news18-kannada Updated:August 20, 2020, 11:31 PM IST
ಗೋಕಾಕ್ ಫಾಲ್ಸ್
ಬೆಳಗಾವಿ(ಆಗಸ್ಟ್. 20): ಮಹಾರಾಷ್ಟ್ರದ ಪಶ್ಚಿಮ ಘಟಗಳ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ವರುಣ ಅಬ್ಬರಿಸುತ್ತಿದ್ದಾನೆ. ಇದರಿಂದ ಬೆಳಗಾವಿ ಜಿಲ್ಲೆಯ ಬಹುತೇಕ ನದಿಗಳು, ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ರೈತರ ಬೆಳೆದಿದ್ದ ನೂರಾರು ಎಕರೆ ಪ್ರದೇಶದ ಬೆಳೆಗಳು ನಷ್ಟ ಆಗಿವೆ. ಆದರೆ, ಜಿಲ್ಲೆಯ ಗೋಕಾಕ್ ಫಾಲ್ಸ್ ಹಾಗೂ ಗೋಡಚನಮಲ್ಕಿ ಜಲಾಶಯಕ್ಕೆ ಜೀವ ಕಳೆ ಬಂದಿದ್ದು, ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಇರುವ ಗೋಕಾಕ್ ಫಾಲ್ಸ್ ನಲ್ಲಿ ಜಲರಾಶಿ ನೋಡುವುದು ಒಂದು ಸಂತೋಷಯ ವಿಷಯ. ಈ ಜಲಪಾತ ಕರ್ನಾಟಕದ ನಯಾಗಾರ ಫಾಲ್ಸ್ ಎಂದೇ ಖ್ಯಾತಿಯನ್ನು ಗಳಿಸಿದೆ. ಸದ್ಯ ಲಕ್ಷಾಂತರ ಕ್ಯೂಸೆಕ್ ಕಪ್ಪು ಬಣ್ಣದ ನೀರು ಧುಮ್ಮಿಕ್ಕಿವುದು ನೋಡುವುದೆ ಒಂದು ಆನಂದ. ಈ ಜಲಪಾತವನ್ನು ನೋಡಲು ಸದ್ಯ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. 170 ಅಡಿ ಎತ್ತರದಿಂದ ನೀರು ಇಲ್ಲಿ ಕೆಳಗೆ ಬಿಳುತ್ತದೆ.
ಗೋಕಾಕ್ ಫಾಲ್ಸ್ ನಲ್ಲಿ ಜಲರಾಶಿಯ ದೃಶ್ಯ ವೈಭವ ಸೃಷ್ಠಿಯಾಗಿದೆ. ಫಾಲ್ಸ್ ನಲ್ಲಿ 1887ರಲ್ಲಿ ಬ್ರಿಟಿಷರು ನಿರ್ಮಾಣ ಮಾಡಿರುವ ವಿದ್ಯುತ್ ತಯಾರಿಕಾ ಘಟಕ ಇಂದಿಗೂ ಚಾಲನೆಯಲ್ಲಿದೆ. ಸದ್ಯ ಜಲಾಶಯದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಇರುವುದರಿಂದ ಪ್ರವಾಸಿಗರನ್ನು ಸಮೀಪಕ್ಕೆ ಬಿಡುತ್ತಿಲ್ಲ. ಇದಕ್ಕಾಗಿ ಪೊಲೀಸರನ್ನು ಸಹ ಸ್ಥಳದಲ್ಲಿಯೇ ನಿಯೋಜನೆ ಮಾಡಲಾಗಿದೆ. ಜಲಪಾತದ ಮೇಲ್ಭಾಗದಲ್ಲಿ 200 ಅಡಿ ಉದ್ದದ ತೂಗು ಸೇತುವೆ ಎಲ್ಲರ ಆಕರ್ಷಣೆಯ ಸ್ಥಳವಾಗಿದೆ.
ಪ್ರವಾಸಿಗರನ್ನು ಸೆಳೆಯುತ್ತಿರುವ ಮತ್ತೊಂದು ಜಲಾಶಯ..!
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಗೋಕಾಕ್ ಜಲಪಾತ ಪ್ರಖ್ಯಾತಿ ಗಳಿಸಿರುವುದು ಎಲ್ಲರಿಗು ಗೊತ್ತಿದೆ. ಆದರೆ, ಇದೇ ತಾಲೂಕಿನಲ್ಲಿ ಮತ್ತೊಂದು ಅತ್ಯಂತ ಸುಂದರ ಜಲಾಶಯದ ಇರುವುದು ಬಹುತೇಕರಿಗೆ ಗೊತ್ತಿಲ್ಲ. ಇಲ್ಲಿನ ಗೋಡಚನಮಲ್ಕಿ ಗ್ರಾಮದ ಬಳಿ ಇರುವ ಫಾಲ್ಸ್ ನೋಡಲು ಆಕರ್ಷಕವಾಗಿದೆ.
ಇದನ್ನೂ ಓದಿ :
ಸಂಪೂರ್ಣ ಭರ್ತಿಯಾದ ಕೆಆರ್ಎಸ್ ಜಲಾಶಯ; ನಾಳೆ ಸಿಎಂ ಯಡಿಯೂರಪ್ಪ ಬಾಗೀನ ಅರ್ಪಣೆ
15-20 ಅಡಿ ಎತ್ತರದಿಂದ ಎರಡು ಕಡೆಗಳಲ್ಲಿ ಬಿಳುವ ನೀರು ನೋಡುವುದುದೇ ಒಂದು ರೋಮಾಂಚಕ ಅನುಭವ. ಮಾರ್ಕಂಡಯ್ಯ ನದಿಯಿಂದ ಹರಿದು ಬರುವ ನೀರು ಈ ಜಲಾಶಯದಲ್ಲಿ ಬೀಳುತ್ತದೆ.
ಸದ್ಯ ಜಲಾಶಯದಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಇರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮಾಹಾ ಮಾರಿ ಕೊರೋನಾ ವೈರಸ್ ನಡುವೆ ಜನರು ಜಲಪಾತ ನೋಡಿ ಖುಷಿಯನ್ನು ಪಡುತ್ತಿದ್ದಾರೆ. ಇಲ್ಲಿಗೆ ಬರುವ ಜನ ತಮ್ಮ ಸಂಬಂಧಿಕರು, ಸ್ನೇಹಿತರ ಜತೆಗೆ ಸೆಲ್ಪಿ ತೆಗೆಸಿಕೊಂಡು ಸಂತೋಷ ಪಡುತ್ತಾರೆ.
Published by:
G Hareeshkumar
First published:
August 20, 2020, 11:16 PM IST