HOME » NEWS » District » WORMS FOUND IN AVALAKKI WHICH SERVED TO HUBLI DHARAWAD CIVIL WORKERS LG

ಹುಬ್ಬಳ್ಳಿಯಲ್ಲಿ ಪೌರ ಕಾರ್ಮಿಕರಿಗೆ ಹುಳು ಮಿಶ್ರಿತ ಉಪಹಾರ ಪೂರೈಕೆ ಆರೋಪ; ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹ

ವಾರ್ಡ್ ನಂಬರ್‌ 56ರಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಈ ರೀತಿಯ ಹುಳು ಮಿಶ್ರಿತ ಉಪಹಾರ ಕೊಡಲಾಗಿದೆ. ಅವಲಕ್ಕಿ ಸೇವನೆ ಮಾಡುತ್ತಿದ್ದ ವೇಳೆ ಹುಳುಗಳು ಕಾಣಿಸಿವೆ.

news18-kannada
Updated:June 8, 2020, 9:50 AM IST
ಹುಬ್ಬಳ್ಳಿಯಲ್ಲಿ ಪೌರ ಕಾರ್ಮಿಕರಿಗೆ ಹುಳು ಮಿಶ್ರಿತ ಉಪಹಾರ ಪೂರೈಕೆ ಆರೋಪ; ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹ
ಅವಲಕ್ಕಿಯಲ್ಲಿ ಹುಳು
  • Share this:
ಹುಬ್ಬಳ್ಳಿ(ಜೂ.08): ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಕಳಪೆ ಉಪಹಾರ ಪೂರೈಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಪಾಲಿಕೆಯಿಂದ ಮುಂಜಾನೆಯ ಉಪಹಾರ ಕೊಡಲಾಗುತ್ತಿದೆ. ಆದರೆ ಆಹಾರ ಪೂರೈಕೆಯ ಗುತ್ತಿಗೆ ಪಡೆದಿರುವ ಸಂಸ್ಥೆಯವರು ಕಳಪೆ ಗುಣಮಟ್ಟದ ಉಪಹಾರ ಕೊಡುತ್ತಿದ್ದಾರೆ ಎನ್ನಲಾಗಿದೆ.

ನಿನ್ನೆ ಬೆಳಗ್ಗೆ ಪೂರೈಕೆ ಮಾಡಿದ್ದ ಅವಲಕ್ಕಿಯಲ್ಲಿ ಹುಳುಗಳು ಪತ್ತೆಯಾಗಿವೆ. ಹುಳು ಮಿಶ್ರಿತ ಅವಲಕ್ಕಿ ತಿಂದ ಪೌರ ಕಾರ್ಮಿಕರು ವಾಂತಿ ಮಾಡಿಕೊಂಡಿದ್ದಾರೆ. ವಾರ್ಡ್ ನಂಬರ್‌ 56ರಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಈ ರೀತಿಯ ಹುಳು ಮಿಶ್ರಿತ ಉಪಹಾರ ಕೊಡಲಾಗಿದೆ. ಅವಲಕ್ಕಿ ಸೇವನೆ ಮಾಡುತ್ತಿದ್ದ ವೇಳೆ ಹುಳುಗಳು ಕಾಣಿಸಿವೆ. ವಿಷಯವನ್ನು ಪೌರ ಕಾರ್ಮಿಕರು ತಮ್ಮ ಸಂಘಟನೆಯ ಮುಖಂಡರಿಗೆ ತಿಳಿಸಿದ್ದಾರೆ. ಸಫಾಯಿ ಕರ್ಮಚಾರಿ ಆಯೋಗದ ಮುಖಂಡ ವಿಜಯ್‌ ಗುಂಟ್ರಾಳ್‌ ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದಾರೆ. ಕಳಪೆ ಆಹಾರ ನೀಡುತ್ತಿರುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇಂದಿನಿಂದ ಭಕ್ತರಿಗೆ ದರ್ಶನ ನೀಡಲಿರುವ ಗೊರವನಹಳ್ಳಿ ಮಹಾಲಕ್ಷ್ಮಿ

ಪೌರ ಕಾರ್ಮಿಕರಿಗೆ ಮಹಾನಗರ ಪಾಲಿಕೆಯಿಂದ ಬೆಳಗಿನ ಉಪಹಾರ ಪೂರೈಸುವಂತೆ 2015ರಿಂದ ಹೋರಾಟ ಮಾಡಲಾಗಿತ್ತು. 2018ರಲ್ಲಿ ಪಾಲಿಕೆಯಲ್ಲಿ ಠರಾವು ಪಾಸ್‌ ಮಾಡಿ ಆಹಾರ ಪೂರೈಕೆಗೆ ಅನುಮೋದನೆ ನೀಡಲಾಗಿದೆ. ಪೌರ ಕಾರ್ಮಿಕರಿಗೆ ತಲಾ 25 ರೂಪಾಯಿಯನ್ನು ಉಪಹಾರಕ್ಕೆಂದು ಅನುದಾನ ಮೀಸಲಿಡಲಾಗಿದೆ. ಬೆಂಗಳೂರು ಮೂಲದ ಕಂಪನಿಗೆ ಉಪಹಾರದ ಟೆಂಡರ್‌ ಸಿಕ್ಕಿದೆ. ಆದರೆ ಇವತ್ತು ಪೂರೈಸಿದ ಅವಲಕ್ಕಿಯಲ್ಲಿ ಹುಳುಗಳು ಸಿಕ್ಕಿವೆ. ಮಹಾನಗರ ಪಾಲಿಕೆ ಆಹಾರದ ಗುಣಮಟ್ಟ ಪರೀಕ್ಷಿಸಿ ಕಾರ್ಮಿಕರಿಗೆ ವಿತರಿಸಬೇಕು. ಹುಳು ಮಿಶ್ರಿತ ಆಹಾರ ಪೂರೈಸಿದ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ರೀತಿಯ ಅಜಾಗರೂಕತೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕಾರ್ಮಿಕ ಮುಖಂಡರು ಆಗ್ರಹಿಸಿದ್ದಾರೆ.
Youtube Video

 
First published: June 8, 2020, 9:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories