

  ಇದನ್ನು ಓದಿ: ಶ್ರೀಕಿಯಿಂದ ವಶಕ್ಕೆ ಪಡೆದ Bitcoins ಪೊಲೀಸರಿಗೆ ಹೋಗಿದ್ಯಾ.? ರಾಜಕಾರಣಿಗಳಿಗೆ ಹೋಗಿದ್ಯಾ?: ಮಾಜಿ ಸಿಎಂ Siddaramaiah ಪ್ರಶ್ನೆ

  ಹಾಲಿನ ಖರೀದಿ ದರ ಇಳಿಸಿದ MANMUL

  ಮಹಾ ಮಾರಿ ಕೊರೋನಾದಿಂದ (Corona) ಇಡೀ ವಿಶ್ವದ ಆರ್ಥಿಕತೆಗೇ (World Economic)ಹೊಡೆತ ಬಿದ್ದಿದೆ. ಇದೀಗ ಕೊರೋನಾ ಕರಿ ನೆರಳು ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಹೈನುಗಾರಿಕೆಯ ಮೇಲೆ ಬಿದ್ದಿದೆ. ಒಂದು ಲೀಟರ್‌ ಹಾಲಿಗೆ 2 ರೂಪಾಯಿಯನ್ನು(Milk rate) ಇಳಿಕೆ ಮಾಡಿರುವುದಾಗಿ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ (MANMUL) ಆದೇಶ ಹೊರಡಿಸಿದೆ. ಬೆಲೆ ಏರಿಕೆ ಬದಲು ರೈತರಿಂದ ಹಾಲು ಖರೀದಿಸುತ್ತಿದ್ದ ಮನ್ಮುಲ್ ಹಾಲಿನ ದರ ಕಡಿಮೆ ಮಾಡಿದೆ. ಒಂದು ಲೀಟರ್ ಹಾಲಿಗೆ 26 ರೂಪಾಯಿ ಇದ್ದ ಬೆಲೆ ಇದೀಗ 24 ರೂಪಾಯಿಯಾಗಿದೆ. ಇದಕ್ಕೆ ಮೂಲ ಕಾರಣ ಕೊರೋನಾ ಎಂದು ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ತಿಳಿಸಿದೆ. ಕೊರೋನಾ ಕಾಲದಲ್ಲಿ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗಿದೆ. ಆದ್ರೆ ನಿರೀಕ್ಷಿತ ಪ್ರಮಾಣದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಮಾರಾಟವಾಗಿಲ್ಲ. ಇದರಿಂದ ಸೆಪ್ಟೆಂಬರ್ ಅಂತ್ಯಕ್ಕೆ ಮನ್‌ಮುಲ್‌ಗೆ 33 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ತಿಳಿಸಿದೆ.

  ವರದಿ - ಸುನೀಲ್ ಗೌಡ, ಮಂಡ್ಯ
  Published by:HR Ramesh
  First published: