• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ರಾಜ್ಯ ಜನಸಂಖ್ಯೆಯಲ್ಲಿ ಶೇ.23ರಷ್ಟಿರುವ ದಲಿತರು ಯಾಕೆ ಸಿಎಂ ಆಗಬಾರದು?; ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಪ್ರಶ್ನೆ

ರಾಜ್ಯ ಜನಸಂಖ್ಯೆಯಲ್ಲಿ ಶೇ.23ರಷ್ಟಿರುವ ದಲಿತರು ಯಾಕೆ ಸಿಎಂ ಆಗಬಾರದು?; ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಪ್ರಶ್ನೆ

ಬಿಜೆಪಿ ಸಂಸದ ರಮೇಶ ಜಿಗಜಿಣಗಿ

ಬಿಜೆಪಿ ಸಂಸದ ರಮೇಶ ಜಿಗಜಿಣಗಿ

ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸಿಡಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿಡಿ ವಿಚಾರ ನನಗೆ ಗೊತ್ತಿಲ್ಲ.  ಸಿಡಿ ವಿಚಾರ ಕುರಿತು ಮಾಧ್ಯಮಗಳ ಮೂಲಕ  ಮಾಹಿತಿ ನೋಡಿದ್ದೇನೆ.  ನಾನೇನು ಬೆಂಗಳೂರಿಗೆ ಹೋಗಲ್ಲ.  ದೆಹಲಿ ಮತ್ತು ವಿಜಯಪುರಕ್ಕೆ ಮಾತ್ರ ತಿರುಗಾಡುತ್ತಿರುತ್ತೇನೆ ಎಂದರು.

ಮುಂದೆ ಓದಿ ...
  • Share this:

ವಿಜಯಪುರ (ಮಾ. 27): ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಕುರಿತು ವಿಜಯಪುರದ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ. 2 ರಿಂದ 3 ರಷ್ಟು ಜನಸಂಖ್ಯೆ ಇರುವ ಜನರು ಸಿಎಂ ಆಗಿದ್ದಾರೆ. ಆದರೆ, ಶೇ. 23 ರಷ್ಟಿರುವ ಇರುವ ದಲಿತರು ಯಾಕೆ ಸಿಎಂ ಆಗಬಾರದು? ಎಂದು ಪ್ರಶ್ನಿಸಿದರು. ನಾನೇ ದಲಿತ ಸಿಎಂ ಆಗಬೇಕು ಎಂಬ ಆಸೆಯಿಲ್ಲ.  ಯಾರಾದರೊಬ್ಬರು ದಲಿತ ಸಿಎಂ ಆಗಬೇಕು ಎಂಬ ಆಸೆ ನನಗಿದೆ. ದಲಿತರನ್ನು ಸಿಎಂ ಆಗಿ ಯಾರು ಮಾಡ್ತಾರೆ? ಎಂದು ಪ್ರಶ್ನಿಸಿ,  ದೇವರೇ ಮಾಡಿ ಕೂಡಿಸುತ್ತಾನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ರಮೇಶ್ ಜಿಗಜಿಣಗಿ ಅವರು, ನಾನು ಮರಳಿ ರಾಜ್ಯ ರಾಜಕಾರಣಕ್ಕೆ ಬರುವ ಆಸೆಯಿಲ್ಲ.  ಈಗ ಎಲ್ಲಿದ್ದೇನೆ ಅಲ್ಲಿ ಆರಾಮವಾಗಿದ್ದೇನೆ ಎಂದು ಹೇಳಿದರು. ಒಂದು ವೇಳೆ ಹೈಕಮಾಂಡ್ ಸೂಚಿಸಿದರೆ ರಾಜ್ಯ ರಾಜಕಾರಣಕ್ಕೆ ಮರಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಹೈಕಮಾಂಡ್ ರಾಜ್ಯಕ್ಕೆ ಬರಲು ಸೂಚಿಸಿದರೆ ರಾಜ್ಯ ರಾಜಕಾರಣಕ್ಕೆ ಖಂಡಿತ ಬರುವೆ. ರಾಜ್ಯ ರಾಜಕಾರಣ ಹಾಗೂ ವಿಜಯಪುರ ನನಗೇನು ಹೊಸದಲ್ಲ ಎಂದು ತಿಳಿಸಿದರು. ಈ ಮೂಲಕ‌ ಮುಂದಿನ 2023 ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಅದರಲ್ಲೂ ವಿಜಯಪುರ ಜಿಲ್ಲೆಯ ನಾಗಠಾಣ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ರಮೇಶ ಜಿಗಜಿಣಗಿ ಪರೋಕ್ಷವಾಗಿ ಹೊರ ಹಾಕಿದರು.


ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸಿಡಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿಡಿ ವಿಚಾರ ನನಗೆ ಗೊತ್ತಿಲ್ಲ.  ಸಿಡಿ ವಿಚಾರ ಕುರಿತು ಮಾಧ್ಯಮಗಳ ಮೂಲಕ  ಮಾಹಿತಿ ನೋಡಿದ್ದೇನೆ.  ನಾನೇನು ಬೆಂಗಳೂರಿಗೆ ಹೋಗಲ್ಲ.  ದೆಹಲಿ ಮತ್ತು ವಿಜಯಪುರಕ್ಕೆ ಮಾತ್ರ ತಿರುಗಾಡುತ್ತಿರುತ್ತೇನೆ.  ಸರಕಾರಿ ಕೆಲಸಗಳಿದ್ದಾಗ ಬೆಂಗಳೂರಿನ ನಾನಾ ಇಲಾಖೆಗಳ ಅಧಿಕಾರಿಗಳಿಗೆ ಫೋನ್ ಮೂಲಕ ಸಂಪರ್ಕಿಸಿ ಮಾತನಾಡುತ್ತೇನೆ. ಎಲ್ಲ ಅಧಿಕಾರಿಗಳೂ ತಮ್ಮ ಮತಕ್ಷೇತ್ರದ ಕೆಲಸಗಳನ್ನು ಮಾಡಿ ಕೊಡುತ್ತಾರೆ. ಆದರೆ, ಸಿಡಿ ವಿಚಾರ ಕುರಿತು ಅವರೊಂದಿಗೆ ಮಾತನಾಡಲ್ಲ. ನಾನು ಆ‌ ಸಿಡಿ ನೋಡಿಲ್ಲ ಎಂದು ತಿಳಿಸಿದರು. ಸಿಡಿ ವಿಚಾರವಾಗಿ ನೈತಿಕತೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ತರ ವಿಡಿಯೋ  ವೈರಲ್ ಮಾಡಿದ್ದು ತಪ್ಪು.  ತಪ್ಪು ತಪ್ಪೇ ಎಂದರು.


ಇದನ್ನು ಓದಿ: ಡಿ.ಕೆ.ಶಿವಕುಮಾರ್ ಇಂತಹ ಕೆಲಸ ಮಾಡೋಲ್ಲ: ಸಿಡಿ ಕೇಸ್‌ನಲ್ಲಿ ಡಿಕೆಶಿ ಪರ ಸಾಫ್ಟ್‌ ಕಾರ್ನರ್‌ ತೋರಿದ ಬಿಜೆಪಿ ಸಚಿವ ಜೆ.ಸಿ.ಮಾಧುಸ್ವಾಮಿ


ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಮತ್ತು ರಾಜ್ಯದ ಪಾಲಿನ ವಿದ್ಯುತ್ ಗೂ ಮತ್ತು ಬೇಡಿಕೆಗೂ ಅಜಗಜಾಂತರ ವ್ಯತ್ಯಾಸವಿದೆ.  ಬೇಡಿಕೆಗಿಂತ ಉತ್ಪಾದನೆ ಹೆಚ್ಚಾಗಿದ್ದರೂ ಸರಿಯಾಗಿ ವಿದ್ಯುತ್ ಸಿಗದೇ ರೈತರು ಸಂಕಷ್ಟದಲ್ಲಿದ್ದಾರೆ.  ಈ ಹಿನ್ನೆಲೆಯಲ್ಲಿ ಸಿಎಂ ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಮೇಶ ಜಿಗಜಿಣಗಿ ಆಗ್ರಹಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು