ಗಂಡನ ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾಗದ ಹೆಂಡತಿ ; ಕೊರೋನಾ ವಿಧಿಯಾಟಕ್ಕೆ ಕುಟುಂಬಸ್ಥರ ಕಣ್ಣೀರು

ಮಗಳ ಮದುವೆ ಮರು ದಿನವೇ ಸೋಂಕಿತ ವ್ಯಕ್ತಿಯು ರಾಯಚೂರಿನಲ್ಲಿ ಮೃತಪಟ್ಟಿದ್ದನು

news18-kannada
Updated:June 30, 2020, 10:21 PM IST
ಗಂಡನ ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾಗದ ಹೆಂಡತಿ ; ಕೊರೋನಾ ವಿಧಿಯಾಟಕ್ಕೆ ಕುಟುಂಬಸ್ಥರ ಕಣ್ಣೀರು
ಸಾಂದರ್ಭಿಕ ಚಿತ್ರ
  • Share this:
ಯಾದಗಿರಿ(ಜೂನ್.30): ಕೊರೋನಾ ಸೋಂಕಿನಿಂದ ಮೃತಪಟ್ಟ ಗಂಡನ ಅಂತ್ಯಕ್ರಿಯೆ ಕಾರ್ಯದಲ್ಲಿ ಹೆಂಡತಿ ಭಾಗಿಯಾಗದಂತ ದುಸ್ಥಿತಿ ಕೊರೋನಾ ತಂದೊಡ್ಡಿದೆ. ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದಲ್ಲಿ ಕೊರೊನಾ ಸೋಂಕಿಗೆ ಮೃತ ಪಟ್ಟ 48 ವರ್ಷದ ವ್ಯಕ್ತಿಯೇ ಅಂತ್ಯಕ್ರಿಯೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನಿಯಮದ ಪ್ರಕಾರ ಮಾಡಲಾಗಿದೆ. ರಾಯಚೂರಿನಲ್ಲಿ 48 ವರ್ಷದ ವ್ಯಕ್ತಿ ಸೋಮವಾರ ಉಸಿರಾಟ ಸಮಸ್ಯೆದಿಂದ ಬಳಲಿ ಮೃತಪಟ್ಟಿದ್ದ ವೈದ್ಯರು ಮೃತ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೋನಾ ದೃಢವಾಗಿದೆ.

ರಾಯಚೂರಿನಿಂದ ಯಾದಗಿರಿಗೆ ಶವ ತರಲಾಗಿತ್ತು ನಂತರ ಮೃತ ವ್ಯಕ್ತಿಯ ಊರಾದ ಹೊನಗೇರಾ ಗ್ರಾಮದ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ ಕಾರ್ಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಯಮದ ಪ್ರಕಾರ ಮೃತ ವ್ಯಕ್ತಿಯ ಕುಟುಂಬಸ್ಥರು ಹಾಗೂ ಸಂಬಂಧಿಕರನ್ನು ಶವದ ಅಂತ್ಯಕ್ರಿಯೆ ಮಾಡಲು  ಅವಕಾಶವಿಲ್ಲ. ಅಂತ್ಯಕ್ರಿಯೆ ಕಾರ್ಯವನ್ನು ಆರೋಗ್ಯ ಇಲಾಖೆ, ಪಂಚಾಯತ್ ಸಿಬ್ಬಂದಿಗಳು ಕೋವಿಡ್ ಮುಂಜಾಗ್ರತಾ ವಹಿಸಿ ಮಾಡಬಹುದಾಗಿದೆ. ಮೃತ ವ್ಯಕ್ತಿಯು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸಿರವಾರ ಗ್ರಾಮದ ಹೆಂಡತಿಯ ಮನೆಯಲ್ಲಿ ಕಳೆದ ನಾಲ್ಕು ವರ್ಷದಿಂದ ವಾಸವಾಗಿದ್ದ, ಇದೆ 28 ರಂದು ಹಿರಿಯ ಮಗಳ ಮದುವೆ ಮಾಡಿದ್ದರು.

ಇದನ್ನೂ ಓದಿ : ಪ್ರತಿ ಜಿಲ್ಲೆಯಲ್ಲಿ ಕೈಗಾರಿಕಾ ಅದಾಲತ್ ಆಯೋಜನೆ ; ಸಚಿವ ಜಗದೀಶ್ ಶೆಟ್ಟರ್

ಮಗಳ ಮದುವೆ ಮರು ದಿನವೇ ಸೋಂಕಿತ ವ್ಯಕ್ತಿಯು ರಾಯಚೂರಿನಲ್ಲಿ ಮೃತಪಟ್ಟಿದ್ದನು. ಮೃತ ವ್ಯಕ್ತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮೂವರು ಮಕ್ಕಳು ಹಾಗೂ ಹೆಂಡತಿ ಹಾಗೂ ಇನ್ನಿತರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದನು. ಮೃತ ವ್ಯಕ್ತಿಯ ಮಗಳು ತನ್ನ ಗಂಡನನ ಮನೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಮೃತ ವ್ಯಕ್ತಿಯ ಹೆಂಡತಿ ಇಬ್ಬರು ಮಗಳನ್ನು ರಾಯಚೂರು ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.

ಗಂಡನ ಸೋಂಕಿನಿಂದ ಮೃತ ಪಟ್ಟರು ಹೆಂಡತಿ ಹಾಗೂ ಮೂವರು ಮಕ್ಕಳು ಕೂಡ ತಂದೆಯ ಅಂತ್ಯಕ್ರಿಯೆ ಕಾರ್ಯ ದೂರದಿಂದ ನೊಡಲು ಕೂಡ ಆಗಮಿಸಲು ಸಾಧ್ಯವಾಗಿಲ್ಲ. ಕುಟುಂಬಸ್ಥರು ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾಗದೆ ಕಣ್ಣೀರು ಹಾಕಿದರು. ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading