ಯಾದಗಿರಿ: ಜಿಲ್ಲೆಯಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದೆ. ಇಲ್ಲಿ ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪೊಲೀಸ್ ಇಲಾಖೆ ಎಷ್ಟೇ ಎಚ್ಚರಿಕೆ ವಹಿಸಿದರೂ ಕೀಚಕರ ಅಟ್ಟಹಾಸ ನಿಲ್ಲುತ್ತಿಲ್ಲ. ಯಾದಗಿರಿ ನಗರದಲ್ಲಿ ಭೀಕ್ಷುಕಿ ಮೇಲೆ ಕಾಮುಕ ಅತ್ಯಾಚಾರ ನಡೆಸಿ (Beggar woman raped in Yadagiri city) ತನ್ನ ಕಾಮತೃಷೆ ಈಡೇರಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿ ನಗರದ ಹೃದಯ ಭಾಗದಲ್ಲಿಯೇ ಈ ಕೃತ್ಯ ನಡೆದಿದ್ದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ನಗರದ ಹಳೆ ಬಸ್ ನಿಲ್ದಾಣದಲ್ಲಿ ನಿದ್ದೆಗೆ ಜಾರಿದ ಭೀಕ್ಷುಕಿ ಮೇಲೆ ಕುಡಿದ ನಶೆಯಲ್ಲಿ ಆರೋಪಿ ಹಣಮಂತ ಎಂಬಾತ ಅತ್ಯಾಚಾರ ನಡೆಸಿದ್ದಾನೆ. ಇದೇ 23 ರಂದು ರಾತ್ರಿ ಘಟನೆ ಜರುಗಿದೆ.
ಬಿಕ್ಷುಕಿಗೆ ಕಂಠ ಪೂರ್ತಿ ಮದ್ಯ ಕುಡಿಸಿ ತಾನೂ ಮದ್ಯ ಸೇವನೆ ಮಾಡಿದ ಆರೋಪಿ ಕಾಮ ತೀರಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಭೀಕ್ಷುಕಿ ನಿರಾಕರಿಸಿದರೂ ಬಿಡದೆ ಬಲವಂತವಾಗಿ ಆಕೆಯ ಮೇಲೆ ಹಲ್ಲೆ ನಡೆಸಿ ಅಮಾನವೀಯತೆ ತೋರಿ ಅತ್ಯಾಚಾರ ನಡೆಸಿದ್ದಾನೆ.
ಆರೋಪಿ ಹಣಮಂತ ಅಲಿಯಾಸ್ ಶಾಂತಪ್ಪ ಮದ್ಯವ್ಯಸನಿಯಾಗಿದ್ದಾನೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮದ ನಿವಾಸಿಯಾಗಿದ್ದಾನೆ. ಅತ್ಯಾಚಾರ ಎಸಗುವಾಗ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಹಣಮಂತ ಅಲಿಯಾಸ್ ಶಾಂತಪ್ಪ, ಆಕೆ ನನ್ನ ಹೆಂಡತಿಯಾಗಿದ್ದಾಳೆಂದು ನಾಟಕ ಮಾಡಿದ್ದಾನೆ. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಎಲ್ಲರಿಗೂ ಸೊಕ್ಕು ಬಂದಾಗ ದೇವರು ಯಾರೋ ಒಬ್ಬರನ್ನು ತಯಾರು ಮಾಡ್ತಾನೆ: Ramesh Jarkiholi
ಘಟನೆ ನಡೆದ ಮರುದಿನ 24 ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಬಿಗಿಕ್ರಮಗಳ ನಡುವೆಯೂ ನಿಂತಿಲ್ಲ ಅಪರಾಧ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ. ಬಿ. ವೇದಮೂರ್ತಿ ಅವರು ಕೂಡ ಮಹಿಳಾ ದೌರ್ಜನ್ಯ ತಡೆಯಲು ಖುದ್ದು ಶಾಲೆ ಕಾಲೇಜು ಹಾಗೂ ವಿವಿಧೆಡೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಇಷ್ಟಾದ್ರು ಜಿಲ್ಲೆಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ನಿಂತಿಲ್ಲ. ದಿನೇ ದಿನೇ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಉಪ್ಪು ತಿಂದೋರು ನೀರು ಕುಡಿಯಲಿ: Siddaramaiah
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ. ಬಿ. ವೇದಮೂರ್ತಿ ಮಾತನಾಡಿ, ನಗರದಲ್ಲಿ ಮಹಿಳೆ ಮೇಲೆ ಹಣಮಂತ ಎಂಬ ವ್ಯಕ್ತಿ ಕುಡಿತದ ಮತ್ತಿನಲ್ಲಿ ಅತ್ಯಾಚಾರ ನಡೆಸಿದ್ದು ಹಲ್ಲೆ ಕೂಡ ಮಾಡಿದ್ದಾನೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಹಣಮಂತನನ್ನು ಬಂಧಿಸಲಾಗಿದೆ ಎಂದರು. ಮಹಿಳೆಯರ ಮೇಲೆ ಯಾವುದೇ ದೌರ್ಜನ್ಯ ನಡೆದರೂ ಸುಮ್ಮನಿರದೆ ಪೊಲೀಸರ ಗಮನಕ್ಕೆ ತರಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಮಹಿಳೆಯರು ಮೇಲೆ ನಿಗಾವಹಿಸಲು ಪೊಲೀಸ್ ಇಲಾಖೆ ಕೂಡ ಮಹಿಳಾ ಸುರಕ್ಷಾ ವಾಹನ ಮೂಲಕ ನಗರದ ವಿವಿಧೆಡೆ ತೆರಳಿ ಹದ್ದಿನ ಕಣ್ಣಿಟ್ಟಿದೆ. ಪೊಲೀಸರು ಕಟ್ಟೆಚ್ಚೆರ ವಹಿಸಿದರೂ ನಗರದಲ್ಲಿ ಇಂತಹ ಅಮಾನವೀಯ ರೇಪ್ ಕೇಸ್ ಘಟನೆ ಜರುಗಿದೆ. ಯಾದಗಿರಿ ನಗರದ ಹೃದಯ ಭಾಗದಲ್ಲಿ ಮಹಿಳೆ ಮೇಲೆ ನಡೆದ ಅಮಾನವೀಯ ಹೇಯ ಕೃತ್ಯ ಜರುಗಿದ್ದ ಹಿನ್ನೆಲೆ ಮಹಿಳೆಯರು ಕೆಲಸ ಕಾರ್ಯಕ್ಕೆ ಮನೆಯಿಂದ ಹೊರಹೋಗಲು ಭಯಪಡುವಂತಾಗಿದೆ.
ವರದಿ: ನಾಗಪ್ಪ ಮಾಲಿಪಾಟೀಲ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ