ಚಾಮರಾಜನಗರ: ಬಿಸಾಡಿದ ಬಾಟಲಿಗಳಲ್ಲಿ ನೀರು, ಆಹಾರಧಾನ್ಯ ಇಟ್ಟು ವಿಶ್ವ ಅರಣ್ಯ ದಿನಾಚರಣೆ

ಹೊಸ ದೊಡ್ಡಿಯಿಂದ ಬೋರೆ ದೊಡ್ಡಿಯವರೆಗೆ ನಾಲ್ಕು ಕಿಲೋ ಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಗಳನ್ನು ಅವರು ಸಂಗ್ರಹಿಸಿದ ಅವರು ಅವುಗಳನ್ನು ಕತ್ತರಿಸಿ  ದಾರಿಯುದ್ದಕ್ಕೂ  ಇರುವ ಮರಗಳಿಗೆ ನೇತು ಹಾಕಿದ್ದಾರೆ.

ವೇಸ್ಟ್​ ಬಾಟಲನ್ನು ಹಕ್ಕಿಗಳ ನೀರಿನ ತೊಟ್ಟಿ ಮಾಡಿರುವ ಯುವಕರು.

ವೇಸ್ಟ್​ ಬಾಟಲನ್ನು ಹಕ್ಕಿಗಳ ನೀರಿನ ತೊಟ್ಟಿ ಮಾಡಿರುವ ಯುವಕರು.

  • Share this:
ಚಾಮರಾಜನಗರ (ಮಾರ್ಚ್​ 21); ಇಂದು ವಿಶ್ವ ಅರಣ್ಯ ದಿನಾಚರಣೆ. ಕೆಲವೆಡೆ ಸಸಿಗಳನ್ನು ನೆಟ್ಟು ವಿಶ್ವ ಅರಣ್ಯ ದಿನ ಆಚರಿಸಿದರೆ  ಇನ್ನೂ ಕೆಲವಡೆ ಅರಣ್ಯದ ಮಹತ್ವ ಸಾರುವ ಜಾಗೃತಿ ಕಾರ್ಯಕ್ರಮ ಗಳನ್ನು ಆಯೋಜಿಸಿ ಈ ದಿನವನ್ನು ಆಚರಿಸಲಾಗುತ್ತದೆ. ಆದರೆ ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಹೊಸದೊಡ್ಡಿ ಗ್ರಾಮದ ಚಿಣ್ಣರು ಹಾಗು ಯುವಕರು ವಿಶ್ವ ಅರಣ್ಯ ದಿನವನ್ನು ಮಾದರಿಯಾಗಿ ಆಚರಿಸಿದ್ದಾರೆ. ಬಿಳಿಗಿರಿರಂಗನ ಬೆಟ್ಟದ ಅರಣ್ಯ ಹಾಗು ಮಲೈಮಹದೇಶ್ವರ ವನ್ಯಧಾಮದ ನಡುವೆ ಕೊಳ್ಳೇಗಾಲದಿಂದ ತಮಿಳುನಾಡಿಗೆ ರಾಜ್ಯ ಹೆದ್ದಾರಿ ಹೋಗುತ್ತದೆ. ಪ್ರತಿ ದಿನ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಪ್ರಯಾಣಿಕರು ನೀರು ಕುಡಿದು ಪ್ಲಾಸ್ಟಿಕ್ ಬಾಟಲಿಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಬೀಸಾಡಿ ಹೋಗುವುದು ಸಾಮಾನ್ಯವಾಗಿದ್ದು  ಅರಣ್ಗ ಪರಿಸರದ ಮೇಲೆ ಹಾನಿ ಉಂಟಾಗುತ್ತಿದೆ.

ಈ ಹಿನ್ನಲೆಯಲ್ಲಿ ಹೊಸದೊಡ್ಡಿಯ ಗ್ರಾಮದ ಚಿಣ್ಣರು ಹಾಗು ಯುವಕರು  ಗ್ರಾಮ ಅರಣ್ಯ ಸಮಿತಿ ನೇತೃತ್ವದಲ್ಲಿ  ಹೆದ್ದಾರಿಯ ಇಕ್ಕೆಲಗಳಲ್ಲಿ ಸಾರ್ವಜನಿಕ ರು ಬಿಸಾಡಿರುವ ಪ್ಲಾಸ್ಟಿಕ್ ಬಾಟಲ್ ಗಳನ್ನು ಸಂಗ್ರಹಿಸಿದರು. ಇಷ್ಟೇ ಅಲ್ಲ, ಅವುಗಳನ್ನು  ನಿರ್ದಿಷ್ಟ ಆಕಾರಕ್ಕೆ ಕತ್ತರಿಸಿ  ಅದಕ್ಕೆ ನೀರು ಹಾಗು ಧ್ಯಾನ ಗಳನ್ನು ಹಾಕಿ ಇಕ್ಕೆಲಗಳಲ್ಲಿರುವ ಮರಗಳಿಗೆ ನೇತು ಹಾಕಿದರು ಪರಿಸರ ಹಾಗು  ಪ್ರಾಣಿಪಕ್ಷಿಗಳಿಗೆ ಪ್ಲಾಸ್ಟಿಕ್ ನಿಂದಾಗುವ ಹಾನಿ ತಪ್ಪಿಸುವುದು ಒಂದು ಉದ್ದೇಶವಾದರೆ ಈಗ ಬೇಸಿಗೆ ಕಾಲವಾದ್ದರಿಂದ ಪಕ್ಷಿಗಳಿಗೆ ಹಸಿವು ಹಾಗು ನೀರಡಿಕೆ ನೀಗಿಸುವುದು ಮತ್ತೊಂದು ಉದ್ದೇಶವಾಗಿದೆ.

ಹೊಸ ದೊಡ್ಡಿಯಿಂದ ಬೋರೆ ದೊಡ್ಡಿಯವರೆಗೆ ನಾಲ್ಕು ಕಿಲೋ ಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಗಳನ್ನು ಅವರು ಸಂಗ್ರಹಿಸಿದ ಅವರು ಅವುಗಳನ್ನು ಕತ್ತರಿಸಿ  ದಾರಿಯುದ್ದಕ್ಕೂ  ಇರುವ ಮರಗಳಿಗೆ ನೇತು ಹಾಕಿದ್ದಾರೆ. ಹೀಗೆ ನೇತು ಹಾಕಿದ  ಪ್ಲಾಸ್ಟಿಕ್ ಬಾಟಲ್ ಗಳಿಗೆ  ಎರಡು ದಿನಗಳ ಕಾಲ ನೀರು ಹಾಗು ಧಾನ್ಯ ತುಂಬಿಸಲು  ಮುಂದಾಗಿದ್ದಾರೆ.

ಬಾಲ್ಯಾವಸ್ಥೆಯಲ್ಲೇ  ಅರಣ್ಯ ಹಾಗು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಹೊಸದೊಡ್ಡಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ , ಪರಿಸರ ಪ್ರೇಮಿ ಕೃಷ್ಣ ಮೂರ್ತಿ ತಿಳಿಸಿದರು. ಬೀಸಾಡಿದ ಪ್ಲಾಸ್ಟಿಕ್ ಮರು ಉಪಯೋಗ ಆಗಬೇಕು, ಪಕ್ಷಿಗಳಿಗು ನೀರು ಆಹಾರ ದೊರಕಿಸಬೇಕು ಎಂಬುದು ನಮ್ಮ ಉದ್ದೇಶ ವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: VS Ugrappa: ಲೋಕಪಾಲ-ಕಪ್ಪುಹಣ ಬರತ್ತೆ, ಭ್ರಷ್ಟಾಚಾರ ತೊಲಗತ್ತೆ ಎಂದ ಬಿಜೆಪಿಗೆ ನೈತಿಕತೆ ಇದೆಯೇ; ವಿ.ಎಸ್.​ ಉಗ್ರಪ್ಪ ಕಿಡಿ

ಅರಣ್ಯವೆಂದರೆ ಅದೊಂದು ನಿಗೂಡ ಜಗತ್ತು. ಅಮೂಲ್ಯ ಸಸ್ಯ ಸಂಪತ್ತು, ಜೀವವೈವಿಧ್ಯತೆ ತಾಣವಾಗಿರುವ ಅರಣ್ಯಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಆದರೆ ಮಾನವನ ದುರಾಸೆಯಿಂದ ಅರಣ್ಯ ಸಂಪತ್ತು ನಾಶವಾಗುತ್ತಿದೆ.

ಅರಣ್ಯ ಸಂರಕ್ಷಣೆ ಹಾಗು ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಪ್ರತಿ ವರ್ಷ ಮಾರ್ಚ್‌ 21 ನ್ನು ವಿಶ್ವ ಅರಣ್ಯ ದಿನವನ್ನಾಗಿ  ಆಚರಿಸಲಾಗುತ್ತದೆ.  ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅದರ ವಿನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಗಳು ಇಂದು ವಿಶ್ವದೆಲ್ಲೆಡೆ ನಡೆಯುತ್ತಿವೆ.
Published by:MAshok Kumar
First published: