HOME » NEWS » District » WILD ANIMALS USED FOR SUPERSTITIONS BUOY KNOW ONE OWL COST HOW MUCH CSB HK

ಮೂಢನಂಬಿಕೆಗೆ ವನ್ಯಜೀವಿಗಳ ಬಳಕೆ : ಒಂದು ಜೀವಂತ ಗೂಬೆಯ ಬೆಲೆ ಎಷ್ಟು ಗೊತ್ತಾ?

ಬಂಧಿತರು ಮೂಢ ನಂಬಿಕೆಯ ಉದ್ದೇಶದಿಂದ ಜೀವಂತ ಗೂಬೆಯನ್ನು 30 ಲಕ್ಷ ಹಣಕ್ಕೆ ವ್ಯವಹಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿಯೇ ಅರಣ್ಯ ಇಲಾಖೆಯ ಜಾಗೃತ ದಳದ ಸಿಬ್ಬಂದಿ ದಾಳಿ ಮಾಡಿ ಜೀವಂತ ಗೂಬೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ

news18-kannada
Updated:November 11, 2020, 7:28 AM IST
ಮೂಢನಂಬಿಕೆಗೆ ವನ್ಯಜೀವಿಗಳ ಬಳಕೆ : ಒಂದು ಜೀವಂತ ಗೂಬೆಯ ಬೆಲೆ ಎಷ್ಟು ಗೊತ್ತಾ?
ಜೀವಂತ ಗೂಬೆ
  • Share this:
ಬೆಳಗಾವಿ(ನವೆಂಬರ್. 11): ಜಗತ್ತು ಎಷ್ಟೆ ಮುಂದುವರೆದರು ಇನ್ನೂ ಅನೇಕ ಮೂಢ ನಂಬಿಕೆ ಆಚರಣೆಗಳು ನಮ್ಮಲ್ಲಿ ಜೀವಂತ ಇವೆ. ಇದೇ ರೀತಿಯ ಮಾಟ, ಮಂತ್ರ, ತಂತ್ರಕ್ಕಾಗಿ ಅನೇಕ ವನ್ಯಜೀವಿಗಳ ಬಳಕೆ ಸಹ ನಡೆಯುತ್ತಿದೆ. ಬೆಳಗಾವಿ ಅರಣ್ಯ ಇಲಾಖೆಯ ಜಾಗೃತ ದಳ ವಿಶೇಷ ಕಾರ್ಯಾಚರಣೆ ನಡೆಸಿದ ಮೂಢನಂಬಿಕೆಗೆ ಬಳಸುತ್ತಿದ್ದ ಗೂಬೆಯನ್ನು ವಶಕ್ಕೆ ಪಡೆಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಜೀವಂತ ಗೂಬೆಯ ಬೆಲೆ ಕೇಳಿದ್ರೆ ಶಾಕ್ ಆಗುವುದು ಗ್ಯಾರಂಟಿ. ಕರ್ನಾಟಕ- ಮಹಾರಾಷ್ಟ್ರದ ಗಡಿಯಲ್ಲಿ ಜೀವಂತ ಗೂಬೆ, ಆಮೆ, ಹಾವು ಸಾಗಾಟದ ಅನೇಕ ಪ್ರಕರಣಗಳು ಬಯಲಾಗಿವೆ. ಸದ್ಯ ಅರಣ್ಯ ಇಲಾಖೆಯ ಜಾಗೃತ ದಳ ಬಲೆಗೆ ಜೀವಂತ ಗೂಬೆ ಸಾಗಾಟ ಮಾಡುತ್ತಿದ್ದ ಖತರ್ನಾಕ್ ತಂಡವೊಂದು ಬಲೆಗೆ ಬಿದ್ದಿದೆ. ಪ್ರಕರಣ ಸಂಬಂಧ ಐದು ಜನರನ್ನು ಬಂಧಿಸಲಾಗಿದ್ದು, ಶುಂಭ ಕಾಂಬ್ಳೆ, ಮಯೂರ ಕಾಂಬ್ಳೆ ಎಂಬ ಇಬ್ಬರು ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಸಾಂಗಾಂವ ಗ್ರಾಮದವರಾಗಿದ್ದಾರೆ.

ಸೂರಜ್ ವಡ್ಡರ್, ಅರುಣ  ಕೊರವಿ, ಮಯೂರ ಕಾಂಬ್ಳೆ ಈ ಮೂವರು  ಚಿಕ್ಕೋಡಿ ತಾಲೂಕಿನ ಖಡಕಲಾಟ, ಸದಲಗಾ, ಕಾರದಗಾ ಗ್ರಾಮದ ಆರೋಪಿಗಳಾಗಿದ್ದು, ಬಂಧಿತರಿಂದ 5 ಬೈಕ್ ಗಳನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.ಬಂಧಿತರು ಮೂಢ ನಂಬಿಕೆಯ ಉದ್ದೇಶದಿಂದ ಜೀವಂತ ಗೂಬೆಯನ್ನು 30 ಲಕ್ಷ ಹಣಕ್ಕೆ ವ್ಯವಹಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿಯೇ ಅರಣ್ಯ ಇಲಾಖೆಯ ಜಾಗೃತ ದಳದ ಸಿಬ್ಬಂದಿ ದಾಳಿ ಮಾಡಿ ಜೀವಂತ ಗೂಬೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಡಿಸಿಎಫ್ ಶಂಕರ್ ಕಲ್ಲೋಳಿಕರ್, ಎಸಿಎಫ್ ವಿ ಡಿ ಹುದ್ದರ್, ಆರ್ ಎಫ್ ಓ ರಾಕೇಶ ಮುರಾರಿ, ಸುರೇಶ ನಾಯ್ಕ್, ಡಿ ಆರ್ ಹಣಜೀ ಸಿಬ್ಬಂದಿಯಿಂದ ಯಶಸ್ವಿ ದಾಳಿ ನಡೆದಿದೆ.

ಇದನ್ನೂ ಓದಿ : ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ; ಕೊನೆಗೂ ಗೆಲುವಿನ ನಗೆ ಬೀರಿದ ಬಿಜೆಪಿಯ ಶಶೀಲ್ ನಮೋಶಿ

ರಾಜ್ಯದಲ್ಲಿ ಗಡಿ ಭಾಗದಲ್ಲಿ ವನ್ಯಜೀವಿಗಳ ಅಕ್ರಮ ಸಾಗಾಟ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ.ಇದನ್ನು ತಡೆಯುವ ನಿಟ್ಟಿನಿಲ್ಲಿ ಅರಣ್ಯ ಇಲಾಖೆಯ ಸಂಚಾರಿ ಜಾಗೃತ ದಳ ನಿರಂತರವಾಗಿ ಪ್ರಯತ್ನ ನಡೆಸಿದೆ. ಹೆಚ್ಚಿನ ತನಿಖೆ ನಡೆಸಲು ಪ್ರತ್ಯೇಕ ತಂಡಗಳನ್ನು ಸಹ ರಚನೆ ಮಾಡಲಾಗಿದೆ. ಇದಕ್ಕೆ ಸಾರ್ವಜನಿಕರು ಸಹ ತಮ್ಮಲ್ಲಿನ ಮಾಹಿತಿಯನ್ನು ನೀಡಿ ವನ್ಯಜೀವಿಗಳ ರಕ್ಷಣೆಗೆ ಮುಂದಾಗಬೇಕು ಎಂದು ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.
ಜೀವಂತ ಗೂಬೆಯನ್ನು ಮನೆಯಲ್ಲಿ ಇಟ್ಟರೇ ಅದೃಷ್ಟ ಖುಲಾಯಿಸುತ್ತದೆ. ಜತೆಗೆ ಶ್ರೀಮಂತಿಕೆ ಬಂದು ಜೀವನ ಮಟ್ಟ ಸುಧಾರಣೆ ಆಗಲಿದೆ ಎಂಬ ಬಗ್ಗೆ ಅನೇಕ ಮೂಢನಂಬಿಕೆಗಳು ಇವೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಲಕ್ಷಾಂತರ ರೂಪಾಯಿಗೆ ಜೀವಂತ ಗೂಬೆಯನ್ನು ಮಾರಾಟ ಮಾಡುತ್ತಿದ್ದರು .
Published by: G Hareeshkumar
First published: November 11, 2020, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories