ಶ್ರೀಕಿಯಿಂದ ವಶಕ್ಕೆ ಪಡೆದ Bitcoins ಪೊಲೀಸರಿಗೆ ಹೋಗಿದ್ಯಾ.? ರಾಜಕಾರಣಿಗಳಿಗೆ ಹೋಗಿದ್ಯಾ?: ಮಾಜಿ ಸಿಎಂ Siddaramaiah ಪ್ರಶ್ನೆ

ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರಿರುವ ಬಗ್ಗೆ ಅವರೇ ಹೇಳಲಿ. ಯಾರೂ ಇದ್ದಾರೆ ಅನ್ನೋದನ್ನ ಚೀಫ್ ಮಿನಿಸ್ಟರ್ ಅಧಿಕೃತವಾಗಿ ಹೇಳಲಿ. ನಾನು ಸರ್ಕಾರ ನಡೆಸ್ತೀ‌ನಾ..? ನನಗಿರೋ ಇನ್ಫಾರ್ಮೇಶನ್ ಹೇಳಿದ್ದೇನೆ‌, ಯಾರಿದ್ದಾರೆ ಅಂತಾ ಗೊತ್ತಿಲ್ಲ ಎಂದರು. 

ಸಿದ್ದರಾಮಯ್ಯ.

ಸಿದ್ದರಾಮಯ್ಯ.

 • Share this:
  ಬಾಗಲಕೋಟೆ: ಬಿಟ್ ಕಾಯಿನ್ ಹಗರಣದಲ್ಲಿ (Bitcoin Scam) ಇಬ್ಬರು ಪ್ರಭಾವಿ ನಾಯಕಿರಿದ್ದಾರೆ ಅನ್ನೋ ಮಾಹಿತಿ ಇದೆ. ತನಿಖೆ ಮಾಡುವ ಅಧಿಕಾರ ಇರೋದು ಸಿಎಂಗೆ ಮಾತ್ರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaih) ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಗೆ ತನಿಖೆ ಮಾಡುವ ಅಧಿಕಾರ ಇದೆ. ಅವರೇ ಆ ಹೆಸರು ಬಹಿರಂಗಪಡಿಸಿ ಅಂತಾ ಹೇಳಿದ್ದೇನೆ. ಯಾಕೆಂದರೆ ಪೊಲೀಸರು ಆರೋಪಿ ಶ್ರೀಕಿಯಿಂದ ಬಿಟ್ ಕಾಯಿನ್ ರಿಕವರಿ ಮಾಡಿದ್ದಾರೆ ಅಂತಾ ಹೇಳ್ತಾರೆ‌. ಶ್ರೀಕಿಯಿಂದ ವಶಕ್ಕೆ ಪಡೆದು ಬಿಟ್ ಕಾಯಿನ್ ಯಾರ ಹತ್ತಿರ ಹೋಗಿದೆ. ಯಾರಿಗೆ ಟ್ರಾನ್ಸಫರ್ ಆಗಿದೆ. ಪೊಲೀಸರಿಗೆ ಹೋಗಿದ್ಯಾ..?, ರಾಜಕಾರಣಿಗಳಿಗೆ ಹೋಗಿದ್ಯಾ? ಹೇಳಬೇಕಲ್ವಾ. ಸೀಜ್ ಮಾಡಿದ್ದಾರೆ ಅಂತಾ ಹೇಳ್ತಾರಲ್ಲಪ್ಪ, ಹಾಗಾದ್ರೆ ಹೆಸರು ಹೇಳಬೇಕಲ್ಲ.? ಇದರಲ್ಲಿ ಕಾಂಗ್ರೆಸ್ ನವರೇ ಇದ್ದಾರೆ ಅಂತಾ ಸಿಎಂ ಬೊಮ್ಮಾಯಿ ಹೇಳ್ತಾರೆ,  ಆಯ್ತಪ್ಪ. ಕಾಂಗ್ರೆಸ್ ನವರೇ ಯಾರು ಅಂತಾ ಹೇಳಿ. ಇದ್ದರೆ ಅರೆಸ್ಟ್ ಮಾಡಿ ಎಂದು ಸವಾಲು ಹಾಕಿದ ಸಿದ್ದರಾಮಯ್ಯ ಇದರಲ್ಲಿ ಬಿಜೆಪಿಯವರಿದ್ದಾರಾ,? ಕಾಂಗ್ರೆಸ್ ನವರಿದ್ದಾರಾ.? ಜೆಡಿಎಸ್ ನವರಿದ್ದಾರಾ? ಹೇಳಬೇಕಲ್ಲ ಎಂದರು. 

  ನಾನ್ ಹೇಳಲ್ಲ ತನಿಖೆ ಮಾಡ್ತಿರೋರು ಯಾರು, ಅವರೇ ಹೇಳಲಿ!

  ಇದೆ ವೇಳೆ, ಬಿಟ್ ಕಾಯನ್ ಪ್ರಕರಣದಲ್ಲಿ ಸಿಎಂ ಬೊಮ್ಮಾಯಿ ತಮ್ಮ ಸ್ಥಾನ ಕಳೆದಿಕೊಳ್ಳಲಿದ್ದಾರೆ ಎಂಬ ಕಾಂಗ್ರೆಸ್ ನ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರಕ್ರಿಯೆ ನೀಡಿ, ಖರ್ಗೆಯವರು ತಮ್ಮ ಅಭಿಪ್ರಾಯ ಹೇಳಿದ್ದಾರೆ.  ಖರ್ಗೆಯವರ ಜೊತೆ ಮಾತಾಡಿಲ್ಲ, ಅವರ ಬಳಿ ಏನು ದಾಖಲಾತಿ ಇದೆ ಅಂತಾ ಕೇಳ್ತೀನಿ ಎಂದರು. ಇನ್ನು ಇದೆ ವೇಳೆ, ಇಬ್ಬರು ಬಿಜೆಪಿ ನಾಯಕರು ಹೆಸರು ಹೇಳ್ತಿರಾ ಅನ್ನೋ ಪ್ರಶ್ನೆಗೆ, ನಾನ್ ಹೇಳಲ್ಲ ಇನ್ವೆಸ್ಟಿಗೇಷನ್ ಮಾಡ್ತಿರೋರು ಯಾರು,  ಅವರೇ ಹೇಳಲಿ. ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡ್ತಾರಾ..? ಪೊಲೀಸು ಸ್ಟೇಟ್ ಸಬ್ಜೆಕ್ಟ್.. ಸರ್ಕಾರದ ಅಂಡರ್​ನಲ್ಲಿ ಕೆಲಸ ಮಾಡ್ತಾರೆ ಅವರೇ ಹೇಳಲಿ ಎಂದರು.

  ಯಾಕೆ ದೆಹಲಿಗೆ ಹೋಗಿದ್ದಾರೆ ಗೊತ್ತಿಲ್ಲ..!

  ಇನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೆಹಲಿಗೆ ಹೋಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾಕೆ ಹೆದಲಿಗೆ ಹೋಗಿದ್ದಾರೆ ಗೊತ್ತಿಲ್ಲ. ಅವ್ರನ್ನೇ ಕೇಳಿ, ಜಗದೀಶ್ ಶೆಟ್ಟರ್ ಮರಳಿ ಬರ್ತಾರಲ್ಲ ಅವರಿಗೆ ಕೇಳಿ ಎಂದು ವ್ಯಂಗ್ಯವಾಡಿದರು. ಇನ್ನು ಸುರ್ಜೇವಾಲಾ ಅವರು ಹೇಳಿದ್ದನ್ನೇ ನಾನೂ ಹೇಳಿದ್ದು. ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರಿರುವ ಬಗ್ಗೆ ಅವರೇ ಹೇಳಲಿ. ಯಾರೂ ಇದ್ದಾರೆ ಅನ್ನೋದನ್ನ ಚೀಫ್ ಮಿನಿಸ್ಟರ್ ಅಧಿಕೃತವಾಗಿ ಹೇಳಲಿ. ನಾನು ಸರ್ಕಾರ ನಡೆಸ್ತೀ‌ನಾ..? ನನಗಿರೋ ಇನ್ಫಾರ್ಮೇಶನ್ ಹೇಳಿದ್ದೇನೆ‌, ಯಾರಿದ್ದಾರೆ ಅಂತಾ ಗೊತ್ತಿಲ್ಲ ಎಂದರು. ಪೊಲೀಸ್ ಇಲಾಖೆ ಅಧಿಕಾರಿ ಆಡಿಯೋ ರಿಲೀಸ್ ವಿಚಾರದ ಬಗ್ಗೆ ಮಾತನಾಡಿ. ಇದಕ್ಕಿಂತ ಎವಿಡೆನ್ಸ್ ಬೇಕಾ ಪ್ರಕರಣವನ್ನ ಮುಚ್ಚಿ ಹಾಕುವ ಅನುಮಾನ ಬರುತ್ತಿದೆ ಎಂದರು.

  ಇದನ್ನು ಓದಿ: ಇನ್ನು 15 ದಿನ ಸಮಯ ಕೊಡಿ Bitcoin ಹಗರಣದ ವಾಸ್ತವಾಂಶ ಹೊರಗೆ ತೆಗೆಯುತ್ತೇನೆ; HD Kumaraswamy

  ಸುರ್ಜೆವಾಲಾ ಹೇಳಿದ್ದೇನು?

  ಬಿಟ್ ಕಾಯಿನ್ ಹಗರಣ ಸಂಬಂಧ ಇಂದು ದೆಹಲಿಯಲ್ಲಿ ಮಾತನಾಡಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು, ಶ್ರೀಕಿ ಕಸ್ಢಡಿಯಲ್ಲಿದ್ದಾಗಲೇ ಬಿಟ್ ಕಾಯಿನ್ ವರ್ಗಾವಣೆ ಆಗಿದೆ. ಕಾಂಗ್ರೆಸ್ ನಾಯಕರಿದ್ದರೆ ಅವರನ್ನು ಶಿಕ್ಷಿಸಲಿಲ್ಲ ಏಕೆ?. ಅವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಪ್ರಧಾನಿ ಮೋದಿ ಪ್ರತಿಕ್ರಿಯೆ ಬಳಿಕ ಕಾಂಗ್ರೆಸ್ ಮುಂದಿನದನ್ನು ನಿರ್ಧರಿಸಲಿದೆ. ಶ್ರೀಕಿ ಬಂಧನ ಮಾಡಿ‌ ಬಿಡುಗಡೆ ಮಾಡುವವರೆಗೆ ಕರ್ನಾಟಕ ಬಿಜೆಪಿ ಸರ್ಕಾರ ಸುಮ್ಮನಿದ್ದದ್ದು ಏಕೆ? ಬಿಟ್ ಕಾಯಿನ್ ಹಗರಣದ ಹಣ ಭಯೋತ್ಪಾದನೆಗೂ ಬಳಕೆಯಾಗಿರಬಹುದು. ಈ ಬಗ್ಗೆ ಎನ್ ಐ ಎ ಅಥವಾ ಆರ್ ಬಿಐಗೆ ಏಕೆ ತಿಳಿಸಿಲ್ಲ. ಬಿಜೆಪಿ ಸರ್ಕಾರ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಹಾಲಿ ಜಡ್ಜ್ ಮೇಲ್ವಿಚಾರಣೆಯಲ್ಲಿ SIT ರಚಿಸಿ ತನಿಖೆ ಆಗಬೇಕು. ಆಗ ಮಾತ್ರ ಸತ್ಯ ಹೊರ ಬರಲು ಸಾಧ್ಯ ಎಂದು ಹೇಳಿದ್ದರು.

  ವರದಿ: ಮಂಜುನಾಥ್ ತಳವಾರ 
  Published by:HR Ramesh
  First published: