HOME » NEWS » District » WORLD ENVIRONMENT DAY FOREST DEPARTMENT OFFICERS ALLOWS TO CUT TREES IN UDUPI ON ENVIRONMENT DAY SCT

World Environment Day: ವಿಶ್ವ ಪರಿಸರ ದಿನದಂದೇ ಉಡುಪಿಯಲ್ಲಿ ಮರಗಳ ಮಾರಣಹೋಮ

ಉಡುಪಿಯ ಬನ್ನಂಜೆಯಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್ ಆರ್ ಟಿಸಿ ಸರ್ಕಾರಿ  ಬಸ್ ನಿಲ್ದಾಣದ ಜಾಗದಲ್ಲಿ ಮರಗಳ ಮಾರಣಹೋಮ‌ ನಡೆದಿದೆ.

news18-kannada
Updated:June 5, 2020, 10:32 PM IST
World Environment Day: ವಿಶ್ವ ಪರಿಸರ ದಿನದಂದೇ ಉಡುಪಿಯಲ್ಲಿ ಮರಗಳ ಮಾರಣಹೋಮ
ಉಡುಪಿಯಲ್ಲಿ ಮರಗಳ ಮಾರಣಹೋಮ
  • Share this:
ಉಡುಪಿ (ಜೂ. 5): ವಿಶ್ವ ಪರಿಸರ ದಿನದಂದೇ ಉಡುಪಿಯಲ್ಲಿ ಮರಗಳ‌ ಮಾರಣಹೋಮ‌ ನಡೆದಿದೆ. ಸರ್ಕಾರಿ‌ ಜಾಗದಲ್ಲಿರುವ ಮರಗಳನ್ನು ಬುಡಸಮೇತ ನೆಲಕ್ಕೆ ಉರುಳಿಸಲಾಗಿದೆ.‌ ಒಂದೆಡೆ ಅರಣ್ಯ ಇಲಾಖೆಯವರ ಸಹಯೋಗದಲ್ಲಿ ಪರಿಸರ ಪ್ರೇಮಿಗಳು ಗಿಡವನ್ನು ನೆಟ್ಟು ಪರಿಸರ ಉಳಿಸುವ ಕೆಲಸ ನಡೆಯುತ್ತಿದ್ದರೆ, ಮಾದರಿಯಾಗಬೇಕಾದ ಸರ್ಕಾರಿ ಇಲಾಖೆಗಳು ಸ್ವಾರ್ಥಕ್ಕಾಗಿ ಮರವನ್ನೇ ಕಡಿಯುತ್ತಿದ್ದಾರೆ.

ಉಡುಪಿಯ ಬನ್ನಂಜೆಯಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್ ಆರ್ ಟಿಸಿ ಸರ್ಕಾರಿ  ಬಸ್ ನಿಲ್ದಾಣದ ಜಾಗದಲ್ಲಿ ಮರಗಳ ಮಾರಣಹೋಮ‌ ನಡೆದಿದೆ. ಪಿಡಬ್ಲು‌ಡಿ ಇಲಾಖೆ ಖಾಸಗಿ ಗುತ್ತಿಗೆದಾರನಿಗೆ ಮರ‌ ಕಡಿಯುವ ಉಸ್ತುವಾರಿ ನೀಡಿ ಪರಿಸರ ದಿನಾಚರಣೆಯ ದಿನವೇ ಪರಿಸರ ನಾಶ ಮಾಡುವ ಕಾರ್ಯ ನಿರ್ವಹಿಸಿ ಜನಾಕ್ರೋಶಕ್ಕೆ ಕಾರಣವಾಗಿದೆ. ಮೊದಲೇ ಅಭಿವೃದ್ಧಿ ಪಥದ ವೇಗದೊಂದಿಗೆ  ನಗರದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗಿ ಪರಿಸರ ನಾಶವಾಗುತ್ತಿರುವ ಬೆನ್ನಲ್ಲೇ ಮತ್ತೆ ಮರಗಳ ಮಾರಣಹೋಮ‌ ಮುಂದುವರೆದಿದೆ.‌

ಇದನ್ನೂ ಓದಿ: ಕರ್ನಾಟಕದಲ್ಲಿಂದು ದಾಖಲೆಯ 515 ಕೊರೋನಾ ಕೇಸ್​!; ಉಡುಪಿಯೊಂದರಲ್ಲೇ 204 ಸೋಂಕಿತರು ಪತ್ತೆ

ಪರಿಸರ‌ ಉಳಿಸುವ ಕೆಲಸವಾಗುವ ಬದಲು ಪರಿಸರ ನಾಶ ಎಷ್ಟು ಸರಿ ಅನ್ನೋದು ಪರಿಸರ ಪ್ರೇಮಿಗಳು ಯಕ್ಷಪ್ರಶ್ನೆಯಾಗಿದೆ. ಸರ್ಕಾರಿ ಜಾಗದಲ್ಲಿರುವ ಮರಗಳ ನಿರ್ನಾಮ ಮಾಡಿದ್ದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕಾಡು, ಮರ-ಗಿಡಗಳನ್ನು ಸಂರಕ್ಷಿಸಬೇಕಾದ ಇಲಾಖೆಯೇ ಮನಸಿಗೆ ಬಂದಂತೆ ಮರಗಳನ್ನು ಕತ್ತರಿಸಲು ಅನುಮತಿ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
Youtube Video
First published: June 5, 2020, 10:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories