ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಉಸ್ತುವಾರಿ ಸಚಿವರು ಮಾಡಿದ್ದೇನು? ಗೆದ್ದದ್ದೆಲ್ಲಿ-ಸೋತಿದ್ದೆಲ್ಲಿ? ಇಲ್ಲಿದೆ ಮಾಹಿತಿ

ಸಚಿವ ಎಸ್.ಟಿ.ಸೋಮಶೇಖರ್‌ರಿಂದ ಮೈಸೂರಿನಲ್ಲಿ ಬೆಳಗ್ಗೆ 6 ರಿಂದ ಸಂಜೆ 6ರ ಕರ್ಪ್ಯೂ ನಿಯಮ ಜಾರಿ. ನಗರದ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ನಾಲ್ಕು ವಲಯ ಮಾಡಿ ಎಂಎಲ್ಎ, ಎಂಪಿಗಳನ್ನೆ ಉಸ್ತುವಾರಿಯಾಗಿ ನೇಮಕ ಮಾಡಿದ್ದರು. ಮೈಸೂರು ಮೃಗಾಲಯಕ್ಕೆ ಸುಮಾರು 3 ಕೋಟಿ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದರು.

news18-kannada
Updated:August 3, 2020, 3:30 PM IST
ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಉಸ್ತುವಾರಿ ಸಚಿವರು ಮಾಡಿದ್ದೇನು? ಗೆದ್ದದ್ದೆಲ್ಲಿ-ಸೋತಿದ್ದೆಲ್ಲಿ? ಇಲ್ಲಿದೆ ಮಾಹಿತಿ
ವಿ ಸೋಮಣ್ಣ
  • Share this:
ಮೈಸೂರು (ಆಗಸ್ಟ್‌ 03); ಕೊರೋನಾ ಕಬಂಧಬಾಹುಗಳು ಮೈಸೂರು ಜಿಲ್ಲೆಯನ್ನೂ ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಾಗಿಯೇ ಜಿಲ್ಲೆಗೆ ಇಬ್ಬರು ಉಸ್ತುವಾರಿ ಮಂತ್ರಿಗಳನ್ನು ಬದಲಾಯಿಸಲಾಗಿತ್ತು. ಈ ಮೊದಲು ವಿ.ಸೋಮಣ್ಣ – ವಸತಿ ಸಚಿವರು ಕೋವಿಡ್ ಆರಂಭದಲ್ಲಿ ಉಸ್ತುವಾರಿ ಮಂತ್ರಿ ಆಗಿದ್ದರು. ಇದೀಗ ಎಸ್.ಟಿ.ಸೋಮಶೇಖರ್ – ಹಾಲಿ ಸಹಕಾರಿ ಸಚಿವರು ಸದ್ಯ ಮೈಸೂರು ಉಸ್ತುವಾರಿ ಮಂತ್ರಿ ಆಗಿದ್ದಾರೆ.

ಆರಂಭದಲ್ಲಿ ಕೋವಿಡ್ ಮೈಸೂರಿಗೆ ದಾಳಿಯಿಟ್ಟಾಗ ಅಂದಿನ ಉಸ್ತುವಾರಿ ಸಚಿವ ವಿ.ಸೋಮಣ್ಣ ಭರ್ಜರಿಯಾಗಿ ಓಡಾಟ ಮಾಡಿದ್ದರು. ಅಂದಿನ ವಿವಾದಿತ ಜುಬಿಲೆಂಟ್ಸ್ ಕಾರ್ಖಾನೆಗೆ ಭೇಟಿ ನೀಡಿದ್ದ ಸೋಮಣ್ಣ, ಮೈಸೂರಿನ ನೂತನ ಜಿಲ್ಲಾಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆಯನ್ನಾಗಿ ಬಳಸಿಕೊಳ್ಳುವ  ನಿರ್ಧಾರ ಮಾಡಿದ್ದರು.

ಮೈಸೂರಿನ ಮೊದಲ ಕೇಸ್ ಮಾರ್ಚ್ 21ರಂದು ದುಬೈನಿಂದ ಬಂದ ವ್ಯಕ್ತಿಯಲ್ಲಿ ಪಾಸಿಟಿವ್ ಪತ್ತೆಯಾದ ಹಿಂದಿನ ದಿನವು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿದ್ದರು ವಿ.ಸೋಮಣ್ಣ ಪರಿಶೀಲನೆ ನಡೆಸಿದ್ದರು. ಸೋಮಣ್ಣ ಉಸ್ತುವಾರಿ ಸಚಿವರ ಸ್ಥಾನದಿಂದ ಕೇಳಗಿಳಿಯುವ ಹೊತ್ತಿಗೆ ಮೈಸೂರಿನಲ್ಲಿ 90ಕ್ಕೆ 90 ಕೇಸ್‌ ಡಿಸ್ಚಾರ್ಜ್‌ ಹತ್ತಿರಕ್ಕೆ ಬಂದು ಬಿಟ್ಟಿದ್ದವು.

ಆ ನಂತರ ಏಪ್ರಿಲ್ 10 ರಂದು ನೂತನ ಉಸ್ತವಾರಿ ಸಚಿವರಾಗಿ ಎಸ್.ಟಿ.ಸೋಮಶೇಖರ್ ಮೈಸೂರಿಗೆ ಆಗಮಿಸಿದರು. ಬಂದ ದಿನವೇ ಅಧಿಕಾರಿಗಳ ಸಭೆ ನಡೆಸಿದ ಎಸ್.ಟಿ.ಸೋಮಶೇಖರ್‌, ತಾನೂ ಕೂಡ ಜುಬಿಲೆಂಟ್ಸ್ ಕಾರ್ಖಾನೆಗೆ ಭೇಟಿ ಪರಿಶೀಲನೆ ನಡೆಸಿದರು. ಎಲ್ಲ ಶಾಸಕರು ಹಾಗೂ ಮುಖಂಡರ ಜೊತೆ ಸಭೆ  ನಡೆಸೋದು, ಪ್ರತಿ ಶನಿವಾರ ಮೈಸೂರಿಗೆ ಭೇಟಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸೋದು. ನೂತನ ಕೋವಿಡ್ ಕೇರ್ ಸೆಂಟರ್‌ಗಳಿಗೆ ಭೇಟಿ, ಕಂಟೈನ್ಮೆಂಟ್ ಜೋನ್ ವಿಕ್ಷಣೆ ಮಾಡುವ ಕೆಲಸ ನಿರಂತರವಾಗಿ ಮಾಡಿದರು. ಆದರೆ, ಎರಡನೆ ಹಂತದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿ ಹೋಗಿದೆ ಅದಕ್ಕೆ ಕಾರಣವೇನು ಇಲ್ಲಿದೆ ನೋಡಿ.

ಸಚಿವ ಎಸ್.ಟಿ.ಸೋಮಶೇಖರ್‌ರಿಂದ ಮೈಸೂರಿನಲ್ಲಿ ಬೆಳಗ್ಗೆ 6 ರಿಂದ ಸಂಜೆ 6ರ ಕರ್ಪ್ಯೂ ನಿಯಮ ಜಾರಿ. ನಗರದ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ನಾಲ್ಕು ವಲಯ ಮಾಡಿ ಎಂಎಲ್ಎ, ಎಂಪಿಗಳನ್ನೆ ಉಸ್ತುವಾರಿಯಾಗಿ ನೇಮಕ ಮಾಡಿದ್ದರು. ಮೈಸೂರು ಮೃಗಾಲಯಕ್ಕೆ ಸುಮಾರು 3 ಕೋಟಿ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದರು. ಪ್ರತಿ ಶನಿವಾರ ಮೈಸೂರು ಭೇಟಿ ಹಾಗೂ ಮೀಟಿಂಗ್ ಮಾಡಿ ಮಾಹಿತಿ ಪಡೆದಿದ್ದು. ಕ್ಷೇತ್ರವಾರು ಆಹಾರ ಕಿಟ್ ಹಾಗೂ ಪಡಿತರ ಕಿಟ್ ವಿತರಣೆ ಮಾಡಿದ್ದಾರೆ.

ಆದರೆ, ಎನ್.ಆರ್.ಕ್ಷೇತ್ರದಲ್ಲಿ ಸೋಂಕು ನಿಯಂತ್ರಣಕ್ಕೆ ತರುವುದರಲ್ಲಿ ವಿಫಲ. ಎನ್..ರ್.ಕ್ಷೇತ್ರದ ಒಂದು ಸಮುದಾಯದ ಜನರು ಲಾಕ್‌ಡೌನ್ ಹಾಗೂ ಸ್ಯಾಂಪಲ್ ಟೆಸ್ಟ್‌ಗೆ ಸಹಕಾರ ನೀಡದಿದ್ದರು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗದೆ ಇರೋದು. ಆ ಎನ್.ಆರ್.ಕ್ಷೇತ್ರದಿಂದಲೇ ಮೈಸೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದ್ದು. ತಾಲ್ಲೂಕು ಕೇಂದ್ರಗಳನ್ನ ನಿರ್ಲಕ್ಷ್ಯ ಮಾಡಿದ್ದು.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ತಾಲ್ಲೂಕು ಕೇಂದ್ರಗಳಲ್ಲಿ ಕೊರೊನಾ ಚಿಕಿತ್ಸೆಗೆ ಸೌಲಭ್ಯ ಒದಗಿಸದೆ ಇರೋದು. ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸೋಂಕಿತ ದಾಖಲಾತಿ ನಂತರ ಪರಿಸ್ಥಿತಿ ಅವಲೋಕನ ಮಾಡದೆ ಇರೋದು. ಮೈಸೂರು ಬೆಂಗಳೂರು ಸಂಚಾರ ನಿರ್ಬಂಧ ಮಾಡದೆ ಇದ್ದದ್ದು. ಬೆಂಗಳೂರು ಜೊತೆಗೆ ಮೈಸೂರನ್ನ 7 ದಿನಗಳ ಕಾಲ ಲಾಕ್‌ಡೌನ್ ಮಾಡದೆ ಇದ್ದದ್ದು ಇವರ ವೈಫಲ್ಯಗಳು ಎಂದರೂ ತಪ್ಪಾಗಲಾರದು.

ಒಟ್ಟಿನಲ್ಲಿ  ಮೈಸೂರಿನಲ್ಲಿ ಹಳೆ ಉಸ್ತುವಾರಿ ಸಚಿವರು ಕೊರೋನಾವನ್ನು ನಿಯಂತ್ರಣಕ್ಕೆ ತಂದಿದ್ದರು. ಆದರೆ, ಹೊಸ ಉಸ್ತುವಾರಿ ಸಚಿವರು ಕೊರೋನಾ ಕಟ್ಟಿಹಾಕುವಲ್ಲಿ ಎಡವಿದ್ದಾರೆ. ಇನ್ನಾದರೂ ಹೆಚ್ಚಿನ ಆಸಕ್ತಿ ವಹಿಸಿ ಕೊರೋನಾ ನಿಯಂತ್ರಣ ಮಾಡಿದರೆ ಮೈಸೂರಿಗರು ಉಸ್ತುವಾರಿ ಸಚಿವರನ್ನ ನೆನಪಿನಲ್ಲಿಟ್ಟುಕೊಳ್ಳಬಹುದು. ಇಲ್ಲದಿದ್ದರೆ ದೇವರೆ ಪ್ರೀತಿ ಎಂಬುದು ಸ್ಥಳೀಯರ ಅಭಿಪ್ರಾಯ.
Published by: MAshok Kumar
First published: August 3, 2020, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading