ಕಾರವಾರ: ಇಂದಿನ ದಿನದಲ್ಲಿ ಕಾನೂನಿನ ಅರಿವಿದ್ದರೂ ಕೂಡ ವರದಕ್ಷಿಣೆ ಕಿರುಕುಳ ನಡೆಯುತ್ತಲೇ ಇದೆ. ಪತಿ ಮತ್ತು ನಾದನಿಯ ಚಿತ್ರಹಿಂಸೆಯಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಮಹಿಳೆಯೋರ್ವಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ದೌರ್ಜನ್ಯ ತಾಳಲಾರದೇ ಮನೆಯಿಂದ ಹೊರ ಬಂದ ಮಹಿಳೆ ಈಗ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರ ಹಿಂಸೆ ಕೊಟ್ಟ ಗಂಡ-ನಾದಿನಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೋಲಿಸರ ವಶದಲ್ಲಿ ಇದ್ದಾರೆ.
ಏನಿದು ಘಟನೆ?
ಭಟ್ಕಳ ತಾಲೂಕಿನ ಕುಂಟವಾಣಿಯ ಸುಧಾ ಶೆಟ್ಟಿ ಸತತ ಎರಡು ವರ್ಷಗಳ ಕಾಲ ಚಿತ್ರಹಿಂಸೆ ಅನುಭವಿಸಿದ್ದಾರೆ. ಆರು ವರ್ಷದ ಹಿಂದೆ ಸುಧಾರನ್ನ ಕುಂದಾಪುರ ತಾಲೂಕಿನ ನಾವುಂದದ ಬಡಾಕೆರೆಯ ನರಸಿಂಹ ಗಾಣಿಗ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮೂರು ವರ್ಷದ ತನಕ ಪತಿಯ ಮನೆಯಲ್ಲಿ ವಾಸವಾಗಿದ್ದ ಸುಧಾ ಕುಟುಂಬದೊಂದಿಗೆ ಚೆನ್ನಾಗಿಯೇ ಇದ್ದಳು. ಮೂರು ವರ್ಷದ ನಂತರ ಪತಿ ನರಸಿಂಹ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ. ಕೊಟ್ಟಿಗೆಪಾಳ್ಯದಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದ.
ಹೀಗಿರುವಾಗ ಗಂಡನ ತಂಗಿ ನೇತ್ರಾವತಿ ಸುಧಾಳಿಗೆ ಚಿತ್ರೆಹಿಂಸೆ ನೀಡಲು ಪ್ರಾರಂಭಿಸಿದಳು. ಗಂಡ ಹೋಟೆಲ್ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಖಾದ ಚಮಚದಿಂದ ಮೈಮೇಲೆ ಸುಡುವುದು, ಹಲ್ಲೆ ಮಾಡುವುದು ಮಾಡುತ್ತಿದ್ದಳಂತೆ. ಗಂಡನಿಗೆ ವಿಷಯ ಹೇಳಿದ್ರೆ ಗಂಡನೂ ಕೂಡ ಮಾನಸಿಕವಾಗಿ ಚಿಂತ್ರೆ ಹಿಂಸೆ ನೀಡುತ್ತಿದ್ದನಂತೆ. ಅಗಸ್ಟ್ 10ರಂದು ಸುಧಾ ತನಗಾದ ಹಿಂಸೆ ತಾಳಲಾರದೆ ಮನೆಯಿಂದ ಹೊರ ಬಂದಿದ್ದಾಳೆ. ತನ್ನ ಮಗಳಿಗೆ ಹುಚ್ಚಿಯನ್ನಾಗಿ ಮಾಡಿ ಕೊಲೆ ಮಾಡಲು ಸಂಚು ನಡೆಸಿದ್ದರು ಎಂದು ಸುಧಾ ಅವರ ತಾಯಿ ಆರೋಪಿಸಿದ್ದಾರೆ.
ಇದನ್ನೂ ಓದಿ: Bangalore Crime: ಹೆಂಡತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕೊಲೆಯಾದನಾ ಗಂಡ?
ಹಲ್ಲೆಗೊಳಗಾಗಿ ರಸ್ತೆಯಲ್ಲಿ ಬಿದ್ದಿದ್ದ ಮಹಿಳೆ ಕಂಡು ಸ್ಥಳೀಯರೊಬ್ಬರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆಗ ಕಾಮಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸುಧಾಳ ತಾಯಿ ಮನೆಯವರಿಗೆ ಕಾಲ್ ಮಾಡಿಸಿ ಕರೆಸಿಕೊಂಡಿದ್ದಾರೆ. ಹಲ್ಲೆಗೊಳಗಾಗಿದ್ದ ಪತ್ನಿಯನ್ನು ಪತಿ ನರಸಿಂಹ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಮನೆಯಲ್ಲಿ ಚಿಕ್ಕಮಕ್ಕಳಿದ್ದಾರೆಂದು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಹೋಗಿದ್ದ.
ಆದ್ರೆ ಸುಧಾಳ ತಾಯಿ ಮನೆಯವರು ಬೆಂಗಳೂರಿಗೆ ತೆರಳಿ ಸುಧಾಳ ಪರಿಸ್ಥಿತಿ ಕಂಡು ಹೌಹಾರಿದ್ದಾರೆ. ತಕ್ಷಣ ಆಕೆಯನ್ನ ಭಟ್ಕಳಕ್ಕೆ ಕರೆತಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಧಾ ಶೆಟ್ಟಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಮ್ಮನಿಗೆ ಚಿತ್ರಹಿಂಸೆ ನೀಡಿರೋದನ್ನ ನೋಡಿದ ಮಕ್ಕಳು ಕೂಡ ಶಾಖ್ ಆಗಿದ್ದಾರೆ. ನಾಲ್ಕು ವರ್ಷದ ಓರ್ವ ಮಗು ಮಾನಸಿಕವಾಗಿ ನೊಂದಿದೆ. ಹೀಗಾಗಿ ನ್ಯಾಯ ಕೊಡಿಸಿ ಎಂದು ಕುಟುಂಬದವರು ಮನವಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಸುಧಾಳ ಪತಿ ಹಾಗೂ ನಾದಿನಿ ನೇತ್ರಾವತಿ ವಿರುದ್ದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ. ದೌರ್ಜನ್ಯಕ್ಕೊಳಗಾದ ಸುಧಾ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮುಂದೆ ಆಕೆಗೆ ಹೆಚ್ಚಿನ ಚಿಕಿತ್ಸೆ ನೀಡಬೇಕಾಗಿದ್ದು, ಪತಿ ಮತ್ತು ಆತನ ಸಹೋದರಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ