Gang Rape- ಯಾದಗಿರಿಯಲ್ಲಿ ಕಾರ್​ನಲ್ಲಿ ಸಾಮೂಹಿಕ ಅತ್ಯಾಚಾರ: ನಾಲ್ವರ ಬಂಧನ

Yadagiri Rape incident- ಶಹಾಪುರ ನಗರದಲ್ಲಿ ಮನೆಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯನ್ನು ಆಕೆಯ ಪರಿಚಿತ ವ್ಯಕ್ತಿ ಸೇರಿ ಕೆಲ ದುಷ್ಕರ್ಮಿಗಳು ಕಾರಿನಲ್ಲಿ ಕಿಡ್ನಾಪ್ ಮಾಡಿ ಗ್ಯಾಂಗ್ ರೇಪ್ ಎಸಗಿದ್ದರು. ಇದರ ವಿಡಿಯೋ ವೈರಲ್ ಆಗಿದ್ದು ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ಧಾರೆ.

ಯಾದಗಿರಿ ಪೊಲೀಸರು ಬಂಧಿಸಿದ ರೇಪ್ ಆರೋಪಿಗಳು

ಯಾದಗಿರಿ ಪೊಲೀಸರು ಬಂಧಿಸಿದ ರೇಪ್ ಆರೋಪಿಗಳು

  • Share this:
ಯಾದಗಿರಿ: ಹಳೆಯ ಗ್ಯಾಂಗ್ ರೇಪ್ ಪ್ರಕರಣವೊಂದು ಯಾದಗಿರಿಯಲ್ಲಿ (Gang Rape incident in Yadagiri) ಮತ್ತೊಮ್ಮೆ ಸದ್ದು ಮಾಡಿದ್ದು ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ಮಹಿಳೆಯನ್ನು ಕಾರ್​ನಲ್ಲಿ ಕಿಡ್ನಾಪ್ (Kidnapped in Car) ಮಾಡಿ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿತ್ತು. ಆ ಮಹಿಳೆಯನ್ನ ನಗ್ನ ಮಾಡಿ ಸಿಗರೇಟ್​ನಿಂದ ಸುಟ್ಟು ಗಾಯ ಕೂಡ ಮಾಡಲಾಗಿತ್ತು. ಒಂದು ವರ್ಷದ ಹಿಂದಿನ ಈ ಘಟನೆಯ ವಿಡಿಯೋ (Video go viral) ಇತ್ತೀಚೆಗೆ ವೈರಲ್ ಆಗಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳಿಗೆ ಜೈಲಿಗಟ್ಟಿದ್ದಾರೆ.

ಅತ್ಯಾಚಾರದ ಬರ್ಬರತೆ: ಶಹಾಪುರ ನಗರದಲ್ಲಿ ವಾಸ ಮಾಡುತ್ತಿರುವ ಮಹಿಳೆಯು ಒಂದು ವರ್ಷದ ಹಿಂದೆ ಚಟ್ನಳ್ಳಿ ಗ್ರಾಮಕ್ಕೆ ತೆರಳಲು ಶಹಾಪುರನ ಹೊಸ ನಿಲ್ದಾಣದಲ್ಲಿ ಬಸ್​ಗಾಗಿ ಕಾಯುತ್ತಾ ಕುಳಿತಿರುತ್ತಾಳೆ. ಈ ವೇಳೆ ಕಾರ್​ನಲ್ಲಿ ಆಗಮಿಸಿದ ಕಾಮುಕರು ಬಲವಂತವಾಗಿ ಮಹಿಳೆಯನ್ನು ಅಪಹರಿಸಿ ಶಹಾಪುರ ನಗರದ ಹೊರಭಾಗದ ರಸ್ತಾಪುರ ಕ್ರಾಸ್ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ತಡರಾತ್ರಿ ಗ್ಯಾಂಗ್ ರೇಪ್ ಮಾಡಿ ನಂತರ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ನಡೆಸಿ ಸಿಗರೇಟ್​ನಿಂದ ಸುಟ್ಟು ಗಾಯಗೊಳಿಸಿದ್ದಾರೆ. ಘಟನೆ ನಂತರ ಮಹಿಳೆಗೆ ಆರೋಪಿಯೊಬ್ಬ ಮಹಿಳೆಗೆ ಹಣ ಕೊಟ್ಟು ಈ ಬಗ್ಗೆ ಯಾವುದೇ ಕಾರಣಕ್ಕೂ ಪೊಲೀಸರಿಗೆ ದೂರು ನೀಡಬೇಡ ಎಂದು ಎಚ್ಚರಿಕೆ ಹಾಕಿದ್ದಾನೆ. ಇದರಿಂದ ಭಯಗೊಂಡ ಸಂತ್ರಸ್ತ ಮಹಿಳೆಯು ಘಟನೆ ಜರುಗಿ ವರ್ಷವಾದರೂ ಪೊಲೀಸರ ಗಮನಕ್ಕೆ ತಂದು ದೂರು ನೀಡುವ ಕೆಲಸ ಮಾಡುವುದಿಲ್ಲ.

ವೈರಲ್ ಆದಾಗ ಸಂತ್ರಸ್ತೆ ದೂರು: ವರ್ಷದ ಹಿಂದೆ ಅತ್ಯಾಚಾರ ನಡೆಸಿದಾಗ ಆರೋಪಿಯೊಬ್ಬ ವಿಡಿಯೋ ರೆಕಾರ್ಡ್ ಮಾಡಿರುತ್ತಾನೆ. ಆ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧನ ಮಾಡುವ ಕೆಲಸ ಮಾಡಿದ್ದಾರೆ. ನಂತರ ಸಂತ್ರಸ್ತೆಯು ಶಹಾಪುರ ಠಾಣೆಗೆ ಆಗಮಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಬಗ್ಗೆ, ಜಾತಿ ನಿಂದನೆ ಹಾಗೂ ಸಿಗರೆಟ್ ನಿಂದ ಸುಟ್ಟು ಗಾಯಗೊಳಿಸಿದ ಬಗ್ಗೆ ದೂರು ನೀಡಿದ್ದಾಳೆ. ಈ ಬಗ್ಗೆ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: Real Hero- ನೀರಿನಲ್ಲಿ ಮುಳುಗುತ್ತಿದ್ದ ತಾಯಿ ಸೇರಿ ಐವರನ್ನು ರಕ್ಷಿಸಿದ ಶಾಲಾ ಬಾಲಕ ಈಗ ರಿಯಲ್ ಹೀರೋ

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಅವರು ಖುದ್ದು ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಆರೋಪಿಗಳಿಗೆ ವಿಚಾರಣೆ ನಡೆಸಿ ಸ್ಥಳ ಮಹಜರು ಕೂಡ ಮಾಡಿದ್ದಾರೆ. ಶಹಾಪುರ ತಾಲೂಕಿನ ನಿವಾಸಿಗಳಾದ ಆರೋಪಿಗಳಾದ ನಿಂಗರಾಜ, ಅಯ್ಯಪ್ಪ, ಭೀಮಾಶಂಕರ ಹಾಗೂ ಶರಣು ಎಂಬ ಈ ನಾಲ್ವರು ಆರೋಪಿಗಳನ್ನು ಬಂಧನ ಮಾಡಲಾಗಿದೆ.

ಪೊಲೀಸರ ಮುಂದೆ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಪ್ರಮುಖ ಆರೋಪಿಯೋರ್ವ ಮಹಿಳೆಗೆ ಪರಿಚಿತನೇ ಆಗಿದ್ಧಾನೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಯಾದಗಿರಿ ಎಸ್​ಪಿ ಡಾ. ಸಿ.ಬಿ. ವೇದಮೂರ್ತಿ ಮಾತನಾಡಿ, ಸಂತ್ರಸ್ತೆ ಮಹಿಳೆಯು ಗ್ಯಾಂಗ್ ರೇಪ್ ಮಾಡಿರುವ ಬಗ್ಗೆ ದೂರು ನೀಡಿದ್ದಾಳೆ. ಈ ಬಗ್ಗೆ ನಾಲ್ವರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಈ ಘಟನೆ ಕಳೆದ ಒಂದು ವರ್ಷದ ಹಿಂದೆ ಜರುಗಿದ್ದು ಎನ್ನಲಾಗುತ್ತಿದೆ. ಮಹಿಳೆಯು ಶಹಾಪುರ ಬಸ್ ನಿಲ್ದಾಣದ ಮೂಲಕ ಚಟ್ನಳ್ಳಿ ಗ್ರಾಮಕ್ಕೆ ತೆರಳುತ್ತಿರುವಾಗ ರಾತ್ರಿ ಆರೋಪಿಗಳು ಕಾರ್​ನಲ್ಲಿ ಕಿಡ್ನಾಪ್ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿ ಸಿಗರೇಟಿನಿಂದ ಗಾಯಗೊಳಿಸಿದ್ದಾರೆ ಎಂದರು. ಈ ಬಗ್ಗೆ ಮೂವರು ಪೊಲೀಸ್ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಿ ಬಂಧನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವರದಿ: ನಾಗಪ್ಪ ಮಾಲಿಪಾಟೀಲ
Published by:Vijayasarthy SN
First published: