HOME » NEWS » District » YADAGIRI MLAS VENKAT REDDY MUDNAL AND RAJU GOWDA DISTRIBUTE FOOD DURING JANATA CURFEW RHHSN NMPG

ಜನತಾ ಕರ್ಫ್ಯೂ ಜನರ ಸಂಕಷ್ಟ; ಬಡವರ ಹಸಿವು ನೀಗಿಸುತ್ತಿರುವ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ರಾಜುಗೌಡ

ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಸಹ ಬಡಜನರ ಹಸಿವು  ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಖುದ್ದು ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಯಾದಗಿರಿ ತಾಲೂಕಿನ ಮುದ್ನಾಳ ಸಮೀಪದ ಕೋವಿಡ್ ಆಸ್ಪತ್ರೆಗೆ ತೆರಳಿ ಅನ್ನ, ನೀರು ಹಾಗೂ ಬಿಸ್ಕೆಟ್ ವಿತರಣೆ ಮಾಡಿ ಕೋವಿಡ್ ಸೋಂಕಿತ ಸಂಬಂಧಿಕರ ಸಮಸ್ಯೆ ಆಲಿಸಿದರು.

news18-kannada
Updated:May 3, 2021, 7:07 PM IST
ಜನತಾ ಕರ್ಫ್ಯೂ ಜನರ ಸಂಕಷ್ಟ; ಬಡವರ ಹಸಿವು ನೀಗಿಸುತ್ತಿರುವ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ರಾಜುಗೌಡ
ಆಹಾರ ನೀಡುತ್ತಿರುವ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ
  • Share this:
ಯಾದಗಿರಿ: ದೇಶಾದ್ಯಂತ ಕೊರೋನಾ ಎರಡನೇ ಅಲೆ ಜನರನ್ನು ಕಂಗಾಲು ಮಾಡಿದ್ದು, ಕೊರೋನಾ ಸಂಕಷ್ಟದಿಂದ ಜನರು ಈಗ ನಲುಗಿ ಹೋಗಿದ್ದಾರೆ. ಒಂದು ಕಡೆ ಕೊರೋನಾ ಆತಂಕ ಮತ್ತೊಂದೆಡೆ ಕೈಯಲ್ಲಿ ಹಣವಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಬಡವರು, ಕಾರ್ಮಿಕರು, ನಿರ್ಗತಿಕರು, ರೋಗಿಗಳ ಸಂಬಂಧಿಕರು ಈಗ ಊಟಕ್ಕೂ ಸಮಸ್ಯೆ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಕೊರೋನಾಗೆ ಕಡಿವಾಣ ಹಾಕಲು ಜನತಾ ಕರ್ಫ್ಯೂ ಜಾರಿ ಮಾಡಿದ್ದು, ಇಂತಹ ಸಂಕಷ್ಟದಲ್ಲಿ ಬಡಜನರು ಪರದಾಡುವಂತಾಗಿದೆ‌.

ಯಾದಗಿರಿ ಜಿಲ್ಲೆಯಲ್ಲಿ ಕೂಡ ದಿನನಿತ್ಯ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಆದರೆ, ಬಡಜನರು, ನಿರ್ಗತಿಕರು, ಕಾರ್ಮಿಕರು, ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರು ಊಟದ ಸಮಸ್ಯೆ ಎದುರಿಸುತ್ತಿದ್ದಾರೆ. ಜನರು ಹಸಿವಿನಿಂದ ಬಳಲಬಾರದೆಂದು ಅರಿತು ಸುರಪುರ ಶಾಸಕ ರಾಜುಗೌಡ ಹಾಗೂ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಬಡಜನರ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಶಾಸಕ ರಾಜುಗೌಡ ಅವರ ಸೇವಾ ಸಮಿತಿ ಮೂಲಕ ಸಮಿತಿ ಸದಸ್ಯರು ದಿನನಿತ್ಯವೂ ಸುರಪುರ ಕ್ಷೇತ್ರದಲ್ಲಿ ಬಡವರಿಗೆ, ನಿರ್ಗತಿಕರಿಗೆ, ರೋಗಿಗಳಿಗೆ, ರೋಗಿಗಳ ಸಂಬಂಧಿಕರು, ಕೊರೋನಾ ಸೈನಿಕರಿಗೆ ಅನ್ನ, ನೀರು ವಿತರಣೆ ಮಾಡಿ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ.

ಇದನ್ನು ಓದಿ: ಚಾಮರಾಜನಗರ ದುರಂತ ಘಟನೆ ನ್ಯಾಯಾಂಗ ತನಿಖೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

ಜನತಾ ಕರ್ಫ್ಯೂ ಹಿನ್ನೆಲೆ ಹೊಟೇಲ್ ಗಳು ಬಂದ್ ಆಗಿದ್ದು ಊಟ ಮಾಡಲು ಕೂಡ ಪರದಾಡುವಂತಾಗಿದೆ. ಜನರು ಹಸಿವಿನಿಂದ ಬಳಲಬಾರದೆಂದು ಅರಿತು ಶಾಸಕ ರಾಜುಗೌಡ ಅವರು ವಿಶೇಷ ಕಾಳಜಿ ವಹಿಸಿ ಜನರು ಇರುವ ಕಡೆ ಆಹಾರ ವಿತರಿಸುವ  ಕೆಲಸ ಮಾಡಿದ್ದಾರೆ. ಕಳೆದ ವರ್ಷ ಕೂಡ ಶಾಸಕ ರಾಜುಗೌಡ ಅವರು ಲಾಕ್ ಡೌನ್ ಅವಧಿಯಲ್ಲಿ ಆಹಾರ, ಹಾಗೂ ಆಹಾರ ಧಾನ್ಯ ವಿತರಣೆ ಮಾಡಿ ಹಸಿವು ನೀಗಿಸುವ ಕಾರ್ಯ ಮಾಡಿದ್ದರು. ಈಗ ಕೂಡ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದು ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸಂಕಷ್ಟ ಸಂದರ್ಭದಲ್ಲಿ ಮಾನವೀಯ ಕಳಕಳಿ ತೋರಿದ್ದು ಶ್ಲಾಘನೀಯ ಕಾರ್ಯವಾಗಿದೆ.

ಖುದ್ದು ಶಾಸಕ ವೆಂಕಟರೆಡ್ಡಿ ಮುದ್ನಾಳ ಆಹಾರ ವಿತರಣೆ...!

ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಸಹ ಬಡಜನರ ಹಸಿವು  ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಖುದ್ದು ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಯಾದಗಿರಿ ತಾಲೂಕಿನ ಮುದ್ನಾಳ ಸಮೀಪದ ಕೋವಿಡ್ ಆಸ್ಪತ್ರೆಗೆ ತೆರಳಿ ಅನ್ನ, ನೀರು ಹಾಗೂ ಬಿಸ್ಕೆಟ್ ವಿತರಣೆ ಮಾಡಿ ಕೋವಿಡ್ ಸೋಂಕಿತ ಸಂಬಂಧಿಕರ ಸಮಸ್ಯೆ ಆಲಿಸಿದರು. ಕೋವಿಡ್ ಸೋಂಕಿತ ಸಂಬಂಧಿಕರಿಗೆ ಆಹಾರ ವಿತರಣೆ ಮಾಡಿದರು. ಮಹಿಳೆಯೊರ್ವಳು ಆಸ್ಪತ್ರೆಯಲ್ಲಿ ಸರಿಯಾಗಿ ವೈದ್ಯರು ಕಾಳಜಿ ತೋರುತ್ತಿಲ್ಲ ಸರ್ ಎಂದು ಗಮನಕ್ಕೆ ತಂದಳು. ಬಳಿಕ ವೈದ್ಯರಿಗೆ ಹೇಳಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು. ನಂತರ ನಗರದ ವಿವಿಧ ಆಸ್ಪತ್ರೆಗಳಿಗೆ ತೆರಳಿ ಆಸ್ಪತ್ರೆ ಹೊರಭಾಗದಲ್ಲಿ ರೋಗಿಗಳ ಸಂಬಂಧಿಕರು ಇರುವುದನ್ನು ಕಂಡು ಅನ್ನ, ನೀರು, ಬಿಸ್ಕೆಟ್ ವಿತರಣೆ ಮಾಡಿದರು. ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು ಜನರು ಕಟ್ಟುನಿಟ್ಟಾಗಿ ಕೋವಿಡ್ ನಿಯಮ ಪಾಲನೆ ಮಾಡಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರಬಾರದೆ ಕೋವಿಡ್ ನಿಯಮ ಪಾಲನೆ ಮಾಡಬೇಕು ಎಂದರು. ಕಳೆದ ವರ್ಷ ಲಾಕ್ ಡೌನ್ ಅವಧಿಯಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಬಡಜನರಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡಿದ್ದರು.
Published by: HR Ramesh
First published: May 3, 2021, 7:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories