• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಚನ್ನಪಟ್ಟಣದಲ್ಲಿ ವಿಶ್ವದ ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹ ಸ್ಥಾಪನೆ; ನೋಡಲು ಮುಗಿಬಿದ್ದ ಜನ

ಚನ್ನಪಟ್ಟಣದಲ್ಲಿ ವಿಶ್ವದ ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹ ಸ್ಥಾಪನೆ; ನೋಡಲು ಮುಗಿಬಿದ್ದ ಜನ

ಚಾಮುಂಡೇಶ್ವರಿ ದೇವಿ ವಿಗ್ರಹ

ಚಾಮುಂಡೇಶ್ವರಿ ದೇವಿ ವಿಗ್ರಹ

35 ಸಾವಿರ ಕೆ.ಜಿ ತೂಕವುಳ್ಳ, 68 ಅಡಿ ಎತ್ತರದ, ಪಂಚಲೋಹಗಳಾದ ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆಯಿಂದ ತಯಾರಾಗಿ, 18 ಭುಜಗಳುಳ್ಳ ಸೌಮ್ಯ ರೂಪದಲ್ಲಿ  ನಿಂತಿರುವ ಚಾಮುಂಡಿ ತಾಯಿಯ ವಿಗ್ರಹವನ್ನ ನೋಡಲು ಕಣ್ಣೆರಡು ಸಾಲೋದಿಲ್ಲ

  • Share this:

ಇದು ವಿಶ್ವದಲ್ಲಿಯೇ ಅತೀ ಎತ್ತರದ ಶ್ರೀ ಚಾಮುಂಡೇಶ್ವರಿ ವಿಗ್ರಹ ಎಂದೇ ಖ್ಯಾತಿ ಪಡೆದಿದೆ. ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ವಿಗ್ರಹ ತಯಾರಿ ಕಾರ್ಯ ಪೂರ್ಣಗೊಂಡು ಭೀಮನ ಅಮಾವಾಸ್ಯೆಯ ಶುಭದಿನದಂದೇ ಲೋಕಾರ್ಪಣೆಗೊಂಡಿದೆ. ತಾಯಿಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ.


ಹೌದು, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮ ಭಾನುವಾರ ಇತಿಹಾಸ ನಿರ್ಮಿಸಿದೆ. ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ರವರು ಈ ಮಹಾಕಾರ್ಯವನ್ನ ಮಾಡಿದ್ದಾರೆ. ಚಾಮುಂಡೇಶ್ವರಿ ವಿಗ್ರಹವನ್ನ ಸ್ಥಾಪನೆ ಮಾಡಲು ಮುಂದಾಗಿದ್ದ ಮಲ್ಲೇಶ್ ರವರಿಗೆ ಭಕ್ತರಿಂದ ದಾನಗಳು ಹರಿದುಬರಲು ಪ್ರಾರಂಭವಾಯ್ತು. ಅದಕ್ಕಾಗಿ ಬಹಳ ದೊಡ್ಡಮಟ್ಟದಲ್ಲಿಯೇ ತಾಯಿಯ ವಿಗ್ರಹವನ್ನ ಸ್ಥಾಪನೆ ಮಾಡಿ ಈ ಸ್ಥಳವನ್ನ ಪ್ರವಾಸಿ ತಾಣವನ್ನಾಗಿ ಮಾಡಲು ಮುಂದಾದರು.


35 ಸಾವಿರ ಕೆ.ಜಿ ತೂಕವುಳ್ಳ, 68 ಅಡಿ ಎತ್ತರದ, ಪಂಚಲೋಹಗಳಾದ ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆಯಿಂದ ತಯಾರಾಗಿ, 18 ಭುಜಗಳುಳ್ಳ ಸೌಮ್ಯ ರೂಪದಲ್ಲಿ  ನಿಂತಿರುವ ಚಾಮುಂಡಿ ತಾಯಿಯ ವಿಗ್ರಹವನ್ನ ನೋಡಲು ಕಣ್ಣೆರಡು ಸಾಲೋದಿಲ್ಲ. ಸತತ ಮೂರು ವರ್ಷಗಳಿಂದ ನಡೆಯುತ್ತಿದ್ದ ಈ ಮಹಾಕಾರ್ಯ ಮುಗಿದು ಭೀಮನ ಅಮಾವಾಸ್ಯೆಯ ದಿನದಂದು ಲೋಕಾರ್ಪಣೆಯಾಗಿದೆ.


ಇದನ್ನೂ ಓದಿ:SSLC Exam Results: ಇಂದು ಮಧ್ಯಾಹ್ನ 3:30ಕ್ಕೆ ಎಸ್ಎಸ್ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ


ಇನ್ನು ಬೆಂಗಳೂರಿನ ನಾಯಂಡಹಳ್ಳಿಯ ಮುಸ್ಲಿಂ ಸಮುದಾಯದ 20 ಜನ ಕಾರ್ಮಿಕರು ಈ ವಿಗ್ರಹವನ್ನ ತಯಾರು ಮಾಡಿರೋದು ಮತ್ತೊಂದು ವಿಶೇಷ. ಪಠಾಣ್ ಹಾಗೂ ಸಂಗಡಿಗರು ಸೇರಿ ಕಳೆದ ಮೂರು ವರ್ಷಗಳಿಂದ ಕಷ್ಟಪಟ್ಟು, ಭಕ್ತಿಯಿಂದ ತಯಾರಿಸಿದಕ್ಕೆ ಇವತ್ತು ಅಚ್ಚುಕಚ್ಚಾಗಿ ವಿಗ್ರಹ ಮೂಡಿಬಂದಿದೆ ಎನ್ನುತ್ತಾರೆ.


ಇನ್ನು ತಾಯಿಯ ವಿಗ್ರಹವನ್ನ ಕಣ್ತುಂಬಿಕೊಳ್ಳಲು ರಾಮನಗರ ಸೇರಿದಂತೆ ಬೆಂಗಳೂರು, ಮೈಸೂರು ಭಾಗದಿಂದಲೂ ಸಹ ಜನರು ಆಗಮಿಸಿದ್ದರು. ಮೊದಲೆಲ್ಲ ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುತ್ತಿದ್ದೆವು. ಆದರೆ ಇವತ್ತು ನಮಗೆ ಗೌಡಗೆರೆಯಲ್ಲಿ ತಾಯಿಯ ದರ್ಶನ ಪಡೆದು ಖುಷಿಯಾಯ್ತು ಎನ್ನುತ್ತಾರೆ ಭಕ್ತರು.


ಒಟ್ಟಾರೆ ವಿಶ್ವದಲ್ಲಿಯೇ ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹವೆಂಬ ಖ್ಯಾತಿಗೆ ಬೊಂಬೆನಗರಿಯ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ವಿಗ್ರಹ ಸಾಕ್ಷಿಯಾಗಿದೆ. ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ರವರ ಈ ಮಹಾಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಸತತವಾಗಿ ಮೂರು ವರ್ಷಗಳಿಂದ ಪಟ್ಟ ಶ್ರಮಕ್ಕೆ ಬೆಲೆ ಸಿಕ್ಕಿದೆ.


ಇದನ್ನೂ ಓದಿ:Karnataka Weather Today: ಇಂದು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ; ಬೆಂಗಳೂರಿನ ವಾತಾವರಣ ಹೇಗಿರಲಿದೆ?


ಇನ್ನು‌ ಪ್ರತಿದಿನವೂ ಸಹ ಬರುವ ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತದೆ. ದೇವಸ್ಥಾನದ ಆಡಳಿತ ಮಂಡಳಿಯಿಂದಲೇ ಆಯೋಜನೆ ಮಾಡಲಾಗಿದೆ. ಒಟ್ಟಾರೆ ಬೊಂಬೆನಗರಿಯ ಗೌರವ ಮತ್ತೊಂದು ಹಂತಕ್ಕೆ ತಲುಪಿದೆ.‌


(ವರದಿ : ಎ.ಟಿ.ವೆಂಕಟೇಶ್)

top videos
    First published: