HOME » NEWS » District » WOMAN ALLEGEDLY MURDERS HUSBAND WITH HELP OF LOVER AT NELAMANGALA ANLM SNVS

ಅಕ್ರಮ ಸಂಬಂಧಕ್ಕೆ ಪತಿ ತೊಡಕಾಗುತ್ತಾನೆ ಎಂದು ಪತ್ನಿ ಪ್ರಿಯಕರನೊಂದಿಗೆ ಸೇರಿ ಕೊಲೆ

ಪರಿಚಯಸ್ಥನೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿವಾಹಿತ ಮಹಿಳೆ ತನ್ನ ಪತಿಯನ್ನೇ ಕೊಲೆ ಮಾಡಿಸಿರುವ ದಾರುಣ ಘಟನೆ ನೆಲಮಂಗಲ ಸಮೀಪ ಸಂಭವಿಸಿದೆ.

news18-kannada
Updated:November 28, 2020, 7:47 AM IST
ಅಕ್ರಮ ಸಂಬಂಧಕ್ಕೆ ಪತಿ ತೊಡಕಾಗುತ್ತಾನೆ ಎಂದು ಪತ್ನಿ ಪ್ರಿಯಕರನೊಂದಿಗೆ ಸೇರಿ ಕೊಲೆ
ಸಾಂದರ್ಭಿಕ ಚಿತ್ರ
  • Share this:
ನೆಲಮಂಗಲ: ತಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗಬಾರದು ಎಂದು ಪತ್ನಿಯೇ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನ ಕೊಲೆಗೈದಿದ್ದ ಪ್ರಕರಣವನ್ನ ನೆಲಮಂಗಲ ಪೊಲೀಸರು ಭೇದಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ದೊಡ್ಡರಾಯಪ್ಪನಹಳ್ಳಿ ನಿವಾಸಿ ಟಾಟಾ ಏಸ್ ಚಾಲಕ 40 ವರ್ಷದ ಬೀರೇಗೌಡನನ್ನು ಆತನ ಪತ್ನಿ ಕಲ್ಪನಾ ಹಾಗೂ ಪ್ರಿಯಕರ ಲಕ್ಷಣ ಹಾಗೂ ಆತನ ಸ್ನೇಹಿತರಾದ ದರ್ಶನ್, ಅಜಯ್, ಪ್ರದೀಪ್ ಸೇರಿಕೊಂಡು ಕೊಲೆಗೈದಿದ್ದಾರೆ. ಕೊಲೆ ಮಾಡಿ ಮೃತ ದೇಹವನ್ನು ಸುಟ್ಟು ಹಾಕುವ ಸಲುವಾಗಿ ಕಾರಿನಲ್ಲಿ ತೆಗೆದುಕೊಂಡು ಹೋಗವ ವೇಳೆ, ಪೊಲೀಸರ ಗಾಡಿ ಗಮನಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅಪ್ಪಕಾರನಹಳ್ಳಿ ಬಳಿ ಮೃತ ದೇಹವನ್ನು ಮೃತ ಬೀರೇಗೌಡ ಚಲಾಯಿಸುತ್ತಿದ್ದ ಟಾಟಾ ಏಸ್ ವಾಹನಕ್ಕೆ ಹಾಕಿ ಪರಾರಿಯಾಗಿದ್ದರು.

ಘಟನೆಗೆ ಸಂಬಂಧಿಸಿದಂತೆ ತ್ಯಾಮಗೊಂಡ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸ್ಥಳೀಯರು ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಮೃತ ಬೀರೆಗೌಡನ ಹೆಂಡತಿ ಕಲ್ಪನಾಳನ್ನ ತೀವ್ರ ತನಿಖೆ ನಡೆಸಿದ್ದಾರೆ. ಈ ವೇಳೆ ಕಲ್ಪನಾ ತನ್ನ ಗಂಡ ತುಮಕೂರಿಗೆ ಬಾಡಿಗೆ ಹೋಗಿದ್ದರು. ಏನಾಯಿತೋ ಗೊತ್ತಿಲ್ಲ ಎಂದಿದ್ದಾಳೆ

ತನಿಖೆ ವೇಳೆ ಕಲ್ಪನಾಳ ಹೇಳಿಕೆ ಮೇಲೆ ಅನುಮಾನಗೊಂಡು ಆಕೆಯ ಫೋನ್ ಕಾಲ್ ಡಿಟೈಲ್ಸ್ ಪರಿಶೀಲಿಸಿದಾಗ, ಕಲ್ಪನಾ ತನ್ನ ಗಂಡ ಹಾಗೂ 10 ವರ್ಷದ ಮಗನನ್ನು ತೊರೆದು ಪ್ರಿಯಕರ ಲಕ್ಷಣನೊಂದಿಗೆ ಜೀವನ ನಡೆಸಲು ಎಲ್ಲಾ ಪ್ಲಾನ್ ಮಾಡಿಕೊಂಡಿದ್ದಳು ಎನ್ನುವ ವಿಚಾರ ಬೆಳಕಿಗೆ ಬರುತ್ತೆ. ಲಕ್ಷಣನನ್ನು ಎಳೆದು ತಂದು ಪೊಲೀಸರು ಬಾಯಿ ಬಿಡಿಸಿದಾಗ ಮತ್ತುಷ್ಟು ವಿಷಯಗಳು ಹೊರಗೆ ಬಂದಿವೆ. ಸುಖಸಂಸಾರದಲ್ಲಿ ಅನ್ಯೋನ್ಯವಾಗಿದ್ದ ದಂಪತಿಗಳು ಎಲ್ಲಿಗಾದರೂ ಹೋಗಬೇಕಿದ್ದರೆ ಲಕ್ಷಣ ಆಟೋ ಚಾಲಕನಿದ್ದ ಕಾರಣ ಈತನಿಗೆ ಹೇಳುತ್ತಿದ್ದರಂತೆ. ಆಟೋ ಬಾಡಿಗೆ ವಿಷಯದಿಂದ ಗೆಳೆತನ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಸಂಬಂಧಕ್ಕೆ ತಿರುವು ಪಡೆದುಕೊಂಡಿದೆ. ತನ್ನ ಅಕ್ರಮ ಸಂಬಂಧಕ್ಕೆ ಸಾಕ್ಷಿಯಂತೆ ಮೃತ ಬೀರೆಗೌಡ ಕಟ್ಟಿದ್ದ ಮಂಗಳಸೂತ್ರವನ್ನು ತೆಗೆದು ಮತ್ತೆ ಅದೇ ಮಂಗಳಸೂತ್ರವನ್ನ ಆರೋಪಿ ಲಕ್ಷ್ಮಣ ಕಲ್ಪನಾಳಿಗೆ ಕಟ್ಟಿ ನಾವಿಬ್ಬರು ಇನ್ಮುಂದೆ ಗಂಡ ಹೆಂಡತಿ ರೀತಿ ಇರೋಣ ಎಂದಿದ್ದಾರೆ. ಇವರ ಅಕ್ರಮ ಸಂಬಂಧಕ್ಕೆ ಮೃತ ಪತಿ ಬೀರೆಗೌಡ ಅಡ್ಡಿಯಾಗುತ್ತಾನೆ ಎಂದು ಈ ಹಿಂದೆ ಸಾಕಷ್ಟು ಬಾರಿ ಕೊಲೆ ಮಾಡಲು ಪ್ರಯತ್ನ ಪಟ್ಟು ಸಫಲರಾಗಿರಲಿಲ್ಲ.

ಇದನ್ನೂ ಓದಿ: ಕೊಡಗಿನ ಭೂಕುಸಿತದಲ್ಲಿ ಸಂಪತ್ತಿನ ಸಹಿತ ಭೂ ಸಮಾಧಿಯಾಗಿದ್ದ ಆಚಾರ್ ಕುಟುಂಬ; ನಿಧಿಗಾಗಿ ಶೋಧ

ಕೊಲೆ ಹೇಗೆ?

ಇದೇ ನ. 21, ಶನಿವಾರ ಕಲ್ಪನಾ ಲಕ್ಷಣ ಹಾಗೂ ಆತನ ಮೂರು ಜನ ಸ್ನೇಹಿತರು ಒಂದು ಪ್ಲಾನ್ ಮಾಡ್ತಾರೆ. ಪ್ಲಾನ್​ನಂತೆ ಕಲ್ಪನಾ ಮಧ್ಯ ರಾತ್ರಿ 12ಕ್ಕೆ ಬಾಗಿಲು ಲಾಕ್ ಮಾಡದೆ ಮಲಗಿಕೊಳ್ಳುತ್ತಾಳೆ. ನಂತರ ಪ್ರಿಯಕರ ಲಕ್ಷಣ್ ಹಾಗೂ ಸ್ನೇಹಿತರು ಮನೆಗೆ ನುಗ್ಗಿ ಚಾಕುವಿನಿಂದ ಎದೆ ಭಾಗಕ್ಕೆ ಹಿರಿದು ಕೊಲೆಗೈದಿದ್ದಾರೆ. ನಂತರ ಯಾರಿಗೂ ಅನುಮಾನ ಬಾರದಂತೆ ಮೃತ ದೇಹವನ್ನು ತುಮಕೂರು ಮಾರ್ಗವಾಗಿ ಸಾಗಿಸಿ ಸುಟ್ಟು ಹಾಕೋಣ ಎಂದು ಲಕ್ಷಣನ ಸ್ನೇಹಿತನ ಕಾರಿನಲ್ಲಿ ಮೃತ ದೇಹ ಇಟ್ಟುಕೊಂಡು ಅದರ ಹಿಂದೆಯೇ ಟಾಟಾ ಏಸ್ ಚಲಾಯಿಸಿಕೊಂಡು ಹೋಗಿದ್ದಾರೆ.

ನೆಲಮಂಗಲ ತಾಲೂಕಿನ ಅಪ್ಪಕಾರನಹಳ್ಳಿ ಸಮೀಪಿಸುತ್ತಿದ್ದ ಹಾಗೆ ರಸ್ತೆಯಲ್ಲಿ ಪೊಲೀಸರ ವಾಹನವನ್ನು ಕಂಡು ಭಯಭೀತರಾಗಿ ಅಪ್ಪಕಾರನಹಳ್ಳಿ ಗ್ರಾಮದ ಕಡೆ ವಾಹನ ತಿರುಗಿಸುತ್ತಾರೆ. ಈ ವೇಳೆ ನಿರ್ಮಾಣ ಹಂತಲ್ಲಿದ್ದ ರಸ್ತೆಯಲ್ಲಿ ಟಾಟಾ ಏಸ್ ಚಕ್ರ ಸಿಲುಕಿಕೊಂಡ ಹಿನ್ನೆಲೆ ಕಾರಿನಲ್ಲಿದ್ದ ಮೃತದೇಹವನ್ನು ಟಾಟಾ ಏಸ್​ಗೆ ಸ್ಥಳಾಂತರಿಸಿ, ಯಾರೋ ಹಿಂಬಾಲಿಸಿ ಕೊಲೆ ಮಾಡಿದ್ದಾರೆ ಎನ್ನುವ ರೀತಿ ಸೃಷ್ಟಿಸಲು ಗಾಜಿಗೆ ಕಲ್ಲು ಹೊಡೆದು ಪರಾರಿಯಾಗಿದ್ದರು. 22ನೇ ತಾರೀಕು ಭಾನುವಾರ ಸ್ಥಳೀಯರು ವಾಹನ ಪರಿಶೀಲನೆ ನಡೆಸಿದಾಗ ವಾಹನದಲ್ಲಿನ ಮೃತ ದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಒಟ್ಟಾರೆ ಸುಖ ಸಂಸಾರ ಮಾಡುತ್ತಿದ್ದ ಅರೋಪಿ ಕಲ್ಪನಾ ಕ್ಷಣಿಕ ಸುಖಕ್ಕೆ ಮಣೆಹಾಕಿ ಜೈಲುಕಂಬಿ ಎಣಿತ್ತಿದ್ದಾಳೆ. ಈಕೆಯ ಜೊತೆ ಪ್ರಿಯಕರ ಸೇರಿದಂತೆ ಇನ್ನೂ ಮೀಸೆ ಚಿಗುರದ ಮೂರು ಜನ ಯುವಕರು ಸೇರಿದಂತೆ ಐದು ಜನರು ಪೊಲೀಸರಿಗೆ ಅತಿಥಿಯಾಗಿದ್ದಾರೆ.

ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ
Published by: Vijayasarthy SN
First published: November 28, 2020, 7:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading