ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ ಗಂಡನಿಗೆ ಊಟ ಕೊಡಲು 6 ಕಿ. ಮೀ ನಡೆದುಕೊಂಡು ಬಂದ ಪೊಲೀಸ್ ಕಾನ್ಸ್​ಟೇಬಲ್​ ಹೆಂಡತಿ..!

ಕಾನ್ಸ್​ಟೇಬಲ್​​ವೊಬ್ಬರ ಹೆಂಡತಿಯೊಬ್ಬಳು ತನ್ನ ಗಂಡನಿಗೆ ನಡೆದುಕೊಂಡು ಬಂದ ಮನೆ ಊಟ ನೀಡಿ ವಾಪಸ್ ಹೋದ ಘಟನೆ ನಡೆದಿದೆ.

news18-kannada
Updated:July 5, 2020, 5:31 PM IST
ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ ಗಂಡನಿಗೆ ಊಟ ಕೊಡಲು 6 ಕಿ. ಮೀ ನಡೆದುಕೊಂಡು ಬಂದ ಪೊಲೀಸ್ ಕಾನ್ಸ್​ಟೇಬಲ್​ ಹೆಂಡತಿ..!
ನೂರಜಾಹನ್ ಅಲಿಖಾನ್
  • Share this:
ಬೆಳಗಾವಿ(ಜುಲೈ. 05): ದೇಶಾದ್ಯಂತೆ ಕೊರೋನಾ ವೈರಸ್ ಮಹಾಮಾರಿಯ ಅಬ್ಬರದ ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಭಾನುವಾರವನ್ನು ಲಾಕ್ ಡೌನ್ ಮಾಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರ ಕೆಲಸ ಸಾಮಾನ್ಯದಿನಕ್ಕಿಂತ ಹೆಚ್ಚು ಇರುತ್ತದೆ. ತನ್ನ ಗಂಡನಿಗೆ ಊಟದ ಬಾಕ್ಸ್ ನೀಡಲು ಹೆಂಡತಿ 6 ಕಿ.ಮೀ ನಡೆದುಕೊಂಡು ಬಂದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಭಾನುವಾರ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುತೇಕ ಹೋಟೆಲ್, ಖಾನಾವಾಳಿಗಳು ಬಂದ್ ಆಗಿವೆ. ಬೆಳಗ್ಗೆಯಿಂದಲೇ ಕರ್ತವ್ಯದಲ್ಲಿ ಇರುವ ಪೊಲೀಸರಿಗೆ ಇದರಿಂದ ಉಪಹಾರ, ಊಟದ ಸಮಸ್ಯೆ ಎದುರಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡ ಕಾನ್ಸ್​ಟೇಬಲ್​​ವೊಬ್ಬರ ಹೆಂಡತಿಯೊಬ್ಬಳು ತನ್ನ ಗಂಡನಿಗೆ ನಡೆದುಕೊಂಡು ಬಂದ ಮನೆ ಊಟ ನೀಡಿ ವಾಪಸ್ ಹೋದ ಘಟನೆ ನಡೆದಿದೆ. ಬೆಳಗಾವಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಮುಖ್ಯ ಕಾನ್ಸ್​ಟೇವಲ್​ ಆಗಿ ಅಲಿಖಾನ್ ಕರ್ತವ್ಯ ನಿರ್ವಹಿಸುತ್ತಾರೆ. ಇಂದು ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಎನ್ ಡಿ ಕೂಟ ವೃತ್ತದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಎಪಿಎಂಸಿ ಯಾರ್ಡ್ ನಲ್ಲಿ ಇರುವ ಮನೆಯಿಂದ ಹೆಂಡತಿ ನೂರಜಾಹನ್ ಅಲಿಖಾನ್ ಪತಿಗಾಗಿ ಊಟ ತಂದು ಕೊಟ್ಟಿದ್ದಾರೆ. ಹೆಂಡತಿಯು ತನಗಾಗಿ 6 ಕೀ.ಮಿ ನಡೆದುಕೊಂಡು ಬಂದು ಊಟ ನೀಡದ್ದರಿಂದ ಪೊಲೀಸ್ ಮುಖ್ಯಪೇದೆ ಅಲಿಖಾನ್ ಸಂತಸಕ್ಕೆ ಕಾರಣವಾಗಿದೆ. ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಪತ್ನಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ಹೆಚ್ಚಿಸಿದಂತೆ ಆಗಿದೆ.

ಕೊರೋನಾ ಸೋಂಕಿಗೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆರಡು ಸಾವು..!

ಕೊರೋನಾ ಸೋಂಕಿನಿಂದ ಬೆಳಗಾವಿ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಇಬ್ಬರು ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಯಭಾಗ ತಾಲೂಕಿನ ಕುಡುಚಿ ಮೂಲದ 70 ವರ್ಷದ ವೃದ್ಧ ಹಾಗೂ ವೀರಭದ್ರ ನಗರದ 48 ವರ್ಷದ ವ್ಯಕ್ತಿ ಮೃತರು. ಇಬ್ಬರು ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು. ಇಬ್ಬರ ಅಂತ್ಯಕ್ರಿಯೇ ಇಂದು ನಗರದ ಅಂಜುಮನ್ ಕಮಿಟಿ ಸ್ಮಶಾನದಲ್ಲಿ ನಡೆಸಲಾಯಿತು.

ಇದನ್ನೂ ಓದಿ : ಬಂದೇ ನವಾಜ್ ಉರುಸ್ ಮೇಲೆ ಕೊರೋನಾ ಕರಿನೆರಳು ; ದರ್ಗಾದ ಆವರಣದಲ್ಲಿ ಸರಳವಾಗಿ ಆಚರಿಸಲು ತೀರ್ಮಾನ

ಈ ಸಂದರ್ಭದಲ್ಲಿ ಬೆಳಗಾವಿ ಮಾಹನಗರ ಪಾಲಿಕೆ ಆರೋಗ್ಯ ಅಧಿಕಾರಿ ಬಸವರಾಜ್ ದಬಾಡಿ, ತಹಶೀಲ್ದಾರ್ ಡಿ.ಆರ್ ಪಾಟೀಲ್ ಖುದ್ದು ಉಪಸ್ಥಿತರಿದ್ದರು.

ಅಂತ್ಯಕ್ರಿಯೆಯಲ್ಲಿ ಕುಟುಂಬದ ಕೇವಲ 5 ಜನರಿಗೆ ಮಾತ್ರ ಉಪಸ್ಥಿತರಿಲು ಅವಕಾಶ ಕಲ್ಪಿಸಲಾಗಿತ್ತು. ಜತೆಗೆ ಎಲ್ಲರಿಗೂ ಪಿಪಿಟಿ ಕಿಟ್ ನೀಡಿ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
Published by: G Hareeshkumar
First published: July 5, 2020, 5:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading