• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕಣ್ಮುಂದೆಯೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೂ ಮನೆ ಸೀಲ್ ಮಾಡಲು ಮುಂದಾದ ಬ್ಯಾಂಕ್ ಅಧಿಕಾರಿಗಳು

ಕಣ್ಮುಂದೆಯೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೂ ಮನೆ ಸೀಲ್ ಮಾಡಲು ಮುಂದಾದ ಬ್ಯಾಂಕ್ ಅಧಿಕಾರಿಗಳು

ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಮನೆ

ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಮನೆ

ಖಾಸಗಿ ಬ್ಯಾಂಕ್​ನಲ್ಲಿ ತೆಗೆದುಕೊಂಡ ಸಾಲವನ್ನ ಕಟ್ಟದೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮನೆ ಸೀಜ್ ಮಾಡಲು ಬಂದಿದ್ದ ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲೇ ಆತನ ಪತ್ನಿ ಆತ್ಮಹತ್ಯೆ ಮಾಡಿದ್ದಾರೆ.

  • Share this:

ಪುತ್ತೂರು: ಅಡಮಾನ ಸಾಲಕ್ಕೆ ಮನೆ ಮುಟ್ಟುಗೋಲು ಹಾಕಲು ಬಂದ ರಾಷ್ಟ್ರೀಕೃತ ಬಾಂಕ್‌ನ ಸೀಸರ್‌ಗಳ ಸಮ್ಮುಖದಲ್ಲಿ ಮನೆ ಮಾಲಕನ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದಕ್ಷಿಣಕನ್ನಡ ಪುತ್ತೂರಿನ ಹಾರಾಡಿ ರೈಲ್ವೇ ಗೇಟ್ ಬಳಿಯ ನಿವಾಸಿ ಪ್ರಾರ್ಥನಾ ಪ್ರಭು (52) ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟಿರುವ ಮಹಿಳೆ ತನ್ನ ಸಾವಿಗೆ ರಾಷ್ಟ್ರೀಕೃತ ಬ್ಯಾಂಕ್​ವೊಂದರ ಸಿಬ್ಬಂದಿಯೇ ಕಾರಣ ಎಂದು ಬರೆದುಕೊಂಡಿದ್ದಾರೆ. ತನ್ನ ಕೊಠಡಿಯಲ್ಲಿನ ಸೀಲಿಂಗ್ ಫ್ಯಾನ್‌ಗೆ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆ ಸೀಝ್ ಮಾಡಲು ಅಧಿಕಾರಿಗಳ ರಕ್ಷಣೆಗೆಂದು ಬಂದಿದ್ದ ಪೋಲೀಸರು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಮಹಿಳೆ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ.


'ನನ್ನ ಸಾವಿಗೆ ಕೆನರಾ ಬ್ಯಾಂಕ್‌ನವರ ಉಪದ್ರವ ಕಾರಣ. ಮೆಂಟಲ್ ಟಾರ್ಚರ್ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಆ ಮಹಿಳೆ ಸಾವಿಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದರು. ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲವಿದ್ದು ಸಾಲ ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕ್ ನೋಟೀಸ್ ಬಂದಿತ್ತು. ಅದಾದ ಬಳಿಕ ಕೋರ್ಟ್ ನೋಟೀಸ್ ಮೂಲಕ ಮನೆ ಮುಟ್ಟುಗೋಲು ಹಾಕಲು ಫೆ. 18 ರಂದು ಬ್ಯಾಂಕ್ ಸೀಸರ್ ಜೊತೆ ಬಂದಾಗ ಮನೆ ಮಂದಿ ಆತಂಕಕ್ಕೊಳಗಾಗಿದ್ದರು. ಈ ನಡುವೆ ಪ್ರಾರ್ಥನಾ ಪ್ರಭು ಅವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: ಸೋ ಕಾಲ್ಡ್ ಎಂಎಲ್​ಎ ನೇಚರ್ ಎಲ್ಲರಿಗೂ ಗೊತ್ತಿದೆ; ಯತ್ನಾಳ್​ ವಿರುದ್ಧ ಅರುಣ್​ ಸಿಂಗ್​ ಕಿಡಿ


ಪ್ರಾರ್ಥನಾ ಪತಿ ರಘುವೀರ್ ಪ್ರಭು ಅವರು ಖಾಸಗಿ ಬ್ಯಾಂಕ್‌ನಲ್ಲಿ ಹೊಂದಿದ್ದ ಸಾಲದ ಬಾಬ್ತಿನ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದೊಂದಿಗೆ ಮನೆ ಮುಟ್ಟುಗೋಲು ಹಾಕುವ ಕಾರ್ಯಾಚರಣೆಗೆ ಬ್ಯಾಂಕ್ ಮುಂದಾಗಿತ್ತು. ಈ ವೇಳೆ ಮನೆಯಲ್ಲಿದ್ದ ರಘುವೀರ್ ಪ್ರಭು ಅವರ ಪತ್ನಿ ಪ್ರಾರ್ಥನಾ ಮತ್ತು ಇಬ್ಬರು ಮಕ್ಕಳು ಆತಂಕಗೊಂಡಿದ್ದರು. ರಘುವೀರ್ ಪ್ರಭು ಅವರ ಮಕ್ಕಳು ಪ್ರಕರಣ ನ್ಯಾಯಾಲಯದಲ್ಲಿರುವಾಗ ಮುಟ್ಟುಗೋಲು ಹಾಕದಂತೆ ಬ್ಯಾಂಕ್ ಮತ್ತು ಕೋರ್ಟು ಕಮೀಷನರ್ ಅಧಿಕಾರಿಗಳೊಂದಿಗೆ ವಿನಂತಿಸಿದ್ದಾರೆನ್ನಲಾಗಿದೆ. ಇದನ್ನು ತಿರಸ್ಕರಿಸಿದ ಬ್ಯಾಂಕ್‌ನವರು ಮನೆಯ ಹಿಂಬದಿಯ ಬೀಗವನ್ನು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ಇದೇ ಕ್ಷಣದಲ್ಲಿ ಮನೆಯೊಳಗಿದ್ದ ಪ್ರಾರ್ಥನಾ ಪ್ರಭು ಅವರು ಮನೆಯೊಳಗಿನಿಂದ ಲಾಕ್ ಮಾಡಿ ಕೊಠಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಬ್ಯಾಂಕ್ ಮುಟ್ಟುಗೋಲಿಗೆ ಭದ್ರತೆ ಒದಗಿಸಲು ಬಂದ ಪೊಲೀಸರು ನೇಣು ಬಿಗಿದ ಸ್ಥಿತಿಯಲ್ಲಿದ್ದ ಪ್ರಾರ್ಥನಾ ಪ್ರಭು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು. ಬಳಿಕದ ಬೆಳವಣಿಗೆಯಲ್ಲಿ ಬ್ಯಾಂಕ್‌ನವರು ಮನೆ ಮುಟ್ಟುಗೋಲು ಮಾಡಲೆಂದು ಮನೆಯ ಹಿಂಬದಿಯ ಬಾಗಿಲಿಗೆ ಬೀಗ ಹಾಕಿ ಸೀಲ್ ಮಾಡಿದರು. ಮನೆಯ ಆವರಣದ ಗೇಟ್ ಬಳಿಯೂ ಮನೆ ಮುಟ್ಟುಗೋಲು ಮಾಡಲಾಗಿದೆ ಎಂಬ ಬ್ಯಾನರ್ ಹಿಡಿದು ಪೊಟೋ ಕ್ಲಿಕಿಸಿದರು. ಇದೆ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು, ಮಹಿಳೆ ಸಾವನ್ನಪ್ಪಿರುವಾಗ ಮನೆ ಸೀಜ್ ಮಾಡುವುದು ಸರಿಯಲ್ಲ. ಮಾನವೀಯತೆ ಇರಲಿ ಎಂದರು.


ಇದನ್ನೂ ಓದಿ: Tumkur: ಶಿರಾ ಬಳಿ ಭೀಕರ ಅಪಘಾತ; ಮದುವೆ ದಿಬ್ಬಣದ ಬಸ್ ಉರುಳಿ ಮೂವರು ಸಾವು


ಕೊನೆಗೆ ಮನೆಯ ಮಾಲಕ ರಘುವೀರ್ ಪ್ರಭು, ಸಾಲದ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ನಡುವೆ ಸಾಲಗಾರನಲ್ಲದ ನನ್ನ ಮಕ್ಕಳಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲು ಬಂದಿರುವುದು ಕಾನೂನು ಬಾಹಿರವಾಗಿದೆ ಎಂದರು. ಆಗ ಬ್ಯಾಂಕ್ ಅಧಿಕಾರಿ ತಕ್ಷಣವೇ‌ ಸೀಜ್ ಮಾಡಿದ ಕೀ ಅನ್ನು ರಘುವೀರ್ ಅವರ ಮಕ್ಕಳಿಗೆ ಹಸ್ತಾಂತರ ಮಾಡಿ ತೆರಳಿದರು. ಘಟನೆಗೆ ಬೆಳಕಿ‌ಗೆ ಬರುತ್ತಿದ್ದಂತೆ‌ ಸಾರ್ವಜನಿಕರು ಸ್ಥಳದಲ್ಲಿ ಸೇರಿದರು. ನೆರೆದಿದ್ದ ಸ್ಥಳೀಯರು ಮಂದಿ ಮನೆ ಮಂದಿಯನ್ನು ಸಮಾಧಾನ ಪಡಿಸಿದರಲ್ಲದೆ ಬ್ಯಾಂಕ್‌ನ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ಘಟನೆಯ ಕುರಿತು ಮೃತರ ಪತಿ ರಘುವೀರ್ ಪ್ರಭು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ವರಿದಿ: ಅಜಿತ್ ಕುಮಾರ್

First published: