Murder: ಪೆಟ್ರೋಲ್ ಸುರಿದು ಮಹಿಳೆ ಕೊಲೆ ಪ್ರಕರಣ; ಸಿಬಿಐ ತನಿಖೆಗೆ ಆಗ್ರಹಿಸಿ ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ

ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಮೃತ ಮಹಿಳೆ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧನ ಮಾಡುವರೆಗೆ ನಾವು ಯಾವುದೇ ಕಾರಣಕ್ಕೂ ಅಂತ್ಯಕ್ರಿಯೆ ಮಾಡಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ

ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ

  • Share this:
ಯಾದಗಿರಿ: (Yadagiri) ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣವನ್ನು (Women Murder) ಸಿಬಿಐ ತನಿಖೆಗೆ (CBI Investigation) ನೀಡಬೇಕು ಎಂದು ಒತ್ತಾಯಿಸಿ ಮಾದಿಗ ಸಮುದಾಯದ (Madiga Community) ಜನರು ಸುರಪುರದ ಗಾಂಧಿ ವೃತ್ತದಲ್ಲಿ ಶವವಿಟ್ಟು ಪ್ರತಿಭಟನೆ (Protest) ನಡೆಸಿ ರಾಜ್ಯ ಸರಕಾರ ಆಗ್ರಹಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರ ಹಾಳ ಗ್ರಾಮದ ಮಹಿಳೆ ಪಾಲಮ್ಮಳ ಮೇಲೆ ಅದೇ ಗ್ರಾಮದ ಗಂಗಪ್ಪ ಎಂಬಾತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಘಟನೆಗೆ  ಸಂಬಂಧಪಟ್ಟಂತೆ ಪಾಲಮ್ಮಳ ಸಂಬಂಧಿ ಹಣಮಂತ ಸುರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಮುಖ ಆರೋಪಿ ಗಂಗಪ್ಪ ಸೇರಿ ಆತನ ಕುಟುಂಬಸ್ಥರ ಒಟ್ಟು 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಗಂಗಪ್ಪ ಮಹಿಳೆ ಪಾಲಮ್ಮಳಿಗೆ ಕಳೆದ ಒಂದು ವರ್ಷದಿಂದ ಪ್ರೀತಿ ಮಾಡುತ್ತೇನೆ ಎಂದು ಪೀಡಿಸುತ್ತಿದ್ದನು. ಈ ಬಗ್ಗೆ ಹಲವಾರು ಬಾರಿ ನ್ಯಾಯ ಪಂಚಾಯತಿ ಕೂಡ ಮಾಡಲಾಗಿದೆ. ಆದರೆ, ಗಂಗಪ್ಪನಿಗೆ ಹಿರಿಯರು ಬುದ್ದಿ ಮಾತು ಹೇಳಿದರು ಗಂಗಪ್ಪ ಮಾತ್ರ ತನ್ನ ದುಷ್ಟ ಗುಣ ಬಿಟ್ಟಿರಲಿಲ್ಲ. ಪದೇ ಪದೇ ಪಾಲಮ್ಮಳ ಮನೆ ಹತ್ತಿರ ಬಂದು ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದನಂತೆ. ನಿನ್ನೆ ತಡರಾತ್ರಿ ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರ ಮಾಡಲು ಮುಂದಾಗಿದ್ದ ವೇಳೆ ಪಾಲಮ್ಮ ವಿರೋಧಿಸಿ ಗಂಗಪ್ಪನನ್ನು ತಳ್ಳಿದ್ದಾಳೆ. ಇದರಿಂದ ಕೋಪಗೊಂಡು ಗಂಗಪ್ಪ, ಪಾಲಮ್ಮ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು. ಇಂದು ಆರೋಪಿ ಗಂಗಪ್ಪನನ್ನು ಸುರಪುರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ಬಗ್ಗೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ‌  ಅವರು ಮಾತನಾಡಿ, ಪಾಲಮ್ಮ ಕೊಲೆ ಮಾಡಿದ ಪ್ರಮುಖ ಆರೋಪಿ ಗಂಗಪ್ಪನನ್ನು ಬಂಧಿಸಲಾಗಿದೆ. ಯಾರಾದರೂ ಮಹಿಳೆಯರಿಗೆ ಕಿರುಕುಳ ನೀಡಿದರೆ ಹಾಗೂ ಏನಾದರು ತೊಂದರೆ ಕೊಟ್ಟರೆ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಘಟನೆಯಿಂದ ಅಕ್ರೋಶಗೊಂಡ ಮಾದಿಗ ಸಮಾಜ ಹಾಗೂ ವಿವಿಧ ಸಂಘಟನೆ ಹಾಗೂ ಮಾದಿಗ ಸಮಾಜದ ಜನರು ಸುರಪುರದ ಗಾಂಧಿ ವೃತ್ತದಲ್ಲಿ ಮೃತ ಪಾಲಮ್ಮಳ ಶವವಿಟ್ಟು ಬೃಹತ್ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧ ಎಲ್ಲಾ ಆರೋಪಿಗಳನ್ನು ಬಂಧನ ಮಾಡಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಮೃತ ಮಹಿಳೆ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧನ ಮಾಡುವರೆಗೆ ನಾವು ಯಾವುದೇ ಕಾರಣಕ್ಕೂ ಅಂತ್ಯಕ್ರಿಯೆ ಮಾಡಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದನ್ನು ಓದಿ: Explained: 2ನೇ ವರ್ಷದಲ್ಲೂ ರಾಜಸ್ಥಾನದಲ್ಲಿ ಹೆಚ್ಚಿದ ಅತ್ಯಾಚಾರ ಪ್ರಕರಣಗಳು; ಎನ್​ಸಿಆರ್​ಬಿ ಹೇಳುವುದೇನು?

ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮಾದಿಗ ಸಮಾಜದ ಮುಖಂಡ ಬಿ. ನರಸಪ್ಪ ಅವರು ಮಾತನಾಡಿ, ಮಹಿಳೆ ಮೇಲೆ ಗಂಗಪ್ಪ ಅಮಾನವೀಯ ಕೃತ್ಯ ಎಸಗಿ ಕೊಲೆ ಮಾಡಿದ್ದಾನೆ. ಈ ಪ್ರಕರಣ ಸಿಬಿಐ ತನಿಖೆಗೆ ನೀಡಬೇಕು. ಹಾಗೂ ಮೃತ ಮಹಿಳೆ ಕುಟುಂಬಸ್ಥರಿಗೆ ಸರಕಾರ 25 ಲಕ್ಷ ರೂ. ಪರಿಹಾರ ನೀಡಬೇಕು ಆಗ್ರಹ ಮಾಡಿದ್ದಾರೆ. ಗಾಂಧಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲ ಕಾಲ ವಾಹನ ಸವಾರರು  ಸಮಸ್ಯೆ ಎದುರಿಸುವಂತಾಯಿತು. ಚೌಡೇಶ್ವರ ಹಾಳ ಗ್ರಾಮದಲ್ಲಿ ಮಾದಿಗ ಸಮಾಜದ ಜನರಿಗೆ ರಕ್ಷಣೆ ಇಲ್ಲದಂತಾಗಿದ್ದು ಇದರಿಂದ ಭಯದಲ್ಲಿಯೇ ಜೀವನ ನಡೆಸುವಂತಾಗಿದೆ. ಪೊಲೀಸರು ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
Published by:HR Ramesh
First published: