ರಾಮಮಂದಿರಕ್ಕಾಗಿ ಜೈಲು ಸೇರಿದ್ದ ಕರಸೇವಕರು; ಯಾದಗಿರಿ ‌ಜಿಲ್ಲೆಯಲ್ಲಿ ಹಬ್ಬದ ವಾತಾವರಣ...!

ನಾಳೆ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಶ್ರೀರಾಮ‌ ಮಂದಿರ ನಿರ್ಮಾಣ ಮಾಡಲು  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು  ಭೂಮಿ ಪೂಜೆ ನೆರವೇರಿಸಲಿರುವ ಹಿನ್ನೆಲೆ, ಯಾದಗಿರಿ ಜಿಲ್ಲೆಯಲ್ಲಿ ಕೂಡ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಶ್ರೀರಾಮನ ಭಕ್ತರು ಸಿಹಿ ಹಂಚಿ ಸಂಭ್ರಮ ಪಡುತ್ತಿದ್ದಾರೆ.

news18-kannada
Updated:August 5, 2020, 7:33 AM IST
ರಾಮಮಂದಿರಕ್ಕಾಗಿ ಜೈಲು ಸೇರಿದ್ದ ಕರಸೇವಕರು; ಯಾದಗಿರಿ ‌ಜಿಲ್ಲೆಯಲ್ಲಿ ಹಬ್ಬದ ವಾತಾವರಣ...!
ಸಾಂದರ್ಭಿಕ ಚಿತ್ರ
  • Share this:
ಯಾದಗಿರಿ: ಅಂತು ಇಂತು ಶ್ರೀರಾಮನ ಭಕ್ತರ ಬಹು ವರ್ಷದ ಕನಸು ಈಗ ಸಾಕಾರಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಕೂಡ ಶ್ರೀರಾಮನ ಹಬ್ಬದ ಸಂಭ್ರಮ ಮನೆ ಮಾಡಿದೆ.ಎಲ್ಲಡೇ ಭರದ ತೈಯಾರಿ ಮಾಡಿಕೊಳ್ಳಲಾಗುತ್ತಿದೆ.

1990 ರ ಅವಧಿಯಲ್ಲಿ ಬಿಜೆಪಿ ವರಿಷ್ಠ ಎಲ್.ಕೆ.ಅಡ್ವಾನಿ ಅವರು ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದ ಕುರಿತು  ಜಾಗೃತಿ ಮೂಡಿಸಲು ದೇಶದ್ಯಾಂತ ರಥಯಾತ್ರೆ ನಡೆಸಿದರು. ದೇಶಾದ್ಯಂತ ರಾಮಮಂದಿರ ಬಗ್ಗೆ  ಸಂಚಲನ ಉಂಟುಮಾಡಿತು. ಶ್ರೀರಾಮನ ಭಕ್ತರು ಕೂಡ ರಾಮಮಂದಿರ ನಿರ್ಮಾಣ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈ ವೇಳೆ ಯಾದಗಿರಿಯಲ್ಲಿ ಕೂಡ ರಾಮನ ಜಪ ಮಾಡುವ ಭಕ್ತರು ಕರಸೇವಕರಾಗಿ ಸೇವೆಗೆ ಮುಂದಾದರು.

ರಾಮಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಹಾಗೂ ಅಗತ್ಯ ವಸ್ತುಗಳ ಸೇವೆ ನೀಡಿದರು.ಬಹುತೇಕ ಕರಸೇವಕರು ಶ್ರೀರಾಮನ ಹೆಸರಿನ ಇಟ್ಟಿಗೆಯನ್ನು 1992 ರಲ್ಲಿ ಶ್ರೀರಾಮನ ಜನ್ಮ ಸ್ಥಳ ಅಯೋಧ್ಯೆಗೆ ಶ್ರದ್ಧಾ ಭಕ್ತಿಯಿಂದ ತೆಗೆದುಕೊಂಡು ಹೋಗಿ ಅರ್ಪಿಸಿದರು. ಯಾದಗಿರಿಯಿಂದ ಕೂಡ ಕರಸೇವಕರಾದ ಲಕ್ಷ್ಮಣ್ಣರಾವ್ ,ಗುರುಸಿದ್ದಪ್ಪ ಕೋರಿ,ರಾಜು ಮೊದಲಾದವರು ಅಯೋಧ್ಯೆಗೆ ತೆರಳಿ  ಕರಸೇವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪೊಲೀಸರು ಕೂಡ ಬಂಧನ ಮಾಡಿ ಜೈಲಿನಟ್ಟಿದ್ದರು ಜೈಲಿನಿಂದ ಬಿಡುಗಡೆ ನಂತರ ‌ಶ್ರೀರಾಮನ ದರ್ಶನ ಕೂಡ ಪಡೆದಿದ್ದರು.ಈ ಬಗ್ಗೆ ಹಿರಿಯ ಕರಸೇವಕ ಲಕ್ಷ್ಮಣ್ಣರಾವ್ ಮಾತನಾಡಿ,ರಾಮಮಂದಿರ ವಿಚಾರವಾಗಿ ನಾವು ಕೂಡ ಜೈಲು ಸೇರಿದ್ದೆವೆ ನಂತರ ಶ್ರೀರಾಮನ ದರ್ಶನ ಕೂಡ ಪಡೆದಿದ್ದೆವು.ಈಗ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದ್ದು ದೀಪಾವಳಿ ಹಬ್ಬದ ಸಂಭ್ರಮದಂತೆ ಆಚರಣೆ ಮಾಡುತ್ತೆವೆಂದರು.

ಕೆಂಭಾವಿಯಲ್ಲಿ ಕೇಸರಿ ರಂಗು...!

ನಾಳೆ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಶ್ರೀರಾಮ‌ ಮಂದಿರ ನಿರ್ಮಾಣ ಮಾಡಲು  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು  ಭೂಮಿ ಪೂಜೆ ನೆರವೇರಿಸಲಿರುವ ಹಿನ್ನೆಲೆ, ಯಾದಗಿರಿ ಜಿಲ್ಲೆಯಲ್ಲಿ ಕೂಡ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಶ್ರೀರಾಮನ ಭಕ್ತರು ಸಿಹಿ ಹಂಚಿ ಸಂಭ್ರಮ ಪಡುತ್ತಿದ್ದಾರೆ.

ಇದನ್ನೂ ಓದಿ : Ayodhya Ram Mandir: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ - ಹೇಗಿರಲಿದೆ ಗೊತ್ತಾ ದೇವಾಲಯ?ಅದೆ ರೀತಿ ಕೆಂಭಾವಿ ಪಟ್ಟಣದಲ್ಲಿ ಒಂದು ಸಾವಿರ ಮನೆಗಳ ಮೇಲೆ ಕೇಸರಿ ಧ್ವಜ ಹಾರಿಸಲಾಗುತ್ತಿದೆ.ನಾಳೆ ಯಾದಗಿರಿ ನಗರ,ಕೆಂಭಾವಿ,ಸುರಪುರ ಮೊದಲಾದ ಕಡೆ ಹಬ್ಬದ ಸಂಭ್ರಮದ ಸಿದ್ದತೆಯಲ್ಲಿ ಶ್ರೀರಾಮನ‌ ಭಕ್ತರು ತೊಡಗಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ರಾಜು ಅವರು ಮಾತನಾಡಿ, ಬಹು ವರ್ಷದ ಕನಸು ಈಗ ಈಡೇರುತ್ತಿದ್ದೆ ನಾಳೆ ರಾಮಮಂದಿರ ನಿರ್ಮಾಣಕ್ಕೆ ಭೂಮಿ‌ ಪೂಜೆ ಮಾಡುತ್ತಿದ್ದು ಖುಷಿ ತಂದಿದೆ ಎಂದರು. ಯಾದಗಿರಿ ಜಿಲ್ಲೆಯಲ್ಲಿ ಎಲ್ಲಡೇ ಭರದ ಸಂಭ್ರಮದ ತೈಯಾರಿ ನಡೆಯುತ್ತಿದೆ.
Published by: MAshok Kumar
First published: August 5, 2020, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading