HOME » NEWS » District » WEATHER FORECAST THREE DAY YELLOW ALERT IN NORTH AND DAKSHINA KANNADA DISTRICTS MAK

ಉತ್ತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ದಿನ ಹಳದಿ ಅಲರ್ಟ್, ಬೆಂಗಳೂರಿನಲ್ಲೂ ಮಳೆ ಮುಂದುವರಿಕೆ!

ಉತ್ತರ ಕನ್ನಡ, ಉಡುಪಿ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷೆ ಹಿನ್ನೆಲೆ ಹಳದಿ ಅಲರ್ಟ್ ಘೋಷಿಸಿದೆ. ಆಗಸ್ಟ್ 19, 20 ಹಾಗೂ 23ರಂದು ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಈ ವಾರ ಮಳೆ ಮುಂದುವರೆಯಲಿದ್ದು, ಆಗಸ್ಟ್ 23 ಹಾಗೂ 24ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

news18-kannada
Updated:August 19, 2020, 5:09 PM IST
ಉತ್ತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ದಿನ ಹಳದಿ ಅಲರ್ಟ್, ಬೆಂಗಳೂರಿನಲ್ಲೂ ಮಳೆ ಮುಂದುವರಿಕೆ!
ಧಾರಾಕಾರ ಮಳೆ
  • Share this:
ಬೆಂಗಳೂರು (ಆಗಸ್ಟ್‌ 19); ಕಳೆದೊಂದು ವಾರದಿಂದ ರಾಜ್ಯದಾದ್ಯಂತ ಭರ್ಜರಿ ಮಳೆಯಾಗುತ್ತಿದೆ. ಅದರಲ್ಲೂ ಮಲೆನಾಡು ಮತ್ತು ಕೊಡಗಿನಲ್ಲಿ ಸುರಿದ ಮಳೆಗೆ ಡ್ಯಾಂಗಳು ಭರ್ತಿಯಾಗಿವೆ. ಇನ್ನೊಂದು ವಾರ ರಾಜ್ಯದ ಹಲವೆಡೆ ಭರ್ಜರಿ ಮಳೆ ನಿರೀಕ್ಷೆಯಿದೆ. ಉತ್ತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ವಾರದಲ್ಲಿ ಸತತ ಮೂರು ದಿನಗಳ ಕಾಲ ಹಳದಿ ಅಲರ್ಟ್ ಘೋಷಣೆಯಾಗಿದೆ.

ಈ ವಾರ ಬೆಂಗಳೂರಿನಲ್ಲಿಯೂ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ಬಹುತೇಕ ಕಡೆ ಈಗಾಗಲೇ ಉತ್ತಮ ಮಳೆಯಾಗಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ‌. ಇನ್ನೊಂದು ವಾರವೂ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಸೇರಿದಂತೆ ಕರಾವಳಿ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಉತ್ತರ ಕನ್ನಡ, ಉಡುಪಿ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷೆ ಹಿನ್ನೆಲೆ ಹಳದಿ ಅಲರ್ಟ್ ಘೋಷಿಸಿದೆ. ಆಗಸ್ಟ್ 19, 20 ಹಾಗೂ 23ರಂದು ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಈ ವಾರ ಮಳೆ ಮುಂದುವರೆಯಲಿದ್ದು, ಆಗಸ್ಟ್ 23 ಹಾಗೂ 24ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ನಟ ಸುಶಾಂತ್‌ ಸಿಂಗ್ ಕುಟುಂಬಕ್ಕೆ ನ್ಯಾಯ ಸಿಗುವ ನಂಬಿಕೆ ನಮಗಿದೆ; ಬಿಹಾರದ ಸಿಎಂ ನಿತೀಶ್‌ ಕುಮಾರ್‌ ವಿಶ್ವಾಸ

ಇನ್ನು ದಕ್ಷಿಣ ಒಳನಾಡು, ಕಾರಾವಳಿ ಜಿಲ್ಲೆಯ ಬಹುತೇಕ‌ ಕಡೆ ಮಳೆಯಾಗುತ್ತಿದ್ದು, ಇನ್ನೊಂದು ವಾರ ಮಳೆ ಮುಂದುವರೆಯಲಿದೆ. ಕರಾವಳಿ ಜಿಲ್ಲೆ ಆಗಸ್ಟ್ 19-23ರ ವರೆಗೆ ಹಗುರ, ಸಾಧಾರಣ ಹಾಗೂ ವ್ಯಾಪಕ ಮಳೆ ಸಾಧ್ಯತೆಯಿದೆ‌. ಮೀನುಗಾರರು ಸಮುದ್ರಕ್ಕಿಳಿಯುವುದು ಅಷ್ಟು ಸೂಕ್ತವಲ್ಲ ವ್ಯಾಪಕ ಮಳೆ ಹಿನ್ನೆಲೆ ಸಮುದ್ರದ ದಡದಲ್ಲಿ ಓಡಾಡುವುದನ್ನು ಸಹ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಆಗಸ್ಟ್ 19ರಿಂದ 23ರವರೆಗೆ ಹಗುರ, ಸಾಧಾರಣ ಮಳೆ ನಿರೀಕ್ಷೆ ಮಾಡಲಾಗಿದೆ. ಆಗಸ್ಟ್ 18ರಂದು ರಾಜ್ಯದ ಆಗುಂಬೆ 12 ಸೆಂ.ಮೀ. ಮೂಡುಬಿದರೆ, ದ.ಕ. ಜಿಲ್ಲೆಯಲ್ಲಿ ತಲಾ 6 ಸೆಂ.ಮೀ. ಪಣಂಬೂರು -4 ಸೆಂ.ಮೀ. ಮಳೆಯಾಗಿದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
Published by: MAshok Kumar
First published: August 19, 2020, 5:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories