Corona Vaccine| ಕೊರೋನಾ ಲಸಿಕೆ ಪಡೆಯುವಂತೆ ಜನರ ಮನವೊಲಿಸಲು ಯಾದಗಿರಿ ಜಿಲ್ಲಾಡಳಿತದ ಮಾಸ್ಟರ್​ ಪ್ಲ್ಯಾನ್!

ಗ್ರಾಮೀಣ ಭಾಗದ ಜನರಿಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಎಲ್ಲಾ ಜಿಲ್ಲಾಡಳಿತಗಳಿಗೂ ಗರಿಷ್ಟ ಮಟ್ಟದ ಟಾರ್ಗೆಟ್​ ನೀಡಿದೆ. ಹೀಗಾಗಿ ಈ ಲಸಿಕೆ ಟಾರ್ಗೆಟ್​ ರೀಚ್ ಮಾಡುವ ಸಲುವಾಗಿ ಯಾದಗಿರಿ ಜಿಲ್ಲಾಡಳಿತ ಜನರ ಮನವೋಲಿಸಲು ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಯಾದಗಿರಿ (ಆಗಸ್ಟ್​ 18); ಕೊರೋನಾ ಮೂರನೇ ಅಲೆ ದೇಶದಲ್ಲಿ ಇಂದು ವ್ಯಾಪಕವಾಗಿ ಹರಡುತ್ತಿದೆ. ಈಗಾಗಲೇ ಮೊದಲ ಮತ್ತು ಎರಡನೇ ಅಲೆಗೆ ಭಾರತ ತತ್ತರಿಸಿದ್ದು ಈ ಮಾರಣಾಂತಿಕ ಸೋಂಕಿಗೆ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿ ದ್ದಾರೆ. ಇನ್ನೂ ಮೂರನೇ ಅಲೆ ಮತ್ತಷ್ಟು ಅಪಾಯಕಾರಿಯಾಗಿ ಇರಲಿದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಈ ಬಾರಿ ಕೊರೋನಾ ಸೋಂಕು ಮಕ್ಕಳಿಗೆ ಭಾರೀ ಆಘಾತ ಉಂಟು ಮಾಡಲಿದೆ ಎಂದು ಎಚ್ಚರಿಸಲಾಗಿದೆ. ಹೀಗಾಗಿ ಕೊರೋನಾ ಸೋಂಕನ್ನು ಸೋಲಿಸಲು ಇರುವ ಏಕೈಕ ಆಯುಧ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳು ವುದು ಮತ್ತು ಎಲ್ಲರೂ ತಪ್ಪದೆ ಲಸಿಕೆ ಪಡೆಯುವುದೇ ಆಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಕೊರೋನಾ ಲಸಿಕೆ ಬಗ್ಗೆಯೇ ಹೆಚ್ಚು ವದಂತಿಗಳು ಹರಡುತ್ತಿದ್ದು, ಜನ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜನರಿಗೆ ಲಸಿಕೆ ಪಡೆಯುವಂತೆ ಪ್ರೇರೇಪಿಸಲು ಯಾದಗಿರಿ ಜಿಲ್ಲಾಡಳಿತ ಇದೀಗ ಹೊಸ ಯೋಜನೆಗೆ ಮುಂದಾಗುವ ಮೂಲಕ ಗಮನ ಸೆಳೆದಿದೆ.

  ಗ್ರಾಮೀಣ ಭಾಗದ ಜನರಿಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಎಲ್ಲಾ ಜಿಲ್ಲಾಡಳಿತಗಳಿಗೂ ಗರಿಷ್ಟ ಮಟ್ಟದ ಟಾರ್ಗೆಟ್​ ನೀಡಿದೆ. ಹೀಗಾಗಿ ಈ ಲಸಿಕೆ ಟಾರ್ಗೆಟ್​ ರೀಚ್ ಮಾಡುವ ಸಲುವಾಗಿ ಯಾದಗಿರಿ ಜಿಲ್ಲಾಡಳಿತ ಜನರ ಮನವೊಲಿಸಲು ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿದೆ. ಕೋವಿಡ್ ಲಸಿಕೆ ಜಾಗೃತಿ ಮೂಡಿಸುವ ಜೊತೆ ಲಸಿಕೆ ಹೊತ್ತ ಬಣ್ಣ ಬಣ್ಣದ ಕಾರ್ ಗಳನ್ನು ಜನರ ಮನೆ ಬಾಗೀಲಿಗೆ ತಂದು ನಿಲ್ಲಿಸಿದೆ. ಅಲ್ಲದೆ, ಲಸಿಕೆ ಜೊತೆಗೆ ಗ್ರಾಮಗಳಿಗೆ ತೆರಳಿ ಜನ ಲಸಿಕೆ ಪಡೆಯುವಂತೆ ಮನವೋಲಿಸುತ್ತಿದೆ.

  ಇದನ್ನೂ ಓದಿ: Narendra Modi| ಒಂದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಶೇ.66 ರಿಂದ ಶೇ24ಕ್ಕೆ ಇಳಿಕೆ; ಇಂಡಿಯಾ ಟುಡೆ ಸಮೀಕ್ಷೆ

  ಇಂದು ಯಾದಗಿರಿಯಲ್ಲಿ‌ ಬೆಳ್ಳಂ ಬೆಳಿಗ್ಗೆ ಲಸಿಕೆ ಹೊತ್ತು ಹಳ್ಳಿಗಳತ್ತ ಕಾರ್ ಗಳು ಸಂಚಾರ ಆರಂಭಿಸಿವೆ. ಯಾದಗಿರಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಲಸಿಕೆ ಟಾರ್ಗೆಟ್ ರೀಚ್ ಆಗಲು ಸಂಕಷ್ಟ ಎದುರಿಸುತ್ತಿದ್ದು, ಜಿಲ್ಲಾಡಳಿತಕ್ಕೆ ಕೇರ್ ಸಂಸ್ಥೆಯು 10 ಕಾರ್ ಗಳ ವಿತರಣೆ ಮಾಡಿದೆ ಎನ್ನಲಾಗಿದೆ. ಕೇರ್ ಸಂಸ್ಥೆಯ ವಿತರಣೆ ಮಾಡಿದ ಕೋವಿಡ್ ಲಸಿಕೆ ಎಕ್ಸ್‌ಪ್ರೆಸ್ ಕಾರಗಳ ಮೂಲಕ ಹಳ್ಳಿಗಳಿಗೆ ತೆರಳಿರುವ ಅಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರು, ಜನರ ಮನವೊಲಿಸಿ ಲಸಿಕೆ ನೀಡುತ್ತಿದ್ದಾರೆ ಎನ್ನಲಾಗಿದೆ.

  ಇದನ್ನೂ ಓದಿ: Corona 3rd Wave| ಶಾಲೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೂ ಕೊರೋನಾ ಪರೀಕ್ಷೆ ನಡೆಸಲು ಆಂಧ್ರ ಸರ್ಕಾರ ಆದೇಶ

  ಕಾರಗಳ ಬಳಕೆಯಿಂದ ಕೊರೋನಾ ಲಸಿಕೆ ನೀಡುವ ಪ್ರಮಾಣ ಶೇ.8 ರಷ್ಟು ಹೆಚ್ಚಳವಾಗಿದೆ. ಈವರೆಗೆ ಯಾದಗಿರಿ ಜಿಲ್ಲೆಯಲ್ಲಿ ಮೊದಲನೇ ಡೋಸ್ ಶೇ.43 ವಿತರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಶೀಘ್ರದಲ್ಲೇ ಯಾದಗಿರಿ ಜಿಲ್ಲೆಯಲ್ಲಿ ಶೇ.100 ರಷ್ಟು ಲಸಿಕೆ ನೀಡುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಲಿದೆ ಎಂದು ಖುದ್ದು ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಹಳ್ಳಿಯತ್ತ ಪಯಣ ಬಳಸಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯ ದಿಂದ ಸಂಪೂರ್ಣ ವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊ ಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರ ವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮ ಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿ ಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತ ವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದು ಕೊಳ್ಳಬೇಕು.
  Published by:MAshok Kumar
  First published: