ಹಾವೇರಿಯಲ್ಲಿ ಹೆತ್ತ ತಾಯಿಯನ್ನೇ ರೇಪ್ ಮಾಡಿ ಕೊಂದ ಮಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಾಯಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಮಗ ತನ್ನ ತಾಯಿ ಪರಪುರುಷನೊಂದಿಗೆ ಸಂಬಂಧ ಬೆಳೆಸುವುದನ್ನು ಸಹಿಸದೆ ಆಕೆಯನ್ನು ರೇಪ್ ಮಾಡಿ ಕೊಲೆ ಎಸಗಿರುವ ಪೈಶಾಚಿಕ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

  • Share this:

ಹಾವೇರಿ: ಇದು ಅನೈತಿಕ ಸಂಬಂಧಗಳ ಹಾಗೂ ಪೈಶಾಚಿಕ ಅಪರಾಧದ ಅಸಹ್ಯಕರ ಸುದ್ದಿ. ಹೆತ್ತ ತಾಯಿಯನ್ನೇ ಮಗ ಅತ್ಯಾಚಾರ ಎಸಗಿ ಕೊಂದುಹಾಕಿರುವ ಘಟನೆ ಹಾವೇರಿಯ ಶಿಗ್ಗಾಂವಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿಯ ಗಂಗೀಬಾವಿಯಲ್ಲಿ 21 ವರ್ಷದ ಆರೋಪಿ ಶಿವಪ್ಪ ಸೋಮಲಪ್ಪ ಲಮಾಣಿ ಈ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಕೊಲೆಯಾಗಿರುವುದು ಈತನ ತಾಯಿ 35 ವರ್ಷದ ಪಾರವ್ವ ಸೋಮಲಪ್ಪ ಲಮಾಣಿ.


ಮೃತ ಪಾರವ್ವ ಮತ್ತು ಆರೋಪಿ ಶಿವಪ್ಪ ಶಿಗ್ಗಾವಿ ತಾಲೂಕಿನ ವನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ಎರಡು ದಿನಗಳ ಹಿಂದೆ ಸಾರಾಯಿ ಕುಡಿಸಿ ಅತ್ಯಾಚಾರ ಮಾಡಿ ತನ್ನ ತಾಯಿಯನ್ನು ಅತ್ಯಾಚಾರ ಮಾಡಿ ಈತ ಕೊಂದು ಹಾಕಿದ್ದಾನೆ ಈ ಪಾಪಿ ಮಗ. ಈತನ ಈ ಕೃತ್ಯಕ್ಕೆ ಅನೈತಿಕ ಸಂಬಂಧ ಕಾರಣ ಎನ್ನಲಾಗುತ್ತಿದೆ. ತನ್ನ ತಾಯಿ ಬೇರೊಬ್ಬ ವ್ಯಕ್ತಿ ಜೊತೆ ಸಂಬಂಧ ಇಟ್ಟುಕೊಂಡಿರುವ ಶಂಕೆಯ ಮೇಲೆ ಈತ ಈ ಕೆಲಸ ಮಾಡಿದ್ದಾನೆ.


ಬೇರೆಯವರ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳಬೇಡ. ನಮ್ಮ‌ಮನೆ ಮರ್ಯಾದೆ ಹೋಗುತ್ತದೆ ಎಂದು ಈತ ಹೇಳಿದ್ದರೂ ತಾಯಿ ಕೇಳಿರಲಿಲ್ಲ. ಇದರಿಂದ ಕ್ರೋಧಗೊಂಡು ಈತ ಆಕೆಯನ್ನು ಸಾಯಿಸಿದ್ಧಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ತನ್ನ ಮಾತನ್ನು ತಾಯಿ ಕೇಳುವುದಿಲ್ಲ ಎಂಬುದು ಗೊತ್ತಾಗಿ ಆರೋಪಿ ಉಪಾಯ ಮಾಡಿ ಆಕೆಯನ್ನು ಕೊಲ್ಲಲು ಸ್ಕೆಚ್ ಹಾಕುತ್ತಾನೆ. ಊರಿಗೆ ಹೋಗೊಣ ಬಾ ಅಂತಾ ಕರೆದೊಯ್ದು ಕಂಠಪೂರ ಇಬ್ಬರು ಕುಡಿಯುತ್ತಾರೆ. ನಂತರ ನಗರದ ಎರಡೂ ಕೀಮಿ ದೂರದ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಅಲ್ಲಿ ರೇಪ್ ಮಾಡಿ ಸಾಯಿಸಿದ್ದಾನೆ.


ಇದನ್ನೂ ಓದಿ: ಮಾಜಿ ಮೇಯರ್ ಸಂಪತ್ ರಾಜ್ ನ. 24ರವರೆಗೂ ನ್ಯಾಯಾಂಗ ಬಂಧನ


ಕೆಲ ಸುದ್ದಿಗಳ ಪ್ರಕಾರ, ಈತ ತನ್ನ ತಾಯಿ ಜೊತೆ ದೈಹಿಕ ಸಂಬಂಧವನ್ನೂ ಬೆಳೆಸಿಕೊಂಡಿದ್ದ. ಮೃತ ಪಾರವ್ವ ತನ್ನ ಮಗನ ಜೊತೆ ಸಲುಗೆಯಿಂದ ಇದ್ದಳೆನ್ನಲಾಗಿದೆ. ಒಂದೇ ಮನೆಯಲ್ಲಿ ಇದ್ದ ಕಾರಣ ಇಬ್ಬರ ನಡುವೆ ಸಲುಗೆ ಮತ್ತು ಲೈಂಗಿಕ ಸಂಬಂಧ ಬೆಳೆದಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೇರೆಯವರ ಜೊತೆ ಪಾರವ್ವ ಸಂಬಂಧ ಹೊಂದುತ್ತಿರುವುದನ್ನು ಸಹಿಸದೆ ಶಿವಪ್ಪ ಕೋಪಗೊಂಡು ಆಕೆಯನ್ನ ಕೊಂದಿದ್ದಾನೆ ಎಂಬ ಮಾತು ಕೇಳಿಬರುತ್ತಿದೆ.


ಇದೀಗ ಸಂಬಂಧಗಳ ಅರಿವೇ ಇಲ್ಲದ ಮಗ ಶಿವಪ್ಪ ತನ್ನ ತಾಯಿಯ ಮೇಲೆ ಅಮಾನವೀಯ ಕೃತ್ಯ ಎಸಗಿ ಈಗ ಜೈಲು ಸೇರಿದ್ದಾನೆ.

top videos


     ವರದಿ: ಸಂಕನಗೌಡ

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು