Crime News: ದೇವರ ಪ್ರಸಾದವೆಂದು ಗಂಡನಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ಸೇರಿ ಕೊಲೆಗೆ ಯತ್ನಿಸಿದ ಹೆಂಡತಿ ಅಂದರ್!

ಪತ್ನಿಯ ಮಾತು ನಂಬಿ ಗಂಡ ನೀರು ಸೇವಿಸಿದ್ದಾನೆ. ನೀರು ಕಹಿಯಾದ ಹಿನ್ನೆಲೆ ಹೆಚ್ಚು ನೀರು ಸೇವನೆ ಮಾಡಲಿಲ್ಲ. ನಂತರ ನಿದ್ದೆಗೆ ಜಾರಿದ್ದಾನೆ. ಈ ವೇಳೆ ಚಂದ್ರಕಲಾ ಹಾಗೂ ಪ್ರಿಯತಮ ಬಸನಗೌಡ ಸೇತಿ ವಿಶ್ವನಾಥರೆಡ್ಡಿಯ  ಕತ್ತು ಹಿಸಿಕಿ ಕೊಲೆಗೆ ಯತ್ನಿಸಿದ್ದು ಈ ವೇಳೆ ವಿಶ್ವನಾಥರೆಡ್ಡಿ ನಿದ್ದೆಯಿಂದ ಎಚ್ಚರವಾಗಿದ್ದಾನೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಯಾದಗಿರಿ: (Yadagiri) ಪಾಪಿ ಪತ್ನಿ ತನ್ನ ಪತಿರಾಯನಿಗೆ ನೀರಿನಲ್ಲಿ ನಿದ್ದೆ ಮಾತ್ರೆ (Sleeping Tablet) ಪುಡಿ ಬೆರೆಸಿ ದೇವರ ಪ್ರಸಾದವಿದೆ ಎಂದು ಪತಿಗೆ ನಂಬಿಸಿ ಅದನ್ನು ಕುಡಿಸಿದ ಬಳಿಕ ಗಂಡನ ಕೊಲೆ ಮಾಡಲು (Wife Try To Murder Her Husband) ಯತ್ನಿಸಿದ ಕರಾಳ ಘಟನೆ ಯಾದಗಿರಿಯಲ್ಲಿ ನಡೆದಿದೆ. ಗಂಡ ನಿದ್ದೆಗೆ ಹೋದ ಎಂದುಕೊಂಡು ಆತನ ಕತ್ತು ಹಿಸಕಲು ಮುಂದಾದಾಗ ಎಚ್ಚರಗೊಂಡ ಪತಿ ವಿಶ್ವನಾಥರೆಡ್ಡಿ ಜೀವ ರಕ್ಷಣೆ ಮಾಡಿಕೊಂಡಿದ್ದಾನೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ಈ ಅಮಾನವೀಯ ಕೃತ್ಯ ಘಟನೆ ಜರುಗಿದೆ. ಹೂವಿನಹಳ್ಳಿ ಗ್ರಾಮದ ವಿಶ್ವನಾಥರೆಡ್ಡಿಗೆ ಪತ್ನಿ ಚಂದ್ರಕಲಾ ಕೊಲೆಗೆ ಯತ್ನಿಸಿದ್ದಾಳೆ. ಚಂದ್ರಕಲಾ ತನ್ನ ತಂಗಿಯ ಗಂಡ ಬಸನಗೌಡ ಜೊತೆ ಸೇರಿ ಕೊಲೆಗೆ ಯತ್ನಿಸಿದ್ದಾಳೆ. ಚಂದ್ರಕಲಾ ಹಾಗೂ ಬಸನಗೌಡ ಅನೈತಿಕ ಸಂಬಂಧ ಹೊಂದಿದ್ದರು. ಅನೈತಿಕ ಸಂಬಂಧಕ್ಕೆ ಚಂದ್ರಕಲಾ ಪತಿ ವಿಶ್ವನಾಥರೆಡ್ಡಿ ಅಡ್ಡಿಯಾಗಿದ್ದ. ಹೀಗಾಗಿ ಇಬ್ಬರು ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ. ಚಂದ್ರಕಲಾ ಹಾಗೂ ಬಸನಗೌಡ ಇಬ್ಬರು ಮೊದಲು ವಿಶ್ವನಾಥರೆಡ್ಡಿಯನ್ನು ಕೊಲೆ ಮಾಡುವ ಬಗ್ಗೆ ಮೊಬೈಲ್ ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಪ್ರಿಯತಮ ಬಸನಗೌಡ ನಾನು ನಿದ್ದೆ ಮಾತ್ರೆ ಕೊಡುತ್ತೇನೆ ಗಂಡನಿಗೆ ನೀರಿನಲ್ಲಿ ನಿದ್ದೆ ಮಾತ್ರೆ ಹಾಕಿ ಸಾಯಿಸೋಣವೆಂದು ಮಾತನಾಡಿದ್ದಾರೆ. ಈ ಆಡಿಯೋದಿಂದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಹೆಂಡತಿ ಚಂದ್ರಕಲಾ


ನಿದ್ದೆಯಿಂದ ಎದ್ದು ಜೀವ ಉಳಿಸಿಕೊಂಡ ಪತಿ

ಇದೇ 18 ರಂದು ವಿಶ್ವನಾಥರೆಡ್ಡಿ ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮದ ಬಸವೇಶ್ವರ ಜಾತ್ರೆಗೆ ಹೋಗಿದ್ದನು. ಈ ವೇಳೆ ಬಸನಗೌಡ ಆಗಮಿಸಿ ವಿಶ್ವನಾಥರೆಡ್ಡಿಗೆ ನಿಮ್ಮ ಪತ್ನಿ ನನಗೆ ಫೊನ್ ಮಾಡಿ ಮಗನಿಗೆ ಆರಾಮ ಇಲ್ಲ. ಮಗನಿಗೆ ಔಷಧಿ ಕಳುಹಿಸಿ ಕೊಡು ಎಂದು ಹೇಳಿದರು. ಹೀಗಾಗಿ ನಾನು ಔಷಧಿ ತೆಗೆದುಕೊಂಡು ಬಂದಿದ್ದೇನೆ. ಈ ಔಷಧಿ ತೆಗೆದುಕೊಂಡು ಚಂದ್ರಕಲಾ ಗೆ ಕೊಡಬೇಕು ಎಂದು ಹೇಳಿ ಮಗನ ಔಷಧಿ ನೀಡದೆ ನಿದ್ದೆ ಮಾತ್ರೆಯ ಪುಡಿ ನೀಡಿದ್ದ. ಬಸನಗೌಡ ಮಾತನ್ನು ನಂಬಿದ ವಿಶ್ವನಾಥರೆಡ್ಡಿ ಬಸನಗೌಡ ನೀಡಿದ್ದ ನಿದ್ದೆ ಮಾತ್ರೆಯ ಪುಡಿಯನ್ನು ತನ್ನ ಪತ್ನಿ ಚಂದ್ರಕಲಾಗೆ ನೀಡಿದನು. ಇದೇ 18 ರಂದು ರಾತ್ರಿ ಹೊತ್ತಿನಲ್ಲಿ ಪತ್ನಿ ಚಂದ್ರಕಲಾ  ಪತಿಗೆ ದೇವರ ಪ್ರಸಾದವಿದೆ. ಒಳ್ಳೆದಾಗುತ್ತದೆ ಎಂದು ನಿದ್ದೆ ಮಾತ್ರೆ ಬೆರೆಸಿದ ನೀರು ಕೊಟ್ಟಿದ್ದಾಳೆ. ಪತ್ನಿಯ ಮಾತು ನಂಬಿ ಗಂಡ ನೀರು ಸೇವಿಸಿದ್ದಾನೆ. ನೀರು ಕಹಿಯಾದ ಹಿನ್ನೆಲೆ ಹೆಚ್ಚು ನೀರು ಸೇವನೆ ಮಾಡಲಿಲ್ಲ. ನಂತರ ನಿದ್ದೆಗೆ ಜಾರಿದ್ದಾನೆ. ಈ ವೇಳೆ ಚಂದ್ರಕಲಾ ಹಾಗೂ ಪ್ರಿಯತಮ ಬಸನಗೌಡ ಸೇತಿ ವಿಶ್ವನಾಥರೆಡ್ಡಿಯ  ಕತ್ತು ಹಿಸಿಕಿ ಕೊಲೆಗೆ ಯತ್ನಿಸಿದ್ದು ಈ ವೇಳೆ ವಿಶ್ವನಾಥರೆಡ್ಡಿ ನಿದ್ದೆಯಿಂದ ಎಚ್ಚರವಾಗಿದ್ದಾನೆ. ಬಳಿಕ ಇಬ್ಬರಿಂದ ಬಿಡಿಸಿಕೊಂಡು ಜೀವ ರಕ್ಷಣೆ ಮಾಡಿಕೊಂಡಿದ್ದಾನೆ. ನಂತರ ಕುಟುಂಬಸ್ಥರು ಆರೋಪಿ ಬಸನಗೌಡನಿಗೆ ಥಳಿಸಿ ಚಂದ್ರಕಲಾ ಹಾಗೂ ಬಸನಗೌಡ ಅವರನ್ನು ಕೆಂಭಾವಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ವಿಶ್ವನಾಥರೆಡ್ಡಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ  ಕೆಂಭಾವಿ ಪೊಲೀಸರು ಆರೋಪಿಗಳಾದ ಚಂದ್ರಕಲಾ ಹಾಗೂ ಬಸನಗೌಡ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನು ಓದಿ: ದೇಶದಲ್ಲೇ ತುರ್ತು ಪರಿಸ್ಥಿತಿಗಿಂತ ಅದರ 20 ಪಟ್ಟು ಪರಿಸ್ಥಿತಿ ಈಗ ಇದೆ; SR Hiremath ಟೀಕೆ

ಈ ಬಗ್ಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಹೂವಿನಹಳ್ಳಿ ಗ್ರಾಮದ ವಿಶ್ವನಾಥರೆಡ್ಡಿಗೆ ಆತನ ಪತ್ನಿ ಚಂದ್ರಕಲಾ ನೀರಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ದೇವರ ಪ್ರಸಾದವೆಂದು ನಂಬಿಸಿ ನೀರು ಕುಡಿಸಿದ್ದು, ಗಂಡ ನಿದ್ದೆಗೆ ಜಾರಿದ ನಂತರ ಪ್ರಿಯತಮ ಬಸನಗೌಡ ಜೊತೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಈ ಬಗ್ಗೆ ಆರೋಪಿಗಳಿಬ್ಬರನ್ನು ಬಂಧನ ಮಾಡಲಾಗಿದೆ ಎಂದರು. ಪಾಪಿ ಪತ್ನಿಗೆ 5 ವರ್ಷದ ಗಂಡು ಮಗು ಇದ್ದರು ಪತಿರಾಯನಿಗೆ ಕೊಲೆಗೆ ಯತ್ನಿಸಿ ಪ್ರೆಯತಮ ಜೊತೆ ಜೈಲು ಪಾಲಾಗಿದ್ದಾಳೆ.
Published by:HR Ramesh
First published: