• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Chikkamagalur| ಗ್ರಾಮಸ್ಥರು-ಟ್ರಸ್ಟ್ ನೆರವಿನಿಂದ ಚಿಕ್ಕಮಗಳೂರಿನ ಮುಚ್ಚಿದ ಸರ್ಕಾರಿ ಶಾಲೆಗೆ ಬಂತು ಜೀವಕಳೆ

Chikkamagalur| ಗ್ರಾಮಸ್ಥರು-ಟ್ರಸ್ಟ್ ನೆರವಿನಿಂದ ಚಿಕ್ಕಮಗಳೂರಿನ ಮುಚ್ಚಿದ ಸರ್ಕಾರಿ ಶಾಲೆಗೆ ಬಂತು ಜೀವಕಳೆ

ಚಿಕ್ಕಮಗಳೂರಿನ ಸರ್ಕಾರಿ ಶಾಲೆ.

ಚಿಕ್ಕಮಗಳೂರಿನ ಸರ್ಕಾರಿ ಶಾಲೆ.

ಕಾನ್ವೆಂಟ್​ಗಿಂತ ಚೆನ್ನಾಗಿ ಸರ್ಕಾರಿ ಶಾಲೆಯ ತರಗತಿಯಲ್ಲಿ ಕುಳಿತು ಪುಟಾಣಿಗಳು ಪಾಠ ಕೇಳುತ್ತಿದ್ದಾರೆ. ತುಂಟಾಟ-ತರ್ಲೆ ಮಾಡಿಕೊಂಡು ತಮ್ಮ ಸ್ನೇಹಿತರೊಂದಿಗೆ ನಲಿಯುತ್ತಿ ದ್ದಾರೆ. ಈ ರೀತಿಯಾಗಿ ಮುಚ್ಚಿದ ಶಾಲೆ ಮತ್ತೆ ತೆರೆಯಲು ಸ್ವತಃ ಎಂ ಚೋಮನಹಳ್ಳಿ ಗ್ರಾಮಸ್ಥರು, ಸ್ನೇಹ ಸಿಂಚನ ಟ್ರಸ್ಟ್​ನ ಸಾಂಘಿಕ ಶ್ರಮವಿದೆ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು; ಅದು 84 ವರ್ಷಗಳ ಇತಿಹಾಸವಿರೋ ಸರ್ಕಾರಿ ಶಾಲೆ. ಆದ್ರೆ, ಪೋಷಕರಿಗೆ ಕಾನ್ವೆಂಟ್ ಮೇಲಿನ ಪ್ರೀತಿಯಿಂದಾಗಿ ವಿದ್ಯಾರ್ಥಿಗಳಿಲ್ಲದೇ ಆ ಶಾಲೆಗೆ ಬೀಗ ಅನಿವಾರ್ಯ ವಾಗಿತ್ತು. ಇನ್ನೇನು ಸರ್ಕಾರಿ ಶಾಲೆ ನಮ್ಮೂರಿಂದ ಮಾಯವಾಯ್ತು ಅನ್ನುವ ವೇಳೆಯಲ್ಲಿ ಅದೊಂದು ಮಿರಾಕಲ್ ನಡೆದಿದೆ. ನಾಲ್ಕು ವರ್ಷಗಳಿಂದ ಮುಚ್ಚಿದ ಸರ್ಕಾರಿ ಶಾಲೆಯಲ್ಲಿ ಇದೀಗ ಚಿನಕುರುಳಿ ಮಕ್ಕಳ ಕಲರವ ಮತ್ತೆ ಕೇಳಿಬಂದಿದೆ. ರಂಗು ರಂಗಾಗಿರೋ ನಮ್ಮ ಶಾಲೆಯನ್ನ ಬಿಟ್ಟು ನಾವು ಕಾನ್ವೆಂಟ್ಗೆ ಹೋಗಲ್ಲ ಅಂತಿದ್ದಾರೆ   ಫುಟ್ಟ-ಪುಟ್ಟ ಚಿನ್ನಾರಿ ಮುತ್ತುಗಳು. 84 ವರ್ಷಗಳ ಇತಿಹಾಸವಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಂ ಚೋಮನಹಳ್ಳಿ ಸರ್ಕಾರಿ ಶಾಲೆ ನಾಲ್ಕು ವರ್ಷಗಳಿಂದ ಶಾಶ್ವತವಾಗಿ ಬೀಗ ಬಿದ್ದಿತ್ತು. ಪೋಷಕರಿಗೆ ಇಂಗ್ಲೀಷ್ ಮೇಲಿನ ಪ್ರೀತಿಯಿಂದ ಕಾನ್ವೆಂಟ್ ಸ್ಕೂಲ್ ಗಳ ಮೇಲೆ ಮೋಹ ಮೂಡಿತ್ತು. ಕ್ರಮೇಣ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗಳಿಗೆ ಶಿಫ್ಟ್ ಆಗಿದ್ದರು. ವಿದ್ಯಾರ್ಥಿಗಳ ಕೊರತೆ ಉಂಟಾದ ಹಿನ್ನೆಲೆ ಏನೂ ಮಾಡಲಾಗದೇ ವಿಧಿಯಿಲ್ಲದೇ ಸರ್ಕಾರಿ ಶಾಲೆಯನ್ನ ಮುಚ್ಚಲೇ ಬೇಕಾದ ಪರಿಸ್ಥಿತಿ ಉಂಟಾಗಿತ್ತು.


ಆ ಬಳಿಕ ಶಾಲೆಯೂ ವಿದ್ಯಾರ್ಥಿಗಳಿಲ್ಲದೇ ಪಾಳು ಬಿದ್ದು ಹೋಗಿತ್ತು. ಇನ್ನೇನು ಶಾಲೆ ಶಾಶ್ವತವಾಗಿ ಮುಚ್ಚಿತು ಎಂದುಕೊಳ್ಳುವಾಗ ಮ್ಯಾಜಿಕ್ ಒಂದು ನಡೆದು ಇದೀಗ ಶಾಲೆಯ ಬಾಗಿಲು ಮತ್ತೆ ತೆಗೆದಿದೆ. ಯಾವ ಕಾನ್ವೆಂಟ್ ಶಾಲೆಗಳಿಗೆ ವಿದ್ಯಾರ್ಥಿಗಳು ಹೋಗಿದ್ರೋ ಅದೇ ಶಾಲೆಗಳಿಂದ ಪುಟಾಣಿಗಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.


ಕಾನ್ವೆಂಟ್​ಗಿಂತ ಚೆನ್ನಾಗಿ ಸರ್ಕಾರಿ ಶಾಲೆಯ ತರಗತಿಯಲ್ಲಿ ಕುಳಿತು ಪುಟಾಣಿಗಳು ಪಾಠ ಕೇಳುತ್ತಿದ್ದಾರೆ. ತುಂಟಾಟ-ತರ್ಲೆ ಮಾಡಿಕೊಂಡು ತಮ್ಮ ಸ್ನೇಹಿತರೊಂದಿಗೆ ನಲಿಯುತ್ತಿ ದ್ದಾರೆ. ಈ ರೀತಿಯಾಗಿ ಮುಚ್ಚಿದ ಶಾಲೆ ಮತ್ತೆ ತೆರೆಯಲು ಸ್ವತಃ ಎಂ ಚೋಮನಹಳ್ಳಿ ಗ್ರಾಮಸ್ಥರು, ಬಸವೇಶ್ವರ ಯುವಕ ಸಂಘ, ಸ್ನೇಹ ಸಿಂಚನ ಟ್ರಸ್ಟ್ ಎಲ್ಲರ ಸಾಂಘಿಕ ಶ್ರಮವಿದೆ. ಸದ್ಯ ಮಾಯವಾಗಿದ್ದ ಮಕ್ಕಳ ಕಲರವ, ತುಂಟಾಟ, ಆಟಾಟೋಪ, ಎಲ್ಲವೂ ಎಂ ಚೋಮನಹಳ್ಳಿ ಶಾಲೆಯಲ್ಲಿ ಮತ್ತೆ ಕೇಳುತ್ತಿರುವುದರಿಂದ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಫುಲ್ ಖುಷ್ ಆಗಿದ್ದಾರೆ.


ಇದನ್ನೂ ಓದಿ: Belagavi Election| ಬೆಳಗಾವಿ ಪಾಲಿಕೆ ಫೈಟ್; ಪ್ರಚಾರದ ಅಖಾಡಕ್ಕೆ ಧುಮುಕಿದ ಘಟಾನುಘಟಿಗಳ ಏಟು-ತಿರುಗೇಟು


ಈ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಸದ್ಯ 15 ಮಕ್ಕಳು ದಾಖಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಸೇರುವ ಸಾಧ್ಯತೆಯಿದೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು ಪುಟಾಣಿಗಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ಸಿಗುತ್ತಿದೆ. ಪುಟಾಣಿಗಳ ಜ್ಞಾನರ್ಜ ನೆಗೆ ಅನುಕೂಲವಾಗುವಂತೆ ಶಾಲೆ ಗೋಡೆಗಳ ಮೇಲೆ ರಾಷ್ಟ್ರ ನಾಯಕರ ಚಿತ್ರ, ಪ್ರಾಣಿ-ಪಕ್ಷಿಗಳ ಚಿತ್ರ, ಅಕ್ಷರ ಮಾಲೆ, ಜ್ಞಾನಪೀಠ ಪುರಸ್ಕಾರ ಸಾಹಿತಿಗಳ ಚಿತ್ರ ಸೇರಿದಂತೆ ಪಠ್ಯಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನ ಬರೆಯಲಾಗಿದೆ. ಒಟ್ಟಿನಲ್ಲಿ ಮರೆಯಾಗುತ್ತಿರುವ ಕನ್ನಡ ಶಾಲೆಗಳ ಮಧ್ಯೆ ಮುಚ್ಚಿದ್ದ ಎಂ ಚೋಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತೆ ಪುನಾರಂಭಗೊಂಡು ರಾಜ್ಯಕ್ಕೆ ಮಾದರಿಯಾಗಿರೋದಂತೂ ಸತ್ಯ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕು.

top videos
    First published: