HOME » NEWS » District » WISTRON UNIT IN KOLAR SET TO RE OPEN SOON WITH FEW CONDITIONS RRK SNVS

Wistron Violence – ಕೋಲಾರದ ವಿಸ್ಟ್ರಾನ್ ಕಂಪನಿ ಪುನಾರಂಭಕ್ಕೆ ಸಿದ್ಧತೆ; ನೌಕರರ ಸೇರ್ಪಡೆಗೆ ಷರತ್ತು

ಕಾರ್ಮಿಕರ ದಂಗೆ ಘಟನೆ ನಡೆದು ತಿಂಗಳ ಬಳಿಕ ಕೋಲಾರದಲ್ಲಿ ವಿಸ್ಟ್ರಾನ್ ಮತ್ತೆ ಕಾರ್ಯಾರಂಭ ಮಾಡಲು ಅಣಿಯಾಗಿದೆ. ಆದರೆ, ಪೊಲೀಸ್ ಠಾಣೆಯಲ್ಲಿ ಪೂರ್ವಾಪರ ವಿವರ ಸಲ್ಲಿಸಿ ನಿರಾಕ್ಷೇಪಣಾ ಪತ್ರ ತಂದ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಷರತ್ತು ಹಾಕಿದೆ.

news18-kannada
Updated:January 22, 2021, 7:50 AM IST
Wistron Violence – ಕೋಲಾರದ ವಿಸ್ಟ್ರಾನ್ ಕಂಪನಿ ಪುನಾರಂಭಕ್ಕೆ ಸಿದ್ಧತೆ; ನೌಕರರ ಸೇರ್ಪಡೆಗೆ ಷರತ್ತು
ವಿಸ್ಟ್ರಾನ್ ಕಂಪನಿ
  • Share this:
ಕೋಲಾರ: ಇಲ್ಲಿಯ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ಬಹುರಾಷ್ಟ್ರೀಯ ವಿಸ್ಟ್ರಾನ್ ಇನ್ಪೋಕಾಂ ಕಂಪನಿಯು ತನ್ನ ನೌಕರರಿಗೆ ಸರಿಯಾಗಿ ವೇತನ ನೀಡದೆ  ಹೆಚ್ಚಿನ ಕೆಲಸದ ದುಡಿಸಿಕೊಂಡು ವರ್ತಿಸಿದ ಆರೋಪದ ಮೇಲೆ ಕಾರ್ಮಿಕರ ಕೋಪಕ್ಕೆ ಕಂಪನಿ ಗುರಿಯಾಗಿತ್ತು. ಡಿಸೆಂಬರ್ 12  ರಂದು ಘಟನೆ ನಡೆದ ನಂತರ, ಹಲವು ದಿನಗಳ ಬಳಿಕ ಖದ್ದು ಆ್ಯಪಲ್ ಹಾಗು ವಿಸ್ಟ್ರಾನ್ ಕಂಪನಿ ಕಾರ್ಮಿಕರ ಕ್ಷಮೆಯಾಚಿಸಿತ್ತು, ಕಂಪನಿಯಲ್ಲಿನ ವೇತನ ವಿಚಾರದಲ್ಲಿ  ಏರಿಳಿತ ನಡೆದರಿಂದಲೇ ಗಲಾಟೆಗಳು ನಡೆದಿವೆ ಎಂದು  ತನ್ನ ತಪ್ಪುಗಳನ್ನು ಒಪ್ಪಿಕೊಂಡಿತ್ತು. ಆದರೆ ವಿಸ್ಟ್ರಾನ್ ಕಂಪನಿಯು ಪುನರ್ ಆರಂಭ ಮಾತ್ರ ಪ್ರಶ್ನೆಯಾಗಿ ಎಲ್ಲರನ್ನೂ ಕಾಡುತ್ತಿತ್ತು. ಇದೀಗ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಕಂಪನಿ ಮುಂದಾಗಿದೆ.

ಆದರೆ ಕಂಪನಿಯು ಕಾರ್ಮಿಕರನ್ನ ಮತ್ತೆ ಗುತ್ತಿಗೆ ಆಧಾರದ ಮೇಲೆ ಅಥವಾ ಕಂಪನಿ ಗುತ್ತಿಗೆ ಮೇಲೆ ನೇಮಕಾತಿ ಮಾಡಿಕೊಳ್ಳಲಿದೆಯಾ ಎಂಬ ಮಾಹಿತಿ ಇನ್ನು ತಿಳಿದುಬಂದಿಲ್ಲ. ಆದರೆ ಹಲವು ಷರತ್ತುಗಳನ್ನ ಮಾತ್ರ ಕಡ್ಡಾಯವಾಗಿ ಪಾಲಿಸಿಕೊಂಡು ಕಂಪನಿಗೆ ಸೇರ್ಪಡೆಯಾಗುವ ಅವಕಾಶ ಕಲ್ಲಿಸಿದೆ.

ವಿಸ್ಟ್ರಾನ್ ಕಂಪನಿ ವಿಧಿಸಿರುವ ​ ಷರತ್ತುಗಳು:
* ಕಾರ್ಮಿಕರು ಕಡ್ಡಾಯವಾಗಿ  ಕಂಪನಿಯ ಆ್ಯಪ್​​​ನಲ್ಲಿ ಹೆಸರು, ಹಾಗು ಪೂರ್ವಾಪರ ವಿವರಗಳನ್ನ ನೋಂದಣಿ ಮಾಡಿಕೊಳ್ಳಬೇಕು.
* ದಾಖಲಾತಿಗಳೊಂದಿಗೆ ಪೊಲೀಸ್​ ಠಾಣೆಯಲ್ಲಿ ಪಡೆಯುವ ನಿರಪೇಕ್ಷಣಾ ಪತ್ರ ಪಡೆದವರಿಗೆ ಮಾತ್ರ ಕಂಪನಿಯಲ್ಲಿ ಉದ್ಯೋಗ

ಇದನ್ನೂ ಓದಿ: Huge Blast - ಶಿವಮೊಗ್ಗದಲ್ಲಿ ಭಾರೀ ಡೈನಮೈಟ್ ಸ್ಫೋಟ; 15ಕ್ಕೂ ಮಂದಿ ದುರ್ಮರಣ

ವಿಸ್ಟ್ರಾನ್ ಕಂಪನಿಯಲ್ಲಿ ದಾಂದಲೆ ಪ್ರಕರಣ ಸಂಬಂಧಿಸಿದಂತೆ ಘಟನೆ ನಡೆದು ಒಂದೂವರೆ ತಿಂಗಳಾದರೂ ಕಂಪನಿ ಇನ್ನೂ ಕಾರ್ಯಾರಂಭ ಮಾಡಿಲ್ಲ. ಇದೀಗ ಕಂಪನಿಗೆ ಕಾರ್ಮಿಕರ ನೇಮಕಕ್ಕೆ ಚಾಲನೆ ಸಿಕ್ಕಿದ್ದು, ಕಂಪನಿಯು ವಿವಿಧ ಷರತ್ತುಗಳನ್ನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ನಿರಾಕ್ಷೇಪಣಾ ಪತ್ರ ಪಡೆಯಲು ವಿವಿಧ ಪೊಲೀಸ್ ಠಾಣೆಗಳ ಎದುರು ಕಾರ್ಮಿಕರು ಸಾಲುಗಟ್ಟಿ ನಿಂತ ದೃಶ್ಯ ಸಾಮಾನ್ಯವಾಗಿದೆ.ವಿಸ್ಟ್ರಾನ್ ಕಂಪನಿಯಲ್ಲಿ ದಾಂದಲೆ ಮಾಡಿದವರು ಇನ್ನೂ ಜೈಲಿನಲ್ಲೇ ಇದ್ದಾರೆ. ಅಮಾಯಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ಕಂಪನಿ ಮುಂದಾಗಿದೆ. ಹಾಗಾಗಿ ವಾಟ್ಸಪ್​ಗಳ ಮೂಲಕ ಮಾಹಿತಿ ನೀಡಿ ಮತ್ತೆ ಕೆಲಸಕ್ಕೆ ಬರಲು ಸೂಚನೆ ನೀಡಿದ್ದಾರೆ. ಆದರೆ, ಕೆಲಸಕ್ಕೆ ವಾಪಸ್ಸು ಬರಬೇಕಾದವರು ಪೊಲೀಸರಿಂದ ನಿರಪೇಕ್ಷಣಾ ಪತ್ರ ತರಬೇಕಾಗಿರೋದು ಕಡ್ಡಾಯವಾಗಿದೆ. ಹೀಗಾಗಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗ ನೂರಾರು ಯುವಕ ಯುವತಿಯರು ಜಮಾಯಿಸಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ತೋರಿಸಿ, ಪೊಲೀಸರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ಅವರಿಗೆ ಸಬ್ ಇನ್ಸ್ ಪೆಕ್ಟರ್ ನಿರಪೇಕ್ಷಣಾ ಪತ್ರ ನೀಡಿ ಕಳುಹಸುತ್ತಿದ್ದಾರೆ. ಇಷ್ಟು ದಿನಗಳ ಕಾಲ ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದೆ ಪರದಾಡುತ್ತಿದ್ದ ಯುವಕ ಯುವತಿರು ಉತ್ಸುಕರಾಗಿ ಭಾಗವಹಿಸಿ ತಮ್ಮ ಪೂರ್ವಾಪರ ವಿವರಿಸಿ, ಅಗತ್ಯ ದಾಖಲೆಯನ್ನು ಸಲ್ಲಿಸಿ ಮತ್ತೆ ಕಂಪನಿಗೆ ಪುನರ್ ಸೇರಿಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: VK Sasikala: ಶಶಿಕಲಾಗೆ ಕೋವಿಡ್​ ದೃಢ; ಜೈಲಿನಿಂದ ಬಿಡುಗಡೆಗೊಂಡರೂ ಆಸ್ಪತ್ರೆಯಲ್ಲಿಯೇ ಇರಬೇಕು ಚಿನ್ನಮ್ಮ

ಒಟ್ಟಿನಲ್ಲಿ ಐಫೋನ್ ಬಿಡಿಬಾಗಗಳ ತಯಾರಿಕೆಯ ಒಪ್ಪಂದ ಹೊಂದಿರುವ ವಿಸ್ಟಾನ್ ಕಂಪನಿಯವರು ಈಗಾಗಲೇ ತಮ್ಮಿಂದಾಗಿರುವ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಮಾತನ್ನು ಹೇಳಿದೆ. ಹಿಂದೆ ನೌಕರರಿಗೆ ಆಗಿರುವ ತಪ್ಪುಗಳು ಮುಂದೆ ಪುನರಾವರ್ತನೆ ಆಗದಂತೆ ಎಚ್ಚರಿಕೆಯ ನಡೆ ಇಟ್ಟಿದೆ. ಯಾವುದೇ ಅಡೆತಡೆ ಇಲ್ಲದೆ ಮತ್ತೆ ಕಂಪನಿ ಕಟ್ಟುವ ಕೆಲಸಕ್ಕೆ ಮುಂದಾಗಿರುವ ವಿಸ್ಟ್ರಾನ್ ಕ್ರಮವನ್ನ ಎಲ್ಲರು ಸ್ವಾಗತ ಮಾಡಿದ್ದಾರೆ.

ವರದಿ: ರಘುರಾಜ್
Published by: Vijayasarthy SN
First published: January 22, 2021, 7:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories