ಬಾಗಲಕೋಟೆ (ಫೆ.16): ರಾಜ್ಯದಲ್ಲಿ SSLC ಪರೀಕ್ಷೆ ಹತ್ತಿರ ಬರ್ತಿದೆ. ಹೀಗಾಗಿ ಎಲ್ಲಾ ಮಕ್ಕಳು ಒಳ್ಳೆಯ ಅಂಕ ಗಳಿಸಲು ಹಗಲು, ರಾತ್ರಿ ಓದಲು ಶುರು ಮಾಡಿದ್ದಾರೆ. ಸಾಮಾನ್ಯವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಅಂದ್ರೆ ಸಾಕು ವಿದ್ಯಾರ್ಥಿಗಳು ಕೊಂಚ ಆತಂಕಪಡೋದು ಕಾಮನ್, ಹೀಗಾಗಿ ಬಾಗಲಕೋಟೆ (Bagalkot) ಜಿಲ್ಲೆಯ ಮಿರ್ಜಿ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಮಕ್ಕಳಿಗೆಂದು ವಿನೂತನ ಕಾರ್ಯಕ್ರಮ ಏರ್ಪಡಿಸಿತ್ತು. ಮಕ್ಕಳ ಆತಂಕ ದೂರಾಗಿಸೋ ಶಿಕ್ಷಕರ (Teachers) ಪ್ರಯತ್ನ ನಿಜಕ್ಕೂ ಮೆಚ್ಚುವಂತದ್ದೆ. ಪಯಣ 50, ಫಲಿತಾಂಶ 100 ವಿಶೇಷ ಕಾರ್ಯಕ್ರಮ (Special event) ನಡೆಸಿ, ಮಕ್ಕಳಿಂದ ತಂದೆ-ತಾಯಿಗಳ ಪಾದಪೂಜೆ ಮಾಡಿಸಿದ್ದಾರೆ. ಮಕ್ಕಳಿಗೆ ಆತ್ಮವಿಶ್ವಾಸದೊಂದಿಗೆ ಭರವಸೆ ಮೂಡಿಸುವ ಕಾರ್ಯ ಮಾಡಿದ್ದಾರೆ ಶಾಲಾ ಶಿಕ್ಷಕರು. ಶಿಕ್ಷಕರ ಈ ಕಾರ್ಯಕ್ಕೆ ಗ್ರಾಮಸ್ಥರು (Villagers) ಸಹ ಸಾಥ್ ನೀಡಿದ್ದಾರೆ.
ಮಕ್ಕಳ ಆತಂಕ ದೂರವಾಗಿಸಲು ಶಿಕ್ಷಕರ ಪ್ರಯತ್ನ
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿನೂತನ ಪ್ರಯತ್ನ ನಡೆದಿದೆ. ಇನ್ನೇನು ಎಸ್ಎಸ್ಎಲ್ ಸಿ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ 10ನೇ ತರಗತಿಯಲ್ಲಿರೋ 80 ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿ ಹೆಚ್ಚಿನ ಪ್ರಮಾಣದ ಓದಿನ ಆಸಕ್ತಿ ಬೆಳೆಸಲು ಶಾಲೆ ಮುಂದಾಗಿದೆ. ಎಲ್ಲಾ ಮಕ್ಕಳು ಉತ್ತಮ ಅಂಕ ಪಡೆದು ಪಾಸ್ ಆಗ್ಬೇಕು ಅನ್ನೋ ಹಂಬಲದಿಂದ ಶಾಲೆ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಪಯಣ-50, ಫಲಿತಾಂಶ-100
SSLC ಪರೀಕ್ಷೆಗೆ ಇನ್ನು 50 ದಿನಗಳಷ್ಟೆ ಬಾಕಿ ಇದೆ. ಹೀಗಾಗಿ ಮಕ್ಕಳಲ್ಲಿ ಕಠಿಣ ಪರಿಶ್ರಮ ಮುಖ್ಯ. ಜೊತೆಗೆ ತಂದೆ, ತಾಯಿಗಳ ಪ್ರೋತ್ಸಾಹ ಕೂಡ ಮಕ್ಕಳಿಗೆ ಮುಖ್ಯವಾಗಿದೆ. ಹೀಗಾಗಿ ಈ ಶಾಲೆ ಪಯಣ 50 ಫಲಿತಾಂಶ 100 ಶೀರ್ಷಿಕೆಯಡಿ ತಂದೆ ತಾಯಿಗಳಿಂದ ದೀಕ್ಷಾ ಕಾರ್ಯಕ್ರಮ ನಡೆಸಿತು. ನಾವು ಚೆನ್ನಾಗಿ ಓದುತ್ತೇವೆ, ಪರೀಕ್ಷೆಯನ್ನ ಬರೆದು ಉನ್ನತ ಶ್ರೇಣಿಯಲ್ಲಿ ಪಾಸಾಗುತ್ತೇವೆ ಎಂದು ಮಕ್ಕಳು ಪೋಷಕರಿಗೆ ಮಾತುಕೊಟ್ಟಿದ್ದಾರೆ.
ಇದನ್ನೂ ಓದಿ: Bagalkote: ಪಂಚಮಸಾಲಿ ಸಮುದಾಯದಲ್ಲಿ ಒಗ್ಗಟ್ಟು- ಒಡಕಿನ ಚರ್ಚೆಗೆ ಕಾರಣವಾದ ಮೂರನೇ ಪೀಠ..!
ಮಕ್ಕಳಿಗೆ ಪೋಷಕರು ಕೊಟ್ರು ಸಾಥ್
ಮಕ್ಕಳಲ್ಲಿ ಭರವಸೆಯನ್ನ ಮೂಡಿಸೋದು ಮೊದಲ ಭಾಗವಾದ್ರೆ ಇನ್ನುಳಿದಂತೆ ಶಿಕ್ಷಕರು ಮತ್ತು ಪಾಲಕರು ಹಾಗೂ ಎಸ್ ಡಿ ಎಂ ಸಿ ಸದಸ್ಯರ ಮಧ್ಯೆ ಮಕ್ಕಳನ್ನ ಉತ್ತಮವಾಗಿ ಓದಿಸುವ ಕುರಿತು ಒಡಂಬಡಿಕೆಯನ್ನ ಸಹ ಮಾಡಿಕೊಳ್ಳಲಾಯಿತು. ಇಂತಹ ಕಾರ್ಯಕ್ರಮದ ಜೊತೆಗೆ ಮಕ್ಕಳಲ್ಲಿ ಇನ್ನಷ್ಟು ಸ್ಪೂರ್ತಿ ತುಂಬಿ ಮಕ್ಕಳು ಹೆಚ್ಚೆಚ್ಚು ಅಂಕ ಪಡೆಯುವಂತೆ ಮಾಡುವುದೇ ನಮ್ಮೆಲ್ಲರ ಗುರಿ ಅಂತಾರೆ ಪಾಲಕರು.
ಪೋಷಕರ ಆಶೀರ್ವಾದ ಪಡೆದ ಮಕ್ಕಳು
ಇನ್ನು ಎಸ್ಎಸ್ ಎಲ್ ಸಿ ಪರೀಕ್ಷೆಗೆ 50 ದಿನದಲ್ಲಿ ಉತ್ತಮವಾಗಿ ಮಕ್ಕಳನ್ನ ಪರೀಕ್ಷೆಗೆ ಸಿದ್ದಗೊಳಿಸುವುದರ ಜೊತೆಗೆ ಪ್ರತಿಶತ 100ರಷ್ಟು ಫಲಿತಾಂಶ ಪಡೆಯೋದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಹೀಗಾಗಿ ಶಾಲೆಗೆ ಬರೋ ಮಕ್ಕಳಿಗೆ ಅವರ ತಂದೆ-ತಾಯಿಗಳ ಪಾದಪೂಜೆ ಮಾಡಿಸಿ ಅವರಿಂದ ಆಶೀರ್ವಾದವನ್ನ ಪಡೆದು ಮಕ್ಕಳ ಓದಿಗೆ ಇನ್ನಷ್ಟು ಪ್ರೇರಣೆಯನ್ನ ನೀಡಿಸುವುದು ಮತ್ತು ತಂದೆತಾಯಿಗಳಿಗೆ ಮಕ್ಕಳು ಸಹ ಮಾತು ಕೊಟ್ಟು ಅದರಂತೆ ನಡೆದುಕೊಂಡು ಹೆಚ್ಚು ಹೆಚ್ಚು ಓದಿನ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯೋದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಇದನ್ನೂ ಓದಿ: ಕುಟ್ಟಂಗಿಲ್ಲ, ಬೀಸಂಗಿಲ್ಲ, ರೊಟ್ಟಿ ತಟ್ಟಂಗಿಲ್ಲ: ಏನಿದು 32 ವರ್ಷಗಳ ಬಳಿಕ ನಡೆಯುತ್ತಿರುವ ಜಾತ್ರೆ ವಿಶೇಷ..!
ಇಂತಹ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ತಂದೆ-ತಾಯಿ ಆಶೀರ್ವಾದವಿದೆ ಎಂಬ ನಂಬಿಕೆ ಮೂಡಿದೆ. ಇತ್ತ ತಂದೆ-ತಾಯಿಗಳು ಸಹ ತಮ್ಮ ತಮ್ಮ ಮಕ್ಕಳ ಓದಿನ ಬಗ್ಗೆ ಮತ್ತಷ್ಟು ಕಾಳಜಿ ವಹಿಸಲು ಸಹಕಾರಿಯಾಗಿದೆ. ಹೀಗಾಗಿ ಈ ಕಾರ್ಯಕ್ರಮದ ಯಶಸ್ಸಿನ ನಿರೀಕ್ಷೆಯಲ್ಲಿದ್ದೇವೆ ಅಂತ ಶಿಕ್ಷಕರು ಹೇಳಿದ್ದಾರೆ. ಇನ್ನು ಈ ಕಾರ್ಯಕ್ರಮದಿಂದ ನಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಿದೆ ಅಂತ ವಿದ್ಯಾರ್ಥಿಗಳು ಹೇಳ್ತಿದ್ದಾರೆ.
ವರದಿ:
ಮಂಜುನಾಥ್ ತಳವಾರ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ