• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಯಾದಗಿರಿ; ಕೃಷ್ಣಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ 194 ಕುರಿಗಳ ರಕ್ಷಣೆ, 36 ಕುರಿಗಳು ನೀರು ಪಾಲು

ಯಾದಗಿರಿ; ಕೃಷ್ಣಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ 194 ಕುರಿಗಳ ರಕ್ಷಣೆ, 36 ಕುರಿಗಳು ನೀರು ಪಾಲು

ಕುರಿಗಳ ರಕ್ಷಣೆಯಲ್ಲಿ ತೊಡಗಿರುವುದು.

ಕುರಿಗಳ ರಕ್ಷಣೆಯಲ್ಲಿ ತೊಡಗಿರುವುದು.

ಒಟ್ಟು 230 ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿದ್ದವು. ಆದರೆ, ಅದರಲ್ಲಿ 36 ಕುರಿಗಳು ಕೃಷ್ಣಾ ನದಿಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ. ಅದರಲ್ಲಿ ಉಳಿದ 194 ಕುರಿಗಳನ್ನು ಸುರಕ್ಷಿತವಾಗಿ ತೆಪ್ಪದಲ್ಲಿ  ರಕ್ಷಿಸಿ ತರಲಾಗಿದೆ.

  • Share this:

ಯಾದಗಿರಿ: ಕೃಷ್ಣಾ ನದಿಯ ಪ್ರವಾಹಕ್ಕೆ ನಡುಗಡ್ಡೆಯಲ್ಲೇ ಕುರಿಗಳು ಸಿಲುಕಿದ್ದವು. ಇಂದು ಪ್ರವಾಹ ತಗ್ಗಿದ ಹಿನ್ನೆಲೆ ಮೀನುಗಾರರ ಸಹಾಯದಿಂದ ಕುರಿಗಾಹಿ ಟೋಪಣ್ಣ ಕುರಿಗಳನ್ನು ರಕ್ಷಣೆ ಮಾಡಿದ್ದಾರೆ.


ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಛಾಯಾಭಗವತಿ ದೇಗುಲದ ತೀರದ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಕಳೆದ 26 ದಿನಗಳಿಂದ ಕುರಿಗಳು ಸಿಲುಕಿದ್ದವು. ಇಂದು ಕೃಷ್ಣಾ ನದಿಯ ನೀರಿನ ಹರಿವು ಪ್ರಮಾಣ ಸಂಪೂರ್ಣ ಕಡಿಮೆಯಾದ ಹಿನ್ನೆಲೆ ಕುರಿಗಾಹಿ ಟೋಪಣ್ಣ, ಡೀಕಪ್ಪ, ಸಂತೋಷ,ಕೃಷ್ಣಾ, ಹೇಮಂತ ಅವರು ಮೀನುಗಾರರ ಸಹಾಯದಿಂದ ತೆಪ್ಪದ ಮೂಲಕ ರಕ್ಷಣೆ ಮಾಡಿದ್ದಾರೆ.


194 ಕುರಿಗಳ ರಕ್ಷಣೆ 36 ಕುರಿಗಳು ಕೃಷ್ಣಾ ನದಿ ಪಾಲು...!


ಒಟ್ಟು 230 ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿದ್ದವು. ಆದರೆ, ಅದರಲ್ಲಿ 36 ಕುರಿಗಳು ಕೃಷ್ಣಾ ನದಿಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ. ಅದರಲ್ಲಿ ಉಳಿದ 194 ಕುರಿಗಳನ್ನು ಸುರಕ್ಷಿತವಾಗಿ ತೆಪ್ಪದಲ್ಲಿ  ರಕ್ಷಿಸಿ ತರಲಾಗಿದೆ.


ಕುರಿಗಾಗಿ ಕಣ್ಣೀರು...!


ಐಬಿ ತಾಂಡಾದ ನಿವಾಸಿ ಟೋಪಣ್ಣ ಕೂಡ ಕೃಷ್ಣಾ ನದಿಯ ಪ್ರವಾಹದಲ್ಲಿ ಕುರಿಗಳ ಜೊತೆ ನಡುಗಡ್ಡೆಯಲ್ಲಿ ಸಿಲುಕಿದ್ದರು. ನಂತರ ಎನ್ ಡಿಆರ್ ಎಫ್ ತಂಡವು ಅಗಸ್ಟ್ 9 ರಂದು  ಬೋಟ್ ಮೂಲಕ ಕುರಿಗಾಹಿ ಟೋಪಣ್ಣ ಅವರನ್ನು ರಕ್ಷಣೆ ಮಾಡಲಾಗಿತ್ತು. ಆದರೆ, ಕೃಷ್ಣಾ ನದಿಯಲ್ಲಿ ಹೆಚ್ಚಿನ ಪ್ರವಾಹ ಹಿನ್ನೆಲೆ ನಡುಗಡ್ಡೆಯಲ್ಲಿರುವ ಕುರಿಗಳನ್ನು ತರಲು ಸಾಧ್ಯವಾಗಿರಲಿಲ್ಲ. ಕಳೆದ 26 ದಿನಗಳಿಂದ ಕುರಿಗಾಹಿ ಟೋಪಣ್ಣ, ಸಂತೋಷ,ಹಾಗೂ ಕೃಷ್ಣಾ, ಡೀಕಪ್ಪ ಅವರು ನದಿ ತೀರದಲ್ಲಿ ಕುರಿಗಳನ್ನು ದೂರದಿಂದ ಕಾಯುತ್ತಿದ್ದರು.


ಇದನ್ನೂ ಓದಿ : ಜಿಎಸ್‌ಟಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜ್ಯಕ್ಕೆ ಬಗೆದಿರುವ ದ್ರೋಹವನ್ನು ಸಹಿಸಲು ಸಾಧ್ಯವಿಲ್ಲ; ಸಿದ್ದರಾಮಯ್ಯ


ಟೋಪಣ್ಣ ಕುರಿಗಳ ಬಗ್ಗೆ ಚಿಂತೆ ಮಾಡುತ್ತಿದ್ದರು ಕೆಲವೊಮ್ಮೆ ಊಟ ಕೂಡ ಸರಿಯಾಗಿ ಮಾಡಿರಲಿಲ್ಲ. ಆದರೆ, ಈಗ ಇಂದು ಕುರಿಗಳನ್ನು ‌ರಕ್ಷಣೆ ಮಾಡಲಾಗಿದೆ. ನಡುಗಡ್ಡೆಯಲ್ಲಿ ಕುರಿ ತರಲು ಹೋದಾಗ 36 ಕುರಿಗಳು ಕಡಿಮೆ ಕಂಡು ಬಂದ ಹಿನ್ನೆಲೆ ಕೆಲಹೊತ್ತು ಕುರಿಗಾಹಿ ಕಣ್ಣೀರು ಹಾಕಿದ್ದಾನೆ. ನಡುಗಡ್ಡೆಯಲ್ಲಿ ಸಿಲುಕಿದ 194 ಕುರಿಗಳನ್ನು ತೆಪ್ಪದ  ಮೂಲಕ ಮೀನುಗಾರರ ಸಹಾಯದಿಂದ ರಕ್ಷಣೆ ಮಾಡಲಾಗಿದೆ.36 ಕುರಿಗಳು ಕೃಷ್ಣಾ ನದಿಯ ಪಾಲಾಗಿವೆ.


ಒಟ್ಟು 230 ಕುರಿಗಳು ಸಿಕ್ಕಿ ಹಾಕಿಕೊಂಡಿದ್ದವು. 36 ಕುರಿಗಳು ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದಕ್ಕೆ ಕುರಿಗಾಹಿ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಕಳೆದ 26 ದಿನಗಳಿಂದ ಗಡ್ಡಿಯಲ್ಲಿ ಸಿಲುಕಿದ ಉಳಿದ ಕುರಿಗಳನ್ನು ದೇವರು ಕಾಪಾಡಿದ್ದಾನೆಂಬ ನಂಬಿಕೆಯಿಂದ ನದಿ ತೀರದಲ್ಲಿರುವ ದಕ್ಷಿಣ ಕಾಶಿ ಎಂದೆ ಖ್ಯಾತಿಯಾದ ಛಾಯಾಭಗವತಿ ದೇವಸ್ಥಾನದಲ್ಲಿ ‌ದೇವಿಗೆ ಪೂಜೆ ಮಾಡಿ ನಂತರ ಸಿಹಿ ಹಂಚಿ ಕುರಿಗಾಹಿ ಟೋಪಣ್ಣ ಖುಷಿಪಟ್ಟರು.

Published by:MAshok Kumar
First published: