ವಿಜಯಪುರದಲ್ಲಿ 60 ವರ್ಷ ಮೇಲ್ಪಟ್ಟವರು ಮನೆಬಿಟ್ಟು ಹೊರಬಂದರೆ ಕಠಿಣ ಕ್ರಮ; ಜಿಲ್ಲಾಧಿಕಾರಿ ಎಚ್ಚರಿಕೆ

ವಿಜಯಪುರ ಜಿಲ್ಲೆಯಲ್ಲಿ ಈವರೆಗೆ 976 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಇವರಲ್ಲಿ 19 ಜನ ನಾನಾ ಕಾಯಿಲೆ ಮತ್ತು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.  ಅಷ್ಟೇ ಅಲ್ಲ, ಕೊರೋನಾದಿಂದ 674 ಜನ ಈವರೆಗೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 

news18-kannada
Updated:July 16, 2020, 2:50 PM IST
ವಿಜಯಪುರದಲ್ಲಿ 60 ವರ್ಷ ಮೇಲ್ಪಟ್ಟವರು ಮನೆಬಿಟ್ಟು ಹೊರಬಂದರೆ ಕಠಿಣ ಕ್ರಮ; ಜಿಲ್ಲಾಧಿಕಾರಿ ಎಚ್ಚರಿಕೆ
ಸಾಂದರ್ಭಿಕ ಚಿತ್ರ
  • Share this:
ವಿಜಯಪುರ (ಜು. 16): ದಿನೇ ದಿನೇ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿತರ ಪ್ರಮಾಣದಿಂದ ಬೆಚ್ಚಿ ಬಿದ್ದಿರುವ ಬಸವನಾಡು ವಿಜಯಪುರ ಜಿಲ್ಲೆಯ ಜನರಿಗೆ ಸ್ವಲ್ಪ ನೆಮ್ಮದಿಯ ಸಂಗತಿಯೊಂದು ಸಂತಸ ಮೂಡಿಸಿದೆ.

ವಿಜಯಪುರ ಜಿಲ್ಲೆ ಕೊರೋನಾದಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 70ಕ್ಕಿಂತಲೂ ಹೆಚ್ಚಾಗಿದೆ.  ಇದು ಜಿಲ್ಲಾಡಳಿತ ಪಾಲಿಗೂ ಸ್ವಲ್ಪ ಮಟ್ಟಿಗೆ ನೆಮ್ಮದಿ ಮೂಡಿಸಿದೆ.  ಈ ಮಧ್ಯೆ ನಾನಾ ಕಾಯಿಲೆಗಳ ಜೊತೆ ಕೊರೋನಾ ಸೋಂಕಿನಿಂದ ಸಾವಿಗೀಡಾದವರ ಪ್ರಮಾಣವೂ ಶೇ. 2ಕ್ಕಿಂತಲೂ ಕಡಿಮೆ ಇರುವುದು ವಿಜಯಪುರ ಜಿಲ್ಲೆಯಲ್ಲಿ ಕೊರೋನಾಗೆ ಸಿಗುತ್ತಿರುವ ಉತ್ತಮ ಚಿಕಿತ್ಸೆಗೆ ಸಾಕ್ಷಿಯಾಗಿದೆ.

ಈ ಮಧ್ಯೆ ಕೊರೋನಾ ಸೋಂಕಿಗೆ ಕಡಿವಾಣ ಹಾಕಲು ಖಡಕ್ ನಿರ್ಧಾರ ಕೈಗೊಂಡಿರುವ ವಿಜಯಪುರ ಜಿಲ್ಲಾಡಳಿತ, ಇನ್ನು ಮುಂದೆ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರ ಬಂದರೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.  ಮೊದಲ ಬಾರಿ ತಪ್ಪು ಮಾಡಿದರೆ ಎಚ್ಚರಿಕೆ ನೀಡಲಾಗುತ್ತಿದೆ.  ಎರಡನೇ ಬಾರಿಗೆ ಮನೆಯಿಂದ ಹೊರ ಬಂದರೆ ನೇರವಾಗಿ ಹೋಂ ಕ್ವಾರಂಟೈನ್ ಮಾಡುವ ಮೂಲಕ ಸೋಂಕು ಹೆಚ್ಚುವ ಸಾಧ್ಯತೆಗಳಿರುವ 60 ವರ್ಷ ಮೇಲ್ಪಟ್ಟವರಿಗೆ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಖಡಕ್ ವಾರ್ನಿಂಗ್ ನೀಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಈವರೆಗೆ 976 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಇವರಲ್ಲಿ 19 ಜನ ನಾನಾ ಕಾಯಿಲೆ ಮತ್ತು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.  ಅಷ್ಟೇ ಅಲ್ಲ, ಕೊರೋನಾದಿಂದ 674 ಜನ ಈವರೆಗೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.  ಹೀಗಾಗಿ ಸಾರ್ವಜನಿಕರು ಕೊರೋನಾ ಬಗ್ಗೆ ಭಯಪಡುವುದು ಅನಗತ್ಯವಾಗಿದೆ.

ಮತ್ತೊಂದು ಪ್ರಮುಖ ವಿದ್ಯಮಾನದಲ್ಲಿ, ವಿಜಯಪುರ ಜಿಲ್ಲೆಯಲ್ಲಿ ಈಗ ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಈಗ ಯಾವುದೇ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ.  ರೋಗಿಗಳೂ ಅಷ್ಟೇ.  ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕು ಎಂದು ಹಠ ಹಿಡಿಯುವುದು ಸರಿಯಲ್ಲ.  ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆಯ ಸಮಸ್ಯೆಯಿಲ್ಲ.  ಇತರ ಕಾಯಿಲೆಗಳ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳು ಅತೀ ಜಾಗೃತವಾಗಿ ಬೇರೆ ಕಾರಣ ಹೇಳಿ ಚಿಕಿತ್ಸೆ ತಡ ಅಥವಾ ನಿರಾಕರಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಚಾಮರಾಜನಗರದ ಈ ಗ್ರಾಮಕ್ಕೆ ಹೊರಗಿನವರು ಬಂದರೆ 14 ದಿನ ಕ್ವಾರಂಟೈನ್ ಕಡ್ಡಾಯ!

ಈಗ ಕೊರೋನಾ ರೋಗಿಗಳಿಗೆ ಚಿಕಿತ್ಸೆ ಸಮಸ್ಯೆಯಿಲ್ಲ.  ನಿಗದಿತ ಖಾಸಗಿ ಆಸ್ಪತ್ರೆಗಳು ಕೊರೋನಾ ರೋಗಿಗಳಿಗೂ ಚಿಕಿತ್ಸ ನೀಡುತ್ತಿದ್ದಾರೆ.  ರೋಗಿಗಳೂ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಬರದೇ ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಚಿಕಿತ್ಸೆಗೆ ಮುಂದಾಗಬೇಕು.  ವೈದ್ಯರೂ ಅಷ್ಟೇ, ಮೊದಲು ರೋಗಿಗೆ ಚಿಕಿತ್ಸೆ ಆರಂಭಿಸಲಿ. ನಂತರ ಬೇಕಿದ್ದರೆ ಗಂಟಲು ದ್ರವದ ಮಾದರಿ ಸಂಗ್ರಹಿಸಲಿ.  ಉಸಿರಾಟ ಸಮಸ್ಯೆಗೆ ಕೇವಲ ಕೊರೋನಾ ಕಾರಣವಲ್ಲ.  ನ್ಯೂಮೋನಿಯಾ, ಅಸ್ತಮಾದಿಂದಲೂ ಉಸಿರಾಟದ ಸಮಸ್ಸೆ ಎದುರಾಗಬಹುದು.ಈ ಹಿನ್ನೆಲೆಯಲ್ಲಿಯೇ ಮೊದಲು ರೋಗಿಗೆ ಚಿಕಿತ್ಸೆ ನೀಡಿ ಕೊರೊನಾ ಖಚಿತವಾದರೆ ಬೇರೆ ವಾರ್ಡಿಗೆ ಶಿಫ್ಟ್ ಮಾಡಲು ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲ, ಮದುವೆ ಮತ್ತು ಇತರೆ ಸಮಾರಂಭಗಳನ್ನು ಮುಂದೂಡುವುದು ಉತ್ತಮ.  ಆದರೂ, ಧಾರ್ಮಿಕ ಮತ್ತು ಸಂಪ್ರದಾಯಕ್ಕೆ ಕಟ್ಟು ಬಿದ್ದರೆ ಮನೆಮಂದಿಗೆ ಸೀಮಿತವಾಗುವಂತೆ ಮತ್ತು ಕೇವಲ 20 ಜನರಿಗೆ ಮಾತ್ರ ಅವಕಾಶವಿರುವಂತೆ ಮದುವೆ ಮಾಡಬೇಕಾಗುತ್ತದೆ.  ಸಮುದಾಯ ಭವನಗಳಲ್ಲಿ ಮದುವೆಗೆ ಅವಕಾಶ ನಿರಾಕರಿಸಲಾಗಿದೆ.

ಈಗ ಮಳೆಗಾಲ ಆರಂಭವಾಗಿರುವುದರಿಂದ ಕೊರೊನಾ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದರೂ, ಯಾರೂ ಅನಗತ್ಯ ಭಯ ಬೀಳುವ ಅಗತ್ಯವಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಮಾರ್ಮಿಕವಾಗಿ ಹೇಳಿರುವುದು ಗಮನಾರ್ಹವಾಗಿದೆ.
Published by: Latha CG
First published: July 16, 2020, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading