ಬೀದಿನಾಯಿಗಳೆಂದರೆ ಎಲ್ಲಿಲ್ಲದ ಅಕ್ಕರೆ; ಶ್ವಾನಪ್ರಿಯೆ ಪೂರ್ಣಿಮಾರ ಅರ್ಥಪೂರ್ಣ ಕಾರ್ಯಕ್ಕೊಂದು ಸಲಾಂ

ಪ್ರಾರಂಭದಲ್ಲಿ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ಒಂದು ನಾಯಿಯನ್ನು ಮನೆಗೆ ತಂದು ಪಾಲನೆ ಶುರುವಿಟ್ಟುಕೊಳ್ಳುವ ಪೂರ್ಣಿಮಾ ಬಳಿಕ ಸುಮಾರು 30 ಕ್ಕೂ ಹೆಚ್ಚು ಬೀದಿ ಬದಿ ನಾಯಿಗಳನ್ನು ರಕ್ಷಣೆ ಮಾಡಿ ಆಶ್ರಯ ನೀಡಿ ಪೋಷಣೆ ಮಾಡುತ್ತಿದ್ದಾರೆ.  

ಶ್ವಾನಪ್ರಿಯೆ ಪೂರ್ಣಿಮಾ

ಶ್ವಾನಪ್ರಿಯೆ ಪೂರ್ಣಿಮಾ

 • Share this:
  ಆನೇಕಲ್ : ಚಿಕ್ಕಂದಿನಿಂದಲೂ ಪ್ರಾಣಿಗಳ ಎಂದರೆ ಎಲ್ಲಿಲ್ಲದ ಪ್ರೀತಿ. ಅದೊಂದು ದಿನ ಬೀದಿ ನಾಯಿಯೊಂದು ಅಪಘಾತವಾಗಿ ರಸ್ತೆಯಲ್ಲಿ ನರಕಯಾತನೆ ಪಡುತ್ತಿರುತ್ತದೆ. ಈಕೆ ಅದನ್ನು ರಕ್ಷಿಸಿ ಚಿಕಿತ್ಸೆ ಕೊಡಿಸುತ್ತಾಳೆ. ಗುಣವಾದ ಬಳಿಕ ವಾಪಸ್ ಬಿಟ್ಟಾಗ ಅದರ ತಾಯಿಯ ನಾಯಿ ಮರಿಯನ್ನು ಸೇರಿಕೊಳ್ಳುವುದಿಲ್ಲ. ಅಂದಿನಿಂದ ಅಪಘಾತವಾದ ಮತ್ತು ಆನಾರೋಗ್ಯ ಪೀಡಿತ ನಾಯಿಗಳಿಗೆ ಅಪತ್ಬಾಂಧವಳಾಗಿ ಆಕೆ ಪಾಲನೆ ಪೋಷಣೆ ಮಾಡುತ್ತಿದ್ದಾಳೆ. ಬೀದಿ ಬದಿ ಅನಾಥವಾಗಿ, ಅಪಘಾತವಾಗಿ, ಆನಾರೋಗ್ಯ ಪೀಡಿತವಾಗಿರುವ ನಾಯಿಗಳನ್ನು ಮಕ್ಕಳಂತೆ ಪಾಲನೆ ಪೋಷಣೆ ಮಾಡುತ್ತಿರುವ ಈಕೆಯ ಹೆಸರು ಪೂರ್ಣಿಮಾ. ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ನಿವಾಸಿಯಾದ ಈಕೆ ಕಳೆದ ಎಂಟು ವರ್ಷಗಳಿಂದ ಆನಾರೋಗ್ಯ ಪೀಡಿತ ಮತ್ತು ಅಪಘಾತಕ್ಕೊಳಗಾದ ನೂರಾರು ಅನಾಥ ನಾಯಿಗಳನ್ನು ರಕ್ಷಣೆ ಮಾಡುವುದರ ಜೊತೆಗೆ ಪಾಲನೆ ಪೋಷಣೆ ಮಾಡಿ ಮಕ್ಕಳಂತೆ ಸಲಹುತ್ತಿದ್ದಾಳೆ.

  ಪ್ರಾರಂಭದಲ್ಲಿ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ಒಂದು ನಾಯಿಯನ್ನು ಮನೆಗೆ ತಂದು ಪಾಲನೆ ಶುರುವಿಟ್ಟುಕೊಳ್ಳುವ ಪೂರ್ಣಿಮಾ ಬಳಿಕ ಸುಮಾರು 30 ಕ್ಕೂ ಹೆಚ್ಚು ಬೀದಿ ಬದಿ ನಾಯಿಗಳನ್ನು ರಕ್ಷಣೆ ಮಾಡಿ ಆಶ್ರಯ ನೀಡಿ ಪೋಷಣೆ ಮಾಡುತ್ತಿದ್ದಾರೆ.  ಇನ್ನೂ ಗೃಹಿಣಿಯಾಗಿರುವ ಪೂರ್ಣಿಮಾ ಪತಿ ಆಶ್ರಯದಲ್ಲಿ ಜೀವನ ನಡೆಸುತ್ತಿದ್ದು, ಯಾವುದೇ ಸ್ವಂತ ಆದಾಯವಿಲ್ಲ. ಆದರೂ ಪತಿ ನೀಡುವ ಹಣದಲ್ಲಿಯೇ ಕೂಡಿಟ್ಟು ಬೀದಿ ನಾಯಿಗಳ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಬೀದಿ ನಾಯಿಗಳ ಪಾಲನೆಗಾಗಿ ಮನೆಯೊಂದನ್ನು ಎರಡೂವರೆ ಸಾವಿರ ರೂಪಾಯಿಗೆ ಬಾಡಿಗೆ ಪಡೆದಿದ್ದು, ಸದ್ಯ ಅಲ್ಲಿ ಹತ್ತು ನಾಯಿಗಳ ಪೋಷಣೆ ಮಾಡಲಾಗುತ್ತಿದೆ. ಜೊತೆಗೆ ಅತ್ತಿಬೆಲೆ, ಚಂದಾಪುರ ಸೇರಿದಂತೆ ಬೇರೆ ಬೇರೆ ಕಡೆ ಬೀದಿ ನಾಯಿಗಳಿಗೆ ಆಹಾರ ನೀಡಿತ್ತಿದ್ದು, ತಿಂಗಳಿಗೆ ಏಳರಿಂದ ಎಂಟು ಸಾವಿರ ಖರ್ಚಾಗುತ್ತಿದೆ. ನಾನಂತು ದುಡಿಯುತ್ತಿಲ್ಲ ಪತಿ ಬಾಡಿಗೆಗೆ ಕಾರು ಓಡಿಸುತ್ತಿದ್ದು, ಅವರ ದುಡಿಮೆಯಲ್ಲಿ ಮನೆ ದಿನಸಿಗೆ, ಬಟ್ಟೆಗಳಿಗೆ, ಮೊಬೈಲ್ ಕರೆನ್ಸಿ ಹೀಗೆ ನೀಡಿದ ಹಣದಲ್ಲಿ ಉಳಿಸಿ ಬೀದಿ ನಾಯಿಗಳನ್ನು ಸಾಕಾಣಿಕೆ ಮಾಡುತ್ತಿದ್ದೆನೆ ಎಂದು ಪೂರ್ಣಿಮಾ ತಿಳಿಸಿದ್ದಾರೆ.

  ಅಂದಹಾಗೆ ಬಡತನವಿದ್ದರು ಬೀದಿ ನಾಯಿಗಳನ್ನು ಮಕ್ಕಳಂತೆ ಪ್ರೀತಿ ಮಾಡುವ ಪೂರ್ಣಿಮಾರವರಿಗೆ ಕೆಲವೊಮ್ಮೆ ಹಣವಿಲ್ಲದೆ ನಾಯಿಗಳಿಗೆ ಆಹಾರ ನೀಡಲಾಗಿದೆ ಬೇಸರಪಟ್ಟುಕೊಂಡು ನಾಯಿಗಳನ್ನು ಕೊಂದು ತಾನು ಸಾಯಬೇಕು ಎಂದು ಎನಿಸಿದ್ದು, ಇದೆಯಂತೆ. ಆದರೆ ನಾಯಿಗಳ ಪ್ರೀತಿ ಆಕೆಯ ಮನಸ್ಸನ್ನು ಬದಲಿಸಿದ್ದು, ಇಂದಿಗೂ ಬೀದಿ ನಾಯಿಗಳ ಪೋಷಣೆ ನಿಲ್ಲಿಸಿಲ್ಲ. ಅದ್ರಲ್ಲು ಲಾಕ್ ಡೌನ್ ನಿಂದಾಗಿ ಮನೆ ಸಂಸಾರ ನಡೆಸುವುದೇ ಕಷ್ಟವಾಗಿದೆ. ಎರಡು ತಿಂಗಳ ಮನೆ ಬಾಡಿಗೆ ಕಟ್ಟಿಲ್ಲ‌. ಜೊತೆಗೆ ನಿತ್ಯ ಓಡಾಟ ಮಾಡಿ ನಾಯಿಗಳ ಪೋಷಣೆ ಮಾಡುವುದು ಕಷ್ಟವಾಗಿದೆ. ಆದರೂ ನಾಯಿಗಳ ಪಾಲನೆ ಮಾತ್ರ ನಿಲ್ಲಿಸಿಲ್ಲ ಎನ್ನುವ ಪೂರ್ಣಿಮಾ ಹೆವೆನ್ ರೆಸ್ಕ್ಯೂ ಸೆಂಟರ್ ಸಂಸ್ಥೆಯವರು ಒಮ್ಮೆ ಮಾತ್ರ ನಾಯಿಗಳಿಗೆ ವ್ಯಾಕ್ಸಿನ್ ಹಾಕಿಸಿಕೊಟ್ಟಿದ್ದಾರೆ. ಉಳಿದಂತೆ ಇಲ್ಲಿಯವರೆಗೆ ಯಾವುದೇ ದಾನಿಗಳಿಂದ ನೆರವು ಪಡೆದಿಲ್ಲ.

  ಬೀದಿ ನಾಯಿಗಳ ಪೋಷಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡರೆ ದಾನಿಗಳಿಂದ ನೆರವು ಸಿಗುತ್ತದೆ ಎನ್ನುತ್ತಾರೆ. ಆದ್ರೆ ಇಲ್ಲಿಯವರೆಗೆ ಎಲೆ ಮರೆ ಕಾಯಿ ರೀತಿಯಲ್ಲಿ ಬೀದಿ ನಾಯಿಗಳ ಪಾಲನೆ ಮಾಡುತ್ತಿರುವ ಇವರು ಯಾವುದಾದರೂ ಸ್ವಯಂ ಸೇವಾ ಸಂಸ್ಥೆಗಳು ಅಥವಾ ಟೀಮ್ ಮುಂದೆ ಬಂದರೆ ಅವರ ಜೊತೆ ಸೇರಿ ಬೀದಿ ನಾಯಿಗಳ ಪಾಲನೆ ಮುಂದುವರಿಸುತ್ತೆನೆ. ಇಲ್ಲವೇ ಶೆಲ್ಟರ್ ನಿರ್ಮಿಸಿ ಆರ್ಥಿಕ ನೇರವು ನೀಡಿದರೆ ಟೀಮ್ ಮಾಡಿಕೊಂಡು ಮತ್ತಷ್ಟು ಸಂಂಕಷ್ಟದಲ್ಲಿರುವ ಬೀದಿ ನಾಯಿಗಳಿಗೆ ಅಸರೆಯಾಗುವುದಾಗಿ ಪೂರ್ಣಿಮಾ ತಿಳಿಸಿದ್ದಾರೆ.  ಒಟ್ನಲ್ಲಿ ಬಡತನವಿದ್ದರು, ಓದು ಮುಂದುವರಿಸಲು ಹಣವಿಲ್ಲದಿದ್ದರು ಈಕೆ ಅನಾಥ ಬೀದಿ ನಾಯಿಗಳಿಗೆ ತಾಯಿಯಾಗಿ ಅಪತ್ಬಾಂಧವಳಾಗಿ ತನ್ನ ಮಕ್ಕಳಂತೆ ಪೊರೆಯುತ್ತಿದ್ದಾಳೆ.‌

  ಸದ್ಯ ಲಾಕ್ ಡೌನ್ ನಿಂದಾಗಿ ಆಕೆಯ ಕುಟುಂಬವೇ ಸಂಕಷ್ಟದಲ್ಲಿದೆ. ಆದರೂ ಆಕೆಯ ಶ್ವಾನ ಪ್ರೀತಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಬೀದಿ ನಾಯಿಗಳ ಅಪತ್ಬಾಂಧವಳಾದ ಈಕೆಗೆ ನೇರವು ನೀಡ ಬಯಸುವವರು 8123329934 ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ನೆರವು ನೀಡಬಹುದಾಗಿದೆ.

  ವರದಿ : ಆದೂರು ಚಂದ್ರು
  Published by:Kavya V
  First published: