ಯಡಿಯೂರಪ್ಪ ಲಿಂಗಾಯತರ ಏಕಮೇವ ನಾಯಕ - ಸಿಎಂ ಸ್ಥಾನದಿಂದ ಇಳಿಸುವುದು ಅಸಾಧ್ಯ ; ನಿಡುಮಾಮಿಡಿಶ್ರೀ
ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪನವರು ಬಿಟ್ಟರೆ ಅಷ್ಟು ಪ್ರಬಲ ನಾಯಕರಿಲ್ಲ. ಅಲ್ಲದೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಉತ್ತಮವಾಗಿ ಕೆಲಸ ಮಾಡುತ್ತಿದಾರೆ. ಬಲವಂತದಿಂದ ನಾಯಕತ್ವ ಬದಲಾವಣೆಗೆ ಯತ್ನಿಸುವುದು ಅಷ್ಟು ಸುಲಭವಲ್ಲ
news18-kannada Updated:September 23, 2020, 3:38 PM IST

ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ
- News18 Kannada
- Last Updated: September 23, 2020, 3:38 PM IST
ಕಲಬುರ್ಗಿ(ಸೆಪ್ಟೆಂಬರ್. 23): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಲಿಂಗಾಯತ ಸಮುದಾಯದ ಏಕಮೇವ ನಾಯಕರಾಗಿದ್ದು, ಅವರನ್ನು ಸಿಎಂ ಸ್ಥಾನದಿಂದ ಇಳಿಸುವುದು ಅಸಾಧ್ಯ ಎಂದು ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಒಕ್ಕಲಿಗರು ಏಕಮೇವ ನಾಯಕ. ಹಾಗೆಯೇ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕುರುಬ ಸಮಾಜದ ಏಕಮೇವ ನಾಯಕ. ಅದರಂತೆಯೇ ಬಿಜೆಪಿಯಲ್ಲಿ ಯಡಿಯೂರಪ್ಪ ಲಿಂಗಾಯತ ಸಮುದಾಯದ ಏಕಮೇವ ನಾಯಕರಾಗಿದ್ದಾರೆ ಎಂದರು. ಬಿ ಎಸ್ ಯಡಿಯೂರಪ್ಪ ಅವರನ್ನು ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದಕ್ಕೆ ಪಿತೂರಿಗಳು ನಡೆದಿರುವುದು ಸರಿಯಾದ ಬೆಳವಣಿಗೆಗಳಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವುದಕ್ಕೆ ಯತ್ನಿಸುತ್ತಿರುವುದು ಸರಿಯಲ್ಲ. ನಾಯಕತ್ವ ಬದಲಾವಣೆ ಮಾತುಗಳು ಬಿಜೆಪಿಯಲ್ಲಿ ಆಗಾಗ ಕೇಳಿಬರುತ್ತಲೇ ಇದೆ. ಆದರೆ ಇದು ಸರಿಯಾದ ಬೆಳವಣಿಗೆಯಲ್ಲ. ಯಡಿಯೂರಪ್ಪನವರು ಲಿಂಗಾಯತ ಸಮುದಾಯದ ಪ್ರಬಲ ನಾಯಕ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪನವರು ಬಿಟ್ಟರೆ ಅಷ್ಟು ಪ್ರಬಲ ನಾಯಕರಿಲ್ಲ. ಅಲ್ಲದೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಉತ್ತಮವಾಗಿ ಕೆಲಸ ಮಾಡುತ್ತಿದಾರೆ. ಬಲವಂತದಿಂದ ನಾಯಕತ್ವ ಬದಲಾವಣೆಗೆ ಯತ್ನಿಸುವುದು ಅಷ್ಟು ಸುಲಭವಲ್ಲ ಎಂದರು. ಅವರಾಗಿಯೇ ನಾಯಕತ್ವ ಬದಲಾವಣೆಗೆ ಒಪ್ಪಿದರೆ ಮಾತ್ರ ನಾಯಕತ್ವ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ನಾಯಕತ್ವ ಬದಲಾವಣೆ ಅಸಾಧ್ಯದ ಮಾತು ಎನ್ನುವ ಮೂಲಕ ಶ್ರೀಗಳು ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಷಯ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಶ್ರೀಗಳು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : Karnataka Band - ಸೆ. 28ರಂದು ಕರ್ನಾಟಕ ಬಂದ್; ಸೆ. 25, ಪ್ರತಿಭಟನೆಗೆ ಸೀಮಿತ: ರೈತ ಸಂಘಟನೆಗಳ ನಿರ್ಧಾರ
ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಜನವಿರೋಧಿ ನೀತಿ ತಳೆದಿದೆ ಎಂದಿದ್ದಾರೆ. ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರ ಸರಿಯಲ್ಲ. ಸಾಧಕ-ಬಾಧಕಗಳ ಕುರಿತು ಚರ್ಚಿಸದೇ ಜಾರಿಗೆ ತರಲಾಗುತ್ತಿದೆ. ಇಂತಹ ಕಾಯ್ದೆ ವಿಚಾರದಲ್ಲಿ ಡಿಕ್ಟೇಟರ್ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಕಿಡಿಕಾರಿದ್ದಾರೆ.
ಕೇಂದ್ರ ಕೃಷಿ ಸಚಿವರೇ ರಾಜೀನಾಮೆ ನೀಡಿದ್ದಾರೆ. ತಿದ್ದುಪಡಿ ರೈತರ ವಿರೋಧಿ ಇದೆ ಎನ್ನುವುದು ಇದರ ಅರ್ಥ. ಕೇವಲ ಒಂದು ರಾಜ್ಯದಲ್ಲಿ ವಿರೋಧ ವ್ಯಕ್ತವಾದರೆ ರಾಜಕೀಯ ದುರುದ್ದೇಶ ಅನ್ನಬಹುದು. ಆದರೆ, ದೇಶಾದ್ಯಂತ ತಿದ್ದುಪಡಿಗೆ ವಿರೋಧ ವ್ಯಕ್ತವಾಗಿದೆ. ಲೋಕಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಅಗತ್ಯವಿಲ್ಲ. ಈಗಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ರೈತ ವಿರೋಧಿ ನಿಲುವುಗಳನ್ನು ಕೈಬಿಡಬೇಕೆಂದು ಶ್ರೀಗಳು ಆಗ್ರಹಿಸಿದ್ದಾರೆ.
ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪನವರು ಬಿಟ್ಟರೆ ಅಷ್ಟು ಪ್ರಬಲ ನಾಯಕರಿಲ್ಲ. ಅಲ್ಲದೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಉತ್ತಮವಾಗಿ ಕೆಲಸ ಮಾಡುತ್ತಿದಾರೆ. ಬಲವಂತದಿಂದ ನಾಯಕತ್ವ ಬದಲಾವಣೆಗೆ ಯತ್ನಿಸುವುದು ಅಷ್ಟು ಸುಲಭವಲ್ಲ ಎಂದರು.