ಅನೈತಿಕ ಸಂಬಂಧಕ್ಕೆ ಅಡ್ಡಿಯಾಯ್ತೆಂದು ಕರುಳ ಕುಡಿಗೇ ಹಿಂಸಿಸುತ್ತಿದ್ದ ಸೈಕೋ ಅಮ್ಮ ಅರೆಸ್ಟ್

Illicit Relationship- ಗಂಡನಿಂದ ಬೇರೆಯಾಗಿ ತವರಿನಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬಳು ತಾನೇ ಹೆತ್ತ ಮಗುವಿಗೆ ನಿತ್ಯವೂ ಹಿಂಸೆ ಕೊಡುತ್ತಿದ್ದ ಘಟನೆ ವರದಿಯಾಗಿದೆ. ಈಕೆಯನ್ನ ಪೊಲೀಸರು ಬಂಧಿಸಿದ್ಧಾರೆ. ಆದರೆ, ಈಕೆಯ ವರ್ತನೆಗೆ ಕಾರಣವಾದರೂ ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನೇಕಲ್: ಆಕೆ ತನ್ನದೇ ಕರುಳಿನ ಕುಡಿಗೆ ಟಾರ್ಚರ್ ನೀಡುತ್ತಿದ್ದ ವಿಕೃತ ತಾಯಿ. ಮಗುವಿನ ಮೇಲೆ ತಾನು ನಡೆಸುತ್ತಿದ್ದ ಅಮಾನುಷ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದಳು. ಬಳಿಕ ಆ ದೃಶ್ಯಗಳನ್ನು ಕಂಡು ವಿಕೃತ ಸಂತೋಷ ಪಡುತ್ತಿದ್ದಳು. ಈ ವಿಕೃತ ಮನಸಿನ ತಾಯಿ ಹೆಸರು ತುಳಸಿ.  ಆಂಧ್ರ ಪ್ರದೇಶ ಮೂಲದ ಈಕೆಯನ್ನು ತಮಿಳುನಾಡಿನ ವಿಲುಪ್ಪುರಂ ಜಿಲ್ಲೆಯ ಮೊಟ್ಟು ಗ್ರಾಮದ ವಾಸಿ ವಡಿವಳಗನ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ ಎರಡು ವರ್ಷದ ಪ್ರದೀಪ್ ಎಂಬ ಮಗು ಸಹ ಇದ್ದು, ಕಳೆದೊಂದು ವರ್ಷದಿಂದ ಇವರ ಸಂಸಾರದಲ್ಲಿ ಬಿರುಕು ಮೂಡಿತ್ತು. ಇಬ್ಬರ ನಡುವೆ ಹೊಂದಾಣಿಕೆಯಾಗದೆ ಫೆಬ್ರವರಿ ತಿಂಗಳಲ್ಲಿ ಗಂಡ ಹೆಂಡತಿ ಬೇರೆ ಬೇರೆಯಾಗಿದ್ದಾರೆ. ತುಳಸಿ ಮಗುವಿನೊಂದಿಗೆ ತವರು ಮನೆ ಆಂದ್ರ ಪ್ರದೇಶಕ್ಕೆ ತೆರಳಿರುತ್ತಾಳೆ. ಆದ್ರೆ ಇತ್ತೀಚೆಗೆ ಮಗುವಿಗೆ ಪದೇ ಪದೇ ಆನಾರೋಗ್ಯ ಕಾಡುತ್ತಿರುತ್ತದೆ. ವಿಚಾರ ತಿಳಿದು ಮಗುವಿನ ಆರೋಗ್ಯ ವಿಚಾರಿಸಲು ಹೋದ ತಂದೆ ವಡಿವಳಗನ್​ಗೆ ದೊಡ್ಡ ಶಾಕ್ ಕಾದಿರುತ್ತದೆ.

ಮಗುವನ್ನು ನೋಡಲು ಹೋದ ವಡಿವಳಗನ್​ಗೆ ಅಕ್ಕಪಕ್ಕದ ಮನೆಯವರು ತಾಯಿಯೇ ಮಗುವನ್ನು ನಿರಂತರವಾಗಿ ಹಲ್ಲೆ ನಡೆಸುತ್ತಿರುವ ಬಗ್ಗೆ ತಿಳಿಸಿದ್ದಾರೆ.‌ ಅನುಮಾನಗೊಂಡು ಪತ್ನಿ ತುಳಸಿ ಮೊಬೈಲ್ ಪರಿಶೀಲನೆ ನಡೆಸಿದಾಗ ಮಗುವಿಗೆ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿರುವ ವಿಡಿಯೋಗಳು ಕಂಡು ಒಂದು ಕ್ಷಣ ದಂಗಾಗಿದ್ದಾನೆ. ಮಗುವನ್ನು ಸಿಕ್ಕ ಸಿಕ್ಕ ವಸ್ತುಗಳಿಂದ ಥಳಿಸಿ ಮೊಬೈಲ್‌ನಲ್ಲಿ ಸೆರೆ ಹಿಡಿದು ವಿಕೃತಿ ಮೆರೆದಿರುವ ಪತ್ನಿ ವಿರುದ್ಧ ಸತ್ಯ ಮಂಗಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಸತ್ಯಮಂಗಲಂ ಪೊಲೀಸರು ಪಾಪಿ ತಾಯಿ ತುಳಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಹಿರಂಗವಾಗಿದೆ.

ಇದನ್ನೂ ಓದಿ: Petrol Price: ಪೆಟ್ರೋಲ್ ದರ ಚಿಕ್ಕಮಗಳೂರಲ್ಲಿ ಒಂದೂವರೆ ರೂ ಇಳಿಕೆ; ಚಿತ್ರದುರ್ಗದಲ್ಲಿ ಒಂದು ರೂಗಿಂತ ಏರಿಕೆ

ಪ್ರೇಮ್ ಕುಮಾರ್ ಎಂಬಾತನ ಜೊತೆ ಕಳೆದ ಹಲವು ವರ್ಷಗಳಿಂದ ಅಕ್ರಮ ಸಂಬಂಧವಿಟ್ಟುಕೊಂಡಿದ್ದು, ಆತನ ಜೊತೆ ವಿಡಿಯೋ ಕಾಲ್ ಮಾಡುವ ವೇಳೆ ಮಗು ಅಡ್ಡಿಪಡಿಸುತ್ತಿತ್ತು. ಹಾಗಾಗಿ ಕೋಪಕ್ಕೆ ಮಗುವಿನ ಮೇಲೆ ಹಲ್ಲೆ ಮಾಡಿ, ಅದನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿ, ಬಳಿಕ ಅದನ್ನು ನೋಡುತ್ತಾ ಆಕ್ರೋಶ ತೀರಿಸಿಕೊಳ್ಳುತ್ತಿರುವುದಾಗಿ ಪೊಲೀಸರ ತನಿಖೆ ವೇಳೆ ಆರೋಪಿ ತುಳಸಿ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಸತ್ಯಮಂಗಲಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಒಟ್ನಲ್ಲಿ ಮಕ್ಕಳು ತಾಯಿಯ ಬಳಿ ಇದ್ದರೆ ಸುರಕ್ಷಿತವಾಗಿ ಇರ್ತಾರೆ ಎಂಬ ಮಾತಿದೆ. ಆದ್ರೆ ಈ ಮಹಾತಾಯಿ ತನ್ನ ತೆವಲಿಗೆ ಮಗು ಅಡ್ಡಪಡಿಸುತ್ತಿದೆ ಎಂಬ ಕಾರಣಕ್ಕೆ ಹೀಗೆ ಚಿತ್ರಹಿಂಸೆ ನೀಡಿದ್ದು ಮಾತ್ರ ಹೆಣ್ಣು ಕುಲಕ್ಕೆ ಅವಮಾನ. ಸದ್ಯ ತಮಿಳುನಾಡು ಮಕ್ಕಳ ಕಲ್ಯಾಣ ಇಲಾಖೆ ಮಗುವನ್ನು ರಕ್ಷಣೆ ಮಾಡಿ ತಂದೆಯ ಸುಪರ್ದಿಗೆ ನೀಡಿದೆ.

ಇದನ್ನೂ ಓದಿ: Karnataka Weather Today: ಕರ್ನಾಟಕದಲ್ಲಿ ಹೆಚ್ಚಾದ ಮಳೆಯ ಅಬ್ಬರ; ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸೆ.2ರವರೆಗೂ ಭಾರೀ ಮಳೆ

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಆದೂರು ಚಂದ್ರು
Published by:Vijayasarthy SN
First published: