HOME » NEWS » District » WHERE IS THE COMPENSATION MONEY ANNOUNCED FOR FARMERS WHO HAVE SUFFERED LOSSES DUE TO CORONA MAK

ಕೊರೋನಾದಿಂದಾಗಿ ನಷ್ಟ ಅನುಭವಿಸಿದ್ದ ರೈತರಿಗೆ ಘೋಷಿಸಲಾದ ಪರಿಹಾರದ ಹಣ ಎಲ್ಲಿ..?

ಇನ್ನೂ  ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆ  ಸರಿಯಾದ  ಬೆಳೆ ಸಮೀಕ್ಷೆ ಕೂಡಾ ಮಾಡಿಲ್ಲ, ಅಲ್ಲದೇ ಅಧಿಕಾರಿಗಳು‌ ಮಾಡಿದ ಯಡವಟ್ಟಿನಿಂದ  ಕೆಲವು ಜಾಲಿ ಬೆಳೆದು ಬೀಳು ಬಿದ್ದ  ಜಮೀನಿನ ರೈತರಿಗೂ ಪರಿಹಾರಕ್ಕೆ ವರದಿ ಸಲ್ಲಿಸಿದ್ದಾರೆ.

news18-kannada
Updated:September 2, 2020, 7:03 AM IST
ಕೊರೋನಾದಿಂದಾಗಿ ನಷ್ಟ ಅನುಭವಿಸಿದ್ದ ರೈತರಿಗೆ ಘೋಷಿಸಲಾದ ಪರಿಹಾರದ ಹಣ ಎಲ್ಲಿ..?
ಬೀದರ್​ನಲ್ಲಿ ಕೋತಿಗಳ ಕಾಟ
  • Share this:
ಚಿತ್ರದುರ್ಗ: ರಾಜ್ಯದಲ್ಲಿ ಕಳೆದ ಮೂರ್ನಾಕು ತಿಂಗಳಿಂದ ಕೊರೋನಾ ಆರ್ಭಟಿಸುತ್ತಿದೆ.  ಕೋವಿಡ್ ಸಂದರ್ಭದಲ್ಲಿ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟ ಅನುಭವಿಸಿದ್ದ ರೈತರಿಗೆ ಪರಿಹಾರ ನೀಡುವ  ಭರವಸೆ ನೀಡಿದ್ದ ರಾಜ್ಯ ಸರ್ಕಾರ , ಹೂ, ಹಣ್ಣು, ಬೆಳೆಗಾರನ್ನ ಮರೆತಂತಿದೆ. ಸರ್ಕಾರದ ಭರವಸೆಯ  ಪರಿಹಾರ ಸಿಗದೇ ಇನ್ನೂ ರೈತರ ಕಚೇರಿ ಅಲೆಯುತ್ತಿದ್ದಾರೆ. ಈ ಕುರಿತ ಒಂದು ಇಲ್ಲಿದೆ.

ರಾಜ್ಯದಲ್ಲಿ ಕೊರೋನಾ ಅಬ್ಬರ ದಿನೇ ದಿನೇ ಹೆಚ್ಚುತ್ತಲೇ ಇದೆ. ಕೊರೋನಾ ಹೊಡೆತಕ್ಕೆ ಸಿಕ್ಕು ಕಳೆದ ಮೂರು ತಿಂಗಳಿಂದ  ಅನ್ನಧಾತರು ಕಂಗಾಲಾಗಿದ್ದಾರೆ. ಅಲ್ಪ‌ಮಳೆ ಆಶ್ರಯದಲ್ಲಿ ಚಿತ್ರದುರ್ಗ ಜಿಲ್ಲೆಯ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಇಡೀ ರೈತ ವರ್ಗ ತೀವ್ರ ನಷ್ಟ ಅನುಭವಿಸುತ್ತಿದೆ.

ಆದರೆ, ನಷ್ಟ ಅನುಭವಿಸಿದ  ರೈತರ ಬೆನ್ನಿಗೆ ನಿಲ್ಲವ ಭರವಸೆ ನೀಡಿದ್ದ ರಾಜ್ಯ ಸರ್ಕಾರ ರೈತರ ಮೂಗಿಗೆ ತುಪ್ಪ ಸವರಿ ಸುಮ್ಮನಾಗಿದೆ. ರಾಜ್ಯದಲ್ಲಿ ಕೊರೋನಾ ಆರಂಭದಲ್ಲಿ ನಷ್ಟಕ್ಕೀಡಾಗಿದ್ದ,  ಹೂ, ಹಣ್ಣು, ತರಕಾರಿ ಬೆಳೆಗಾರರಿಗೆ ಪರಿಹಾರ  ಘೋಷಣೆ ಮಾಡಿತ್ತು. ಆದರೆ ಎಲ್ಲಾ ರೈತರಿಗೂ ಸಿಗಬೇಕಾದ ಪರಿಹಾರ  ಸಮರ್ಪಕವಾಗಿ ರೈರಿಗೆ ತಲುಪಿಲ್ಲ ಅನ್ನೋ ಆರೋಪಗಳೂ ಕೂಡಾ ಕೇಳಿ ಬಂದಿವೆ.

ಜಿಲ್ಲೆಯಲ್ಲಿ 2240 ಹೆಕ್ಟೇರ್ ಭೂಮಿಯಲ್ಲಿ 18470 ರೈತರು ಹೂ ಬೆಳೆದಿದ್ದರೂ, ಆದ್ರೆ ಕೇವಲ 13530 ಜನರಿಗೆ ಪರಿಹಾರ ನೀಡಿದ್ದು,  ಹಲವರಿಗೆ ಪರಿಹಾರ ಹಣವೇ ಸಿಕ್ಕಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಅಲ್ಲದೆ 13 ಸಾವಿರ ಜನ ತರಕಾರಿ ಬೆಳೆಗಾರರ ಪೈಕಿ 9 ಸಾವಿರ ಜನ ರೈತರಿಗೆ ಮಾತ್ರ ಪರಿಹಾರ ಹಣ ಬಿಡುಗಡೆ ಆಗಿದ್ದು, ಇನ್ನೂ 04 ಸಾವಿರ ರೈತರಿಗೆ ರಾಜ್ಯ ಸರ್ಕಾರ  ಹಣ ಬಿಡುಗಡೆ ಮಾಡಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ.

ಇನ್ನೂ  ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆ  ಸರಿಯಾದ  ಬೆಳೆ ಸಮೀಕ್ಷೆ ಕೂಡಾ ಮಾಡಿಲ್ಲ, ಅಲ್ಲದೇ ಅಧಿಕಾರಿಗಳು‌ ಮಾಡಿದ ಯಡವಟ್ಟಿನಿಂದ  ಕೆಲವು ಜಾಲಿ ಬೆಳೆದು ಬೀಳು ಬಿದ್ದ  ಜಮೀನಿನ ರೈತರಿಗೂ ಪರಿಹಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೇ ನಿಜವಾಗಿಯೂ ಹೂ, ತರಕಾರಿ ಬೆಳೆದ  ಕೆಲ ರೈತರಿಗೆ ಅನ್ಯಾಯವಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಇನ್ನೂ  ರಾಜ್ಯ ಸರ್ಕಾರದ ವಿಳಂಭ ನೀತಿಯಿಂದ ಹೂ, ಹಣ್ಣು, ತರಕಾರಿ ಬೆಳೆಗಾರರು ತತ್ತರಿಸಿದ್ದಾರೆ. ನಿರಂತರ ಭರಕ್ಕೆ ತಿತ್ತಾಗಿದ್ದ ರೈತರು ಕೋವಿಡ್ ನಿಂದಲೂ  ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ. ಇನ್ನೂ ಈ ಬಗ್ಗೆ ತೋಟಗಾರಿಕೆ ಇಲಾಖೆ ಉಪನಿರ್ಧೇಶಕರನ್ನ  ಕೇಳಿದ್ರೆ, ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ನಡೆಸಿದ್ದು, ಡಿಬಿಟಿ ಮೂಲಕ ರೈತರಿಗೆ 17ಕೋಟಿ ಪರಿಹಾರ  ಹಣ ಪಾವತಿಸಲಾಗಿದೆ.

ಇದನ್ನೂ ಓದಿ : ಮಾನವ ನಿರ್ಮಿತ ದುರಂತಕ್ಕೆ ದೇವರನ್ನು ದೂಷಿಸಬೇಡಿ: ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಪಿ. ಚಿದಂಬರಂಆದರೆ, ಮೊದಲ ಕಂತಿನಲ್ಲಿ ಬಿಟ್ಟು ಹೋಗಿರುವ ರೈತರಿಗೆ ಮತ್ತೆ ಅರ್ಜಿ ಸಲ್ಲಿಸಲು ಸೂಚನೆ ನೀಡಿದ್ದೇವೆ. ಅಲ್ದೆ ರಾಜ್ಯ ಸರ್ಕಾರಕ್ಕೆ 22 ಕೋಟಿ, 92 ಲಕ್ಷ ಹಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಹಣ ಬಿಡುಗಡೆ ಬಳಿಕ ಉಳಿದ ರೈತರಿಗೆ ಡಿಬಿಟಿ ಮೂಲಕ ನೀಡಲಾಗುತ್ತೆ ಎನ್ನುತ್ತಾರೆ.
Youtube Video

ಒಟ್ಟಾರೆ ಕೊವೀಡ್ ಸಂಕಷ್ಟಕ್ಕೆ ಸಿಕ್ಕಿ, ಬಾರಿ ನಷ್ಟಕ್ಕೆ ಒಳಗಾಗಿದ್ದ ಹೂ, ಹಣ್ಣು, ತರಕಾರಿ ಬೆಳೆಗಾರರಿಗೆ ರಾಜ್ಯ ಸರ್ಕಾರ ನೀಡಿದ್ದ ಭರವಸೆ, ಭರವಸೆಯಾಗಿಯೇ ಉಳಿದಿದೆ. ಅಷ್ಟೋ ಇಷ್ಟೋ  ಪರಿಹಾರ ಹಣ ಸಿಗುತ್ತದೆ ಬೆಳೆ ಅಲ್ಪ ಖರ್ಚಾದರೂ ಭರಸುತ್ತದೆ ಎಂಸುಕೊಂಡಿದ್ದ ರೈತರು ಕಂಗಲಾಗಿದ್ದಾರೆ.ಇನ್ನಾದ್ರೂ ರಾಜ್ಯ ಸರ್ಕಾರ ಬಾಕಿ ಉಳಿದ ಪರಿಹಾರ ಬಿಡುಗಡೆ ಮಾಡಲಿ ಅನ್ನೋದು ರೈತರ ಆಗ್ರಹ.
Published by: MAshok Kumar
First published: September 2, 2020, 7:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories