ಕೂಲಿ ಕೆಲಸ ಮಾಡುತ್ತಲೇ ಎಸ್ಎಸ್ಎಲ್ಸಿಯಲ್ಲಿ ಸಾಧನೆ ಮೆರೆದ ಯಾದಗಿರಿ ವಿದ್ಯಾರ್ಥಿ
ಬಡತನದ ಸಂಕಷ್ಟದಿಂದ ಜೀವನ ನಡೆಸಲು ಹೋದ ವಲಸೆ ಕುಟುಂಬದ ವಿದ್ಯಾರ್ಥಿ ಈಗ ಶಿಕ್ಷಣದಲ್ಲಿ ಸಾಧನೆ ಮಾಡಿದ್ದಾನೆ. ಯಾದಗಿರಿ ತಾಲೂಕಿನ ಹಳಿಗೇರಾ ನಿವಾಸಿಗಳಾದ ದಿ,ಬಸವಲಿಂಗಪ್ಪ ಹಾಗೂ ಮಲ್ಲಮ್ಮನ ಪುತ್ರನಾದ ಮಹೇಶ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 625 ಕ್ಕೆ ಈಗ 616 ಅಂಕಗಳನ್ನು ಪಡೆಯುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾನೆ.
ಯಾದಗಿರಿ: ಒಂದು ಕಡೆ ತಂದೆ ಕಳೆದುಕೊಂಡ ನೋವು ಮತ್ತೊಂದೆಡೆ ಗುಡಿಸಲಿನಲ್ಲಿಯೇ ವಾಸ ಮಾಡುತ್ತಾ ಕೂಲಿ ನಾಲಿ ಮಾಡಿ ತಾಯಿ ದುಡಿದ ಹಣದಲ್ಲಿಯೇ ಬೆಂಗಳೂರಿನ ಸರಕಾರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದಿ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆಯ ಹುಡುಗ ಮಹೇಶ ಉತ್ತಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾನೆ.
ಬಡತನದ ಸಂಕಷ್ಟದಿಂದ ಜೀವನ ನಡೆಸಲು ಹೋದ ವಲಸೆ ಕುಟುಂಬದ ವಿದ್ಯಾರ್ಥಿ ಈಗ ಶಿಕ್ಷಣದಲ್ಲಿ ಸಾಧನೆ ಮಾಡಿದ್ದಾನೆ. ಯಾದಗಿರಿ ತಾಲೂಕಿನ ಹಳಿಗೇರಾ ನಿವಾಸಿಗಳಾದ ದಿ,ಬಸವಲಿಂಗಪ್ಪ ಹಾಗೂ ಮಲ್ಲಮ್ಮನ ಪುತ್ರನಾದ ಮಹೇಶ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 625 ಕ್ಕೆ ಈಗ 616 ಅಂಕಗಳನ್ನು ಪಡೆಯುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾನೆ. ಬೆಂಗಳೂರಿನ ಇಂದಿರಾನಗರದ ಜೀವನ ಭೀಮಾನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಓದಿ ಶಾಲೆಗೆ ಕೀರ್ತಿ ತರುವ ಕೆಲಸ ಮಾಡಿದ್ದಾನೆ.
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಮಾತನಾಡಿರುವ ವಿದ್ಯಾರ್ಥಿ ಮಹೇಶ, "ನಾನು ಶಾಲೆ ರಜೆ ದಿನಗಳಲ್ಲಿ ಕೂಡ ಕೂಲಿ ಕೆಲಸ ಮಾಡಿ ಹಣ ಸಂಗ್ರಹಿಸಿ ಓದಿದ್ದೆನೆ . ನನಗೆ ನಮ್ಮ ತಾಯಿ, ಸಹೋದರ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಸಹಾಯ ಮಾಡಿದ್ದಾರೆ. ಅದರಲ್ಲಿ ಹೆತ್ತಮ್ಮ ಹಾಗೂ ನಮ್ಮ ಸಹೋದರ ವಿಶ್ವರಾಜ ಕೂಲಿ ಕೆಲಸ ಮಾಡಿ ನನ್ನನ್ನು ಕಷ್ಟದ ಕಣ್ಣೀರಲ್ಲಿ ನೀನು ಚನ್ನಾಗಿ ಓದಬೇಕೆಂದು ಪ್ರೋತ್ಸಾಹಿಸಿದ್ದಾರೆ.
ಅದೆ ರೀತಿ ಶಿಕ್ಷಕರು ಕೂಡ ಕೆಲ ಸಂದರ್ಭದಲ್ಲಿ ಓದಿಗೆ ಸಹಾಯ ಮಾಡಿದ್ದಾರೆ. ನಾನು ಮುಂದೆ ಓದಿ ಪ್ರೊಫೆಸರ್ ಆಗುವ ಕನಸು ಕಟ್ಟಿಕೊಂಡಿದ್ದೆನೆ. ಖುದ್ದು ಶಿಕ್ಷಣ ಸಚಿವರು ಮನೆಗೆ ಬಂದಿದ್ದಕ್ಕೆ ಖುಷಿಯಾಗಿದೆ" ಎಂದು ತಿಳಿಸಿದ್ದಾನೆ.
ಹಳಿಗೇರಾದಲ್ಲಿ ವಾಸವಿದ್ದ ಬಸವಲಿಂಗಪ್ಪ, ಮಲ್ಲಮ್ಮ ಹಾಗೂ ಮಕ್ಕಳು ಬಡತನ ಕಾರಣದಿಂದ ತಾಲೂಕಿನ ಯಡ್ಡಹಳ್ಳಿಗೆ ಸ್ಥಳಾಂತರವಾಗಿತ್ತು. ತಂದೆ ಬಸವಲಿಂಗಪ್ಪ ಹಾಗೂ ತಾಯಿ ಮಲ್ಲಮ್ಮ ಕೂಲಿ ಮಾಡಿ ಮಕ್ಕಳಿಗೆ ಓದಿಸುತ್ತಿದ್ದರು. ಈ ವೇಳೆ 12 ವರ್ಷದ ಹಿಂದೆ ಅನಾರೋಗ್ಯದಿಂದ ತಂದೆ ನಿಧನರಾಗಿವಾಗಿದ್ದರು. ಇದು ಕುಟುಂಬಕ್ಕೆ ಅರಗಿಸಿಕೊಳ್ಳಲು ಆಗಲಿಲ್ಲ. ನಂತರ ಬದುಕು ಬಿದಿ ಪಾಲಾಗಿತ್ತು.
ಯಡ್ಡಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿ ಮಹೇಶ 4 ನೇ ತರಗತಿ ವರಗೆ ವ್ಯಾಸಂಗ ಕೂಡ ಮಾಡಿದ್ದಾನೆ. ಮಹೇಶ ಉತ್ತಮ ಫಲಿತಾಂಶ ಬಂದಿದ್ದು ಈ ಶಾಲೆಗೆ ಕೂಡ ಕೀರ್ತಿ ತಂದಿದೆ. ನಂತರ ಬದುಕಿನ ಬಂಡಿ ನಡೆಸಲು ಹೆತ್ತಮ್ಮ ತನ್ನ ಮೂವರು ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿದ್ದರು. ಹೆತ್ತಮ್ಮ ಕಷ್ಟದ ನಡುವೆಯು ಪುತ್ರ ಮಹೇಶನಿಗೆ ನೀನು ಚನ್ನಾಗಿ ಓದಬೇಕು ಮಗನೇ ಎನ್ನುತ್ತಾ ಬಡತನದಲ್ಲಿ ಓದಿಸುವ ಶಿಕ್ಷಣ ಕಾಳಜಿ ಮೆರೆದಿದ್ದಾಳೆ. ಈಗ ಹೆತ್ತ ತಾಯಿ ಅಭಿಲಾಷೆದಂತೆ ಫಲಿತಾಂಶದಲ್ಲಿ ಉತ್ತಮ ಕೀರ್ತಿ ತರುವ ಕೆಲಸ ಮಾಡಿದ್ದಾನೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ