HOME » NEWS » District » WOMAN DELIVERED BABY UNDER TORCH LIGHT PUBLIC ASKING HEALTH MINISTER SUDHAKAR TO LOOK INTO THIS INCIDENT SAKLB HK

ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ಹೆರಿಗೆ ; ಆರೋಗ್ಯ ಸಚಿವ ಸುಧಾಕರ್ ಅವರೇ ಇತ್ತ ಕಣ್ಬಿಟ್ಟು ನೋಡಿ ಎನ್ನುತ್ತಿರುವ ಜನ....

ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 2 ಗಂಟೆವರೆಗೂ ವಿದ್ಯುತ್ ಬಂದಿಲ್ಲ. ಕೊನೆಗೆ ಕತ್ತಲಲ್ಲಿಲೇ ಮೊಬೈಲ್‌ ಟಾರ್ಚ್ ಮೂಲಕ ನರ್ಸ್ ಮಹಿಳೆಯ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ಸಮಯದಲ್ಲಿ ವಿದ್ಯುತ್ ಕೈ ಕೊಟ್ಟರೆ ಪರ್ಯಾಯ ವ್ಯೆವಸ್ಥೆ ಇಲ್ಲದೆ ನರ್ಸ್ ಹಾಗೂ ಸಂಬಂಧಿಕರು ಪರದಾಡುಂತಾಗಿದೆ.

news18-kannada
Updated:November 11, 2020, 4:23 PM IST
ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ಹೆರಿಗೆ ; ಆರೋಗ್ಯ ಸಚಿವ ಸುಧಾಕರ್ ಅವರೇ ಇತ್ತ ಕಣ್ಬಿಟ್ಟು ನೋಡಿ ಎನ್ನುತ್ತಿರುವ ಜನ....
ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ
  • Share this:
ಕಲಬುರ್ಗಿ(ನವೆಂಬರ್​. 11): ಹೈದರಾಬಾದ್ ಕರ್ನಾಟಕ ಕಲ್ಯಾಣ ಎಂದು ಹೆಸರಷ್ಟೇ ಮಾರ್ಪಟಾಗಿದ್ದು, ಜನರ ಕಲ್ಯಾಣ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಈ ಭಾಗ ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ತೀರಾ ಹಿಂದೆ ಬಿದ್ದಿದೆ. ಅದಕ್ಕೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದೆ. ಹೆರಿಗೆಯ ಸಂದರ್ಭದಲ್ಲಿಯೇ ವಿದ್ಯುತ್ ಕೈಕೊಟ್ಟ ಪರಿಣಾಮ ಮೊಬೈಲ್ ಟಾರ್ಟ್ ಬೆಳಕಿನಲ್ಲಿಯೇ ಹೆರಿಗೆ ಮಾಡಿಸಿದ ಘಟನೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದ ಕೊಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ಬೆಳಕಿಗೆ ಬಂದಿದೆ. ಕೊಲ್ಲೂರು ಗ್ರಾಮದ ಸಿದ್ಧಮ್ಮ ಎಂಬ ಮಹಿಳೆ ಹೆರಿಗೆಗೆಂದು ದಾಖಲಾಗಿದ್ದಳು. ಹೆರಿಗೆ ಬೇನೆ ಬಂದ ಸಂದರ್ಭದಲ್ಲಿಯೇ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟಿದೆ. ಆದರೆ ಪರ್ಯಾಯ ಬೆಳಕಿನ ವ್ಯವಸ್ಥೆ ಇಲ್ಲದೇ ಇದ್ದುದರಿಂದ ಕತ್ತಲಲ್ಲಿಯೇ ಏನು ಮಾಡುವುದುದು ಎಂದು ನರ್ಸ್ ಹಾಗೂ ಸಿದ್ಧಮ್ಮಳ ಸಂಬಂಧಿಕರನ್ನು ಚಿಂತೆಗೀಡು ಮಾಡುವಂತೆ ಮಾಡಿದೆ.

ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 2 ಗಂಟೆವರೆಗೂ ವಿದ್ಯುತ್ ಬಂದಿಲ್ಲ. ಕೊನೆಗೆ ಕತ್ತಲಲ್ಲಿಲೇ ಮೊಬೈಲ್‌ ಟಾರ್ಚ್ ಮೂಲಕ ನರ್ಸ್ ಮಹಿಳೆಯ ಹೆರಿಗೆ ಮಾಡಿಸಿದ್ದಾರೆ.ಹೆರಿಗೆ ಸಮಯದಲ್ಲಿ ವಿದ್ಯುತ್ ಕೈ ಕೊಟ್ಟರೆ ಪರ್ಯಾಯ ವ್ಯೆವಸ್ಥೆ ಇಲ್ಲದೆ ನರ್ಸ್ ಹಾಗೂ ಸಂಬಂಧಿಕರು ಪರದಾಡುಂತಾಗಿದೆ. ತಕ್ಷಣಕ್ಕೆ ಬೇರೆ ಕಡೆ ತೆಗೆದುಕೊಂಡು ಹೋಗುವಂತೆಯೂ ಇಲ್ಲ, ಕತ್ತಲಲ್ಲಿ ಏನೂ ಮಾಡದ ಅಸಹಾಯಕತೆಯಲ್ಲಿ ಸಿಲುಕಿಕೊಂಡಾಗ ಮೊಬೈಲ್ ಟಾರ್ಚ್ ನೆರವಿಗೆ ಬಂದಿದೆ. 10-12 ಮೊಬೈಲ್ ಗಳ ಟಾರ್ಚ್ ಬೆಳಕಿನಲ್ಲಿ ನರ್ಸ್ ನಾರ್ಮಲ್ ಡೆಲಿವರಿ ಮಾಡಿಸಿದ್ದಾರೆ.

ಹೇಳಲು ಸರ್ಕಾರಿ ಆಸ್ಪತ್ರೆ ಎನಿಸಿಕೊಂಡರೂ ಕತ್ತಲಲ್ಲೆ ಗರ್ಭಿಣಿಗೆ ಹೆರಿಗೆ ಮಾಡುವಂತಹ ದುಸ್ಥಿತಿಗೆ ತಲುಪಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾರ್ಮಲ್ ಡೆಲಿವರಿ ಆಗಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಒಂದು ವೇಳೆ ಸಿಜೆರಿಯನ್ ಮಾಡುವ ಪರಿಸ್ಥಿತಿ ಬಂದ್ರೆ ಪೇಷಂಟ್ ಗತಿ ಏನು ಎಂದು ಸಿದ್ಧಮ್ಮಳ ಸಂಬಂಧಿಕರು ಪ್ರಶ್ನಿಸಿದ್ದಾರೆ. ಕನಿಷ್ಟ ಬೆಳಕಿನ ಪರ್ಯಾಯ ವ್ಯವಸ್ಥೆಯೂ ಇಲ್ಲ ಅಂದ್ರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಲ್ಲಿ ಡಾಕ್ಟರ್ ಗಳೆ ಇರುವುದಿಲ್ಲ. ಬರೀ ನರ್ಸ್ ಗಳಿಂದಲೇ ಹೆರಿಗೆಗಳು ನಡೆುಯತ್ತಿವೆ. ಯಾರೂ ಹಿರಿಯ ಅಧಿಕಾರಗಳು ಇಲ್ಲಿಗೆ ಬರುವುದಿಲ್ಲವೆಂದು ವೈದ್ಯರು ಆಡಿದ್ದೇ ಆಟವಾಗಿದೆ. ನಮ್ಮ ಕಷ್ಟವನ್ನು ಕೇಳುವವರು ಇಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮಾಜಿ ಸಚಿವ ವಿನಯ್​​​ ಕುಲಕರ್ಣಿ ಬಂಧನ‌ ರಾಜಕೀಯ ಪ್ರೇರಿತ : ವಿಧಾನ​ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್

ಆರೋಗ್ಯ ಸಚಿವ ಡಾ ಸುಧಾಕರ್ ಅವರೇ ಒಂದು ಸಾರಿ ಕಣ್ಣು ಬಿಟ್ಟು ನೋಡಿ, ನಿಮ್ಮ ಸರ್ಕಾರಿ ಆಸ್ಪತ್ರೆಗೆ ಅವ್ಯವಸ್ಥೆಯನ್ನ ನೋಡಿದ್ರೆ ನಾಚಿಕೆ ಆಗುತ್ತೆ. ಸರ್ಕಾರಿ ಆಸ್ಪತ್ರೆಗೆ ಬರುವ ಗರ್ಭಿಣಿ ಮಹಿಳೆಯರ ಸಂಕಟ ಕೇಳುವವರಿಲ್ಲ. ಈಗಲಾದರೂ ಗ್ರಾಮೀಣ ಆಸ್ಪತ್ರೆಗಳ ಕಡೆ ಗಮನ ಹರಿಸಿ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಮೊಬೈಲ್ ಟಾರ್ಚ್ ನಲ್ಲಿಯೇ ಹೆರಿಗೆ ಮಾಡಿಸಿದ್ದರೂ ಸಿದ್ಧಮ್ಮ ಹಾಗೂ ಆಕೆಯ ಮಗು ಆರೋಗ್ಯವಂತವಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗಿದೆ. ಟಾರ್ಚ್ ಬೆಳಕಿನಲ್ಲಿಯೇ ಹೆರಿಗೆ ಮಾಡಿಸಿದ ನರ್ಸ್ ಗೆ ಸಿದ್ಧಮ್ಮಳ ಸಹೋದರ ಸಂಗಮೇಶ್ ಹಾಗೂ ತಾಯಿ ಅನಸೂಯಮ್ಮ ಕೃತಜ್ಞತೆ ತಿಳಿಸಿದ್ದಾರೆ.
Published by: G Hareeshkumar
First published: November 11, 2020, 4:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories