ಯಾದಗಿರಿಯಲ್ಲಿ ಮರಳಿನಲ್ಲಿ ಮುಚ್ಚಿಹೋದ ಕಾರ್ಮಿಕ; ಪವಾಡವೆಂಬಂತೆ ಬದುಕಿ ಬಂದದ್ದಾದರೂ ಹೇಗೆ...!?

ಯಾದಗಿರಿ ನಗರದ ಹೊರಭಾಗದ ಹೊಸಳ್ಳಿ ಗ್ರಾಮದ ಸಮೀಪದ ಹಳ್ಳದಲ್ಲಿದ್ದ ಮರಳನ್ನು ಟ್ರಾಕ್ಟರ್ಗೆ ತುಂಬಿಕೊಡುವಾಗ ದುರಂತ ಸಂಭವಿಸಿದೆ. ಸಲಾಕೆಯಿಂದ ಹಳ್ಳದಲ್ಲಿ ಮರಳು ತೋಡುವಾಗ ಮರಳುಮಿಶ್ರಿತ ಮಣ್ಣು ಹಳ್ಳಕ್ಕೆ ಕುಸಿದುಬಿದ್ದಿದೆ. 20 ನಿಮಿಷ ಕಾಲ ತಾಯಪ್ಪ ಜೀವನ್ಮರಣ ನಡುವೆ ಹೋರಾಟ ಮಾಡಿದ್ದಾನೆ.

news18-kannada
Updated:July 8, 2020, 5:35 PM IST
ಯಾದಗಿರಿಯಲ್ಲಿ ಮರಳಿನಲ್ಲಿ ಮುಚ್ಚಿಹೋದ ಕಾರ್ಮಿಕ; ಪವಾಡವೆಂಬಂತೆ ಬದುಕಿ ಬಂದದ್ದಾದರೂ ಹೇಗೆ...!?
ಗ್ರಾಮಸ್ಥರ ಸಹಾಯದಿಂದ ಬದುಕಿಬಂದ ತಾಯಪ್ಪ
  • Share this:
ಯಾದಗಿರಿ: ಲಾಕ್ ಡೌನ್ ನಡುವೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕನೊರ್ವ ಏನಾದರು ಕೂಲಿ ಕೆಲಸ ಮಾಡಿ ಜೀವನ ಸಾಗಿಸಲು ಹೋಗಿ ಸಾವಿನ ಕದ ತಟ್ಟಿ ಬಂದಿದ್ದಾನೆ. ಟ್ರಾಕ್ಟರ್​ನಲ್ಲಿ ಮರಳು ತುಂಬಲು ಹೋಗಿ ತಾನೇ ಮರಳಿನ ಗುಡ್ಡೆಯಲ್ಲಿ ಸಿಲುಕಿ ಜೀವನ್ಮರಣದ ನಡುವೆ ಹೋರಾಟ ನಡೆಸಿ ಇತರ ಯುವಕರ ಸಹಾಯದಿಂದ ಮರು ಜೀವ ಪಡೆದಿದ್ದಾನೆ.

ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದ ಕೂಲಿ ಕಾರ್ಮಿಕ ತಾಯಪ್ಪ ಲಾಕ್​ಡೌನ್​ನಿಂದ ಕೂಲಿ ಸಿಗದೆ ಬದುಕು ಸಾಗಿಸಲು ಸಾಧ್ಯವಾಗದೆ ತತ್ತರಿಸಿಹೋಗಿದ್ದನು. ಆದರೆ, ಮರಳು ತುಂಬುವ ಕೆಲಸ ಸಿಕ್ಕಾಗ ತತ್​ಕ್ಷಣವೇ ಒಪ್ಪಿಕೊಂಡಿದ್ದಾನೆ. ಯಾದಗಿರಿ ನಗರದ ಹೊರಭಾಗದ ಹೊಸಳ್ಳಿ ಗ್ರಾಮದ ಸಮೀಪದ ಹಳ್ಳದಲ್ಲಿದ್ದ ಮರಳನ್ನು ಟ್ರಾಕ್ಟರ್​ಗೆ ತುಂಬಿಕೊಡುವಾಗ ದುರಂತ ಸಂಭವಿಸಿದೆ. ಸಲಾಕೆಯಿಂದ ಹಳ್ಳದಲ್ಲಿ ಮರಳು ತೋಡುವಾಗ ಮರಳುಮಿಶ್ರಿತ ಮಣ್ಣು ಹಳ್ಳಕ್ಕೆ ಕುಸಿದುಬಿದ್ದಿದೆ. 20 ನಿಮಿಷ ಕಾಲ ತಾಯಪ್ಪ ಜೀವನ್ಮರಣ ನಡುವೆ ಹೋರಾಟ ಮಾಡಿದ್ದಾನೆ.

ಸ್ಥಳದಲ್ಲಿಯೇ ಇದ್ದ ಪಗಲಾಪುರ ಗ್ರಾಮದ ಯುವಕರ ತಂಡ ಇದನ್ನು ಗಮನಿಸಿ ಧೈರ್ಯದಿಂದ ಸಲಾಕೆಯಿಂದ ಮರಳು ತೆಗೆಯುತ್ತಾ ಮರಳಿನಲ್ಲಿ ಸಿಲುಕಿದ ತಾಯಪ್ಪನ ಹುಡುಕಾಟ ಮಾಡಿದ್ದಾರೆ. ಆದರೆ, ಯಾವುದೇ ಗುರುತು ಪತ್ತೆಯಾಗಿಲ್ಲ. ನಂತರ ಮರಳಿನಲ್ಲಿ ಮುಚ್ಚಿ ಹೋದ ಸಲಾಕೆ ಕಾಣಿಸಿಕೊಂಡ ಬಳಿಕ ಆ ಸುತ್ತಮಲ ಜಾಗದಲ್ಲಿ ಮರಳನ್ನ ತೋಡಿದಾಗ ತಾಯಪ್ಪ ಪತ್ತೆಯಾಗಿದ್ದಾನೆ. 20 ನಿಮಿಷದಲ್ಲಿ ಯುವಕರ ತಂಡವು ಮರಳಿನಲ್ಲಿ ಸಿಲುಕಿದ ಕಾರ್ಮಿಕನನ್ನು ಹೊರ ತೆಗೆದಿದೆ.

ಇದನ್ನೂ ಓದಿ: ‘ನಂಗೆ ಸೋಂಕಿಲ್ಲ, ಆಸ್ಪತ್ರೆಗೆ ಬರೊಲ್ಲ’ – ಬೀದರ್​ನಲ್ಲಿ ನಡುರಸ್ತೆಯಲ್ಲೇ ಸೋಂಕಿತನ ರಂಪಾಟ

ಈ ಘಟನೆ ಇದೇ ಭಾನುವಾರ ನಡೆದಿದ್ದು ಈಗ ತಡವಾಗಿ ಬೆಳಕಿಗೆ ಬಂದಿದೆ. ನಾಲ್ವರು ಯುವಕರು ತಾಯಪ್ಪನ ಪಾಲಿಗೆ ದೇವರಾಗಿ ಮರು ಜೀವ ನೀಡಿದ್ದಾರೆ. ಬದುಕಿ ಬಂದ ಪಗಲಾಪುರ ಗ್ರಾಮದ ಕಾರ್ಮಿಕ ತಾಯಪ್ಪ ಈ ಬಗ್ಗೆ ನ್ಯೂಸ್18 ಜೊತೆ ಮಾತನಾಡಿ, ‘ಸರ್ ನಾನು‌ ಮರಳಿನಲ್ಲಿ 20 ನಿಮಿಷಗಳ ಕಾಲ ಸಿಲುಕಿದ್ದೆ. ನಮ್ಮ ಗ್ರಾಮಸ್ಥರು ನನ್ನ ಜೀವ ಉಳಿಸಿದ್ದಾರೆ’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

Villagers saving man trapped in mudslide at Yadagiri
ಯಾದಗಿರಿಯಲ್ಲಿ ಮಣ್ಣು ಕುಸಿತಕ್ಕೆ ಸಿಲುಕಿದ್ದ ತಾಯಪ್ಪನ ರಕ್ಷಣೆ


ತಾಯಪ್ಪನನ್ನು ಯಾದಗಿರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮರು ಜೀವ ಪಡೆದ ಕಾರ್ಮಿಕ ತಾಯಪ್ಪ ಈಗ ಬೆನ್ನು ನೋವಿನಿಂದ ಬಳಲುತ್ತಿದ್ದಾನೆ. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ.ಇದನ್ನೂ ಓದಿ: ಮೃತನಾದ 6 ತಿಂಗಳ ಬಳಿಕ ಅಂತ್ಯಸಂಸ್ಕಾರ; ಮಲೇಷಿಯಾದಲ್ಲಿ ಮೃತಪಟ್ಟ ಮೈಸೂರಿನ ಯವಕನ ಸಾವಿನ ರಹಸ್ಯ ಇನ್ನೂ ನಿಗೂಢ

ತಾಯಪ್ಪನನ್ನು ರಕ್ಷಣೆ ಮಾಡಿದವರಲ್ಲಿ ಒಬ್ಬನಾಗಿರುವ ಶರಣಗೌಡ ನ್ಯೂಸ್18 ಜೊತೆ ಮಾತನಾಡಿ, ‘ತಾಯಪ್ಪ ಸಿಲುಕಿದ್ದನು ನೋಡಿ ನಮ್ಮ ಕಣ್ಣೆದರು ಜೀವ ಹೋಗಬಾರದೆಂದು ಎಲ್ಲರೂ ಧೈರ್ಯದಿಂದ ಜೀವ ರಕ್ಷಿಸಿದ್ದೆವೆ. ನಮ್ಮ ಕಣ್ಣೆದುರೇ ಘಟನೆ ನಡೆದಾಗ ಸುಮ್ಮನೆ ಇರಲು ಸಾಧ್ಯವೇ? ನಮ್ಮ ಕೈಲಾದಷ್ಟು ಸೇವೆ ಮಾಡಿದ್ದೇವೆ’ ಎಂದು ಹೇಳಿದ್ಧಾರೆ.ಅನಧಿಕೃತವಾಗಿ ಮರಳು ತರಲು ಹೋಗಿದ್ದೇ ಘಟನೆಗೆ ಕಾರಣ..! ಟ್ರಾಕ್ಟರ್​ನಲ್ಲಿ ಮರಳು ತುಂಬಿಕೊಂಡು ಅಕ್ರಮವಾಗಿ ಸಾಗಣೆ ಮಾಡಲಾಗುತಿತ್ತು ಎಂಬುದು ಈ ದುರ್ಘಟನೆಯು ಸಾಕ್ಷಿಯಾಗಿದೆ. ಆದರೆ, ಕಾರ್ಮಿಕ ಕೂಲಿ ಕೆಲಸ ಮಾಡಲು ಹೋದಾಗ ಮರಳಿನಲ್ಲಿ ಸಿಲುಕಿ ಮರಳಿ ಬದುಕಿ ಬಂದಿದ್ದು ಅಚ್ಚರಿಯಾಗಿದೆ. ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದ ತಾಯಪ್ಪ ಯುವಕರ ಸಮಯ ಪ್ರಜ್ಞೆಯಿಂದ ಮರು ಜೀವ ಪಡೆದಿದ್ದಾನೆ. ಈ ಯುವಕರ ಕಾರ್ಯ ಮೆಚ್ಚುವಂಥದ್ದಾಗಿದೆ.
Published by: Vijayasarthy SN
First published: July 8, 2020, 5:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading