• Home
  • »
  • News
  • »
  • district
  • »
  • ಹಂದಿ ಬೇಟೆಯಾಡಿದ ಹುಲಿ: ನಾಗರಹೊಳೆ ಸಫಾರಿಗೆ ಹೋದವರ ಕ್ಯಾಮಾರದಲ್ಲಿ ಸೆರೆಯಾದ ರೋಚಕ ದೃಶ್ಯಗಳು

ಹಂದಿ ಬೇಟೆಯಾಡಿದ ಹುಲಿ: ನಾಗರಹೊಳೆ ಸಫಾರಿಗೆ ಹೋದವರ ಕ್ಯಾಮಾರದಲ್ಲಿ ಸೆರೆಯಾದ ರೋಚಕ ದೃಶ್ಯಗಳು

ಹಂದಿ ಬೇಟೆಯಾಡಲು ಮುನ್ನುಗ್ಗುತ್ತಿರುವ ಹುಲಿ.

ಹಂದಿ ಬೇಟೆಯಾಡಲು ಮುನ್ನುಗ್ಗುತ್ತಿರುವ ಹುಲಿ.

ಸದ್ಯ ಬಂಡೀಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಸಫಾರಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಈ ಎರಡೂ ಕಾಡುಗಳು ಹುಲಿ ಸಂರಕ್ಷಣೆಗಾಗಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಖ್ಯಾತಿ ಗಳಿಸಿವೆ. ಈ ಕಾರಣಕ್ಕಾಗಿಯೇ ಇಲ್ಲಿನ ಸಫಾರಿಗೂ ಎಲ್ಲಿಲ್ಲದ ಬೇಡಿಕೆ ಇದೆ.

  • Share this:

ಮೈಸೂರು: ಬೇಸಿಗೆಯ ಬಿರು ಬಿಸಿಲಿಗೆ ಇಡೀ ರಾಜ್ಯ ಬಸವಳಿದಿದ್ದು, ಕಾಡುಗಳು ಕೂಡ ಒಣಗಿ ನಿಂತಿವೆ. ಆದರೆ ಮೈಸೂರು ಜಿಲ್ಲೆಯ ದಮ್ಮನಕಟ್ಟೆಯಲ್ಲಿ ಸಫಾರಿ ಮಾಡುವ ವನ್ಯ ಪ್ರಿಯರಿಗೆ ಬೇಸಿಗೆಯೇ ವರವಾಗಿ ಪರಿಣಮಿಸಿದ್ದು. ಇತ್ತೀಚೆಗೆ ಸಫಾರಿಗೆ ಹೋಗಿದ್ದವರಿಗೆ ಹುಲಿ ಬೇಟೆಯಾಡುವ ಅಪರೂಪದ ದೃಶ್ಯ ಸೆರೆ ಸಿಕ್ಕಿದೆ. ದಟ್ಟಾರಣ್ಯದಲ್ಲಿ ಹುಲಿಯೊಂದು ಹಂದಿಯನ್ನು ಬೇಟೆಯಾಡುವ ದೃಶ್ಯಗಳು ಮೈಸೂರಿನ ಇಬ್ಬರು ಛಾಯಗ್ರಾಹಕರ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಆ ರಣರೋಚಕ ಆಟ್ಯಾಕ್‌ ಪೋಟೋಗಳು ಇದೀಗ ಎಲ್ಲೆಡೆ ವೈರಲ್ ಆಗಿವೆ.


ಹೌದು, ಹೊಂಚು ಹಾಕಿ ಕುಳಿತಿದ್ದ ಹುಲಿರಾಯ ನೀರು ಕುಡಿಯಲು ಬರುತ್ತಿದ್ದ ಹಂದಿಯ ಮೇಲೆ ಅಟ್ಯಾಕ್ ಮಾಡಿದೆ. ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತಿರುವ ಕಾಡು ಹಂದಿ, ಕೆರೆ ಬಳಿ ಧಿಕ್ಕಪಾಲಾಗಿ ಓಡಿಹೋಗಿದೆ.  ಈ ಅದ್ಭುತ, ರೋಚಕ ಚಿತ್ರಗಳು ಸೆರೆ ಸಿಕ್ಕಿದ್ದು ನಾಗರಹೊಳೆ ಅಭಯಾರಣ್ಯದಲ್ಲಿ, ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಮಾಡುವ ಬಹುತೇಕ ಎಲ್ಲರಿಗೂ ಟೈಗರ್ ಕಣ್ಣಿಗೆ ಬಿಳೋದು ಸಹಜವಾಗಿದೆ. ಆದರೆ ಹುಲಿ ವನ್ಯಜೀವಿಗಳನ್ನ ಹಂಟ್ ಮಾಡುವ ದೃಶ್ಯ ಸಿಗೋದು ಅಪರೂಪ. ಈ ಅಪರೂಪದ ದೃಶ್ಯಗಳನ್ನ ವನ್ಯಜೀವಿ ಛಾಯಾಗ್ರಾಹಕರು ಸೆರೆ ಹಿಡಿದಿದ್ದು, ಇದೊಂದು ಲೈಫ್ ಟೈಂ ಅಚೀವ್ಮೆಂಟ್ ಅಂತಿದ್ದಾರೆ.


ಹಂದಿಯನ್ನ ಭೇಟೆಯಾಡಲು ಸಜ್ಜಾದ ಹುಲಿ, ತನ್ನ ಆಹಾರಕ್ಕಾಗಿ ದಾಳಿ ಮಾಡಿದೆ. ಅಷ್ಟೆ ಬುದ್ದಿಚಾತುರ್ಯದಿಂದ ಸ್ಥಳದಿಂದ ಓಡಿಹೋಗಿ ಹಂದಿ ತನ್ನ ಪ್ರಾಣ ಉಳಿಸಿಕೊಂಡಿದೆ. ನಾಗರಹೊಳೆ ಅಭಯಾರಣ್ಯದಲ್ಲಿ ನಡೆದ ಈ ರೋಚಕ ಕ್ಷಣಗಳ ದೃಶ್ಯಗಳು, ಪತ್ರಿಕಾ ಛಾಯಾಗ್ರಾಹಕರಾದ ಅನುರಾಜ್ ಬಸವರಾಜ್, ಉದಯಕುಮಾರ್ ಕ್ಯಾಮಾರದಲ್ಲಿ ಸೆರೆಯಾಗಿವೆ. 2 ನಿಮಿಷಗಳ ಕಾಲ ನಡೆದ ರೋಚಕ ಹಣಾಹಣಿಯನ್ನ ತಮ್ಮ ಕ್ಯಾಮಾರಗಳಲ್ಲಿ ಅತ್ಯಾಕರ್ಷಕವಾಗಿ ಸೆರೆ ಹಿಡಿದಿದ್ದಾರೆ. ಕಾಡು ಹಂದಿಯನ್ನು ಅಟ್ಟಿಸಿಕೊಂಡು ಹೋದ ಹುಲಿಗೆ ಕೊನೆಗೋ ನಿರಾಸೆಯಾದ ಪೋಟೋಗಳನ್ನು ತೆಗೆದಿದ್ದಾರೆ. ಛಾಯಾಗ್ರಾಹಕರ ಈ ಸಾಹಸಮಯ ಪೋಟೋಗಳಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.


ಹಂದಿ ಬೇಟೆಯಾಡಲು ಮುನ್ನುಗ್ಗುತ್ತಿರುವ ಹುಲಿ.


ಹಂದಿ ಬೇಟೆಯಾಡಲು ಮುನ್ನುಗ್ಗುತ್ತಿರುವ ಹುಲಿ.


ಹಂದಿ ಬೇಟೆಯಾಡಲು ಮುನ್ನುಗ್ಗುತ್ತಿರುವ ಹುಲಿ.


ಹಂದಿ ಬೇಟೆಯಾಡಲು ಮುನ್ನುಗ್ಗುತ್ತಿರುವ ಹುಲಿ.


ಹಂದಿ ಬೇಟೆಯಾಡಲು ಮುನ್ನುಗ್ಗುತ್ತಿರುವ ಹುಲಿ.


ಹಂದಿ ಬೇಟೆಯಾಡಲು ಮುನ್ನುಗ್ಗುತ್ತಿರುವ ಹುಲಿ.


ಹಂದಿ ಬೇಟೆಯಾಡಲು ಮುನ್ನುಗ್ಗುತ್ತಿರುವ ಹುಲಿ.


ಇದನ್ನು ಓದಿ: Siddaramaiah: ಸಿಡಿ ಯುವತಿಯ ಪ್ರಾಣಕ್ಕೆ ಅಪಾಯವಾದರೆ ಸಿಎಂ ಯಡಿಯೂರಪ್ಪ, ಬಿಜೆಪಿ ಸರ್ಕಾರವೇ ಹೊಣೆ; ಸಿದ್ದರಾಮಯ್ಯ ಎಚ್ಚರಿಕೆ


ಬೇಸಿಗೆಯ ಕಾರಣಕ್ಕಾಗಿ ಇಡೀ ಕಾಡು ಒಣಗಿ ನಿಂತಿದೆ. ಮರಗಳು ಎಲೆ ಉದುರಿಸಿಕೊಂಡು ಬೋಳಾಗಿವೆ. ಆದ್ರೆ ಕುಡಿಯುವ ನೀರಿಗೆ ತತ್ವಾರ ಎದುರಾಗಿಲ್ಲ. ಅರಣ್ಯ ಇಲಾಖೆ ಸೋಲಾರ್ ಪಂಪ್​ಗಳ ಮೂಲಕ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿದೆ. ಒಣಗಿದ ಕಾಡು, ನೀರಿನ ಸ್ಥಳಗಳಲ್ಲಿ ಹುಲಿಗಳು ವಿಹಂಗಮವಾಗಿ ಸಂಚರಿಸುವ ದೃಶ್ಯಗಳು ಯಥೇಚ್ಛವಾಗಿ ಸಿಗುತ್ತಿವೆ. ಈ ವೇಳೆ ಬೇಟೆಯಾಡುವ ಸಂದರ್ಭ ಕೂಡ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಶೇಷ ಅಂದ್ರೆ‌ ಇತ್ತೀಚೆಗೆ ಸಫಾರಿಯಲ್ಲಿ ಒಟ್ಟೊಟ್ಟಿಗೆ 6 ಹುಲಿ ಕಾಣಸಿಕ್ಕಿದ್ದು ಪ್ರಾಣಿ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಅಲ್ಲದೆ ಈ ಚಿತ್ರಕ್ಕಾಗಿ ನಾವು ಸಾಕಷ್ಟು ಸಮಯ ಕಾದು ಕುಳಿತಿದ್ವು. ನಮಗು ಹುಲಿ ಸೇರಿ ಆನೆ, ಕಾಡಂದಿ, ಕಾಡೆಮ್ಮೆ ಸಹ ಸೈಟ್ ಆಗಿದೆ ಅಂತಾರೆ ಹಿರಿಯ ಛಾಯಗ್ರಾಹಕರು.


ಸದ್ಯ ಬಂಡೀಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಸಫಾರಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಈ ಎರಡೂ ಕಾಡುಗಳು ಹುಲಿ ಸಂರಕ್ಷಣೆಗಾಗಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಖ್ಯಾತಿ ಗಳಿಸಿವೆ. ಈ ಕಾರಣಕ್ಕಾಗಿಯೇ ಇಲ್ಲಿನ ಸಫಾರಿಗೂ ಎಲ್ಲಿಲ್ಲದ ಬೇಡಿಕೆ. ಹುಲಿ ಸಂಚಾರ ನೋಡಿ ಬರುತ್ತಿದ್ದ ವನ್ಯಜೀವಿ ಪ್ರಿಯರಿಗೆ ಹುಲಿ ದಾಳಿ ಮಾಡುತ್ತಿರುವ ರೋಚಕ ದೃಶ್ಯ ಸೆರೆ ಸಿಕ್ಕಿರುವುದು ಸಹಜವಾಗಿಯೇ ಖುಷಿ ಹೆಚ್ಚಿಸಿರೋದಂತು ಸುಳ್ಳಲ್ಲ.

Published by:HR Ramesh
First published: