ಕೋಲಾರದ ಕ್ಯಾಸಂಬಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಲಿದೆ  ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಸ್ಮಾರಕ 

ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆಯಲ್ಲಿ ಸ್ಮಾರಕ ನಿರ್ಮಿಸಲು ಅನುಮೋದನೆ ನೀಡಲಾಗಿತ್ತು. ಅದರಂತೆ ಸ್ಮಾರಕ ಸಂಕೀರ್ಣ ಕಾಮಗಾರಿಗೆ ಸ್ಥಳ ಪರಿಶೀಲನೆಯೂ ಮುಗಿದಿದೆ.

news18-kannada
Updated:July 18, 2020, 2:58 PM IST
ಕೋಲಾರದ ಕ್ಯಾಸಂಬಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಲಿದೆ  ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಸ್ಮಾರಕ 
ಸ್ಥಳ ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು
  • Share this:
ಕೋಲಾರ(ಜು.18): ರಾಜ್ಯ ಕಂಡಂತಹ ಹೆಮ್ಮೆಯ ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ, ವಿದ್ಯಾರ್ಥಿಗಳ ಭವಿಷ್ಯ ಕುರಿತು ದೂರಾಲೋಚನೆ ಹೊಂದಿದ್ದ ಸಜ್ಜನ, ಮಾಜಿ ಮುಖ್ಯಮಂತ್ರಿ ಕೆಸಿ ರೆಡ್ಡಿ ಅವರು ಇಂದಿಗೂ ರಾಜ್ಯದೆಲ್ಲೆಡೆ ಹೆಸರುವಾಗಿಯಾಗಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್​ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿ ಜನಿಸಿದ್ದ ಅವರು, ಕರ್ನಾಟಕದ ಮೈಸೂರು ರಾಜ್ಯದಲ್ಲಿ ಮೊದಲ ಮುಖ್ಯ ಮಂತ್ರಿಯಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು. ಇಂತಹ ಮಹಾನ್ ನಾಯಕರ ಸ್ಮರಣಾರ್ಥ ಕೆಸಿ ರೆಡ್ಡಿಯವರ ಪುತ್ತಳಿಯನ್ನ ವಿಧಾನಸೌಧ ಎದುರು ಸ್ಥಾಪಿಸಿ ಗೌರವ ಸಲ್ಲಿಸಲಾಗುತ್ತಿದೆ.

ಇದೀಗ ಅವರ ಹುಟ್ಟೂರು ಕ್ಯಾಸಂಬಳ್ಳಿ ಗ್ರಾಮದಲ್ಲಿ ಸ್ಮಾರಕ ಸಂಕೀರ್ಣ ನಿರ್ಮಿಸಲು, ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ಕಾಮಗಾರಿಯನ್ನ ಆರಂಭಿಸಲು ಮುಂದಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆಯಲ್ಲಿ ಸ್ಮಾರಕ ನಿರ್ಮಿಸಲು ಅನುಮೋದನೆ ನೀಡಲಾಗಿತ್ತು. ಅದರಂತೆ ಸ್ಮಾರಕ ಸಂಕೀರ್ಣ ಕಾಮಗಾರಿಗೆ ಸ್ಥಳ ಪರಿಶೀಲನೆಯೂ ಮುಗಿದಿದೆ.

2 ಎಕರೆಯಲ್ಲಿ ನಿರ್ಮಾಣವಾಗಲಿದೆ ಸಂಕೀರ್ಣ; ಸ್ಥಳವನ್ನು ಪ್ರವಾಸೋದ್ಯಮ ತಾಣವಾಗಿಸುವ ಚಿಂತನೆ

ಕೆಜಿಎಫ್​ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ರಾಮಪುರ ಗ್ರಾಮದ ಕೆರೆ ಬಳಿ 2 ಎಕರೆ ಗೋಮಾಳ ಜಾಗವನ್ನು ಸ್ಮಾರಕ ಸಂಕೀರ್ಣ ನಿರ್ಮಿಸಲು ಗುರ್ತಿಸಲಾಗಿದೆ. ಸ್ಥಳಕ್ಕೆ ಕೆಜಿಎಫ್​​ ಶಾಸಕಿ ರೂಪಕಲಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ನಡೆಸಲು ನಿರ್ಮಿತಿ ಕೇಂದ್ರಕ್ಕೆ ಅನುಮತಿ ನೀಡಿದ್ದು, ಶೀಘ್ರದಲ್ಲೆ ಭೂಮಿ ಪೂಜೆಯು ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಕೋವಿಡ್ ಹಾಸಿಗೆಗಳ ಕೊರತೆ ನೀಗಿಸದಿದ್ದರೆ ಸಾವಿನ ಸಂಖ್ಯೆ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ..!

ಇನ್ನು ಪಕ್ಕದಲ್ಲೆ ನೂರಾರು ಎಕರೆಯ ಕೆರೆಯಿದ್ದು ಸುಂದರ ಉದ್ಯಾನವನ ನಿರ್ಮಾಣವಾದರೆ, ಉತ್ತಮ ಹಿನ್ನೋಟವು ಕಾಣಸಿಗಲಿದೆ, ಸ್ಮಾರಕ ಸಂಕಿರಣದಲ್ಲಿ  ಕೆಸಿ ರೆಡ್ಡಿ ಅವರ ಪುತ್ತಳಿ, ಅವರ ಕುರಿತಾದ ಸಂಪೂರ್ಣ ಮಾಹಿತಿ  ಫಲಕಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಸಂಕೀರ್ಣ ಸ್ಥಳವನ್ನ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು ಇಲಾಖೆಯು ಹಲವು ಯೋಜನೆಯನ್ನ ಹಮ್ಮಿಕೊಂಡಿದೆ.ಇನ್ನು ಕಾಮಗಾರಿ ನಡೆಸಲು ನಿರ್ಮಿತಿ ಕೇಂದ್ರಕ್ಕೆ ಅನುಮತಿ ನೀಡಿರುವುದರಿಂದ ‌ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಯುತ್ತಾ ಎನ್ನುವ ಅನುಮಾನ ಕಾಡುತ್ತಿದೆ. ಯಾಕೆಂದರೆ ಸರ್ಕಾರಿ ಕಟ್ಟಡಗಳ ಕಾಮಗಾರಿಗಳನ್ನ ಹಲವೆಡೆ ನಡೆಸುತ್ತಿರುವ ಇಲಾಖೆಯು, ಅಂದುಕೊಂಡ  ಸಮಯಕ್ಕೆ ಕೆಲಸ ಮುಗಿಸದೆ ಈಗಾಗಲೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಾಲು ಸಾಲು ಟೀಕೆಗಳನ್ನು ಎದುರಿಸುತ್ತಿದೆ. ಹೀಗಾಗಿ ಕಾಮಗಾರಿಯನ್ನು ಆರಂಭಿಸುವ ಮುನ್ನವೇ ಇಂತಿಷ್ಟು ಸಮಯವನ್ನು ನಿಗದಿ ಮಾಡಬೇಕಿದೆ.

ಒಟ್ಟಿನಲ್ಲಿ ರಾಜ್ಯದ ಮೊದಲ ಮುಖ್ಯಮಂತ್ರಿ ಕೆಸಿ ರೆಡ್ಡಿ ಅವರ ಸ್ಮಾರಕ ಸಂಕಿರಣ  ಕಾಮಗಾರಿ ಆರಂಭಕ್ಕೆ ಹಸಿರು ನಿಶಾನೆ ದೊರೆತಿದ್ದು, ಕ್ಯಾಸಂಬಳ್ಳಿ ಗ್ರಾಮದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
Published by: Latha CG
First published: July 18, 2020, 2:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading