ಕೇಂದ್ರ ಸರ್ಕಾರದ ವಿರುದ್ಧ ಯಾದಗಿರಿಯಲ್ಲಿ ರೈತರ ಹೋರಾಟ; ರೈತರನ್ನು ವಶಕ್ಕೆ ಪಡೆದ ಪೊಲೀಸರು

ರೈಲ್​ ರೋಖೋ ಚಳುವಳಿ ಹಿನ್ನೆಲೆ ಮುಂಜಾಗ್ರತೆ ವಹಿಸಿ ಹೋರಾಟಗಾರರು ಯಾದಗಿರಿ ರೈಲ್ವೆ ನಿಲ್ದಾಣದೊಳಗಡೆ ನುಗ್ಗದಂತೆ ಶಾಂತಿಯುತ ಹೋರಾಟ ನಡೆಸಲು ಪೊಲೀಸರ ಭದ್ರತೆ ಕಲ್ಪಿಸಲಾಗಿತ್ತು.

ಯಾದಗಿರಿ ರೈತ ಹೋರಾಟ.

ಯಾದಗಿರಿ ರೈತ ಹೋರಾಟ.

  • Share this:
ಯಾದಗಿರಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ರೈತರು ನಡೆಸುತ್ತಿರುವ ರೈಲ್ವೇ ರೋಖೋ ಚಳವಳಿಗೆ ಯಾದಗಿರಿಯಲ್ಲೂ ಬೆಂಬಲ ವ್ಯಕ್ತವಾಗಿದ್ದು, ಇಲ್ಲಿನ ರೈತರು ರೈಲನ್ನು ತಡೆದು ಪ್ರತಿಭಟಿಸಿದ್ದಾರೆ. ರೈತ, ಕೃಷಿ ಕಾರ್ಮಿಕ ಸಂಘಟನೆ ಹಾಗೂ ಎಂಐಟಿಯುಸಿ ಯಾದಗಿರಿ ‌ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಯಾದಗಿರಿ ನಗರದ ಶಾಸ್ತ್ರೀ ವೃತ್ತದಲ್ಲಿ ಸೇರಿದ ಹೋರಾಟಗಾರರು ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ನಂತರ ಮತ್ತೆ ಬೃಹತ್ ಪ್ರತಿಭಟನಾ ಮೇರವಣಿಗೆಯೊಂದಿಗೆ ಪ್ರತಿಭಟನಾಕಾರರು ಶಾಸ್ತ್ರೀ ವೃತ್ತದಿಂದ ರೈಲ್ವೆ ನಿಲ್ದಾಣದವರಗೆ  ತೆರಳಿದರು. ರೈಲ್ ರೋಖೋ ಚಳುವಳಿ ಹಿನ್ನೆಲೆ ಮುಂಜಾಗ್ರತೆ ವಹಿಸಿ ಹೋರಾಟಗಾರರು ಯಾದಗಿರಿ ರೈಲ್ವೆ ನಿಲ್ದಾಣದೊಳಗಡೆ ನುಗ್ಗದಂತೆ ಶಾಂತಿಯುತ ಹೋರಾಟ ನಡೆಸಲು ಪೊಲೀಸರ ಭದ್ರತೆ ಕಲ್ಪಿಸಲಾಗಿತ್ತು. ಸಿಪಿಐ ಸೋಮಶೇಖರೆಡ್ಡಿ ಕೆಂಚರೆಡ್ಡಿ ಹಾಗೂ ಪಿಎಸ್ ಐ ಸೌಮ್ಯ ಅವರ ನೇತೃತ್ವದಲ್ಲಿ ರೈಲ್ವೆ ನಿಲ್ದಾಣದ ಮುಂದೆ ಭದ್ರತೆ ಕಲ್ಪಿಸಲಾಗಿತ್ತು.

ಇದನ್ನೂ ಓದಿ : ಪಂಜಾಬ್​ ಸ್ಥಳೀಯ ಚುನಾವಣೆ; NOTA ಗಿಂತಲೂ ಕಡಿಮೆ ಮತ ಪಡೆದು ಮುಜುಗರಕ್ಕೀಡಾದ ಬಿಜೆಪಿ

ಪ್ರತಿಭಟನೆ ನಿರತ ಹೋರಾಟಗಾರರು  ರೈಲ್ವೆ ನಿಲ್ದಾಣದೊಳಗಡೆ ನುಗ್ಗಲು ಯತ್ನಿಸಿದ ವೇಳೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಹೋರಾಟಗಾರರು ನಾವು ಶಾಂತಿಯುತ ಹೋರಾಟ ಮಾಡುತ್ತೇವೆ. ನಾವು ಯಾವುದೇ ಗಲಾಟೆ ಮಾಡಲ್ಲ. ನಮ್ಮನ್ನು ‌ರೈಲ್ವೆ ನಿಲ್ದಾಣದೊಳಗಡೆ ತೆರಳಲು ಬಿಡಬೇಕೆಂದು ಪಟ್ಟು ಹೀಡಿದರು. ಪೊಲೀಸರು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದಾಗ ಹೋರಾಟಗಾರರು ಮತ್ತು ಪೊಲೀಸರ ನಡುವೆ ಮಾತಿನಚಕಮಕಿ ನಡೆಯಿತು.

ಹೋರಾಟಗಾರರನ್ನು ಪೊಲೀಸರು ತಡೆದರು. ಹೀಗಾಗಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿಯೇ ಪ್ರತಿಭಟನೆ ನಿರತರು ಪ್ರಧಾನಮಂತ್ರಿ ನರೇಂದ್ರ ‌ಮೋದಿ ವಿರುದ್ಧ ಘೋಷಣೆ ಕೂಗಿದರು. ದೇಶಾದ್ಯಂತ ರೈತರು ಕೃಷಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡಿದರು. ಪ್ರಧಾನಮಂತ್ರಿ ಮೋದಿ ಅವರು ರೈತರ ವಿರೋಧಿ ನೀತಿ ಅನುಸರಿಸಿ ಕೃಷಿ ಕಾಯ್ದೆ ತಂದಿದ್ದು‌ ಕೂಡಲೇ ರೈತ ವಿರೋಧಿ ನೀತಿ ಕೃಷಿ ಕಾಯ್ದೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದರು. ಕೊನೆಗೆ ಹೋರಾಟಗಾರರು ರೈಲ್ವೆ ನಿಲ್ದಾಣದೊಳಗಡೆ ನುಗ್ಗಲು ಯತ್ನಿಸುತ್ತಿದ್ದಾಗ ಪೊಲೀಸರು ಹೋರಾಟಗಾರರನ್ನು ಬಂಧಿಸಿದ್ದಾರೆ.
Published by:MAshok Kumar
First published: